Evening Digest: ಲವ್ ಜಿಹಾದ್ ಪ್ರಕರಣದಲ್ಲಿ ಕೋರ್ಟ್ ಮಹತ್ವದ ತೀರ್ಪು, ಕಾಂಗ್ರೆಸ್ ಸೋಲಿಗೆ ಎಲ್ಲರು ಹೊಣೆ- ಸಿದ್ದರಾಮಯ್ಯ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಹಬ್ಬಗಳ ಸಾಲು ಮುಗಿಯುತ್ತಿದ್ದಂತೆ ದೇಶದ ಅನೇಕ ಭಾಗಗಳಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಕೋವಿಡ್​ ಎರಡು, ಮೂರನೇ ಅಲೆಗೆ ದೆಹಲಿ, ಹರಿಯಾಣ, ಪಂಜಾಬ್​, ಮಹಾರಾಷ್ಟ್ರ ಸೇರಿದಂತೆ ಏಂಟು ರಾಜ್ಯಗಳು ತತ್ತಿರಿಸಿವೆ. ಈ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಒಮ್ಮೆಲ್ಲೆ ಹೆಚ್ಚಾದ ಹಿನ್ನಲೆ ಕೇಂದ್ರ ಸರ್ಕಾರ ಕೂಡ ಕಳವಳ ವ್ಯಕ್ತಪಡಿಸಿದೆ.

  ಅಸಡ್ಡೆ ಬೇಡ, ಒಗ್ಗಟ್ಟಾಗಿ ಹೋರಾಡೋಣ; ಲಸಿಕೆ ಸ್ಟೋರೇಜ್ ವ್ಯವಸ್ಥೆಗೆ ರಾಜ್ಯಗಳು ಮುಂದಾಗ ಬೇಕು ಪ್ರಧಾನಿ ಮೋದಿ

  2. ಲವ್ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿ ಮತಾಂತರ ಉದ್ದೇಶಿತ ಅಂತರ್ ಧರ್ಮೀಯ ವಿವಾಹಗಳಿಗೆ ಕಡಿವಾಣ ಹಾಕುವ ಕಾನೂನುಗಳನ್ನ ಕೆಲ ರಾಜ್ಯಗಳಲ್ಲಿ ಜಾರಿಗೆ ತರುತ್ತಿರುವ ಹೊತ್ತಲ್ಲೇ ಉತ್ತರ ಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ.

  ಹಿಂದೂ ಮುಸ್ಲಿಮ್ ಅಲ್ಲ, ವೈಯಕ್ತಿಕ ಹಕ್ಕಿನ ಪ್ರಶ್ನೆ: ಲವ್ ಜಿಹಾದ್ ಪ್ರಕರಣದಲ್ಲಿ ಕೋರ್ಟ್ ಮಹತ್ವದ ತೀರ್ಪು

  3.ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸೋಲನ್ನು ಡೊನಾಲ್ಡ್ ಟ್ರಂಪ್ ಒಪ್ಪಿಕೊಳ್ಳದಿದ್ದರೂ ಅಧಿಕಾರ ಬಿಟ್ಟುಕೊಡುವುದು ಬಹುತೇಕ ಖಚಿತವೆನ್ನಲಾಗಿದೆ. ಡೆಮಾಕ್ರಾಟ್ ಪಕ್ಷದ ಜೋ ಬೈಡನ್ ನೂತನ ಅಮೆರಿಕ ಅಧ್ಯಕ್ಷರಾಗುವ ಕಾಲ ಸನ್ನಿಹಿತವಾಗಿದೆ. ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನ ಬೈಡನ್ ಪಡೆ ಮಾಡುತ್ತಾ ಬಂದಿದೆ. ನೂತನ ನಿಯೋಜಿತ ಅಧ್ಯಕ್ಷರು ತಮ್ಮ ಸಚಿವ ಸಂಪುಟ ರಚನೆಯತ್ತಲೂ ಗಮನ ಹರಿಸಿದ್ದಾರೆ.

  ಅಮೆರಿಕದ ಮುಂದಿನ ವಿದೇಶಾಂಗ ಸಚಿವರ ಭಾರತದೊಂದಿಗಿನ ಒಡನಾಟ ಹೇಗೆ? ಚೀನಾ, ಪಾಕ್ ಬಗ್ಗೆ ಅವರ ನಿಲುವೇನು?

  4. 2019ರ ಲೋಕಸಭಾ ಚುಣಾವಣೆ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿತ್ತು. ಅದರಲ್ಲೊಂದು ಪ್ರಮುಖ ಕಾರಣ ಬಿಎಸ್​ಎಫ್​ ಸೈನಿಕರ ತೇಜ್ ಬಹದ್ದೂರ್​ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದರು. ಆದರೆ, ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ತೇಜ್​ ಬಹದ್ದೂರ್​​ ಅಲಹಾಬಾದ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ತೇಜ್​ ಬಹದ್ದೂರ್​ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ಸೈನಿಕನ ನಾಮಪತ್ರವನ್ನು ಅಸಿಂಧು ಎಂದು ಘೋಷಿಸಿದ್ದ ಚುನಾವಣಾ ಆಯೋಗದ ತೀರ್ಪು ಸರಿಯಾಗಿಯೇ ಇದೆ ಎಂದು ಹೇಳುವ ಮೂಲಕ ಮನವಿಯನ್ನು ತಿರಸ್ಕರಿಸಿದೆ.

  ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸೈನಿಕ ತೇಜ್ ಬಹದ್ದೂರ್ ಅರ್ಜಿ ವಜಾಗೊಳಿಸಿದ ಸುಪ್ರೀಂ

  5.ಕೊರೋನಾ ನಿಗ್ರಹಕ್ಕಾಗಿ ಲಸಿಕೆಗಳು ಯಾವ ಸಂದರ್ಭದಲ್ಲಾದರೂ ಬರಬಹುದು. ಅಷ್ಟರಲ್ಲಿ ಪ್ರತಿಯೊಂದು ರಾಜ್ಯವೂ ಲಸಿಕೆ ವಿತರಣೆಗೆ ಸರ್ವಸನ್ನದ್ಧವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳಿಗೆ ಕರೆ ನೀಡಿದರು.

  ಲಸಿಕೆ ವಿತರಣೆ ಕೆಲಸಕ್ಕೆ ಚುನಾವಣೆ ಮಾದರಿಯಲ್ಲಿ ಸಜ್ಜಾಗಬೇಕು: ರಾಜ್ಯಗಳಿಗೆ ಪ್ರಧಾನಿ ಮೋದಿ ಕರೆ

  6.ಕಾಂಗ್ರೆಸ್​ನಲ್ಲಿ ಬಣ ರಾಜಕೀಯವಿದೆ ಎಂಬ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಲವರು ನಾಯಕತ್ವದ ಬಗ್ಗೆ ಮಾತನಾಡುತ್ತಾರೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಎಲ್ಲರೂ ಹೊಣೆಯಾಗಿದ್ದಾರೆ. ಶಿರಾ ಮತ್ತು ಆರ್​ಆರ್ ನಗರ ಉಪ ಚುನಾವಣೆಯಲ್ಲಿ ನಾವು ಸೋತೆವು. ಇದಕ್ಕೆ ನಾನು ಸೇರಿ ಎಲ್ಲರೂ ಹೊಣೆಯಾಗಿದ್ದೇವೆ ಎಂದಿದ್ದಾರೆ.

  ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ನಾನು ಸೇರಿ ಎಲ್ಲರೂ ಹೊಣೆ; ಸಿದ್ದರಾಮಯ್ಯ

  7.ನಮ್ಮ ಬಾಂಬೆ ಟೀಂನಲ್ಲಿ ರೋಷನ್ ಬೇಗ್ ಇರಲಿಲ್ಲ,  ಬಿಜೆಪಿಯನ್ನ ನಂಬಿ ರೋಷನ್ ಬೇಗ್ ರಾಜೀನಾಮೆ ಕೊಟ್ಟಿಲ್ಲ, ಹೀಗಂತ ಬಾಂಬೆ ಟೀಂ ಸದಸ್ಯರಲ್ಲೊಬ್ಬರಾದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರೋಷನ್ ಬೇಗ್ ನಮ್ಮ ಬಾಂಬೆ ಟೀಂನಲ್ಲಿ ಇರಲಿಲ್ಲ. ಅವರೇನು ಬಿಜೆಪಿಯನ್ನ ನಂಬಿ ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ, ಅವರು ಕೇಳಿದ್ದರೆ ಅವರಿಗೆ ಶಿವಾಜಿನಗರದಿಂದ ಟಿಕೆಟ್ ಕೊಡುತ್ತಿದ್ದರು. ಅವರು ನಮ್ಮ ಟೀಂನೊಂದಿಗೆ‌ ಕಾಂಗ್ರೆಸ್‌ನಿಂದ ಹೊರಬಂದಿಲ್ಲ ಬಂದಿಲ್ಲ, ಬದಲಿಗೆ ಕಾಂಗ್ರೆಸ್ ನಿಂದ ಬೇಸತ್ತು ಅವರು ಹೊರಗಡೆ ಬಂದಿದ್ದರು.

  ನಮ್ಮ ಬಾಂಬೆ ಟೀಂನಲ್ಲಿ ರೋಷನ್ ಬೇಗ್ ಇರಲಿಲ್ಲ; ಬಿಜೆಪಿಯನ್ನು ನಂಬಿ ಅವರು ಕಾಂಗ್ರೆಸ್‌ ಬಿಟ್ಟಿಲ್ಲ; ಎಸ್.ಟಿ.ಸೋಮಶೇಖರ್

  8.ಚಾಮರಾಜನಗರಕ್ಕೆ ಭೇಟಿ ನೀಡದೆ ಮಲೆಮಹದೇಶ್ವರ ಬೆಟ್ಟಕ್ಕೆ ನಾಳೆ ಆಗಮಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿಎಂ ಎಂಬ ಅಭಿಯಾನ ಆರಂಭವಾಗಿದೆ. ರಾಜ್ಯದ 26 ನೇ ಮುಖ್ಯಮಂತ್ರಿಯಾಗಿ 2019ರ ಜುಲೈನಲ್ಲಿ  ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ 16 ತಿಂಗಳು ಕಳೆದರೂ ಚಾಮರಾಜನಗರದತ್ತ ಮುಖ ಮಾಡಿಲ್ಲ.

  ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿಎಂ ಅಭಿಯಾನ: ಚಾಮರಾಜನಗರಕ್ಕೆ ಭೇಟಿ ನೀಡದ ಬಗ್ಗೆ ಆಕ್ರೋಶ

  9.ಇಂದು ರೆಬೆಲ್​ ಸ್ಟಾರ್ ಅಂಬರೀಷ್​ ಅವರ 2ನೇ ವರ್ಷದ ಪುಣ್ಯ ಸ್ಮರಣೆ. ಅಂಬರೀಷ್​ ಅವರು ಅಗಲಿ ಎರಡು ವರ್ಷಗಳೇ ಕಳೆದಿದೆ. ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ರೆಬೆಲ್​ ಅಂಬಿಯನ್ನು ಸ್ಮರಿಸುತ್ತಿದ್ದಾರೆ. ಅವರೊಂದಿಗೆ ಕಳೆದ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  Ambareesh Death Anniversary: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ದರ್ಶನ್​: ಅಪ್ಪಾಜಿ ಬೈಯ್ಯುವುದನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದ ಡಿಬಾಸ್​

  10.ಕಳೆದ ಕೆಲವು ವರ್ಷಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪೈಕಿ ಉತ್ತಮ ನಾಯಕ ಯಾರು ಎಂಬ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚೆಗೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಐದನೇ ಬಾರಿ ಟ್ರೋಫಿ ಎತ್ತಿಹಿಡಿದ ಬಳಿಕ ಈ ಚರ್ಚೆ ಅತಿರೇಕಕ್ಕೆ ಹೋಗಿದೆ,

  Rohit Sharma: ಕೊಹ್ಲಿಗಿಂತ ರೋಹಿತ್ ಶರ್ಮಾ ಅತ್ಯುತ್ತಮ ನಾಯಕ ಎಂದ ಆರ್​ಸಿಬಿ ಸ್ಟಾರ್ ಆಟಗಾರ
  Published by:G Hareeshkumar
  First published: