Evening Digest: ಆತ್ಮನಿರ್ಭರ ಯೋಜನೆಯಡಿ ಇಪಿಎಫ್​ ಸೌಲಭ್ಯ, ಐಟಿ ನೀತಿ 2020-2025 ಬಿಡುಗಡೆ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಭಾರತದ ಆರ್ಥಿಕಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಹಲವು ಯೋಜನೆಗಳು ಫಲ ನೀಡಿವೆ. ಇದರಿಂದ ಆರ್ಥಿಕ ಸುಧಾರಣೆಯಾಗುತ್ತಿದೆ ಎಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೊಸ ಉದ್ಯೋಗ ಸೃಷ್ಟಿಗೆ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯನ್ನು ಘೋಷಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ನೌಕರರಿಗೆ ಇಪಿಎಫ್​ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದಾರೆ.

  ಲಾಕ್​ಡೌನ್​ನಿಂದ ಉದ್ಯೋಗ ಕಳೆದುಕೊಂಡವರಿಗೆ ಗುಡ್​ನ್ಯೂಸ್​; ಆತ್ಮನಿರ್ಭರ ಯೋಜನೆಯಡಿ ಇಪಿಎಫ್​ ಸೌಲಭ್ಯ

  2.ಬಿಜೆಪಿ "ಚೋರ್ ದರ್ವಾಜಾ" (ಕಳ್ಳದಾರಿ) ಮೂಲಕ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ. ಬಿಹಾರದಲ್ಲಿ ಮತಗಳ ಎಣಿಕೆ ಅಸಾಧಾರಣವಾದ ರೀತಿಯಲ್ಲಿ ನಿಧಾನವಾಗಿ ಸಾಗಿತ್ತು. "ಕೋವಿಡ್ ಮಾರ್ಗಸೂಚಿ ಪ್ರಕಾರ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (ಇವಿಎಂ) ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದರಿಂದ ಫಲಿತಾಂಶ ಬರುವುದು ತಡರಾತ್ರಿಯಾಗಿತ್ತು. ಈ ನಡುವೆ ಅಂಚೆ ಮತಪತ್ರಗಳ ಎಣಿಕೆಗೆ ಸಂಬಂಧಿಸಿದಂತೆ, ವಿದ್ಯುನ್ಮಾನ ಮತಯಂತ್ರಗಳ ಲೋಪದ ಬಗ್ಗೆ ಹಾಗೂ ಗೆದ್ದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸದ ಬಗ್ಗೆ ಆರ್ ಜೆಡಿ ಚುನಾವಣಾ ಆಯೋಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.

  ಬಿಹಾರದಲ್ಲಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದ ಬಿಜೆಪಿ : ತೇಜಸ್ವಿ ಯಾದವ್

  3.ಕೋರೋನಾ ವೈರಸ್​ಗೆ ತತ್ತರಿಸಿದ್ದ ಭಾರತದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಹೀಗಿರುವಾಗಲೇ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ದೇಶದ ಅರ್ಥ ವ್ಯವಸ್ಥೆ ಸುಧಾರಿಸಿಕೊಳ್ಳುತ್ತಿದೆ. ಜಿಡಿಪಿ ಸಂಗ್ರಹದಲ್ಲಿ ಏರಿಕೆಯಾಗುತ್ತಿದೆ ಎಂದಿದ್ದಾರೆ.

  ದೀಪಾವಳಿ ಗಿಫ್ಟ್​ ನೀಡಿದ ಕೇಂದ್ರ; ಹೋಸ ಯೋಜನೆಗಳನ್ನು ಘೋಷಿಸಿದ ನಿರ್ಮಲಾ ಸೀತಾರಾಮನ್

  4. ಚುನಾವಣಾ ಸಮೀಕ್ಷೆಗಳನ್ನು ಸುಳ್ಳು ಮಾಡಿರುವ ಬಿಹಾರದ ಮತದಾರರು ಮತ್ತೆ ತಮ್ಮ ನೆಲದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಬಹುಮತ ನೀಡಿದ್ದಾರೆ. ಜೆಡಿಯು ಪಕ್ಷದ ನಿತೀಶ್​ ಕುಮಾರ್ ಆರನೇ ಬಾರಿ ಸಿಎಂ ಆಗುವ ತವಕದಲ್ಲಿದ್ದಾರೆ.

  ನಿತೀಶ್​ ಕುಮಾರ್​ ಎನ್​ಡಿಎ ಮೈತ್ರಿಯಿಂದ ಹೊರಬರಲಿ, ತೇಜಸ್ವಿಯನ್ನು ಸಿಎಂ ಮಾಡಲಿ; ದಿಗ್ವಿಜಯ್​ ಸಿಂಗ್

  5. ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ನಾನು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪೊಲೀಸರೇ ಬಂಧಿಸುತ್ತಾರೆ. ಸಂಪತ್ ರಾಜ್ ಜವಾಬ್ದಾರಿಯುತ ನಾಗರೀಕನಾಗಿ ಬಂದು ಶರಣಾಗಬೇಕು. ಅವರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ, ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾಗಿದೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ಲುಕೌಟ್ ನೋಟೀಸ್ ಹೊರಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

  ಮಾಜಿ ಮೇಯರ್ ಸಂಪತ್ ರಾಜ್ ಸ್ವತಃ ಬಂದು ಶರಣಾಗಬೇಕು; ಗೃಹ ಸಚಿವ ಬಸವರಾಜ ಬೊಮ್ಮಾಯಿ

  6. ತಾಲಿಬಾನಿಗಳು ಕೂಡ ಮಿಲ್ಟೆಂಟ್, ಕ್ಯಾಪ್ಟನ್ ಅಂತ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಸಿದ್ದರಾಮಯ್ಯ, ಡಿಕೆಶಿ ಕೂಡ ಬಂಡೆ, ಹುಲಿ ಅಂತ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ. ಚುನಾವಣೆಯ ನಂತರ ಬಂಡೆಯು ಇಲ್ಲ ಹುಲಿಯು ಇಲ್ಲ. ಕಾಂಗ್ರೆಸ್ ಪರಿಸ್ಥಿತಿ ದುಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳುವ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ತಾಲಿಬಾನಿಗಳಿಗೆ ಹೋಲಿಸಿದರು.

  ತಾಲಿಬಾನಿಗಳಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹುಲಿ, ಬಂಡೆ ಎಂದು ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ; ನಳಿನ್ ಕುಮಾರ್ ಕಟೀಲ್

  7. ರಾಜಧಾನಿ ಬೆಂಗಳೂರು ನಗರವನ್ನು ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಟ್ಟಿದ್ದು, ಅದಕ್ಕೆ ಪೂರಕವಾದ ಹೊಸ ಐಟಿ ನೀತಿಯನ್ನು (2020-25) ಬಿಡುಗಡೆ ಮಾಡಿದೆ.

  ಐಟಿ ನೀತಿ 2020-2025 ಬಿಡುಗಡೆ: ಬೆಂಗಳೂರು ನಂತರ 2ನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರ ವಿಸ್ತರಣೆಗೆ ಉಪಕ್ರಮ

  8. ಬೆಂಗಳೂರಿನ ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆಯ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆಯಾಗಿದ್ದಾರೆ. ಅವರನ್ನು ಪೊಲೀಸರೇ ಹುಡುಕಬೇಕು. ಅವರ ಕೆಲಸವನ್ನು ನಾನಾಗಲೀ, ಕಾಂಗ್ರೆಸ್ ಪಕ್ಷವಾಗಲೀ ಮಾಡಲು ಸಾಧ್ಯವೇ? ಪೊಲೀಸರು ಯಾವುದೋ ನೆಪ ಹೇಳಿ ಸುಮ್ಮನೆ ತಪ್ಪಿಸಿಕೊಳ್ಳುತ್ತಿದ್ದಾರೆ. ಸಂಪತ್ ರಾಜ್ ಎಲ್ಲಿ ಅಡಗಿದ್ದಾರೆಂಬುದನ್ನು ಸರ್ಕಾರ ಪತ್ತೆ ಹಚ್ಚಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

  ಸಂಪತ್ ರಾಜ್ ಎಲ್ಲಿ ಅಡಗಿದ್ದಾರೆಂದು ನಾವು​ ಹುಡುಕಬೇಕಾ?; ಸರ್ಕಾರಕ್ಕೆ ಸಿದ್ದರಾಮಯ್ಯ ಲೇವಡಿ

  9. 2020ನಿಜಕ್ಕೂ ಸಿನಿರಂಗದ ಪಾಲಿಗೆ ಕರಾಳ ವರ್ಷವಾಗಿ ಪರಿಣಮಿಸಿದೆ. ಒಂದರ ಹಿಂದೆ ಒಂದರಂತೆ ಸಾವುಗಳು ಸಂಭವಿಸುತ್ತಿವೆ. ರಿಷಿ ಕಪೂರ್​, ಇರ್ಫಾನ್​ ಖಾನ್​, ಸುಶಾಂತ್​ ಸಿಂಗ್​, ಬಾಲಸುಬ್ರಹ್ಮಣ್ಯಂ ಹೀಗೆ ಹಲವಾರು ಮಂದಿ ಸೆಲೆಬ್ರಿಟಿಗಳು ಅಗಲಿದ್ದಾರೆ. ಈಗ  ಬಿ-ಟೌನ್​  ಖ್ಯಾತ ನಟರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲಿವುಡ್​ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ರಂಜಿಸುತ್ತಿದ್ದ ನಟ ಆಸಿಫ್​ ಬಸ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  Asif Basra Suicide: ಬಾಲಿವುಡ್​ ನಟ ಆಸಿಫ್​ ಬಸ್ರಾ ಆತ್ಮಹತ್ಯೆಗೆ ಶರಣು; ಧರ್ಮಶಾಲಾದಲ್ಲಿ ಶವ ಪತ್ತೆ..!

  10. ಭಾರತ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 17 ಆಟಗಾರರನ್ನು ಒಳಗೊಂಡಿರುವ ಈ ಬಳಗದಲ್ಲಿ ಮೂವರು ಉದಯೋನ್ಮುಖ ಕ್ರಿಕೆಟರುಗಳಿಗೆ ಸ್ಥಾನ ನೀಡಲಾಗಿದೆ.

  India vs Australia: ಪ್ರತಿಷ್ಠಿತ ಟೆಸ್ಟ್​ಗಾಗಿ ಆಸ್ಟ್ರೇಲಿಯಾ ತಂಡ ಪ್ರಕಟ: ಟೀಮ್​ನಲ್ಲಿ ಐವರು ಯುವ ಆಟಗಾರರು
  Published by:G Hareeshkumar
  First published: