Evening Digest: ಏಷ್ಯಾದಲ್ಲೇ ಭ್ರಷ್ಟಚಾರದಲ್ಲಿ ಭಾರತವೇ ನಂ1, ವಿಜಯನಗರ ಜಿಲ್ಲೆಗೆ 6 ತಾಲೂಕು ಸೇರ್ಪಡೆ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಏಷ್ಯಾ ಖಂಡದಲ್ಲೇ ಭಾರತ ಅತ್ಯಂತ ಹೆಚ್ಚು ಭ್ರಷ್ಟಾಚಾರವನ್ನು ಹೊಂದಿರುವ ರಾಷ್ಟ್ರ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಸಮೀಕ್ಷಾ ವರದಿಯ ಪ್ರಕಾರ ಭಾರತ ಭ್ರಷ್ಟಾಚಾರದಲ್ಲಿ ಇತರೆ ದೇಶಗಳಿಗಿಂತ ಸಾಕಷ್ಟು ಮುಂದಿದೆ. ಸಾರ್ವಜನಿಕ ಸೇವೆಗಳನ್ನು ಪಡೆಯಲು ವೈಯಕ್ತಿಕ ಸಂಪರ್ಕಗಳನ್ನು ಬಳಸುವವರ ಸಂಖ್ಯೆ ಹೆಚ್ಚು ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ತನ್ನ ಸಮೀಕ್ಷಯಲ್ಲಿ ತಿಳಿಸಿದೆ.

  ಏಷ್ಯಾದಲ್ಲೇ ಭ್ರಷ್ಟಚಾರದಲ್ಲಿ ಭಾರತವೇ ನಂ1; ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಮೀಕ್ಷಾ ವರದಿ

  2.ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ರೈತರ ಹೋರಾಟ ಮುಂದುವರಿದಿದೆ. ಹಲವು ಅಡೆತಡೆಗಳ ಮಧ್ಯೆಯೂ ಪಂಜಾಬ್ ರೈತರು ದಿಲ್ಲಿ ಚಲೋ ರ್ಯಾಲಿ ಮುಂದುವರಿಸಿದ್ದಾರೆ. ಹರ್ಯಾಣದ ರೈತರೂ ಕೂಡ ತಮ್ಮ ನೆರೆ ರಾಜ್ಯದವರ ಹೋರಾಟಕ್ಕೆ ಕೈಜೋಡಿಸಿದ್ದಾರೆ.

  ಪಂಜಾಬ್ ರೈತರ ‘ದಿಲ್ಲಿ ಚಲೋ’ಗೆ ಕೈಜೋಡಿಸಿದ ಹರಿಯಾಣ ರೈತರು; ದೆಹಲಿ ಗಡಿಭಾಗದಲ್ಲಿ ಲಾಠಿ ಚಾರ್ಜ್, ಟಿಯರ್ ಗ್ಯಾಸ್, ಟ್ರಾಫಿಕ್ ಜಾಮ್

  3.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಕ್ರೂರಿ ಕೊರೋನಾ ಮತ್ತು ಲಾಕ್​ಡೌನ್​​ ಕಾರಣಗಳಿಂದ ಜನ ಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಲೇ ಇದೆ.

  Petrol Rate: ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರ್ಕಾರ

  4.ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರನ್ನ ಮತ್ತೆ ವಶಕ್ಕೆ ತೆಗೆದುಕೊಳ್ಳಲಾಗಿರುವುದು ತಿಳಿದುಬಂದಿದೆ. ಎರಡು ದಿನಗಳಿಂದ ನನ್ನನ್ನು ಮತ್ತು ನನ್ನ ಮಗಳು ಇತಿಜಾ ಅವರನ್ನು ಗೃಹ ಬಂಧನದಲ್ಲಿಟ್ಟಿದ್ದಾರೆ ಎಂದು ಸ್ವತಃ ಮುಫ್ತಿ ಅವರೇ ಹೇಳಿಕೊಂಡಿದ್ದು, ತಮ್ಮ ಪಕ್ಷದ ನಾಯಕ ವಾಹೀದ್ ಪಾರಾ ಅವರ ಕುಟುಂಬವನ್ನು ಭೇಟಿ ಮಾಡಲೂ ಅವಕಾಶ ನಿರಾಕರಿಸಲಾಗಿದೆ ಎಂದಿದ್ದಾರೆ.

  ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಫ್ತಿ ಮತ್ತೆ ಗೃಹಬಂಧನ

  5. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪರಿಸ್ಥಿತಿ ದಿನೇದಿನೇ ಇಕ್ಕಟ್ಟಾಗುತ್ತಿದೆ. ಆಂತರಿಕವಾಗಿ ಅಸಮಾಧಾನ ಭುಗೆಲೇಳುತ್ತಿರುವ ಜೊತೆಗೆ ಪಕ್ಷದ ಹೈಕಮಾಂಡ್ ಕೂಡ ಮುಖ್ಯಮಂತ್ರಿಗಳ ಕೆಲ ನಡೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿ ಸೇರಿಸುವ ವಿಚಾರಕ್ಕೆ ಹೈಕಮಾಂಡ್ ಕೆಂಗಣ್ಣು ಬೀರಿರುವುದು ತಿಳಿದು ಬಂದಿದೆ.

  ಸಿಎಂ ವಿರುದ್ಧ ಹೆಚ್ಚಿದ ಮುನಿಸು; ವರಿಷ್ಠರೂ ಕೆಂಗಣ್ಣು; ಇಕ್ಕಟ್ಟಿನಲ್ಲಿ ಯಡಿಯೂರಪ್ಪ

  6.ರೋಹಿಣಿ ಸಿಂಧೂರಿ ಐಎಎಸ್ ಪಾಸ್‌ ಮಾಡಿದ್ದಾರಾ? ಇಲ್ಲವಾ? ಎಂಬುದೇ ಅನುಮಾನ. ಅವರು ನಿಜವಾಗಿಯೂ ಸ್ವಂತ ಪರಿಶ್ರಮದಿಂದ ಪಾಸ್ ಆಗಿದ್ದಾರಾ? ಅಥವಾ ಪ್ರಭಾವ ಬಳಸಿ ಪಾಸ್ ಆಗಿದ್ದಾರಾ? ಎಂಬುದು ಖಚಿತವಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  ರೋಹಿಣಿ ಸಿಂಧೂರಿ ಐಎಎಸ್​ ಪಾಸ್ ಮಾಡಿದ್ದಾರಾ ಎಂಬುದೇ ಅನುಮಾನ; ರಘು ಆಚಾರ್ ವಾಗ್ದಾಳಿ

  7. ವಿಜಯನಗರವನ್ನು ಬಳ್ಳಾರಿಯಿಂದ ವಿಭಜಿಸಿ, ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆಗೆ ಕೊನೆಗೂ ಒಪ್ಪಿಗೆ ಸಿಕ್ಕಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಇಂದು ಚರ್ಚೆ ನಡೆಸಿ, ಅನುಮೋದನೆ ಪಡೆಯಲಾಗಿದೆ. ಈ ಮೂಲಕ ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲಿದೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಘೋಷಿಸಿದ್ದಾರೆ.

  ವಿಜಯನಗರ ಜಿಲ್ಲೆಗೆ 6 ತಾಲೂಕು ಸೇರ್ಪಡೆ; ಶಿವಮೊಗ್ಗ ವಿಮಾನ ನಿಲ್ದಾಣದ ಅನುದಾನ 384 ಕೋಟಿ ರೂ.ಗೆ ಏರಿಕೆ

  8.ರಾಜಕೀಯ ಥ್ರಿಲ್ಲರ್ ಸಿನಿಮಾದ ಸ್ಕ್ರಿಪ್ಟ್​ನಂತೆ ಸಾಗುತ್ತಿರುವ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆ ದಿನೇ ದಿನೇ ಬಿಸಿಯೇರಿಸುತ್ತಿದೆ. ಮರಾಠಾ ಪ್ರಾಧಿಕಾರ ನಂತರ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಚಾರ ಈಗ ಬಿಎಸ್ ಯಡಿಯೂರಪ್ಪ ಅವರಿಗೆ ತಲೆನೋವು ತಂದಿದೆ. ಈ ವಿಚಾರದಿಂದಾಗಿ ಸಂಪುಟ ವಿಸ್ತರಣೆಯ ಅವರ ಪ್ರಯತ್ನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

  ಸಂಪುಟ ವಿಸ್ತರಣೆ ನಿರ್ಧಾರ ಇನ್ನೆರಡು ದಿನ ವಿಳಂಬ ಸಾಧ್ಯತೆ; ಸಿಎಂ ಎದುರೇ ಸಚಿವಾಕಾಂಕ್ಷಿಗಳ ಮುನಿಸು

  9.ಭೂಗತ ದೊರೆ ಮುತ್ತಪ್ಪ ರೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರಲಿದೆ ಎಂದು ಬಹಳ ಸಮಯದಿಂದ ಹೇಳಲಾಗುತ್ತಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರು ಕಳೆದ ಮೇ ತಿಂಗಳಿನಲ್ಲಿ ಅಗಲಿದರು. ಆಗಿನಿಂದಲೇ ಅವರ ಬಯೋಪಿಕ್​ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿತ್ತು. ಈಗ ಅದಕ್ಕೆ ಕಾಲಕೂಡಿ ಬಂದಿದೆ.

  Muthappa Rai Biopic: ಮುತ್ತಪ್ಪ ರೈ ಬಯೋಪಿಕ್​: 3 ಪಾರ್ಟ್​ನಲ್ಲಿ ಸಿದ್ಧಗೊಳ್ಳಲಿದೆ ಮಾಜಿ ಡಾನ್ ಸಿನಿಮಾ

  10.ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿಯೊಂದಿಗೆ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

  IND vs AUS: ಸೌರವ್ ಗಂಗೂಲಿ ದಾಖಲೆಯನ್ನು ಸರಿಗಟ್ಟಿದ ಆರೋನ್ ಫಿಂಚ್
  Published by:G Hareeshkumar
  First published: