• Home
  • »
  • News
  • »
  • state
  • »
  • Top-5 News: ಬೆಂಗಳೂರು ವಿವಿ ಕ್ಯಾಂಪಸ್ ಒಳಗೆ ವಾಹನ ಓಡಾಟಕ್ಕೆ ರೂಲ್ಸ್​! ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್; ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Top-5 News: ಬೆಂಗಳೂರು ವಿವಿ ಕ್ಯಾಂಪಸ್ ಒಳಗೆ ವಾಹನ ಓಡಾಟಕ್ಕೆ ರೂಲ್ಸ್​! ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್; ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಬೆಂಗಳೂರು ವಿವಿ ಕ್ಯಾಂಪಸ್ ಪ್ರವೇಶಕ್ಕೆ ರೂಲ್ಸ್​ 


ಇನ್ಮುಂದೆ ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ (Bengaluru VV) ಖಾಸಗಿ ವಾಹನಗಳ ಓಡಾಟಕ್ಕೆ ಸಮಯ ನಿಗದಿ ಮಾಡಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಮಾತ್ರ ಖಾಸಗಿ ವಾಹನಗಳ ಓಡಾಟಕ್ಕೆ (Private Vehicle) ಅನುಮತಿ ನೀಡುವ ಕುರಿತು ಸಭೆಯಲ್ಲಿ ತೀರ್ಮಾನ  ತೆಗೆದುಕೊಳ್ಳಲಾಗಿದೆ. ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ (Green Signal) ಸಿಕ್ಕ ತಕ್ಷಣವೇ ಜಾರಿಗೆ ಬರಲಿದೆ ಹೊಸ ರೂಲ್ಸ್ ಜಾರಿಗೆ ಬರಲಿದೆ. ಸಭೆಯಲ್ಲಿ ಇನ್ನು ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ವಾಹನಗಳ ಸ್ಪೀಡ್ ಕಂಟ್ರೋಲ್‌ಗೆ ಕ್ಯಾಂಪಸ್‌‌ನಲ್ಲಿ 100 ಬ್ಯಾರಿಕೇಟ್ ಅಳವಡಿಕೆ ಹಾಗೂ ಎಂಟ್ರಿ ಹಾಗೂ ಎಕ್ಸಿಟ್ ಗೇಟ್‌ಗಳಲ್ಲಿ ಸೆನ್ಸಾರ್ ಕ್ಯಾಮರಾಗಳ ಅಳವಡಿಕೆ ನಿರ್ಧಾರ ಮಾಡಲಾಗಿದೆ.


ಬೊಮ್ಮಾಯಿ, ಬಿಎಸ್​ವೈಗೆ ಸಿದ್ದು ಸವಾಲ್​


ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸಾಲು ಸಾಲು ಟ್ವೀಟ್ ಮೂಲಕ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರನ್ನು (Rahul Gandhi) ಬಚ್ಚಾ ಎಂದು ಹೇಳಿದ ಮಾಜಿ ಸಿ ಎಂ ಯಡಿಯೂರಪ್ಪ ಅವರಿಗೂ ಸಿದ್ದರಾಮಯ್ಯ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ. ನಿಮ್ಮ ನರೇಂದ್ರ ಮೋದಿ (Narendra Modi) ಅವರು ವಿಶ್ವಗುರು ಅಲ್ಲ  ಅವರೊಬ್ಬ ಪುಕ್ಕಲು ಗುರು, ಅವರು ನಮ್ಮನ್ನು ಎದುರಿಸುವುದು ಬೇಡ, ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಲಿ ಸಾಕು ಎಂದು ಸಿದ್ದರಾಮಯ್ಯ ಸವಾಲ್​ ಹಾಕಿದ್ದಾರೆ.


ಇದನ್ನೂ ಓದಿ: Siddaramaiah Tweet: ನಿಮ್ಮ ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು; ಬೊಮ್ಮಾಯಿ, ಬಿಎಸ್​ವೈಗೂ ಸಿದ್ದು ಸವಾಲ್​!


ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್ ಘೋಷಣೆ


17,951 ರೂ. ಈ ಬೋನಸ್​ನ ಗರಿಷ್ಠ ಮಿತಿಯಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ದೀಪಾವಳಿ ಬೋನಸ್ ಅನ್ನು ಘೋಷಿಸಿದೆ. ರೈಲ್ವೇ ಉದ್ಯೋಗಿಗಳಿಗೆ ದೀಪಾವಳಿ ಹಬ್ಬಕ್ಕೆ ಈ ಕೊಡುಗೆ ಘೋಷಿಸಲಾಗಿದೆ. ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಹಿಂದೆ, ಸರ್ಕಾರವು ನಾನ್ ಗೆಜೆಟೆಡ್ ರೈಲ್ವೇ ನೌಕರರಿಗೆ ಕಾರ್ಯಕ್ಷಮತೆ ಸಂಬಂಧಿತ ಪ್ರೋತ್ಸಾಹವನ್ನು ಘೋಷಿಸಿತ್ತು.


ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್ ಘೋಷಣೆ


ಹೈಕೋರ್ಟ್​ನಿಂದ ಮಹತ್ವದ ಆದೇಶ


ಮುಸ್ಲಿಂ ಪುರುಷರು (Muslim Men) ತಮ್ಮ ಮೊದಲ ಹೆಂಡತಿಯ (First Wife) ಇಚ್ಛೆಗೆ ವಿರುದ್ಧವಾಗಿ, ಎರಡನೇ ಮದುವೆಯಾದರೆ (Second Marriage), ಮೊದಲ ಹೆಂಡತಿಯನ್ನು ತನ್ನ ಜೊತೆ ವಾಸ ಮಾಡುವಂತೆ ಒತ್ತಾಯಿಸಲು ನ್ಯಾಯಾಲಯದ ಆದೇಶ (Court Order) ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದಾಗ ನ್ಯಾಯಮೂರ್ತಿ ಸೂರ್ಯ ಪ್ರಕಾಶ್ ಕೇಸರವಾಣಿ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರಲ್ಲಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಅವರ ಪ್ರಕರಣವನ್ನು ವಜಾ ಮಾಡಲಾಗಿದೆ.


ಕೇಂದ್ರ ಸರ್ಕಾರದಿಂದ ದೀಪಾವಳಿ ಬೋನಸ್ ಘೋಷಣೆ


17,951 ರೂ. ಈ ಬೋನಸ್​ನ ಗರಿಷ್ಠ ಮಿತಿಯಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ದೀಪಾವಳಿ ಬೋನಸ್ ಅನ್ನು ಘೋಷಿಸಿದೆ. ರೈಲ್ವೇ ಉದ್ಯೋಗಿಗಳಿಗೆ ದೀಪಾವಳಿ ಹಬ್ಬಕ್ಕೆ ಈ ಕೊಡುಗೆ ಘೋಷಿಸಲಾಗಿದೆ. ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಹಿಂದೆ, ಸರ್ಕಾರವು ನಾನ್ ಗೆಜೆಟೆಡ್ ರೈಲ್ವೇ ನೌಕರರಿಗೆ ಕಾರ್ಯಕ್ಷಮತೆ ಸಂಬಂಧಿತ ಪ್ರೋತ್ಸಾಹವನ್ನು ಘೋಷಿಸಿತ್ತು.


ದೆಹಲಿ-ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನ ಸೇವೆ


ಉತ್ತರ ಕರ್ನಾಟಕ ಭಾಗದ ಜನರಿಗೆ ಸಚಿವ ಪ್ರಹ್ಲಾದ್​ ಜೋಶಿ ಅವರು ಗುಡ್​ ನ್ಯೂಸ್​ ನೀಡಿದ್ದಾರೆ. ಹುಬ್ಬಳ್ಳಿ ಹಾಗೂ ದೆಹಲಿ ನಡುವೆ ಶೀಘ್ರವೇ ವಿಮಾನ ಸೇವೆ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ದೆಹಲಿ ನಡುವೆ ನ.‌ 14ರಿಂದ ನಿತ್ಯ ವಿಮಾನ ಸೇವೆ ಆರಂಭವಾಗಲಿದೆ ಎಂದು ಸಚಿವ ಪ್ರಹ್ಲಾದ್​ ಜೋಶಿ ತಿಳಿಸಿದ್ದಾರೆ.

Published by:ಪಾವನ ಎಚ್ ಎಸ್
First published: