Evening Digest: ಬಿಎಸ್​ವೈ ರಾಜೀನಾಮೆಗೆ ಅಭಿಷೇಕ್​ ಮನು ಸಿಂಘ್ವಿ ಆಗ್ರಹ, ನಾಳೆಯಿಂದ 3 ವಾರ ಶಿಕ್ಷಕರು, ವಿದ್ಯಾರ್ಥಿಗಳಿಗೆ ದಸರಾ ರಜೆ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ನಾನು ತಿನ್ನುವುದಿಲ್ಲ. ತಮ್ಮ ಮನೆಯಲ್ಲಿ ಇತರರಿಗೂ ತಿನ್ನಲೂ ಬಿಡುವುದಿಲ್ಲ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿಷಯದಲ್ಲಿ ಯಾಕೆ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಅಭಿಷೇಕ್​ ಮನುಸಿಂಘ್ವಿ ಪ್ರಶ್ನಿಸಿದ್ದಾರೆ.

  ಸಿಎಂ ಬಿಎಸ್​ವೈ ರಾಜೀನಾಮೆಗೆ ಕಾಂಗ್ರೆಸ್​ ನಾಯಕ ಅಭಿಷೇಕ್​ ಮನು ಸಿಂಘ್ವಿ ಆಗ್ರಹ

  2. ಹಣಕ್ಕಾಗಿ ಕೆಲವರು ಎಂತಹ ಕೆಲಸ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಹರಿಯಾಣದಲ್ಲಿ ಉದ್ಯಮಿಯೊಬ್ಬರು ತಮ್ಮ ವಿಮೆಯ (ಇನ್ಶುರೆನ್ಸ್​) ಹಣಕ್ಕಾಗಿ ತಾನೇ ಸಾವನ್ನಪ್ಪಿದ್ದಾಗಿ ಎಲ್ಲರನ್ನೂ ನಂಬಿಸಿರುವ ಘಟನೆ ಬೆಳಕಿಗೆ ಬಂದಿದೆ. 2 ಕೋಟಿ ರೂ. ವಿಮೆ ಮಾಡಿಸಿದ್ದ ಛತ್ತೀಸ್​ಘಡದ 35 ವರ್ಷದ ಉದ್ಯಮಿ ರಾಮ್ ಮೆಹರ್ ವಿಮೆಯ ಹಣಕ್ಕಾಗಿ ತನ್ನದೇ ಕಾರಿಗೆ ಬೆಂಕಿ ಹಚ್ಚಿ, ತಾನು ಸಾವನ್ನಪ್ಪಿದ್ದಾಗಿ ನಂಬಿಸಿದ್ದರು. ಆದರೆ, ರಾಮ್ ಮೆಹರ್ ಕುಟುಂಬಸ್ಥರು ನೀಡಿದ ಮಾಹಿತಿಯಿಂದ ಅನುಮಾನಕ್ಕೊಳಗಾದ ಪೊಲೀಸರು ತನಿಖೆ ನಡೆಸಿದರು.

  Crime News: 2 ಕೋಟಿ ರೂ. ಇನ್ಶುರೆನ್ಸ್​ ಹಣಕ್ಕಾಗಿ ಸಾವಿನ ನಾಟಕವಾಡಿದ ಉದ್ಯಮಿ; ಕೊನೆಗೂ ಬಯಲಾಯ್ತು ಸತ್ಯ

  3.ಕಾಂಗ್ರೆಸ್​ ಆತಂರಿಕ ಸಭೆಯಲ್ಲಿ ಮಹಿಳಾ ಕಾರ್ಯಕರ್ತೆಯನ್ನು ಥಳಿಸಿರುವ ಪ್ರಕರಣ ನಡೆದಿದೆ. ಅತ್ಯಾಚಾರ ಪ್ರಕರಣವೊಂದರ ಆರೋಪಿಗೆ ಚುನಾವಣಾ ಟಿಕೆಟ್​ ನೀಡಿದಕ್ಕೆ   ಹಿಳಾ ಕಾರ್ಯಕರ್ತೆ ಆಕ್ಷೇಪಿಸಿದ್ದಾರೆ. ಈ ಹಿನ್ನಲೆ  ಇತರ ನಾಯಕರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್​ ಆಗಿದೆ. ಒಂದು ಕಡೆ ಪಕ್ಷ ಹತ್ರಾಸ್​ ಘಟನೆ ವಿರುದ್ಧ ನ್ಯಾಯಾಕ್ಕಾಗಿ ಹೋರಾಡುತ್ತಿದೆ. ಮತ್ತೊಂದು ಕಡೆ ಪಕ್ಷ ಅತ್ಯಾಚಾರಿಗೆ ಟಿಕೆಟ್​ ನೀಡುತ್ತಿದೆ. ಇದು ತಪ್ಪು ನಿರ್ಧಾರ.

  ಅತ್ಯಾಚಾರಿ ಆರೋಪಿಗೆ ಟಿಕೆಟ್​; ಪ್ರಶ್ನಿಸಿದ ಕಾಂಗ್ರೆಸ್​ ಮಹಿಳಾ ಕಾರ್ಯಕರ್ತೆ ಮೇಲೆ ಹಲ್ಲೆ

  4.ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸದಿದ್ದರೆ ಮಂಗಳವಾರ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದೀಗ ಕುಮಾರಸ್ವಾಮಿ ಅವರ ಮತ್ತೊಂದು ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ಘೋಷಿಸಿದೆ

  ನಾಳೆಯಿಂದ 3 ವಾರ ಶಿಕ್ಷಕರು, ವಿದ್ಯಾರ್ಥಿಗಳಿಗೆ ದಸರಾ ರಜೆ; ಸಿಎಂ ಯಡಿಯೂರಪ್ಪ ಘೋಷಣೆ

  5. ಆರ್.ಆರ್. ನಗರ ಉಪ ಚುನಾವಣಾ ಸಮರಕ್ಕೆ ಬಿಜೆಪಿ ಪಕ್ಷ ರಣರಂಗವನ್ನು  ಸಜ್ಜು ಮಾಡುತ್ತಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರು ಉತ್ತರ ವಿಭಾಗದ 9 ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಸಚಿವ ಆರ್. ಅಶೋಕ್, ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಗೆಲ್ಲಲೇಬೇಕು ಎಂದು ಹೋರಾಟ ಮಾಡಬೇಕು.

  ಡಿಕೆ ಶಿವಕುಮಾರ್ ಮಾತ್ರವಲ್ಲ ಯಾರೇ ಬಂದರೂ ಎದುರಿಸಿ ಚುನಾವಣೆ ಗೆಲ್ಲುತ್ತೇವೆ; ಸಚಿವ ಆರ್. ಅಶೋಕ್

  6.ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಜೆಡಿಎಸ್​ ಪಕ್ಷವನ್ನು ಯಾರೇ ಬಂದರೂ ತುಳಿಯಲು ಆಗುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಹೆಚ್​.ಡಿ. ದೇವೇಗೌಡ ಹೇಳಿದ್ದಾರೆ.

  ಜಾತಿಯನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ; ಹೆಚ್​.ಡಿ. ದೇವೇಗೌಡ

  7.ಜಾತಿ ರಾಜಕಾರಣ ಚುನಾವಣೆಯಲ್ಲಿ ನಡೆಯುವುದಿದ್ದರೆ, ಮಂಡ್ಯದಲ್ಲಿ ಎಚ್​ ಡಿ ಕುಮಾರಸ್ವಾಮಿ ಮಗನನ್ನು ಯಾಕೆ ಸೋಲಿಸಿದರು. ತುಮಕೂರಿನಲ್ಲಿ ದೇವೆಗೌಡರು ಯಾಕೆ ಸೋತರು ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

  ಜಾತಿ ರಾಜಕಾರಣ ನಡೆಯುವುದಿದ್ದರೆ ದೇವೇಗೌಡ, ನಿಖಿಲ್​ ಯಾಕೆ ಸೋತರು; ಸಿದ್ದರಾಮಯ್ಯ

  8. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಪ್ರೊ. ಕೆ.ಎಸ್. ಭಗವಾನ್ ಮೈಸೂರಿನಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆ ಶ್ರೀರಾಮ ದೇವರೇ ಅಲ್ಲ, ಆತ ಒಬ್ಬ ಕೊಲೆಗಡುಕ ಎಂದು ಹೇಳಿಕೆ ನೀಡಿ ಹಿಂದೂಗಳಿಂದ ಟೀಕೆಗೆ ಒಳಗಾಗಿದ್ದ ಪ್ರೊ. ಕೆ.ಎಸ್. ಭಗವಾನ್​ ಇದೀಗ ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ ಎಂದಿದ್ದಾರೆ.

  ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ; ಪ್ರೊ.ಕೆ.ಎಸ್. ಭಗವಾನ್ ಮತ್ತೊಂದು ವಿವಾದ

  9.ಟಾಲಿವುಡ್​ ಸಿನಿಮಾಗಳಲ್ಲೇ ಹೆಚ್ಚಾಗಿ ಬ್ಯುಸಿಯಾಗಿರುವ ರಶ್ಮಿಕಾ, ಅತಿ ಹೆಚ್ಚು ಟ್ರೋಲಾಗುವ ನಟಿಯಾಗಿದ್ದಾರೆ. ಅವರು ಯಾವುದೇ ಫೋಟೋ ಅಥವಾ ಪೋಸ್ಟ್​ ಮಾಡಿದರೂ ಅಷ್ಟೇ ಟ್ರೋಲಿಗರು ಕಾಯುತ್ತಿರುತ್ತಾರೆ. ಹೀಗಿದ್ದರೂ ರಶ್ಮಿಕಾ ಟ್ರೋಲಿಗರಿಗೆ ಆಗಾಗ ಖಡಕ್​ ಪ್ರತಿಕ್ರಿಯೆ ಕೊಡುವುದರೊಂದಿಗೆ ತಮ್ಮ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ.

  Rashmika Mandanna: ಪ್ರೀತಿ-ನಂಬಿಕೆ ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದ ರಶ್ಮಿಕಾ: ಹಳೇ ನೆನಪಿಗೆ ಜಾರಿದ್ರಾ ಈ ನಟಿ..!

  10. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 27ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ಸೆಣಸಲಿದೆ. ಭರ್ಜರಿ ಪ್ರದರ್ಶನದೊಂದಿಗೆ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದು, ಇಂದಿನ ಪಂದ್ಯದ ಮೂಲಕ ರೋಹಿತ್ ಪಡೆ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ.
  Published by:G Hareeshkumar
  First published: