Evening Digest: ಸುಪ್ರೀಂಕೋರ್ಟ್​ ಮೊರೆಹೋದ ಅರ್ನಬ್ ಗೋಸ್ವಾಮಿ, ಆರ್​ಆರ್​ ನಗರ ಮತ್ತು ಶಿರಾದಲ್ಲಿ ಬಿಜೆಪಿ ಜಯಭೇರಿ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಕಳೆದವಾರ ಅರೆಸ್ಟ್​ ಆಗಿರುವ ಬೆಳಗ್ಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೇ ಹೈಕೋರ್ಟ್​ ನಿರಕಾರಿಸಿತ್ತು. ಇದಾದ ಬೆನ್ನಲ್ಲೇ ಅರ್ನಬ್​ ಜಾಮೀನು ಕೋರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

  ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ನಿರಾಕರಣೆ; ಸುಪ್ರೀಂಕೋರ್ಟ್​ ಮೊರೆಹೋದ ಅರ್ನಬ್ ಗೋಸ್ವಾಮಿ ​

  2. ಮಧ್ಯಪ್ರದೇಶದ 28 ಕ್ಷೇತ್ರಗಳು, ಕರ್ನಾಟಕದ 2 ಕ್ಷೇತ್ರಗಳು ಸೇರಿದಂತೆ ದೇಶಾದ್ಯಂತ 59 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವಂತಿದೆ. ಆರಂಭಿಕ ಹಂತಗಳ ಮತ ಎಣಿಕೆಯಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಧ್ಯ ಪ್ರದೇಶದಲ್ಲಿ ತೆರವಾಗಿರುವ 28 ಕ್ಷೇತ್ರಗಳಲ್ಲಿ ಬಿಜೆಪಿ 20 ಕಡೆ ಮುನ್ನಡೆ ಹೊಂದಿದೆ.

  Assembly Bypolls Result - ದೇಶಾದ್ಯಂತ 59 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ; ಬಿಜೆಪಿಗೆ ಹೆಚ್ಚು ಮುನ್ನಡೆ

  3. ಸದ್ಯಕ್ಕೆ ಒಂದು ಕೋಟಿ ಮತಗಳ ಎಣಿಕೆ ಮಾತ್ರ ಆಗಬೇಕಿದೆ. ಇನ್ನೂ ಎರಡೂ ಕೋಟಿಗೂ ಹೆಚ್ಚು ಮತಗಳ ಎಣಿಕೆ ಆಗಬೇಕಿದೆ‌ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ, ಈವರೆಗೂ ಒಂದು ಕೋಟಿ ಮತ ಎಣಿಕೆಯಾಗಿದೆ. ಇನ್ನೂ ಎರಡೂ ಕೋಟಿಗೂ ಹೆಚ್ಚು ಮತಗಳ ಎಣಿಕೆ ಆಗಬೇಕಿದೆ.

  ಬಿಹಾರ ಚುನಾವಣೆ ಫಲಿತಾಂಶ: 1 ಕೋಟಿ ಮತ ಎಣಿಕೆಯಾಗಿದೆ, ಇನ್ನೂ 2 ಕೋಟಿಗೂ ಹೆಚ್ಚು ಮತ ಎಣಿಕೆ ಆಗಬೇಕು; ಚುನಾವಣಾ ಆಯೋಗ

  4.ಬಿಹಾರದ 243 ಸ್ಥಾನಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಬೆಳಗ್ಗೆಯಿಂದ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ಮಧ್ಯಾಹ್ನ 12:30ಕ್ಕೆ ಎಂಟು ಸುತ್ತುಗಳ ಮತ ಎಣಿಕೆ ಮುಗಿದ ಬಳಿಕ ಎನ್​ಡಿಎ ಮೈತ್ರಿಕೂಟ 127 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಆರ್​ಜೆಡಿ ನೇತೃತ್ವದ ಮಹಾಘಟಬಂಧನ ಮೈತ್ರಿಕೂಟ 103 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಬಹುಮತಕ್ಕೆ ಬೇಕಿರುವುದು 122 ಸ್ಥಾನ. ಇದೇ ಟ್ರೆಂಡ್ ಮುಂದುವರಿದಲ್ಲಿ ಜೆಡಿಯು ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತ ಪಡೆಯುವ ಸಾಧ್ಯತೆ ಇದೆ.

  Bihar Election Results - ಬಿಹಾರ ಅತಂತ್ರ ವಿಧಾನಸಭೆ ಆದಲ್ಲಿ ಚಿರಾಗ್ ಪಾಸ್ವಾನ್ ಕಿಂಗ್ ಮೇಕರ್?

  5.ಆರ್​ ಆರ್​​ ನಗರದಲ್ಲಿ ಬಿಜೆಪಿ ಗೆಲುವಿನ ಸನಿಹದಲ್ಲಿದೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ,  ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ. ಇದು ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಋಣ ತೀರಿಸಲು ಸಾಧ್ಯವಿಲ್ಲ. ನನ್ನ ಗೆಲುವಿಗೆ ಪಕ್ಷ ಹಾಗೂ ಮುಖಂಡರು ಕಾರಣ ಎಂದು ಕ್ಷೇತ್ರದಲ್ಲಿ ತನ್ನ ಗೆಲುವನ್ನು ಪಕ್ಷದ ಮುಖಂಡರಿಗೆ ಅರ್ಪಣೆ ಮಾಡಿದರು.

  ನನ್ನ ಗೆಲುವಿಗೆ ಪಕ್ಷದ ನಾಯಕರೇ ಕಾರಣ; ಮತದಾರರ ಋಣ ತೀರಿಸಲು ಸಾಧ್ಯವಿಲ್ಲ; ಬಿಜೆಪಿ ಅಭ್ಯರ್ಥಿ ಮುನಿರತ್ನ

  6.ಬಹುನಿರೀಕ್ಷಿತ ಆರ್​ ಆರ್​ ನಗರ ಮತ್ತು ಶಿರಾ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಎರಡೂ ಕ್ಷೇತ್ರಗಳಲ್ಲೂ ಸಹ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್​​ಗೆ ತೀವ್ರ ಮುಖಭಂಗ ಆಗಿದೆ. ಏನೇ ಆದರೂ ಮತದಾರರ ತೀರ್ಪಿಗೆ ಎಲ್ಲಾ ಪಕ್ಷದ ನಾಯಕರು ತಲೆಬಾಗಲೇಬೇಕಾಗಿದೆ. ಆರ್​ ಆರ್​ ನಗರ ಉಪಚುನಾವಣೆ ಫಲಿತಾಂಶ ಕುರಿತು ಸಂಸದ ಡಿ.ಕೆ.ಸುರೇಶ್​ ಟ್ವೀಟ್ ಮಾಡಿದ್ದು, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ.  ಮತದಾರರ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕಿದೆ.

  ಈ ಫಲಿತಾಂಶದಿಂದ ಧೃತಿಗೆಡಲ್ಲ, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸ್ತೇವೆ; ಸಂಸದ ಡಿ.ಕೆ.ಸುರೇಶ್

  7. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲೇ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಅದಕ್ಕೆ ಅವರೇ ಸೋಲಿನ ಹೊರೆ ಹೊರಬೇಕು ಎಂಬ ವಿಚಾರವನ್ನು ಅಲ್ಲಗಳೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸೋಲಿನ ಹೊಣೆಯನ್ನು ಡಿಕೆ ಶಿವಕುಮಾರ್ ಯಾಕೆ ಹೊರಬೇಕು? ಯಾರೇ ಅಧ್ಯಕ್ಷರಾದರೂ ಅಷ್ಟೇ. ಸೋಲಿನ ಹೊಣೆಯನ್ನು ಅವರು ಹೊರಬೇಕಾದ ಅಗತ್ಯವಿಲ್ಲ. ಅಧ್ಯಕ್ಷರಾದ ತಕ್ಷಣ ಹೊಣೆ ಹೊರಬೇಕಾ? ಇದು ಜನರಲ್ ಎಲೆಕ್ಷನ್ ಅಲ್ಲ, ಉಪ ಚುನಾವಣೆಯಷ್ಟೇ. 2023ಕ್ಕೆ ಜನರಲ್ ಎಲೆಕ್ಷನ್ ಬರುತ್ತದೆ. ಆಗ ಅಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಉಪಚುನಾವಣೆ ಸೋಲಿನ ಹೊಣೆಯನ್ನು ಡಿಕೆ ಶಿವಕುಮಾರ್ ಯಾಕೆ ಹೊರಬೇಕು?; ಡಿಕೆಶಿ ಪರ ಸಿದ್ದರಾಮಯ್ಯ ಬ್ಯಾಟಿಂಗ್

  8.ರಾಜ್ಯದಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತದಾರರು ಕೊಟ್ಟ ತೀರ್ಪನ್ನು ಗೌವರಯುತವಾಗಿ ಒಪ್ಪಿಕೊಳ್ಳುತ್ತೇವೆ. ಮತದಾರರ ತೀರ್ಪನ್ನು ಪ್ರಶ್ನಿಸುವ ಪರಿಸ್ಥಿತಿ ಕಾಂಗ್ರೆಸ್‌ಗೆ ಇಲ್ಲ. ಪ್ರಜಾಪ್ರಭುತ್ವವನ್ನು ನಾವು ನಂಬಿದ್ದೇವೆ. ತೀರ್ಪಿನ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲೆಲ್ಲಿ ಸರಿಪಡಿಸಿಕೊಳ್ಳಬೇಕು ಸರಿಪಡಿಸಿಕೊಳ್ಳುತ್ತೇವೆ. ಸೋತಿದ್ದಕ್ಕೆ ನಮ್ಮ ಪಕ್ಷದಲ್ಲಿ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

  ನಾನು ಫೆಲ್ಯೂರ್ ಆಗಿದ್ದೇನೆ, ಸೋಲಿನ ಹೊಣೆಯನ್ನು ನಾನೇ ಹೊರಲಿದ್ದೇನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

  9. ನಟ ಹಾಗೂ ರೂಪದರ್ಶಿ ಮಿಲಿಂದ್​ ಸೋಮನ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತಾರೆ. ಫಿಟ್ನೆಸ್​ ವಿಡಿಯೋಗಳ ಜತೆಗೆ ಅವರ ವೈಯಕ್ತಿಕ ಜೀವನದ ಕೆಲವು ವಿಷಯಗಳಿಂದಾಗಿ ವಿವಾದಕ್ಕೀಡಾಗುತ್ತಲೇ ಇರುತ್ತಾರೆ. ಈ ಹಿಂದೆ ತಮ್ಮ ವಿವಾಹದ ವಿಷಯದಿಂದ ಚರ್ಚೆಯಲ್ಲಿದ್ದರು. ತಮಗಿಂತ 25 ವರ್ಷ ಚಿಕ್ಕವರಾದ ಅಂಕಿತಾ ಅವರನ್ನು ವಿವಾಹವಾದಾಗಲೂ ಸಹ ನಟನ ನಿರ್ಧಾರದ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು.

  Milind Soman: ಅಕ್ಷಯ್​ ಕುಮಾರ್​ ನಂತರ ತೃತೀಯ ಲಿಂಗಿ ಪಾತ್ರದಲ್ಲಿ ಮಿಂಚಲಿದ್ದಾರೆ ಮಿಲಿಂದ್​ ಸೋಮನ್​..!

  10.  ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದುನಿಂತಿದೆ. ಇಂದು ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುವ ಮೂಲಕ ಐಪಿಎಲ್ 2020ಕ್ಕೆ ತೆರೆಬೀಳಲಿದೆ.

  IPL 2020 Final, MI vs DC: ಮುಂಬೈ-ಡೆಲ್ಲಿ ಫೈನಲ್​ ಫೈಟ್​ನಲ್ಲಿ ಯಾರಿಗೆ ಗೆಲುವು?: ಅಂಕಿ-ಅಂಶಗಳ ಪ್ರಕಾರ ಯಾವ ತಂಡ ಬಲಿಷ್ಠ?
  Published by:G Hareeshkumar
  First published: