• Home
  • »
  • News
  • »
  • state
  • »
  • Top-5 News: ಬಿಜೆಪಿ ಶಾಸಕನಿಗೆ ಶಿಕ್ಷೆ, ಪವಿತ್ರಾ ಲೋಕೇಶ್-ನರೇಶ್ ನಡುವೆ ಬ್ರೇಕಪ್! ಇಂದಿನ ಟಾಪ್ ನ್ಯೂಸ್ ಇಲ್ಲಿದೆ

Top-5 News: ಬಿಜೆಪಿ ಶಾಸಕನಿಗೆ ಶಿಕ್ಷೆ, ಪವಿತ್ರಾ ಲೋಕೇಶ್-ನರೇಶ್ ನಡುವೆ ಬ್ರೇಕಪ್! ಇಂದಿನ ಟಾಪ್ ನ್ಯೂಸ್ ಇಲ್ಲಿದೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ನರೇಶ್-ಪವಿತ್ರಾ ಲೋಕೇಶ್ ಬ್ರೇಕಪ್!


Naresh Pavitra Lokesh: ಟಾಲಿವುಡ್ ನಟ ನರೇಶ್ ಅವರು ಪವಿತ್ರಾ ಲೋಕೇಶ್​ಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಚರ್ಚೆಯಾಗಿದ್ದ ಜೋಡಿ ಮಧ್ಯೆ ಬಂದಿರೋ ಆಕೆ ಯಾರು? ಟಾಲಿವುಡ್ ಮತ್ತು ಸ್ಯಾಂಡಲ್​​ವುಡ್ ಸಿನಿ ಇಂಡಸ್ಟ್ರಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಅಫೇರ್ ಇತ್ತೀಚೆಗೆ ಚರ್ಚೆಯಾಗಿದೆ. ಇವರಿಬ್ಬರ ಸಂಬಂಧದ ಬಗ್ಗೆ ಸ್ಯಾಂಡಲ್​​ವುಡ್​ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಾಧ್ಯಮಗಳಲ್ಲೂ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ.


Uday Garudachar: ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳು ಜೈಲು!


ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಚಿಕ್ಕಪೇಟೆ (Chickpet) ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್‌ಗೆ (MLA Uday Garudachar) ಭಾರೀ ಸಂಕಷ್ಟ ಎದುರಾಗಿದೆ. ಉದಯ್ ಗರುಡಾಚಾರ್ ಚುನಾವಣಾ ಪ್ರಮಾಣ ಪತ್ರದಲ್ಲಿ (Election Certificate) ಸುಳ್ಳು ಮಾಹಿತಿ (False Information) ನೀಡಿದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ (42nd ACMM Court Bengaluru), ಇಂದು ಶಿಕ್ಷೆ ಪ್ರಕಟಿಸಿದೆ. ಉದಯ್ ಗರುಡಾಚಾರ್​ಗೆ 2 ತಿಂಗಳು ಜೈಲು (Jail) ಹಾಗೂ 10 ಸಾವಿರ ದಂಡ (Fine) ವಿಧಿಸಿ ನ್ಯಾಯಪೀಠ ಆದೇಶ ಹೊರಡಿಸಿದೆ.


ಇದನ್ನೂ ಓದಿ: Uday Garudachar: ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳು ಜೈಲು! ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕೆ ಕೋರ್ಟ್‌ ಶಿಕ್ಷೆ


Hijab Verdict: ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು, ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ


ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದಾರೆ. ನ್ಯಾಯಮೂರ್ತಿ ಸುಧಾಂಶ ಧುಲಿಯಾ ಅವರು ಕರ್ನಾಟಕ ಹೈಕೋರ್ಟ್​ ನೀಡಿದ ತೀರ್ಪನ್ನು ರದ್ದುಗೊಳಿಸಿದ್ದಾರೆ. ಹಿಜಾಬ್ ವಿವಾದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆಗೊಳಿಸಲಾಗಿದೆ. ಸಮ್ಮತ ತೀರ್ಪು ಬರದ ಹಿನ್ನೆಲೆ ಕರ್ನಾಟಕ ಹೈಕೋರ್ಟ್​ ತೀರ್ಪು ಯಥಾಸ್ಥಿತಿ ಇರಲಿದೆ.  ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ಮಹಿಳೆಯರು (Wome) ಧರಿಸುವ ಹಿಜಾಬ್​​ಗೆ ನಿಷೇಧ (Hijab Ban) ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್‌ನ (Supreme court) ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ (Justices Hemant Gupta and Sudhanshu Dhulia) ದ್ವಿ ಸದಸ್ಯ ಪೀಠ ಪ್ರಕಟಿಸಿದೆ. ಈ ಪೀಠವು 10 ದಿನಗಳ ವಾದಗಳನ್ನು  ಆಲಿಸಿದ ನಂತರ ಸೆಪ್ಟೆಂಬರ್ 22ರಂದು ಹಿಜಾಬ್ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ (Karnataka highcourt Judgment) ವಿರುದ್ಧದ ಅರ್ಜಿಗಳ ತೀರ್ಪನ್ನು ಮೂರು ವಾರಗಳ ಹಿಂದೆಯೇ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟವಾಗಿದೆ. ಪೀಠದ ನೇತೃತ್ವದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಭಾನುವಾರ ನಿವೃತ್ತರಾಗಲಿದ್ದಾರೆ.


RRR, KGF2ಗಿಂತ ಹೆಚ್ಚು ರೇಟಿಂಗ್ ಪಡೆದ ಕಾಂತಾರ! 


ಕಾಂತಾರ ಹಿಂದಿ ವರ್ಷನ್ ಪ್ರೀ ರಿಲೀಸ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಲಿವುಡ್​​ನ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಸಿನಿಮಾಗೆ 4 ಸ್ಟಾರ್ ಕೊಟ್ಟಿದ್ದಾರೆ. ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು ಅಕ್ಟೋಬರ್ 14ರಂದು ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಇದಕ್ಕೂ ಮುನ್ನ 13ರಂದು ಹಿಂದಿ ಕಾಂತಾರ ಪ್ರಿ ರಿಲೀಸ್ ಇವೆಂಟ್ ನಡೆದಿದ್ದು ಸಿನಿಮಾಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಬಾಲಿವುಡ್ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದು ಅಪರೂಪಕ್ಕೆ 4 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ.


ಇದನ್ನೂ ಓದಿ: Kantara Movie: 12ನೇ ದಿನ ಭರ್ಜರಿ ಗಳಿಕೆ! PS1, ಗಾಡ್ ಫಾದರ್ ಹಿಂದಿಕ್ಕಿದ ಕಾಂತಾರ


ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಹೀನಾಯ ಸೋಲು!


ಟೀಂ ಇಂಡಿಯಾದ ಟಿ20 ವಿಶ್ವಕಪ್ (T20 World Cup 2022) ತಯಾರಿಯಲ್ಲಿ ದೊಡ್ಡ ಹಿನ್ನಡೆಯಾಗಿದೆ. ಗುರುವಾರ ನಡೆದ 2ನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯದ ಜೂನಿಯರ್ ತಂಡದ ಎದುರು 36 ರನ್‌ಗಳಿಂದ ಟೀಂ ಇಂಡಿಯಾ (Team India) ಸೋತಿದೆ. ಕೆಎಲ್ ರಾಹುಲ್‌ನಿಂದ (KL Rahul) ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಆಡಿದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ ಮೊದಲು ಆಡಿದ ವೆಸ್ಟರ್ನ್ ಆಸ್ಟ್ರೇಲಿಯ 8 ವಿಕೆಟ್‌ಗೆ 168 ರನ್ ಗಳಿಸಿತು. ಉತ್ತರವಾಗಿ ಭಾರತ ತಂಡ 7 ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ರಾಹುಲ್ ನಾಯಕರಾಗಿದ್ದರು. ಅವರು 55 ಎಸೆತಗಳಲ್ಲಿ 74 ರನ್ ಗಳಿಸಿ ಮಿಂಚಿದರು. ಇದಕ್ಕೂ ಮುನ್ನ ಭಾರತ ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯವನ್ನು 13 ರನ್‌ಗಳಿಂದ ಸೋಲಿಸಿತ್ತು.

Published by:Annappa Achari
First published: