• Home
  • »
  • News
  • »
  • state
  • »
  • Top-5 News: ಕಾಂತಾರದ ಸಾಂಗ್ ಕಾಪಿನಾ? ಬರ್ತಾನೆ ನೋಡಿ ಬೆತ್ತಲೆ ಮನುಷ್ಯ! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Top-5 News: ಕಾಂತಾರದ ಸಾಂಗ್ ಕಾಪಿನಾ? ಬರ್ತಾನೆ ನೋಡಿ ಬೆತ್ತಲೆ ಮನುಷ್ಯ! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

Kantara: 'ಸಿಂಗಾರ ಸಿರಿಯೇ'ನೂ ಕದ್ದ ಟ್ಯೂನಾ? 


ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ಅಭಿನಯಿಸಿದ ಕಾಂತಾರ (Kantara) ಸಿನಿಮಾ ಥಿಯೇಟರ್​​ನಲ್ಲಿ ಸೂಪರ್ ಹಿಟ್ (Super Hit) ಆಗಿದೆ. ಬಾಕ್ಸ್ ಆಫೀಸ್ (BOx Office) ರೇಸ್ ಮುಂದುವರಿಸಿದೆ. ಕಾಂತಾರ ಸಿನಿಮಾ ಸಖತ್ ಹಿಟ್ ಆಗಿದೆ. ಪ್ರೇಕ್ಷಕರ ವಿಮರ್ಶೆಯಿಂದಲೇ ವೈರಲ್ ಆದ ಸಿನಿಮಾ ಬಗ್ಗೆ ಅನ್ಯ ಭಾಷೆಗಳಿಂದಲೂ ರಿವ್ಯೂ ಬರುತ್ತಿದೆ. ಬೇರೆ ಭಾಷೆಗಳಲ್ಲೂ ಕಾಂತಾರ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಕಾಂತಾರ ಸಿನಿಮಾ  ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಸಿನಿಮಾದ ಹಾಡು (Kantara Songs) ಗಳು ಕೂಡ ಎಲ್ಲರ ಮನಸ್ಸು ಗೆದ್ದಿದೆ. ಸಿಂಗಾರ ಸಿರಿಯೇ (Singara Siriye) ಹಾಗೂ ವರಾಹ ರೂಪಂ ಹಾಡುಗಳಂತೂ ಎಲ್ಲರ ತಲೆಯಲ್ಲಿ ಹಾಗೇ ಉಳಿದಿದೆ. ವರಾಹ ರೂಪಂ ಹಾಡಿನ ಟ್ಯೂನ್​ ಅನ್ನು ಮಲಯಾಳಂ ಆಲ್ಬಂ ಹಾಡಿನಿಂದ ಕಾಪಿ (Copy) ಮಾಡಿದ್ದಾರೆ ಅಂತ ನೆಟ್ಟಿಗರು ಹೇಳುತ್ತಿದ್ದಾರೆ. ಇದೀಗ ಸಿಂಗಾರ ಸಿರಿಯೇ ಹಾಡು ಕೂಡ ಕಾಪಿ ಮಾಡಿದ್ದಾರೆ ಅಂತ ಚರ್ಚೆ ನಡೆಸುತ್ತಿದ್ದಾರೆ.


ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ! 


ದೇವನಹಳ್ಳಿ, ಬೆಂಗಳೂರು ಗ್ರಾಮಂತರ: ಈ ಗ್ರಾಮದಲ್ಲಿ (Village) ಸುಮಾರು ದಿನಗಳಿಂದ ಗ್ರಾಮಸ್ಥರೆಲ್ಲ (Villagers) ಭಯಗೊಂಡಿದ್ದರು. ರಾತ್ರಿಯಾದ್ರೆ ಸಾಕು ಆ ಗ್ರಾಮದಲ್ಲಿ ವಿಚಿತ್ರ ಆತಂಕ, ಭಯ ಆವರಿಸಿಕೊಳ್ಳುತ್ತಿತ್ತು. ಯಾಕೆಂದ್ರೆ ರಾತ್ರಿಯಾಗಿ, ಎಲ್ಲರೂ ಮನೆ ಸೇರಿದ ಮೇಲೆ ಆ ಒಬ್ಬ ವ್ಯಕ್ತಿ (Unknown Person) ಬರ್ತಿದ್ದ. ಹಾಗೆ ಆತ ಸಾದಾ ಸೀದ ಬರ್ತಾ ಇರಲಿಲ್ಲ. ಮೈಮೇಲೆ ಒಂದೇ ಒಂದು ಬಟ್ಟೆಯ ನೂಲೂ ಇಲ್ಲದಂತೆ ಬೆತ್ತಲೆಯಾಗಿ (Naked) ಬರುತ್ತಿದ್ದ. ಹಾಗೆ ಬಂದವ ಸುಮ್ಮನೆ ಇರುತ್ತಿರಲಿಲ್ಲ, ಮನೆಯ ಕಿಟಕಿಯಲ್ಲಿ ಒಳಗೆ ಬಗ್ಗಿ ನೋಡ್ತಿದ್ದ. ಸಾಲದ್ದಕ್ಕೆ ಮನೆ ಮುಂದೆ ಒಣಗಿಸಿದ್ದ ಬಟ್ಟೆಗಳನ್ನ (Cloths) ಕದ್ದುಕೊಂಡು ಓಡುತ್ತಿದ್ದ. ಹಾಗಿದ್ರೆ ಆತ ಯಾರು? ಆತ ಬೆತ್ತಲೆಯಾಗಿ ಬರುವುದು ಏಕೆ? ಮನೆಯಲ್ಲಿ ಬಗ್ಗಿ ನೋಡುವುದು ಏಕೆ? ಕೊನೆಗೆ ಏನಾಯ್ತು? ಅಷ್ಟಕ್ಕೂ ಬೆತ್ತಲೆ ಮನುಷ್ಯನ ಕಾಟದಿಂದ ತತ್ತಿರಿಸಿದ ಆ ಗ್ರಾಮ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಕುತೂಹಲಕಾರಿ ಉತ್ತರ…


ಇದನ್ನೂ ಓದಿ: Naked Man: ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ! ಈ ಯುವಕನ ಬಗ್ಗೆ ಹುಷಾರ್ ಹುಷಾರ್


ರಾಹುಲ್ ಗಾಂಧಿಯನ್ನು ಭೇಟಿಯಾದ ಈ ಯುವತಿಯ ಅಳುವೇ ನಿಲ್ಲಲಿಲ್ಲ!


ಬೆಂಗಳೂರು:  ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'ಯಲ್ಲಿ  (Congress Bharat Jodo Yatra) ಸದ್ಯ ಕರ್ನಾಟಕದಲ್ಲಿ ಸಂಚರಿಸುತ್ತಿದೆ. ಸದ್ಯ ರಾಹುಲ್ ಗಾಂಧಿ ಅವರ ಜೊತೆ ಕರ್ನಾಟಕದ ಹಲವು ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಭಾರತ್ ಜೋಡೋ ಯಾತ್ರೆಯಲ್ಲಿ ಯುವತಿಯೋರ್ವಳು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ಭೆಟಿಯ ನಂತರ ಆಕೆಯ ಕಣ್ಣೀರೇ ನಿಲ್ಲಲಿಲ್ಲವಂತೆ. ರಾಹುಲ್ ಗಾಂಧಿ ಅವರೇ ಸ್ವತಃ ತಮ್ಮನ್ನು ಭೇಟಿಯಾದ ಯುವತಿಯೋರ್ವಳ ಕಥೆಯನ್ನು ಹಂಚಿಕೊಂಡಿದ್ದಾರೆ.


ಓಲಾ, ಉಬರ್‌ಗಳಿಗೆ ಸರ್ಕಾರದ ಮೂಗುದಾರ! 


ಬೆಂಗಳೂರು: ಜನರಿಂದ ಅನಾವಶ್ಯಕವಾಗಿ ಹಣ ಸುಲಿಗೆ ಮಾಡುತ್ತಿದೆ ಎಂಬ ಆರೋಪ ಹೊತ್ತ ಓಲಾ (Ola), ಉಬರ್ ಸಂಸ್ಥೆಗಳಿಗೆ (Uber Company) ಮೂಗು ದಾರ ಹಾಕಲು ಸರ್ಕಾರ (Government) ಮುಂದಾಗಿದೆ. ಓಲಾ, ಉಬರ್ ಸಂಸ್ಥೆಗಳಿಗೆ ಸರ್ಕಾರವೇ ದರ ಫಿಕ್ಸ್ (Rate Fix) ಮಾಡಿದೆ. ಇಂದು ರಾಜ್ಯ ಸರ್ಕಾರ ಹಾಗೂ ಓಲಾ, ಉಬರ್ ಪ್ರತಿನಿಧಿಗಳ ಮಹತ್ವದ ಸಭೆ (Meeting) ನಡೆಯಿತು. ಸರ್ಕಾರದ ಪರವಾಗಿ ಸಾರಿಗೆ ಇಲಾಖೆ ಆಯುಕ್ತರು (Transport Department Commissioner) ಭಾಗಿಯಾಗಿದ್ದು, ಈ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಟೋಗಳಿಗೆ ಸರ್ಕಾರವೇ ಜಿಎಸ್‌ಟಿ (GST) ಜೊತೆಗೆ ದರ ನಿಗದಿ ಮಾಡಿದೆ.


ಇದನ್ನೂ ಓದಿ: Ola-Uber Auto: ಓಲಾ, ಉಬರ್‌ಗಳಿಗೆ ಸರ್ಕಾರದ ಮೂಗುದಾರ! ಜಿಎಸ್‌ಟಿ ಜೊತೆಗೆ ಫಿಕ್ಸ್ ಆಯ್ತು 30 ರೂಪಾಯಿ ಆಟೋ ದರ!


ಟೀಂ ಇಂಡಿಯಾಗೆ ಭರ್ಜರಿ ಜಯ, ಹರಿಣಗಳ ವಿರುದ್ಧ ಸರಣಿ ಗೆದ್ದ ಭಾರತ


ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವೆ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಆಫ್ರಿಕಾ ವಿರುದ್ಧ ಭರ್ಜರಿಯಾಗಿ ಜಯ ದಾಖಲಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ  ಆಫ್ರಿಕನ್ನರು ಕೇವಲ 27.1 ಓವರ್​ಗಳಲ್ಲಿ 99 ರನ್​ಗಳಿಗೆ ಆಲೌಟ್ ಆದರು. ಈ ಅಲ್ಪಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ (Team India) 19.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 105 ರನ್ ಗಳಿಸುವ ಮೂಲಕ 7 ವಿಕೆಟ್​ಗಳ ಜಯ ದಾಖಲಿಸಿ, ಸರಣಿಯನ್ನು ಗೆದ್ದುಕೊಂಡಿದೆ.

Published by:Annappa Achari
First published: