Evening Digest: ಬಿಹಾರದಲ್ಲಿ ಮೂವರು ಮಾವೋವಾದಿಗಳ ಹತ್ಯೆ, ಸಂಪುಟ ವಿಸ್ತರಣೆಗೆ ಪೂರಕವಾಗಿ ಸ್ಪಂದಿಸದ ಹೈಕಮಾಂಡ್

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳು ಮೃತಪಟ್ಟಿರುವ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

  ಬಿಹಾರದಲ್ಲಿ ಎನ್​ಕೌಂಟರ್​; ಮೂವರು ಮಾವೋವಾದಿಗಳ ಹತ್ಯೆ

  2.ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮುಂದುವರಿಸಿರುವ ಭಾರತೀಯ ಜನತಾ ಪಕ್ಷ ಆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಘೋಷಣೆ ಆದ ಕೆಲ ಗಂಟೆಗಳ ನಂತರ ಕಾರ್ಯಕರ್ತರ ಸಭೆ ನಡೆಸಿದ ಅಮಿತ್ ಶಾ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರ ಬರುವ ವಿಶ್ವಾಸ ವ್ಯಕ್ತಪಡಿಸಿದರು.

  ಬಿಹಾರದಂತೆ ತಮಿಳುನಾಡಿನಲ್ಲೂ ಕಮಲ ಅರಳಲಿದೆ: ಕಾರ್ಯಕರ್ತರಿಗೆ ಅಮಿತ್ ಶಾ ಹುರುಪು

  3.ಸಚಿವ ಸಂಪುಟ ವಿಸ್ತರಣೆಯಾಗಲೀ ಅಥವಾ ಪುನಾರಚನೆಯಾಗಲೀ ಸದ್ಯಕ್ಕಂತೂ ಆಗುವ ಲಕ್ಷಣ ಕಾಣುತ್ತಿಲ್ಲ. ಬಿಜೆಪಿ ಹೈಕಮಾಂಡ್ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಡಿಸೆಂಬರ್ 15ರವರೆಗೆ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಕುರಿತು ಯೋಚಿಸೋಣ ಎಂದು ಯಡಿಯೂರಪ್ಪ ಅವರಿಗೆ ವರಿಷ್ಠರು ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

  ಅಧಿವೇಶನದ ನಂತರ ನೋಡೋಣ: ರಾಜ್ಯ ಸಂಪುಟ ವಿಸ್ತರಣೆಗೆ ಪೂರಕವಾಗಿ ಸ್ಪಂದಿಸದ ಹೈಕಮಾಂಡ್

  4.ದಾಸರಹಳ್ಳಿಗೆ ಕುಡಿಯುವ ನೀರಿಗಾಗಿ 36ಲಕ್ಷ ಗ್ರ್ಯಾಂಡ್ ನೀಡಿದ್ದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಜಾರಿಗೆ ತಂದೆ. ನಗರದ ಹೊರ ವಲಯದಲ್ಲಿ ಡಾಂಬರೀಕರಣ, ಕಾವೇರಿ ನೀರಿಗೆ ಜೆಡಿಎಸ್ ಕಾರಣ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು.

  ಅಣ್ಣಾ ನನ್ನ ಸಾಲ ಮನ್ನಾ ಆಯ್ತು ಅಂತಾರೆ, ಆದರೆ ಓಟ್ ಮಾತ್ರ ನನಗೆ ಕೊಡಲ್ಲ; ಎಚ್.ಡಿ.ಕುಮಾರಸ್ವಾಮಿ ಬೇಸರ

  5.ಈಗ ವಿಜಯನಗರ ಜಿಲ್ಲೆಗೆ ತಾತ್ವಿಕ ಒಪ್ಪಿಗೆ ನೀಡುವ ಅಗತ್ಯ ಇರಲಿಲ್ಲ. ಆನಂದ್ ಸಿಂಗ್ ಸಂತೋಷಕ್ಕಾಗಿ ಬಳ್ಳಾರಿ ಇಬ್ಭಾಗ ಮಾಡುವ ಹುನ್ನಾರವಿದು. ಬೇರೆ ಪಕ್ಷದವರು ಬಿಜೆಪಿಗೆ ಸೇರೋದಾದ್ರೆ ತಾಲೂಕುಗಳನ್ನೇ ಜಿಲ್ಲೆಯನ್ನಾಗಿ‌ ಮಾಡ್ತಾರೆ ಬಿಜೆಪಿಯವರು ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

  ಬಿಜೆಪಿಗೆ ಸೇರ್ತಿನಿ ಅಂದ್ರೆ ತಾಲೂಕುಗಳನ್ನೇ ಜಿಲ್ಲೆ ಮಾಡ್ತಾರೆ; ಶಿವರಾಜ ತಂಗಡಗಿ ವ್ಯಂಗ್ಯ

  6.ಮರಾಠಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಪ್ರತಿಭಟನೆ ಮುಂದುವರೆದಿದೆ. ಕನ್ನಡಪರ ಹೋರಾಟಗಾರರು ಸರಣಿ ಪ್ರತಿಭಟನೆಗಳಿಗೆ ಮುಂದಾಗಿದ್ದಾರೆ. ಮರಾಠಿ ಪ್ರಾಧಿಕಾರ ರಚನೆ ಆದೇಶ ಹಿಂಪಡೆಯುವವರೆಗೂ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್​ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  ಮರಾಠಿ ಪ್ರಾಧಿಕಾರ ವಿರೋಧಿಸಿ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಪ್ರತಿಭಟನೆ; ಪೊಲೀಸರಿಂದ ವಾಟಾಳ್ ನಾಗರಾಜ್ ಬಂಧನ

  7.ಒಳಮೀಸಲಾತಿ ವಿಚಾರ ಈ ಬಾರಿ ಬಿಜೆಪಿ ಸರಕಾರದಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಠ ಜಾತಿ ಎಂದರೆ ಬಿಜೆಪಿಯನ್ನು ಸೋಲಿಸುತ್ತವೆ ಎಂಬ ಭಾವನೆ ಈ ಮುಂಚೆ ಇತ್ತು. ಬೇರೆ ಪಕ್ಷಗಳು ಬಿಜೆಪಿಯಿಂದ ಪರಿಶಿಷ್ಠ ಜಾತಿಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದವು.  ಆದರೆ, ಈಗ ಪರಿಶಿಷ್ಠ ಜಾತಿಯವರಿಗೆ ಪ್ರತಿಪಕ್ಷಗಳ ಬಗ್ಗೆ ಅರಿವಾಗಿದೆ.

  ಒಳಮೀಸಲಾತಿ ವಿಚಾರಕ್ಕೆ ಬಿಜೆಪಿ ಸರ್ಕಾರ ತಾರ್ಕಿಕ ಅಂತ್ಯ ಒದಗಿಸಲಿದೆ; ಚಲವಾದಿ ನಾರಾಯಣಸ್ವಾಮಿ

  8.ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಬಳಿಕ  ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ವಿ ಸೋಮಣ್ಣ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ  ಸ್ಥಾಪನೆಗೆ ಮನವಿ ಸಲ್ಲಿಸಿದ ಮರುದಿನವೇ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದರು.

  ಬೆಂಗಳೂರಿನ ಪರಮಶಿವಯ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗುವ ಸಾಧ್ಯತೆ

  9.ನಟ ರಮೇಶ್ ಅರವಿಂದ್ ಸಿನಿಮಾದಿಂದಾಚೆ, ತಮ್ಮ ಮಾತುಗಳ ಮೂಲಕ, ಮಾಡುವ ಕೆಲಸಗಳಿಂದ ಸಾವಿರಾರು ಜನರಿಗೆ ಸ್ಫೂರ್ತಿ ತುಂಬುವ, ಹುಮ್ಮಸ್ಸು ತುಂಬುವ ಕೆಲಸ ಮಾಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಸಾಕಷ್ಟು ವೀಡಿಯೋ ತುಣುಕುಗಳು ಈಗಾಗಲೇ ವೈರಲ್ ಆಗಿವೆ.

  ನನ್ನ ಕೈಲಿ ಏನೂ ಆಗೊಲ್ಲ ಎಂಬವರು ಈ ವಿಡಿಯೋ ನೋಡಿ: ರಮೇಶ್ ಅರವಿಂದ್ ಕಾರ್ಯಕ್ಕೆ ಜನರ ಬಹುಪರಾಕ್

  10.ಭಾರತದ ನೂತನ ಟೆನಿಸ್ ನಂಬರ್ ಒನ್ ಆಟಗಾರ ಪ್ರಜ್ಞೇಶ್ ಗುನ್ನೇಸ್ವರನ್ ಅವರು ತಮ್ಮ ಮಿಂಚಿನ ಓಟ ಮುಂದುವರಿಸಿದ್ದಾರೆ. ಕಳೆದ ವಾರ ಕ್ಯಾರಿ ಚಾಲೆಂಜರ್ಸ್ ಟೂರ್ನಿಯ ಫೈನಲ್ ತಲುಪಿದ್ದ ಪ್ರಜ್ಞೇಶ್ ಇದೀಗ ಒರ್ಲಾಂಡೋ ಚಾಲೆಂಜರ್ಸ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತು ತಲುಪಿದ್ದಾರೆ.

  ಸತತ ಎರಡನೇ ಚಾಲೆಂಜರ್ಸ್ ಟೂರ್ನಿ ಫೈನಲ್​ಗೆ ಭಾರತದ ಪ್ರಜ್ಞೇಶ್ ಗುನ್ನೇಸ್ವರನ್
  Published by:G Hareeshkumar
  First published: