• Home
  • »
  • News
  • »
  • state
  • »
  • Top-5 News: ಕರ್ನಾಟಕಕ್ಕೆ ಕಾದಿದೆ ಕಂಟಕ ಎಂದು ಕೋಡಿಮಠ ಶ್ರೀ ಭವಿಷ್ಯ, ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ; ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

Top-5 News: ಕರ್ನಾಟಕಕ್ಕೆ ಕಾದಿದೆ ಕಂಟಕ ಎಂದು ಕೋಡಿಮಠ ಶ್ರೀ ಭವಿಷ್ಯ, ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ; ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ.

  • Share this:

ಕರ್ನಾಟಕಕ್ಕೆ ಕಾದಿದೆ ಕಂಟಕ


ಇಂದು ಧಾರವಾಡದಲ್ಲಿ ಕೋಡಿಮಠದ (Kodimutt) ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Sri Shivananda Shivayogi Rajendra Swamiji) ಭವಿಷ್ಯ ನುಡಿದಿದ್ದಾರೆ. ಈ ಸಂವತ್ಸರ ಪ್ರಾರಂಭದಲ್ಲಿಯೇ ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು ನೋವು ಆಗುತ್ತೆ ಅಂತಾ ಹೇಳಿದ್ದೆವು. ಜನ ಅಶಾಂತಿಯಿಂದ ಇರುತ್ತಾರೆ, ಭೂಮಿ ಕುಸಿಯುತ್ತೆ, ನಡಗುತ್ತದೆ ಎಂದು ಹೇಳಲಾಗಿತ್ತು. ಈಗ ಹಾಗೆಯೇ ಆಗಿದೆ ಎಂದರು. ಇನ್ನು ಮುಂದೆಯೂ ಮಳೆ ಆಗುವ ಲಕ್ಷಣ ಇದೆ. ಕಾರ್ತಿಕ ಮಾಸದಲ್ಲಿ ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣ ಇದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತವೆ ಎಂದು ಹೇಳಿದರು.


 ನಾಯಿ ಕಟ್ಟಿ ಹಾಕಿ  ಮನಸೋ ಇಚ್ಛೆ ಹಲ್ಲೆ


ತಾನು ಸಾಕಿದ ನಾಯಿಯನ್ನು ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಕೋಪಗೊಂಡ ಯುವಕ ನಾಯಿಯನ್ನು ಎಳೆದು ತಂದು ಕಟ್ಟಿ ಹಾಕಿ, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾನೆ. ಇದಕ್ಕೆ ಆತನ ಸಹೋದರ ಸಹ ಸಾಥ್​ ನೀಡಿದ್ದಾನೆ. ಸಹೋದರರಿಬ್ಬರ ಮೃಗೀಯ ವರ್ತನೆ ಕಂಡು ಸ್ಥಳೀಯ ಜನರೇ ಬೆಚ್ಚಿಬಿದ್ದಿದ್ದಾರೆ. ಕೆ.ಆರ್ ಪುರಂನ ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಗದ್ದುಗಪ್ಪ ಎಂಬುವರಿಗೆ ಸೇರಿದ ನಾಯಿಗೆ ಹಲ್ಲೆ ಮಾಡಿ ಯುವಕರು ವಿಕೃತ ಮೆರೆದಿದ್ದಾರೆ.


ಜಮ್ಮು ಕಾಶ್ಮೀರದ ಕುರಿತು ಮಹತ್ವದ ಘೋಷಣೆ


ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರು ಇಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಜೌರಿಯಲ್ಲಿ ಗುಜ್ಜರ್ ಮತ್ತು ಬಕರ್‌ವಾಲ್‌ಗಳ ಸಮುದಾಯದ ಜೊತೆಗೆ ಪಹಾರಿ ಸಮುದಾಯಕ್ಕೆ (Pahari Community) ಶೀಘ್ರದಲ್ಲೇ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡ (ST) ಮೀಸಲಾತಿ ಸಿಗಲಿದೆ ಎಂದು ಘೋಷಿಸಿದ್ದಾರೆ. ಈ ಮೀಸಲಾತಿ ಪಡೆಯಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಹೀಗೆ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ಪಹಾರಿ ಸಮುದಾಯಕ್ಕೆ ST ಸ್ಥಾನಮಾನ ದೊರೆತರೆ ಇದು ಭಾರತದಲ್ಲಿ ಭಾಷಾವಾರು ಗುಂಪು ಮೀಸಲಾತಿಯನ್ನು ಗಳಿಸಿದ ಮೊದಲ ನಿದರ್ಶನವಾಗಲಿದೆ.


ಹಂತಕನ ಡೈರಿಯಲ್ಲಿತ್ತು ಸ್ಫೋಟಕ ಮಾಹಿತಿ


ಜಮ್ಮು ಮತ್ತು ಕಾಶ್ಮೀರ: ರಾಜ್ಯದ ಕಾರಾಗೃಹ ಡಿಜಿಪಿ (State Prisons DGP) ಹೇಮಂತ್​ ಕುಮಾರ್​ ಲೋಹಿಯಾ (Hemant Kumar Lohia) ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಂದು (Murder) ಹಾಕಿದ್ದಾರೆ. ಅವರ ಹತ್ಯೆಯಿಂದ ಇಡೀ ಜಮ್ಮು ಕಾಶ್ಮೀರ (Jammu Kashmir) ಬೆಚ್ಚಿ ಬಿದ್ದಿದೆ. ಇದೀಗ ಅವರ ಹತ್ಯೆ ಕೇಸ್ ತನಿಖೆ ಪೊಲೀಸರು ಮುಂದುವರೆಸಿದ್ದು, ಪ್ರಕರಣದ ಪ್ರಮುಖ ಶಂಕಿತ ಆರೋಪಿ (suspect), ಲೋಹಿಯಾ ಅವರ ಮನೆಯ ಸಹಾಯಕ ಯಾಸಿರ್ ಲೋಹರ್ (Yasir Lohar) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಡೈರಿಯನ್ನು (diary) ಪೊಲೀಸರು ಪರಿಶೀಲಿಸಿದ್ದು, ಅದರಲ್ಲಿ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.


ಈಗ ಆದಿಪುರುಷನಿಗೆ ಮತ್ತೊಂದು ಸಂಕಷ್ಟ!


ಮಧ್ಯ ಪ್ರದೇಶ: ಬಾಹುಬಲಿ ಖ್ಯಾತಿಯ ನಟ, ತೆಲುಗು ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ‘ಆದಿಪುರುಷ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ನೋಡಿದವರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಕಾರ್ಟೂನ್ ರೀತಿ ಇದೆ ಅಂತ ಹೇಳಿದ್ರೆ, ರಾವಣನ ಪಾತ್ರಧಾರಿ ಸೈಫ್‌ ಅಲಿ ಖಾನ್ ನೋಡಿ ಇವ್ರೇನು ರಾವಣನೋ, ಅಲ್ಲಾವುದ್ದೀನ್ ಖಿಲ್ಜಿಯೋ (Allauddin Khilji) ಅಂತ ಟೀಕಿಸುತ್ತಿದ್ದಾರೆ. ಈ ಎಲ್ಲಾ ಟೀಕೆ ಟಿಪ್ಪಣೆಗಳ ನಡುವೆಯೇ ಆದಿ ಪುರುಷ ಸಿನಿಮಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರ ತಂಡದ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಅಂತ ಮಧ್ಯ ಪ್ರದೇಶ ಸರ್ಕಾರ (Madhya Pradesh Government) ಎಚ್ಚರಿಸಿದೆ. ಈ ಕುರಿತಂತೆ ಮಾತನಾಡಿರುವ ಮಧ್ಯ ಪ್ರದೇಶ ಗೃಹಸಚಿವ (Home Minister) ನರೋತ್ತಮ ಮಿಶ್ರಾ (Narottama Misha), ಚಿತ್ರ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: