• Home
  • »
  • News
  • »
  • state
  • »
  • Top-5 News: ಕಾಂತಾರ ಸಾಂಗ್ ಕದ್ದಿದ್ದಾ? ಮೆಟ್ರೋ ಕಾಮಗಾರಿ ವೇಳೆ ಕಸದ ರಾಶಿ! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Top-5 News: ಕಾಂತಾರ ಸಾಂಗ್ ಕದ್ದಿದ್ದಾ? ಮೆಟ್ರೋ ಕಾಮಗಾರಿ ವೇಳೆ ಕಸದ ರಾಶಿ! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

  • Share this:

ಮೆಟ್ರೋ ಕಾಮಗಾರಿ ವೇಳೆ 33 ಅಡಿ ಆಳದಲ್ಲಿ ಕಸದ ರಾಶಿ ಪತ್ತೆ


ನಮ್ಮ ಮೆಟ್ರೋ (Namma Metro) ಕಾಮಗಾರಿ ನಡೆಸುತ್ತಿದ್ದ ವೇಳೆ 33 ಅಡಿ ಆಳದಲ್ಲಿ ಕಸದ ರಾಶಿಯನ್ನು (Garbage) ಎದುರಿಸಿದೆ. ಡೈರಿ ಸರ್ಕಲ್​ನಿಂದ ಲಕ್ಕಸಂದ್ರದ ಮಾರ್ಗ ನಡುವೆ ನಡೆಯುತ್ತಿದ್ದ ಕಾಮಗಾರಿ ವೇಳೆ ನಮ್ಮ ಮೆಟ್ರೋ ಕಸದ ರಾಶಿಯ ಸಮಸ್ಯೆಯನ್ನು ಎದುರಿಸಿದೆ. ಸುರಂಗ ಮಾರ್ಗದ ಕೊರೆಯುವ ವೇಳೆ ನಮ್ಮ ಮೆಟ್ರೋಗೆ ದೊಡ್ಡ ಸಮಸ್ಯೆ ಎದುರಾಗಿತ್ತು. ಆರಂಭದಲ್ಲಿ ಬಿಎಂಆರ್​ಸಿಎಲ್ ಸಿಬ್ಬಂದಿ ದೊಡ್ಡ ಗಾತ್ರದ ಬಂಡೆ ಇರಬಹುದು ಎಂದು ತಿಳಿದುಕೊಂಡಿದ್ದರು.


Kantara: ಕಾಂತಾರ ಸಿನಿಮಾದ ವರಾಹ ರೂಪಂ ಟ್ಯೂನ್ ಕಾಪಿ ಮಾಡಿದ್ದಾ? ಮಲಯಾಳಂನ ಹಳೆ ಆಡಿಯೋ ಈಗ ವೈರಲ್


ಎಲ್ಲಿ ನೋಡಿದರೂ ಕಾಂತಾರ  (Kantara) ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಈ ಕಾಂತಾರ ಹವಾ ಹೆಚ್ಚಾಗುತ್ತಲೇ ಇದೆ. ಎಲ್ಲಿ ನೋಡಿದರೂ ರಿಷಬ್​ ಶೆಟ್ಟಿ (Rishab Shetty) ಹೆಸರು ಜಪ ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಹಾಗೂ ನಮ್ಮ ಮಣ್ಣಿನ ಕಥೆ ಹೊಂದಿರುವ ಕಾಂತಾರ ಸಿನಿಮಾ ನೋಡುತ್ತಿದ್ದರೆ ನಮ್ಮ ಸಿನಿಮಾ ಎಂದೆನಿಸುವಂತೆ ನಿರ್ದೇಶನ ಮಾಡಿದ್ದಾರೆ ರಿಷಬ್​ ಶೆಟ್ಟಿ. ಕಾಂತಾರ ಸಿನಿಮಾ ಬಾಕ್ಸ್​ ಆಫೀಸ್ (Box Office) ​ನಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ವರಾಹ ರೂಪಂ ಹಾಡಂತೂ ಎಲ್ಲರ ಎದೆಗೂ ನಾಟಿದೆ. ಈ ಹಾಡನ್ನು ಮತ್ತೆ ಮತ್ತೆ ಕೇಳುತ್ತಿದ್ದಾರೆ. ಈ ಹಿಂದೆ ಸೂಪರ್​ ಹಿಟ್ ಸಿನಿಮಾ  777 ಚಾರ್ಲಿ (777 Charlie) ಸಿನಿಮಾ ರಿಲೀಸ್​ ಆದಾಗ, ಈ ಸಿನಿಮಾಗೆ ಹಾಲಿವುಡ್​ ಸಿನಿಮಾ ಪ್ರೇರಣೆಯಾಗಿತ್ತು ಎಂದು ಹಲವರು ಮಾತನಾಡಿದ್ದರು. ಕಿರಿಕ್​ ಪಾರ್ಟಿ (Kirik Party) ಸಿನಿಮಾ ರಿಲೀಸ್ ಆದಾಗಲೂ ಇದರ ಕೆಲ ಟ್ಯೂನ್​ಗಳು ಬೇರೆ ಸಿನಿಮಾದಿಂದ ಕದಿಯಲಾಗಿದೆ ಎಂದು ಹೇಳಲಾಗಿತ್ತು.


ಇದನ್ನೂ ಓದಿ: Kantara: ಕಾಂತಾರ ಸಿನಿಮಾದ ವರಾಹ ರೂಪಂ ಟ್ಯೂನ್ ಕಾಪಿ ಮಾಡಿದ್ದಾ? ಮಲಯಾಳಂನ ಹಳೆ ಆಡಿಯೋ ಈಗ ವೈರಲ್


Bigg Boss: ಲೈಂಗಿಕ ಕಿರುಕುಳದ ಆರೋಪ; ಬಿಗ್ ಬಾಸ್​ನಿಂದ ಈ ಸ್ಪರ್ಧಿಯನ್ನು ಹೊರಹಾಕಲು ಒತ್ತಾಯ


ದೆಹಲಿ: ಲೈಂಗಿಕ ಕಿರುಕುಳದ ಆರೋಪದ ಅಡಿ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರನ್ನು (Sajid Khan) ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಹೊರಹಾಕಬೇಕೆಂದು (Bigg Boss Sajid Khan)  ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ (Anurag Thakur) ಪತ್ರ ಬರೆದಿದ್ದಾರೆ. #MeToo ಆಂದೋಲನದ ಸಂದರ್ಭದಲ್ಲಿ ಹಲವಾರು ಮಹಿಳೆಯರು ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಿಗ್ ಬಾಸ್ 16 ನೇ ಸೀಸನ್ ನ ಮೊದಲ ಸಂಚಿಕೆ ಅಕ್ಟೋಬರ್ 1 ರಂದು ಪ್ರಸಾರವಾಗಿದೆ. ಈ ಕಾರ್ಯಕ್ರಮವನ್ನು ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡಿದ್ದಾರೆ.


24 ತಾಸಿನಲ್ಲಿ ರಷ್ಯಾದ 75 ಕ್ಷಿಪಣಿ ದಾಳಿಗೆ ನಲುಗಿದ ಕೀವ್: 8 ಸಾವು, 24 ಮಂದಿಗೆ ಗಾಯ!


ಕೀವ್(ಅ.10): ಉಕ್ರೇನ್ ರಾಜಧಾನಿ ಕೀವ್ (Ukraine Capital City Kyiv) ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಕೀವ್ ಮೇಲೆ ಕನಿಷ್ಠ ನಾಲ್ಕು ಕ್ಷಿಪಣಿಗಳು ಬಿದ್ದಿವೆ. ಅಲ್ಲದೆ ಉಕ್ರೇನ್‌ನ ಇತರ ನಗರಗಳ ಮೇಲೆ ರಷ್ಯಾದ ಕ್ಷಿಪಣಿ ದಾಳಿಗಳು ನಡೆದಿವೆ. ಉಕ್ರೇನ್‌ನಾದ್ಯಂತ ರಷ್ಯಾ (Russia) ನಡೆಸಿದ ಬೃಹತ್ ಕ್ಷಿಪಣಿ ದಾಳಿಯ (Missile Attack) ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ನೆಲಮಾಳಿಗೆಯಲ್ಲಿ ಮಕ್ಕಳು ಉಕ್ರೇನ್‌ನ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ. ಕೀವ್ ನಲ್ಲಿ 8 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 24 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿಯ ನಂತರ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ದೇಶದ ನಗರಗಳಲ್ಲಿ ನಡೆದ ಹಲವಾರು ದಾಳಿಗಳಲ್ಲಿ ಹಲವರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: Russia-Ukraine war: 24 ತಾಸಿನಲ್ಲಿ ರಷ್ಯಾದ 75 ಕ್ಷಿಪಣಿ ದಾಳಿಗೆ ನಲುಗಿದ ಕೀವ್: 8 ಸಾವು, 24 ಮಂದಿಗೆ ಗಾಯ!


Meghana Raj: ಫಿಲ್ಮ್ ಫೇರ್ ಪ್ರಶಸ್ತಿ ಕೈಯಲ್ಲಿಡಿದು ಚಿರು ಫೋಟೋ ಮುಂದೆ ಮೇಘನಾ ಹೇಳಿದ್ದೇನು?


ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಫಿಲ್ಮ್ ಫೇರ್ ಪ್ರಶಸ್ತಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಮೇಘನಾ ರಾಜ್ ಸಹ ಹೋಗಿದ್ದರು. ಅಲ್ಲಿಂದ ಪ್ರಶಸ್ತಿ ಪಡೆದು ಬಂದಿರುವ ಚಿರು ಪತ್ನಿ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಫಿಲ್ಮ್ ಫೇರ್ ಪ್ರಶಸ್ತಿ ಅದ್ದೂರಿ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಮೇಘನಾ ರಾಜ್ ಸಹ ಹೋಗಿದ್ದರು. ಅಲ್ಲಿಂದ ಪ್ರಶಸ್ತಿ ಪಡೆದು ಬಂದಿರುವ ಚಿರು ಪತ್ನಿ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿರುವ ಮೇಘನಾ, ಚಿರು ಕಪ್ಪು ಮಹಿಳೆ ಕೊನೆಗೂ ಮನೆಗೆ ಬಂದಿದ್ದಾಳೆ. ನನ್ನ ಖುಷಿಯನ್ನು ವ್ಯಕಸ್ತಪಡಿಸಲು ಆಗುತ್ತಿಲ್ಲ. ನೀವು ಇದ್ದಿದ್ರೆ ಹೇಗೆ ಖುಷಿ ಪಡ್ತಿದ್ರಿ ಎಂದು ಕಲ್ಪಿಸಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Published by:Annappa Achari
First published: