• Home
  • »
  • News
  • »
  • state
  • »
  • Top-5 News: ಡಿಕೆ ಬ್ರದರ್ಸ್​ಗೆ ಇಡಿ ಕೊಟ್ಟಿದೆ ಬಿಗ್ ಶಾಕ್, ಅಂಬಾನಿ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದವ ಅಂದರ್; ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

Top-5 News: ಡಿಕೆ ಬ್ರದರ್ಸ್​ಗೆ ಇಡಿ ಕೊಟ್ಟಿದೆ ಬಿಗ್ ಶಾಕ್, ಅಂಬಾನಿ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದವ ಅಂದರ್; ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ.

  • Share this:

ಡಿಕೆಶಿ ಮನವಿಯನ್ನು ತಿರಸ್ಕರಿಸಿ ಶಾಕ್ ಕೊಟ್ಟ ED


ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಸಂಕಷ್ಟ ಎದುರಾಗಿದೆ. ವಿಚಾರಣೆಗೆ ನಾಳೆಯೇ ಬರುವಂತೆ ಮತ್ತೆ ED ನೋಟಿಸ್ ಕೊಟ್ಟಿದೆ. 10 ನಿಮಿಷದ ಹಿಂದೆ ನನಗೆ ಮೇಲ್ ಮಾಡಿದ್ದಾರೆ. ನಾನು ನಮ್ಮ ವಕೀಲರ ಜೊತೆ ಮಾತನಾಡ್ತೇನೆ. ವಿವರಣೆ ನೀಡಿ ತೀರ್ಮಾನ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಇಡಿ ನೋಟಿಸನ್ನು ಜಾತಿ ಲೇಪನ ಮಾಡುವುದು ಸಾಮಾನ್ಯ ಸಂಗತಿ. ಆದ್ರೆ ಇಡಿ ಕಾನೂನಾತ್ಮಕ ತನ್ನ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.


ಕೋಳಿ ಕೇಳಿ ಮಸಾಲೆ ಅರೆಯಲ್ಲ


ಬೆಂಗಳೂರು: ಜನಸಂಖ್ಯೆ ನಿಯಂತ್ರಣದ ವಿಚಾರದಲ್ಲಿ ಕಾನೂನು ಜಾರಿಯಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ (Press Meet) ಮಾತಾಡಿದ ಸಿಟಿ ರವಿ (C T Ravi) ದೇಶದಲ್ಲಿ ಎಲ್ಲಾ ಧರ್ಮೀಯರಿಗೂ ಅನ್ವಯ ಆಗುವಂತೆ ಜನಸಂಖ್ಯೆ ನಿಯಂತ್ರಣ ಆಗಬೇಕು ಎಂದು ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್‌ (Mohan Bhagavath) ಅವರು ನೀಡಿರುವ ಸಲಹೆ ವ್ಯಾಪಕವಾಗಿ ಸಾರ್ವಜನಿಕವಾಗಿ ಚರ್ಚೆ ಆಗಬೇಕು ಎಂದ್ರು.  ಬಳಿಕ ಎಲ್ಲ ರಾಜ್ಯಗಳ ವಿಧಾನಸಭೆಗಳು (Assembly) ಮತ್ತು ಸಂಸತ್ತಿನಲ್ಲೂ ಚರ್ಚೆ ನಡೆಸಿ ಕಾನೂನು ಜಾರಿ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.


ಅಂಬಾನಿ ಕುಟುಂಬಕ್ಕೆ ಕೊಲೆ ಬೆದರಿಕೆ; ಆರೋಪಿ ಬಂಧನ


ಪಾಟ್ನಾ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ  (Mukesh Ambani Family Threat Call) ಬಿಹಾರದ (Bihar) ದರ್ಭಾಂಗಾ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬೈ ಪೊಲೀಸರು ಬಂಧಿಸಿರುವ ಆರೋಪಿಯನ್ನು ರಾಕೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ನಿನ್ನೆ (ಅಕ್ಟೋಬರ್ 5) ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆ ಮಾಡಿ ಈ ಬೆದರಿಕೆ ಹಾಕಲಾಗಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ (Reliance Foundation Hospital) ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಬಂದಿದ್ದು, ಮುಕೇಶ್ ಅಂಬಾನಿ, ನೀತಾ ಅಂಬಾನಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿತ್ತು.


ಗುಂಡಿನ ದಾಳಿ; 22 ಮಕ್ಕಳೂ ಸೇರಿ 34 ಜನರು ಬಲಿ


ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ಗುರುವಾರ ಡೇ-ಕೇರ್ ಸೆಂಟರ್‌ನಲ್ಲಿ (Thailand Day Care Shooting)  ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ (Mass Shooting) ಒಟ್ಟು 34 ಜನರು ಸಾವನ್ನಪ್ಪಿದ್ದಾರೆ.  ಮಾಜಿ ಪೊಲೀಸ್ ಅಧಿಕಾರಿಯೇ ಗುಂಡಿನ ದಾಳಿ ನಡೆಸಿದ ವ್ಯಕ್ತಿ, ಆತ ಸ್ವತಃ ತನ್ನ ಮಗು ಮತ್ತು ಹೆಂಡತಿಯನ್ನೂ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದುರ್ಘಟನೆಯಲ್ಲಿ 22 ಮಕ್ಕಳು ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಶಿಕ್ಷಕಿ ಸೇರಿದಂತೆ ನಾಲ್ಕೈದು ಸಿಬ್ಬಂದಿಗೆ ವ್ಯಕ್ತಿ ಮೊದಲು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಲವ್ ಜಿಹಾದ್​ ಬಲೆಗೆ ಸಿಲುಕಿ ನರಳಿದ ನಟಿ!


ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೀತಿಸಿ ಮದುವೆಯಾಗೋದು ಕಾಮನ್​, ಕಿರುತೆರೆ ನಟಿಯೊಬ್ಬರು ಲವ್ ಜಿಹಾದ್​ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ನಟ ಆರ್ನವ್ ಎಂಬಾತನ್ನು ಕನ್ನಡದ ನಟಿ ದಿವ್ಯಾ ಶ್ರೀಧರ್​​​​ ಪ್ರೀತಿಸಿ ಮದುವೆಯಾಗಿದ್ದರಂತೆ. ಲವ್ ಜಿಹಾದ್​ಗೆ ಒಳಗಾಗಿ ನಿತ್ಯವೂ ಕಣ್ಣೀರು ಹಾಕ್ತಿದ್ದಾರೆ. ಕನ್ನಡದ ಆಕಾಶದೀಪ ಸೀರಿಯಲ್​ನಲ್ಲಿ ದಿವ್ಯಾ ಅಭಿನಯಿಸಿ ಜನಪ್ರಿಯರಾಗಿದ್ದರು. ಬಳಿಕ ತಮಿಳು ಸೀರಿಯಲ್​ಗಳಲ್ಲಿ ನಟನೆ ಮಾಡ್ತಿದ್ದಾರೆ. ನನಗೂ-ಅಮ್ಜದ್​ ಖಾನ್​​ಗೂ ಮದುವೆ ಆಗಿದೆ ಎಂದು ನನಗೆ ನನ್ನ ಗಂಡನೇ ಮೋಸ ಮಾಡ್ತಿದ್ದಾನೆ ಎಂದು ವಿಡಿಯೋ ಮಾಡಿ ನಟಿ ದಿವ್ಯಾ ಕಣ್ಣೀರು ಹಾಕಿದ್ದಾರೆ.

Published by:ಪಾವನ ಎಚ್ ಎಸ್
First published: