Evening Digest: ಬಿಹಾರದಲ್ಲಿ ಜಯಭೇರಿ ಬಾರಿಸಿದ ಎನ್​ಡಿಎ, ಸಚಿವ ಸ್ಥಾನಕ್ಕೆ ಶುರುವಾದ ಲಾಬಿ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಮತಗಟ್ಟೆಯ ಸಮೀಕ್ಷೆಯನ್ನು ಬುಡಮೇಲಾಗಿಸಿ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೊನೆಗೂ ಎನ್​ಡಿಎ ಅಧಿಕಾರಕ್ಕೆ ಬಂದಿದೆ. ನಿತೀಶ್​ ಕುಮಾರ್ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗುವುದು ಪಕ್ಕಾ ಎನ್ನಲಾಗಿದೆ. ಬಿಹಾರದಲ್ಲಿ ಮತ್ತೊಮ್ಮೆ ಎನ್​ಡಿಎ ಮೈತ್ರಿಕೂಡ ಜಯಭೇರಿ ಬಾರಿಸಿದೆ. ಸಾಕಷ್ಟು ಏರಿಳಿತಗಳ ನಡುವೆಯೂ, ಹಲವು ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ ಎನ್​ಡಿಎ ಸತತ 14 ಗಂಟೆಗಳ ಮತ ಎಣಿಕೆಯ ಬಳಿಕ ಗೆಲುವಿನ ನಗು ಬೀರಿದೆ.

  Bihar Election Result 2020: ಬಿಹಾರದಲ್ಲಿ ಜಯಭೇರಿ ಬಾರಿಸಿದ ಎನ್​ಡಿಎ; ನಿತೀಶ್​ ಕುಮಾರ್​ಗೆ ಮತ್ತೊಮ್ಮೆ ಸಿಎಂ ಪಟ್ಟ ಖಚಿತ

  2. ಕೊರೋನಾ ವೈರಸ್​ ಆರಂಭವಾದಗಿನಿಂದ ಚಿನ್ನದ ದರ ಗಗನಕ್ಕೇರಿದೆ. 10 ಗ್ರಾಂಗೆ 35 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 50 ಸಾವಿರ ರೂಪಾಯಿ ಸಮೀಪಿಸಿದೆ. ಅನ್​ಲಾಕ್​ ಘೋಷಣೆ ಆದ ನಂತರದಲ್ಲಿ ಚಿನ್ನದ ಆಮದು ಸಮಸ್ಥಿತಿಗೆ ಬರುತ್ತಿದ್ದು, ಚಿನ್ನದ ಬೆಲೆ ನಿಧಾನವಾಗಿ ಕಡಿಮೆ ಆಗಿತ್ತು. ಭಾರತದಲ್ಲಿ ಹಬ್ಬಕ್ಕೆ ಭಾರೀ ಪ್ರಾಮುಖ್ಯತೆ ನೀಡುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ಖರೀದಿ ಜೋರಾಗಿರುತ್ತದೆ.

  Gold Price Today: ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​; ಒಂದೇ ದಿನ ಐತಿಹಾಸಿಕ ಇಳಿಕೆ ಕಂಡ ಚಿನ್ನದ ಬೆಲೆ

  3. ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತ್ಯವಾಗಿದ್ದು, ಮತ ಎಣಿಕೆಯೂ ಮುಗಿದಿದೆ. ಡೆಮಾಕ್ರಟಿಕ್ ಪಕ್ಷ ಜೋ ಬಿಡೆನ್ ಈಗಾಗಲೇ ಗೆಲುವು ಸಾಧಿಸಿದ್ದಾರೆ. ಅವರ ಅಧ್ಯಕ್ಷೀಯ ಪದಗ್ರಹಣಕ್ಕಾಗಿ ಇಡೀ ಅಮೆರಿಕ ಕಾಯುತ್ತಿದೆ. ಆದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲನುಭವಿಸಿರುವ ಡೊನಾಲ್ಡ್​ ಟ್ರಂಪ್ ಈಗಲೂ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಮುಂದಾಗಿಲ್ಲ.ಇದಕ್ಕೆ ಅವರ ಮತ್ತೊಂದು ಟ್ವೀಟ್ ಸಾಕ್ಷಿಯಾಗಿದೆ.

  ಈ ಮೋಸದ ಚುನಾವಣೆಯನ್ನು ಜನ ಒಪ್ಪಲ್ಲ ನಾವೇ ಗೆಲ್ಲುತ್ತೇವೆ; ಇನ್ನೂ ಸೋಲೊಪ್ಪದ ಡೊನಾಲ್ಡ್ ಟ್ರಂಪ್

  4. ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಕಳೆದವಾರ ಬಂಧನಕ್ಕೊಳಗಾಗಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ​ ಜಾಮೀನು ನೀಡಿದೆ. ಈ ಮೂಲಕ ಅರ್ನಬ್​ಗೆ ದೊಡ್ಡ ರಿಲೀಫ್​ ಸಿಕ್ಕಂತಾಗಿದೆ.

  Arnab Goswami: ಸುದ್ದಿ ವಾಹಿನಿ ಸಂಪಾದಕ ಅರ್ನಬ್​ ಗೋಸ್ವಾಮಿಗೆ ಮಧ್ಯಂತರ​ ಜಾಮೀನು ನೀಡಿದ ಸುಪ್ರೀಂಕೋರ್ಟ್​

  5. ಬಾಪೂಜಿನಗರದ ರೇಖಾ ಕೆಮಿಕಲ್ ಗೋಡೌನ್ ಅಗ್ನಿ ಅವಘಡ ಪ್ರಕರಣದಲ್ಲಿ ಬಿಬಿಎಂಪಿ ವೈಫಲ್ಯಯೂ ಇದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಒಪ್ಪಿಕೊಂಡಿದ್ದಾರೆ. ಬೆಸ್ಕಾಂ, ಮಾಲಿನ್ಯ ಮಂಡಳಿ, ಹೆಲ್ತ್ ಡಿಪಾರ್ಟ್ ಮೆಂಟ್ ಲೋಪವೂ ಇದೆ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಎರಡು ದಿನಗಳಲ್ಲಿ ಜಂಟಿ‌ ಸರ್ವೆ ಮಾಡಿ ಇಂತಹ ಕ್ರಮಕ್ಕೆ ಬ್ರೇಕ್ ಹಾಕಲಾಗುತ್ತದೆ.

  ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಬೆಂಕಿ ದುರಂತ; ಬಿಬಿಎಂಪಿ ವೈಫಲ್ಯವೂ ಇದೆ ಎಂದ ಕಮಿಷನರ್ ಮಂಜುನಾಥ್ ಪ್ರಸಾದ್

  6. ಉಪಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದರು. ಈ ಸಂಬಂಧ ಇನ್ನೆರಡ್ಮೂರು ದಿನಗಳೊಳಗೆ ಹೈ ಕಮಾಂಡ್​ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದರು. ಸಿಎಂ ಈ ಹೇಳಿಕೆ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಲಾಬಿಗೆ ಮುಂದಾಗಿದ್ದಾರೆ.  ಅದರಲ್ಲಿಯೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಎಚ್​ ವಿಶ್ವನಾಥ್​ ಈಗಾಗಲೇ ದೆಹಲಿ ನಾಯಕರನ್ನೂ ಭೇಟಿ ನೀಡಿ ಬಂದಿದ್ದಾರೆ. ಹಳೆ ಸಚಿವರನ್ನು ಕೈ ಬಿಟ್ಟು ನಮ್ಮನ್ನು ಪರಿಗಣಿಸಬೇಕು ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.

  ಸಚಿವ ಸ್ಥಾನಕ್ಕೆ ಶುರುವಾದ ಲಾಬಿ; ಹೊಸ ಮಂತ್ರಿ ಮಂಡಲ ರಚನೆಯಾದರೆ ಉತ್ತಮ ಎಂದ ಎಚ್​ ವಿಶ್ವನಾಥ್

  7. ಆರ್​ ಆರ್​​ ನಗರ ಚುನಾವಣೆ ಫಲಿತಾಂಶ ಬಂದ ಬಳಿಕ ನೂತನ ಬಿಜೆಪಿ ಶಾಸಕ ಮುನಿರತ್ನ ಇಂದು ಮಾಜಿ ಸಿಎಂ ಹಾಗೂ ಹಿರಿಯ ರಾಜಕಾರಣಿ ಎಸ್​.ಎಂ.ಕೃಷ್ಣ ಅವರನ್ನು ಭೇಟಿಯಾಗಿದ್ದಾರೆ. ಸದಾಶಿವನಗರದ ಎಸ್​ಎಂಕೆ ಮನೆಗೆ ತೆರಳಿದ ಮುನಿರತ್ನ, ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಪರಸ್ಪರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​ ಎಂ ಕೃಷ್ಣ,  ಉಪಚುನಾವಣೆ ಗೆಲುವಿನ ಬಗ್ಗೆ ವಿಮರ್ಶೆ ಮಾಡಿದರು. ದೇಶದಲ್ಲಿ ಬದಲಾವಣೆ ಆಗುತ್ತಿದೆ.

  ಕಾಂಗ್ರೆಸ್ ಅವನತಿಯ ಜಾರುಗುಪ್ಪೆಯಲ್ಲಿ ಇಳಿಯುತ್ತಿದೆ; ಮಾಜಿ ಸಿಎಂ ಎಸ್.​ಎಂ. ಕೃಷ್ಣ

  8. ಸಿಎಂ ಬಿ. ಎಸ್. ಯಡಿಯೂರಪ್ಪ ಜೊತೆ ಮುನಿಸಿನ ಹಿನ್ನಲೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಾ ವಿವಾದ ಸೃಷ್ಟಿಸಿದ್ದವರು ಬಸನಗೌಡ ಪಾಟೀಲ ಯತ್ನಾಳ. ಯತ್ನಾಳರ ಈ ಹೇಳಿಕೆಗಳು ವಿಪಕ್ಷಗಳಿಗೆ ಅಸ್ತ್ರವಾಗುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಮೂಡಿಸಿದ್ದವು. ಈ ಹಿನ್ನಲೆ ಈ ಮುನಿಸು ಶಮನಕ್ಕೆ ಮುಂದಾದ ವಿ. ಸೋಮಣ್ಣ ಯತ್ನಾಳ್​ ಜೊತೆ ಮಾತುಕತೆ ನಡೆಸಿ, ಸಂಧಾನ ನಡೆಸಿದ್ದು, ಇದು ಯಶಸ್ವಿಯಾಗಿದೆ.

  ಸಿಎಂ ಜೊತೆ ಮುನಿಸು: ಯತ್ನಾಳ ಜೊತೆ ಸಚಿವ ಸೋಮಣ್ಣ ಸಂಧಾನ ಯಶಸ್ವಿ

  9.ಇತ್ತೀಚೆಗಷ್ಟೆ ರಾಧಿಕಾ ಹಾಗೂ ಯಶ್​ ತಮ್ಮ ಮಗನ ಮೊದಲ ಹುಟ್ಟುಹಬ್ಬವನ್ನು ಕಡಲ ನಡುವೆ ಯಾಚ್​ನಲ್ಲಿ ಸಂಭ್ರಮದಿಂದ ಆಚರಿಸಿದ್ದಾರೆ. ಅದರ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದರು ಈ ಸೆಲೆಬ್ರಿಟಿ ಜೋಡಿ. ನಟಿ ರಾಧಿಕಾ ಪಂಡಿತ್  ಮತ್ತೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್​ನಿಂದಾಗಿ ಮತ್ತೆ ಸದ್ದು ಮಾಡುತ್ತಿದ್ದಾರೆ. ರಾಧಿಕಾ ಪಂಡಿತ್ ಅವರ ಸಹೋದರ ಗೌರಂಗ್​ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ.

  Radhika Pandit: ವಿದೇಶದಲ್ಲಿರುವ ಸಹೋದರನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ರಾಧಿಕಾ ಪಂಡಿತ್​..!

  10. ರಂಗು ರಂಗಿನ ರಂಗೀನ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್​ ಮುಕ್ತಾಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಫೈನಲ್​ನಲ್ಲಿ ರೋಹಿತ್ ಪಡೆ 5ನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಮಾರ್ಚ್​​ನಲ್ಲಿ ನಡೆಯಬೇಕಿದ್ದ ಟೂರ್ನಿಯು ಕೊರೋನಾ ಕಾರಣದಿಂದ ಈ ಬಾರಿ ಸೆಪ್ಟೆಂಬರ್​ನಲ್ಲಿ ಆರಂಭವಾಗಿತ್ತು. ಅದು ಕೂಡ ದೂರದ ಯುಎಇನಲ್ಲಿ ಎಂಬುದು ವಿಶೇಷ.

  IPL 2021: ಮುಂದಿನ ಸೀಸನ್​ನಲ್ಲಿ 9 ತಂಡ, ನಾಯಕನಾಗಿ ರೈನಾ ರಿ ಎಂಟ್ರಿ..?
  Published by:G Hareeshkumar
  First published: