• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Evening Digest: ರಾಜ್ಯಸಭೆಗೆ ಜೈರಾಮ್ ರಮೇಶ್ ಆಯ್ಕೆಗೆ ವಿರೋಧ; ಅಶ್ವತ್ಥ ನಾರಾಯಣ ವಿರುದ್ಧ FIR- ಇಂದಿನ ಪ್ರಮುಖ ಸುದ್ದಿಗಳು

Evening Digest: ರಾಜ್ಯಸಭೆಗೆ ಜೈರಾಮ್ ರಮೇಶ್ ಆಯ್ಕೆಗೆ ವಿರೋಧ; ಅಶ್ವತ್ಥ ನಾರಾಯಣ ವಿರುದ್ಧ FIR- ಇಂದಿನ ಪ್ರಮುಖ ಸುದ್ದಿಗಳು

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

  • Share this:

ಜೈರಾಮ್ ರಮೇಶ್ ಆಯ್ಕೆಗೆ ಕಾಂಗ್ರೆಸ್​ನಲ್ಲೇ ವಿರೋಧ


ಬೆಂಗಳೂರು:  ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​​ ರಮೇಶ್ ಆಯ್ಕೆಗೆ ಕಾಂಗ್ರೆಸ್​ನಲ್ಲಿ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವಿ.ಆರ್. ಸುದರ್ಶನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ನೆಲ ಜಲ ಮತ್ತು ಸಮಸ್ಯೆಗಳ ಬಗ್ಗೆ ಸಮರ್ಥನಾಗಿ ಪ್ರತಿಪಾದಿಸಬೇಕಾದ ಅಭ್ಯರ್ಥಿ ಆಯ್ಕೆಯಾಗಬೇಕಿದೆ. ಸಮಗ್ರವಾಗಿ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಬಲ್ಲವರನ್ನು ಆಯ್ಕೆ ಮಾಡಬೇಕು ಎಂದು ನಾನು ಶಾಸಕರಲ್ಲಿ ಆಗ್ರಹ ಮಾಡುತ್ತೇನೆ ಎಂದ್ರು. ಜನರ ನಿರೀಕ್ಷೆಗೆ ತಕ್ಕನಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಜೈರಾಮ್​ ರಮೇಶ್ ಅಭ್ಯರ್ಥಿ ಆಗ್ತಾರಂತೆ ಅಂತಾ ಕೆಲವರು ನನ್ನ ಕೇಳಿದರು. ರಾಜ್ಯಕ್ಕೆ ಜೈರಾಮ್​ ರಮೇಶ್ ಕೊಡುಗೆ ಏನು? ಅಂತ ಸುದರ್ಶನ್​ ಪ್ರಶ್ನೆ ಮಾಡಿದ್ದಾರೆ.


3500 ರೂ. ಬೆಲೆಯ 50 ಕೆಜಿ ಯೂರಿಯಾ ಚೀಲಕ್ಕೆ 300 ರೂ. 


ಗಾಂಧೀನಗರ: ವಿದೇಶಗಳಿಂದ ಆಮದು ಮಾಡಿಕೊಳ್ಳುವ 50 ಕೆಜಿ ತೂಕದ ಪ್ರತಿ ಯೂರಿಯಾ ಚೀಲಕ್ಕೆ  ತಗಲುವ ವೆಚ್ಚ ಸುಮಾರು ₹3,500.  ಆದರೆ ರೈತರಿಗೆ  ಈ ಯೂರಿಯಾ ಚೀಲವನ್ನು ಪ್ರತಿ ಚೀಲಕ್ಕೆ ₹300 ರಂತೆ ನೀಡಲಾಗುತ್ತದೆ ಎಂದು ಗಾಂಧಿನಗರದಲ್ಲಿ ನಡೆದ ಸಹಕಾರಿ ವಿಚಾರ ಸಂಕಿರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರತಿ ಚೀಲಕ್ಕೆ ₹ 3,200  ರಂತೆ ಖರ್ಚು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ. ಗಾಂಧಿನಗರದ 'ಸಹಕಾರ್ ಸೇ ಸಮೃದ್ಧಿ' ಕಾರ್ಯಕ್ರಮದಲ್ಲಿ ಇಫ್ಕೋ, ಕಲೋಲ್‌ನಲ್ಲಿ ನಿರ್ಮಿಸಲಾದ ನ್ಯಾನೋ ಯೂರಿಯಾ ಸ್ಥಾವರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸರ್ಕಾರವು ಯೋಜನೆಗಳನ್ನು 100 ಪ್ರತಿಶತದಷ್ಟು ನಾಗರಿಕರಿಗೆ ತಲುಪುವಂತೆ ಮಾಡಲು ಅಭಿಯಾನವನ್ನು ನಡೆಸುತ್ತಿದೆ ಎಂದು ಖಚಿತಪಡಿಸಿದರು.


ಮುಸ್ಲಿಂ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಾಯಿ

 ತೆಲಂಗಾಣ: ಅನ್ಯಧರ್ಮದ ಪ್ರೇಮಕಥೆಗಳು ಸಕ್ಸಸ್ ಆಗುವುದು ತುಂಬಾ ಅಪರೂಪ. ಆದರೆ ಭಿನ್ನ ಧರ್ಮದವರನ್ನು ಮದುವೆಯಾಗಿ ಸುಖವಾಗಿರುವವರೂ ಇದ್ದಾರೆ. ಆದರೆ ಇಂಥಹ ಪ್ರೇಮ (Love) ಪ್ರಕರಣ ಕೊಲೆಯಲ್ಲಿ ಅಂತ್ಯವಾಗುವುದೇ ಹೆಚ್ಚು. ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿದ ಕಾರಣಕ್ಕಾಗಿ 20 ವರ್ಷದ ಮಗಳನ್ನು ಕೊಂದ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು (Police) ಶುಕ್ರವಾರ ತಿಳಿಸಿದ್ದಾರೆ. ಓಡಿಹೋದ ನಂತರ ದಂಪತಿಗಳನ್ನು ಪತ್ತೆಹಚ್ಚಿದ ಸ್ವಲ್ಪ ಸಮಯದ ನಂತರ ಆಕೆ ಸಂಬಂಧದಲ್ಲಿದ್ದ ವ್ಯಕ್ತಿಯನ್ನು ಅಪಹರಣ ಪ್ರಕರಣದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ರಾಜೇಶ್ವರಿ ನಾರ್ನೂರು ಬ್ಲಾಕ್ ವ್ಯಾಪ್ತಿಯ ನಾಗಲಕೊಂಡ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ಗ್ರಾಮದ ಶೇಕ್ ಅಲೀಮ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು, ಆಕೆಯ ಪೋಷಕರು ವಿರೋಧಿಸಿದ್ದರು.




ಬೆಂಗಳೂರು (ಮೇ 28): ನಿನ್ನೆಯಷ್ಟೆ RSS ಮೂಲ ಕೆದಕಿದ್ದ ಸಿದ್ದರಾಮಯ್ಯ ಅವ್ರಿಗೆ ಬಿಜೆಪಿ ನಾಯಕರು ಇಂದು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಆರ್ಯರಾ? ಅಥವಾ ದ್ರಾವಿಡರಾ? ಅನ್ನೋದನ್ನು ಮೊದಲು ಹೇಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟುವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸಿಎಂಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ರು. ಇದೀಗಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ. ಮೊದಲು ಸಿದ್ದರಾಮಯ್ಯ ಎಲ್ಲಿಂದ ಬಂದಿದ್ದಾರೆ ಅಂತ ಹೇಳಲಿ ಎಂದು ಸವಾಲು ಹಾಕಿದರು.


ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲು




ಮಂಡ್ಯ : ಚುನಾವಣಾ ನೀತಿ ಸಂಹಿತೆ  ಉಲ್ಲಂಘಿಸಿದ ಆರೋಪದಲ್ಲಿ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ವಿರುದ್ಧ ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ. ಮೇ 16ರಂದು ಸಚಿವ ಅಶ್ವತ್ಥ ನಾರಾಯಣ ಅವರು ನಗರದ ವಿವಿಧ ಕಾಲೇಜುಗಳಲ್ಲಿ ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್‌  ಪರ ಪ್ರಚಾರ ನಡೆಸಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಸಚಿವರು ಕಾಲೇಜುಗಳಲ್ಲಿ ಪ್ರಚಾರ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌, ಚುನಾವಣಾಧಿಕಾರಿಗೆ ದೂರು ಸಲ್ಲಿಸಿತ್ತು. ಈ ಹಿನ್ನೆಲೆ ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲಿಸಲಾಗಿದೆ.

top videos


    First published: