Evening Digest: ಜೋ ಬೀಡೆನ್ ಭಾರೀ ಮತಗಳಿಂದ ಮುನ್ನಡೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಅಂತಿಮ ಘಟ್ಟಕ್ಕೆ ಬಂದಿದ್ದು, ಇನ್ನು ಕೆಲವೇ ಅಧಿಕೃತ ಘೋಷಣೆಯಾಗಲಿದೆ. ಈವರೆಗಿನ ಫಲಿತಾಂಶದಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಎದುರು ಸ್ಪರ್ಧಿಸಿರುವ ಡೆಮಾಕ್ರಟಿಕ್ ಪಕ್ಷದ ಜೊ ಬೀಡೆನ್ ಅವರು ಭಾರೀ ಬಹುಮತ ಪಡೆದುಕೊಂಡಿದ್ದಾರೆ.

  ಜೋ ಬೀಡೆನ್ ಭಾರೀ ಮತಗಳಿಂದ ಮುನ್ನಡೆ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

  2.ಕೊರೋನಾ ಎಂಬ ಮಾರಣಾಂತಿಕ ವೈರಸ್​ ಇಡೀ ವಿಶ್ವವನ್ನೇ ಆವರಿಸಿಕೊಂಡು, ಲಕ್ಷಾಂತರ ಜನರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಕೊರೋನಾಗೆ ಚಿಕಿತ್ಸೆ ಕಂಡುಹಿಡಿಯಲು ಎಲ್ಲ ದೇಶಗಳ ವಿಜ್ಞಾನಿಗಳು ಪರದಾಡುತ್ತಿರುವಾಗ ಕೆನಡಾದಲ್ಲಿ ಮತ್ತೊಂದು ಬಗೆಯ ಹಂದಿಜ್ವರ ಕಾಣಿಸಿಕೊಂಡಿದೆ.

  H1N2: ಕೆನಡಾದಲ್ಲಿ ಮೊದಲ ಹೆಚ್​1ಎನ್​2 ಸೋಂಕು ಪತ್ತೆ; ಅಪರೂಪದ ಈ ಹಂದಿಜ್ವರದ ಬಗ್ಗೆ ಇಲ್ಲಿದೆ ಮಾಹಿತಿ

  3.ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.

  Gold Rate Today: ದೀಪಾವಳಿಗೂ ಮೊದಲು ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ; ಇಲ್ಲಿದೆ ಇಂದಿನ ದರ

  4.ಆರ್​ಬಿಐ ಘೋಷಿಸಿದ ಆರು ತಿಂಗಳ ಲೋನ್ ಮೊರಾಟೋರಿಯಮ್ ಅವಧಿಯಲ್ಲಿನ ಸಾಲಗಳ ಸಂಪೂರ್ಣ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ಇವತ್ತೂ ಸಾಧ್ಯವಾಗಲಿಲ್ಲ. ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಬರದೇ ಹೋದ ಕಾರಣಕ್ಕೆ ವಿಚಾರಣೆಯನ್ನು ನ್ಯಾ| ಅಶೋಕ್ ಭೂಷಣ್ ನೇತೃತ್ವದ ಸುಪ್ರೀಂ ನ್ಯಾಯಪೀಠ ನ. 18ಕ್ಕೆ ಮುಂದೂಡಿಕೆ ಮಾಡಿದೆ.

  Loan Moratorium: ಸಾಲಗಳ ಬಡ್ಡಿ ಮನ್ನಾ ವಿಚಾರ: ಸುಪ್ರೀಂ ವಿಚಾರಣೆ ನ. 18ಕ್ಕೆ ಮುಂದೂಡಿಕೆ

  5.ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಜೊತೆ ವಾಯುಮಾಲಿನ್ಯ ಸಮಸ್ಯೆ ಬಿಗಡಾಯಿಸಿದ್ದು, ಇದನ್ನು ತಡೆಯಲು ಜನರು ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಸಿಡಿಸದಂತೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮನವಿ ಮಾಡಿದ್ದಾರೆ. ಅಲ್ಲದೇ, ಇಡೀ ವಿಶ್ವವೇ ಸಂಕಷ್ಟಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಜನರಲ್ಲಿ ಸಕಾರತ್ಮಕತೆ ಮೂಡಿಸುವ ಸಲುವಾಗಿ ಸರ್ಕಾರವೇ ಈ ಬಾರಿ ಲಕ್ಷ್ಮೀ ಪೂಜೆ ಆಯೋಜನೆ ಮಾಡಲಿದೆ. ಇದರ ನೇರಪ್ರಸಾರಕ್ಕೂ ಅನುವು ಮಾಡಿಕೊಡಲಾಗುವುದು. ಇದರಿಂದ ಲಕ್ಷ್ಮೀ ಪೂಜೆ ಆಚರಣೆ ನಿರ್ವಹಣೆ ಮಾಡದಿರುವುದು ಈ ಮೂಲಕವೇ ಭಾಗವಹಿಸುವಂತೆ ಮನವಿ ಮಾಡಿದರು.

  ದೆಹಲಿ ಸರ್ಕಾರದಿಂದ ಲಕ್ಷ್ಮಿ ಪೂಜೆ ಆಯೋಜನೆ; ಪಟಾಕಿ ಹೊಡೆಯುವ ಬದಲು ನೇರ ಪ್ರಸಾರ ವೀಕ್ಷಿಸಿ ಎಂದ ಕೇಜ್ರಿವಾಲ್​

  6.ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಇಂದು ಗುರುವಾರ ಬೆಳಗ್ಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನ ವಶಕ್ಕೆ ಪಡೆದಿದ್ದಾರೆ. ಧಾರವಾಡದ ಬರಾಕೂಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

  ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

  7.ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಕೇಸ್ ಸಂಬಂಧ ವಿನಯ್ ಕುಲಕರ್ಣಿ ಮತ್ತವರ ಸಹೋದರನನ್ನ ಸಿಬಿಐ ವಶಕ್ಕೆ ಪಡೆದಿದೆ. ಕಾಂಗ್ರೆಸ್ ಇದನ್ನು ಬಿಜೆಪಿಯ ದ್ವೇಷದ ರಾಜಕಾರಣ ಎಂದು ಹೇಳಿದರೆ, ಬಿಜೆಪಿ ಮಾತ್ರ ವಿನಯ್ ಕುಲಕರ್ಣಿ ಅಪರಾಧಿ ಸ್ಥಾನದಲ್ಲಿರುವರಿಂದ ಸಿಬಿಐ ವಶಕ್ಕೆ ಪಡೆದಿದೆ ಎಂದು ಹೇಳಿದೆ. ಈ ನಡುವೆ ವಿನಯ್ ಕುಲಕರ್ಣಿ ಬಿಜೆಪಿ ಸೇರುವ ವಿಚಾರ ಸಂಪೂರ್ಣ ಸುಳ್ಳು ಸುದ್ದಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.


  ವಿನಯ್ ಕುಲಕರ್ಣಿ ಬಂಧನ ವಿಚಾರ: ಸಿಬಿಐ ವಿಚಾರಣೆ ಸಹಜ – ಸಿಎಂ ಯಡಿಯೂರಪ್ಪ

  8.ರಾಮನಗರದ ಹಲವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ಕಾಂಗ್ರೆಸ್​ ಪಕ್ಷದ ಚೇಲಾಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅವನ್ಯಾವನೋ ಎಂಪಿ ಇದ್ದಾನಲ್ಲ ಅವನ ಚೇಲಾಗಳು ಮರಳುಗಾರಿಕೆ ನಡೆಸುತ್ತಿದ್ದಾರೆ.

  ಸಂಸದನ ಚೇಲಾಗಳಿಂದ ರಾಮನಗರದಲ್ಲಿ ಅಕ್ರಮ ಮರಳುಗಾರಿಕೆ; ಡಿಕೆ ಸುರೇಶ್​ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

  9. ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸುತ್ತಿರುವ ಪೂಜಾ ಹೆಗ್ಡೆ ಸದ್ಯ ಇಟಲಿಯಲ್ಲಿದ್ದಾರೆ. ಇಟಲಿಯಲ್ಲಿ ಕಡಲ ತೀರದಲ್ಲಿ ಕುಳಿತು ಜೀವನದ ಪಾಠ ಮಾಡಲಾರಂಭಿಸಿದ್ದಾರೆ.

  Pooja Hegde: ಇಟಲಿಯ ಕಡಲ ತೀರದಲ್ಲಿ ಕುಳಿತು ಜೀವನದ ಪಾಠ ಮಾಡುತ್ತಿದ್ದಾರೆ ಪೂಜಾ ಹೆಗ್ಡೆ..!

  10ಐಪಿಎಲ್​ನಲ್ಲಿಂದು ಮಹತ್ವದ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿ ಆಗಲಿದ್ದು, ಗೆದ್ದ ಟೀಂ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ.

  IPL 2020, MI vs DC: ಮುಂಬೈ ವಿರುದ್ಧದ ಕ್ವಾಲಿಫೈಯರ್ ಪಂದ್ಯಕ್ಕೆ ಡೆಲ್ಲಿ ತಂಡ ಹೇಗಿರಲಿದೆ?: ಇಲ್ಲಿದೆ ಸಂಭಾವ್ಯ XI
  Published by:G Hareeshkumar
  First published: