Evening Digest: ವಾರದ ಆರಂಭದಲ್ಲೇ ಇಳಿಕೆ ಹಾದಿ ಹಿಡಿದ ಆಭರಣ ದರ, ಶಿರಾ ಮತ್ತು ಆರ್​ಆರ್​ನಗರ ಉಪ ಚುನಾವಣೆ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಪಶ್ಚಿಮ ಆಫ್ರಿಕಾದಲ್ಲಿರುವ ಮಾಲಿ ದೇಶದ ಗಡಿಭಾಗದಲ್ಲಿ ಸೇನಾ ನೆಲೆಗಳ ಮೇಲೆ ದಾಳಿಗೆ ಸಜ್ಜಾಗಿದ್ದ ಭಯೋತ್ಪಾದಕರ ಗುಂಪಿನ ಮೇಲೆ ಫ್ರಾನ್ಸ್ ಸೇನಾ ಪಡೆಗಳು ವಾಯು ದಾಳಿ ಮಾಡಿವೆ. ಈ ಏರ್​ಸ್ಟ್ರೈಕ್​ನಲ್ಲಿ 50ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿರುವುದು ತಿಳಿದು ಬಂದಿದೆ.

  French Airstrike - ಮಾಲಿಯಲ್ಲಿ ಫ್ರಾನ್ಸ್ ಏರ್ ಸ್ಟ್ರೈಕ್; 50ಕ್ಕೂ ಹೆಚ್ಚು ಉಗ್ರರ ಹತ್ಯೆ

  2. ಬಿಹಾರದಲ್ಲಿ ಎರಡನೇ ಸುತ್ತಿನ ಮತದಾನದ ಬಳಿಕ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ. ಜನರು ಕಾಂಗ್ರೆಸ್​ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದೇ ಕಾರಣದಿಂದ ಸಂಸತ್ತಿನಲ್ಲಿ 100 ಸದಸ್ಯರನ್ನು ಹೊಂದುವಲ್ಲಿ ಕೂಡ ಐತಿಹಾಸಿಕ ರಾಷ್ಟ್ರೀಯ ಪಕ್ಷ ಸೋತಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

  ಸಂಸತ್ತಿನಲ್ಲಿ 100 ಸದಸ್ಯರಿಲ್ಲ; ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

  3.ಯೂರೋಪ್​ನ ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾದಲ್ಲಿ ಭಯೋತ್ಪಾದಕ ದಾಳಿ ಆಗಿದೆ. ನಗರದ ಮಧ್ಯ ಭಾಗದ ಆರು ವಿವಿಧ ಸ್ಥಳಗಳಲ್ಲಿ ಉಗ್ರಗಾಮಿಗಳು ಶೂಟೌಟ್ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಹತ್ಯೆಯಾಗಿದ್ದಾರೆ. ಸಾವಿಗೀಡಾದವರಲ್ಲಿ ಒಬ್ಬ ಶಂಕಿತ ಉಗ್ರನೂ ಇರುವುದು ತಿಳಿದು ಬಂದಿದೆ.

  Terror Attack - ಆಸ್ಟ್ರಿಯಾದ ವಿಯೆನ್ನಾದಲ್ಲಿ ಉಗ್ರರ ದಾಳಿ: ಮೂವರ ಸಾವು

  4.ಕೊರೋನಾ ವೈರಸ್​ ಹರಡುವಿಕೆ ಹೆಚ್ಚಿದ ಬೆನ್ನಲ್ಲೇ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದವು. ರಿಯಲ್​ ಎಸ್ಟೇಟ್​ ಸೇರಿ ಸಾಕಷ್ಟು ಉದ್ಯಮಗಳು ನೆಲಕಚ್ಚಿದ್ದವು. ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.  ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ಮೂರು ದಿನ ಏರಿಕೆ ಕಂಡು ಮೂರು ದಿನ ಇಳಿಕೆ ಕಂಡಿದೆ.

  Gold Rate: ಚಿನ್ನ ಖರೀದಿಸಲು ಸುಸಂದರ್ಭ; ವಾರದ ಆರಂಭದಲ್ಲೇ ಇಳಿಕೆ ಹಾದಿ ಹಿಡಿದ ಆಭರಣ ದರ

  5.ಅತ್ತೆ-ಸೊಸೆ ತಾಯಿ ಮಕ್ಕಳಂತೆ ಚೆನ್ನಾಗಿರಲಿ. ಅತ್ತೆ-ಸೊಸೆ ಜಗಳವಾಡಲಿ ಎಂದು ಹೇಳುವುದೂ ಇಲ್ಲ, ಬಯಸುವುದೂ ಇಲ್ಲ ಎಂದು ಡಿ.ಕೆ.ರವಿ ತಾಯಿ ಮತ್ತು ಸೊಸೆ ಕುಸುಮಾ ವಿಚಾರವಾಗಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದರು.

  ನಾನು ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲ, ಹಾಗೆ ಮಾಡಿದ್ದರೆ 2012ಕ್ಕೂ ಮೊದಲೇ ಮಂತ್ರಿಯಾಗುತ್ತಿದೆ; ಸಿ.ಟಿ.ರವಿ

  6.ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಮುನಿರತ್ನ ಅವರಿಂದ ತೆರವಾಗಿರುವ ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು (ನ. 3) ಉಪಚುನಾವಣೆ ನಡೆಯುತ್ತಿದೆ.

  ಇಂದು ಶಿರಾ, ಆರ್ ​ಆರ್ ನಗರ ಉಪಚುನಾವಣೆ; ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

  7. ತನ್ನ ವಯಸ್ಸಿನ ಮಕ್ಕಳೊಂದಿಗೆ ಬಾಲ್ಯದ ಸಿಹಿಕ್ಷಣಗಳನ್ನ ಸವಿಯಬೇಕಾದ ಬಾಲಕನೋರ್ವನಿಗೆ ಆ ಭಾಗ್ಯವಿಲ್ಲ. ತಲೆ ತಿರುಗಿ ಬೀಳದೆ, ಕೋಮಾಕ್ಕೆ ಜಾರದೆ ಸೇಫ್ ಆಗಿ ಇರುತ್ತೇನೆ ಎನ್ನುವ ಗ್ಯಾರೆಂಟಿಯಿಲ್ಲ. ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಕೃಷ್ಣಪ್ಪ ಗೌಡರ ಪುತ್ರ ಗಗನ್​ನ ಸದ್ಯದ ಪರಿಸ್ಥಿತಿ. ಗೇರು ತೋಪುಗಳಿಗೆ ಕಾಡುವ ಟಿ ಸೊಳ್ಳೆಗಳನ್ನು ನಿಯಂತ್ರಿಸಲು ಹೆಲಿಕಾಪ್ಟರ್‌ ಮೂಲಕ ಎಗ್ಗಿಲ್ಲದೆ ಸಿಂಪಡಿಸಿದ ಎಂಡೋಸಲ್ಫಾನ್ ಎನ್ನುವ ವಿಷದ ದುಷ್ಪರಿಣಾಮ ಇದೀಗ ಈ ಬಾಲಕ ಆರೋಗ್ಯದ ಮೇಲೆ ಕಾಣಿಸಿಕೊಂಡಿದೆ

  ಚಿಕಿತ್ಸೆ ವೆಚ್ಚ ಭರಿಸಲು ಪುತ್ತೂರಿನ ಎಂಡೋಸಲ್ಫಾನ್ ಕುಟುಂಬದಿಂದ ಭಿಕ್ಷೆ ಎತ್ತಲು ತೀರ್ಮಾನ

  8.ರಾಜ್ಯದ ವಿರುದ್ದ ಸದಾ ಖ್ಯಾತೆ ತೆಗೆಯುತ್ತಲೆ ಇರುವ ಶಿವಸೇನೆ ಇಷ್ಟು ದಿನ ಗಡಿ ವಿಚಾರದಲ್ಲಿ ಕಿರಿಕ್ ಮಾಡುತ್ತ ರಾಜ್ಯ ಸರ್ಕಾರದ ವಿರುದ್ದ ಮಾತನಾಡುತ್ತಿತ್ತು. ಈಗ ಡಿಸಿಎಂ ಲಕ್ಷ್ಮಣ ಸವದಿ ವಿರುದ್ದ ತನ್ನ ಪುಂಡಾಟಿಕೆ ಪ್ರದರ್ಶನ ಮಾಡಿದೆ.

  ಗಡಿಯಲ್ಲಿ ಶಿವಸೇನೆ ಉದ್ದಟತನ ; ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿ ಪುಂಡಾಟಿಕೆ

  9.ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಹಿರಿಯ ನಟ ಎಚ್.ಜಿ.ಸೋಮಶೇಖರ ರಾವ್ ನಿಧನರಾಗಿದ್ದಾರೆ. 86 ವರ್ಷದವರಾಗಿದ್ದ ಅವರು, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಮಧ್ಯಾಹ್ನ ಅಗಲಿದ್ದಾರೆ. ಸೋಮಶೇಖರ್​ ಅವರು ಮೂಲತಃ ಚಿತ್ರದುರ್ಗದವರು. ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದ ಅವರು, ಭಾರತ ಹಾಗೂ ಪಾಶ್ಚಿಮಾತ್ಯ ದೇಶಗಳ ಹತ್ತಾರು ಜನಪ್ರಿಯ ರಂಗಕೃತಿಗಳ ಕನ್ನಡ ಅವತರಣಿಕೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

  ಸ್ಯಾಂಡಲ್​ವುಡ್​ನ ಹಿರಿಯ ನಟ ಎಚ್.ಜಿ.ಸೋಮಶೇಖರ ರಾವ್ ಇನ್ನಿಲ್ಲ

  10. ಟೂರ್ನಿಯಲ್ಲಿ ಈಗಾಗಲೇ 13 ರಲ್ಲಿ 6 ಪಂದ್ಯಗಳಲ್ಲಿ ಗೆದ್ದಿರುವ ವಾರ್ನರ್ ಪಡೆ, ಪಾಯಿಂಟ್ ಟೇಬಲ್​ನಲ್ಲಿ +0.555 ನೆಟ್ ರನ್​ರೇಟ್​ನಿಂದ 5ನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ಪ್ಲೇ ಆಫ್ ಹಂತಕ್ಕೇರಲು, ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

  IPL 2020, SRH vs MI: ಡು ಆರ್ ಡೈ ಪಂದ್ಯಕ್ಕೆ ಆರೆಂಜ್ ಆರ್ಮಿ ರೆಡಿ: ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆ?
  Published by:G Hareeshkumar
  First published: