news18-kannada Updated:November 20, 2020, 5:14 PM IST
ಸಾಂದರ್ಭಿಕ ಚಿತ್ರ
1.ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಮಾಲಿನ್ಯ ದಿನದಿಂದ ವಿಪರೀತ ಆಗುತ್ತಿದ್ದು, ಇದೇ ವಾಯು ಮಾಲಿನ್ಯದ ಕಾರಣಕ್ಕೆ ವೈದ್ಯರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 'ನೀವು ಮೊದಲು ದೆಹಲಿ ಬಿಟ್ಟು ಹೊರಗಡೆ ಹೋಗಿ, ಇಲ್ಲೇ ಇದ್ದರೆ ಅಪಾಯ ತಪ್ಪಿದ್ದಲ್ಲ' ಎಂಬ ಎಚ್ಚರಿಕೆ ರೂಪದ ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಗಾಂಧಿ ದೆಹಲಿಯಿಂದ ಗೋವಾಕ್ಕೆ ಶಿಫ್ಟ್ ಆಗಿದ್ದಾರೆ.
ದೆಹಲಿ ವಾಯುಮಾಲಿನ್ಯ ಹಿನ್ನೆಲೆ: ದೆಹಲಿಯಿಂದ ಗೋವಾಗೆ ಶಿಫ್ಟ್ ಆದ ಸೋನಿಯಾ ಗಾಂಧಿ2.ಕಳೆದ ಕೆಲವುದಿನಗಳಿಂದ ನಿರಂತರವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಭಾರೀ ಇಳಿಕೆ ಕಾಣುತ್ತಿದ್ದು, ಚಿನ್ನಭರಣ ಪ್ರೀಯರಿಗೆ ಸಂತಸ ತಂದಿದೆ. ದುರ್ಬಲ ಜಾಗತಿಕ ಸೂಚನೆಗಳ ಮಧ್ಯೆ ಚಿನ್ನದ ಬೆಲೆಗಳು ಸತತ ಐದನೇ ದಿನವೂ ಇಳಿಮುಖವಾಗಿದೆ.
Gold Rate: ಗ್ರಾಹಕರಿಗೆ ಸಿಹಿ ಸುದ್ದಿ; ಭಾರೀ ಇಳಿಕೆ ಕಾಣುತ್ತಿದೆ ಚಿನ್ನದ ದರ; ಇಂದಿನ ಚಿನ್ನದ ಬೆಲೆ 52,070 ರೂ.
3.ಜಮ್ಮು-ಕಾಶ್ಮೀರದ ನಾಗ್ರೋತಾ ಎಂಬ ಭಾಗದಲ್ಲಿ ಗುರುವಾರ ಭದ್ರತಾ ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ್ಯೆಯಾಗಿದ್ದರು. ಉಗ್ರರು ಇದ್ದ ಬಸ್ ಅನ್ನು ಟೋಲ್ ಪ್ಲಾಜಾ ಬಳಿ ತಪಾಸಣೆ ಮಾಡುವಾಗ ಗುಂಡಿನ ಚಕಮಕಿ ನಡೆದಿತ್ತು, ಈ ವೇಳೆ ಉಗ್ರರನ್ನು ಕೊಲ್ಲಲಾಗಿದೆ. ಆದರೆ, ವಿಚಾರಣೆ ವೇಳೆ ಉಗ್ರರು ಬಸ್ ಮೂಲಕ ಜಮ್ಮುವಿನಿಂದ ಕಾಶ್ಮೀರಕ್ಕೆ ಹೋಗುತ್ತಿದ್ದರೆನ್ನಲಾಗಿದೆ.
26/11 ತಾಜ್ ದಾಳಿ ವಾರ್ಷಿಕೋತ್ಸವದ ದಿನ ಉಗ್ರರಿಂದ ದಾಳಿಗೆ ಸಂಚು?; ಗುಪ್ತಚರ ಅಧಿಕಾರಿಗಳ ಜೊತೆ ಮೋದಿ ಸಭೆ
4. ಲಂಡನ್ನ ಆಕ್ಸ್ಫರ್ಡ್ ಇನ್ಸ್ಟಿಟ್ಯೂಟ್ ಸಂಶೋಧಿಸಿರುವ ಕೋವಿಶೀಲ್ಡ್ ಕೋವಿಡ್ ವ್ಯಾಕ್ಸಿನ್ ಇನ್ನು ನಾಲ್ಕೈದು ತಿಂಗಳಷ್ಟರಲ್ಲಿ ಮಾರುಕಟ್ಟೆಗೆ ಲಭ್ಯವಿರಲಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಪ್ ಇಂಡಿಯಾದ ಸಿಇಒ ಆಡಾರ್ ಪೂನಾವಾಲ ತಿಳಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಸಮಿಟ್ 2020 ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲ ಪರೀಕ್ಷೆಗಳು ಸುಗಮವಾಗಿ ಮುಕ್ತಾಯಗೊಂಡಲ್ಲಿ ಏಪ್ರಿಲ್ ತಿಂಗಳೊಳಗೆ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುತ್ತದೆ ಎಂದಿದ್ದಾರೆ.
ಏಪ್ರಿಲ್ನೊಳಗೆ ಆಕ್ಸ್ಫರ್ಡ್ನ ಕೋವಿಡ್ ಲಸಿಕೆ ಲಭ್ಯ; 2 ಡೋಸ್ಗೆ ಗರಿಷ್ಠ 1,000 ರೂ ಬೆಲೆ
5.ಭಾರತ್ ಬಯೋಟೆಕ್ನಿಂದ ಅಭಿವೃದ್ಧಿ ಪಡಿಸಲಾಗಿರುವ ಕೋವಾಕ್ಸಿನ್ ಲಸಿಕೆಯನ್ನು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಚುಚ್ಚುಸಿಕೊಂಡಿದ್ದಾರೆ. ಇಲ್ಲಿನ ಅಂಬಾಲ ಕ್ಯಾಂಟ್ನ ಸಿವಿಲ್ ಆಸ್ಪತ್ರೆಯಲ್ಲಿ ಅವರು ಈ ಲಸಿಕೆ ಪಡೆದಿದ್ದಾರೆ. ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಚಿವರು ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ.
Covaxin: ಕೋವಾಕ್ಸಿನ್ ಲಸಿಕೆ ಚುಚ್ಚಿಸಿಕೊಂಡ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್
6.ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್ ಡಿಸೆಂಬರ್ 5ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಮುಂದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು, ಕರ್ನಾಟಕ ಬಂದ್ ಬಗ್ಗೆ ಮಾತನಾಡಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಡಿಸೆಂಬರ್ 5ರಂದು ಬಂದ್ ಮಾಡಿಯೇ ತೀರುತ್ತೇವೆ ಎಂದು ಪ್ರತಿಜ್ಞೆ ಗೈದಿದ್ದಾರೆ.
ಕನ್ನಡಿಗರಿಗೆ ದ್ರೋಹ ಮಾಡಿದ್ದೀರಿ, ನಾವು ಸುಮ್ಮನಿರಲ್ಲ; ಸಿಎಂಗೆ ವಾಟಾಳ್ ನಾಗರಾಜ್ ಎಚ್ಚರಿಕೆ
7. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಇನ್ನೂ 4 ದಿನ ಬಿಡುಗಡೆ ಭಾಗ್ಯ ಇಲ್ಲ. ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಲಾಗಿದೆ. ಮಂಗಳವಾರದವರೆಗೂ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಮಾಜಿ ಮೇಯರ್ ಸಂಪತ್ ರಾಜ್ ನ. 24ರವರೆಗೂ ನ್ಯಾಯಾಂಗ ಬಂಧನ
8. ಸಕ್ಕರೆನಾಡು ಮಂಡ್ಯದಲ್ಲಿ ಪೋಷಕರ ನಿರ್ಲ ಕ್ಷ್ಯಕ್ಕೆ ಮತ್ತೊಂದು ಹಸುಳೆ ಸಾವಿಗೀಡಾಗಿದೆ. ಕಳೆದ ತಿಂಗಳು ಮಂಡ್ಯ ನಗರದಲ್ಲಿ ಪೋಷಕರ ನಿರ್ಲಕ್ಷ್ಯದಿಂದ ಎರಡಂತಸ್ತಿನ ಕಟ್ಟಡದ ಮೇಲಿಂದ ಬಿದ್ದು 2 ವರ್ಷದ ಮುದ್ದಾದ ಹೆಣ್ಣು ಮಗು ಸಾವಿಗೀಡಾಗಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಅಂತಹದ್ದೆ ಘಟನೆಯೊಂದು ನಡೆದಿದೆ.
ಪೋಷಕರ ನಿರ್ಲಕ್ಷ್ಯಕ್ಕೆ ಮಂಡ್ಯದಲ್ಲಿ ಮತ್ತೊಂದು ಹಸುಳೆ ಬಲಿ; ಬೈಕ್ನಿಂದ ಬಿದ್ದು 1 ವರ್ಷದ ಮಗು ಸಾವು
9.ಇತ್ತೀಚೆಗಷ್ಟೆ ಒಟಿಟಿ ಮೂಲಕ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಸಿನಿಮಾ ಸೂರರೈ ಪೊಟ್ರು. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾದಲ್ಲಿ ಕಾಲಿವುಡ್ ನಟ ಸೂರ್ಯ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಗಣ್ಯರು, ಸೆಲೆಬ್ರಿಟಿಗಳು ಹಾಗೂ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಡಿಸುತ್ತಿದ್ದಾರೆ.
Soorarai Pottru: ಸೂರರೈ ಪೊಟ್ರು ಸಿನಿಮಾ ನೋಡಿ ನಟ ಸೂರ್ಯ ಬಗ್ಗೆ ಟ್ವೀಟ್ ಮಾಡಿದ ಸುದೀಪ್..!
10.ಲಂಕಾ ಪ್ರೀಮಿಯರ್ ಲೀಗ್ 2020 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನವೆಂಬರ್ 26ಕ್ಕೆ ಈ ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕೊಲಂಬೊ ಕಿಂಗ್ಸ್ ಹಾಗೂ ಕ್ಯಾಂಡಿ ಟಸ್ಕರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲೇ ಲಂಕಾನ್ನರ ನಾಡಿನಲ್ಲಿ ಲಂಕಾ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದ್ದು ನ. 26 ರಿಂದ ಡಿಸೆಂಬರ್ 16ರ ವರೆಗೆ ಹಂಬನತೋಟದ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
LPL 2020: ಲಂಕಾ ಪ್ರೀಮಿಯರ್ ಲೀಗ್ಗೆ ಕ್ಷಣಗಣನೆ: ಘರ್ಜಿಸಲು ತಯಾರಾದ ಭಾರತದ ಹಳೇ ಹುಲಿಗಳು: ಯಾರೆಲ್ಲಾ?
Published by:
G Hareeshkumar
First published:
November 20, 2020, 5:10 PM IST