Kapil Sibal: ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್, ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ
ಕಾಂಗ್ರೆಸ್ ಮುಖಂಡರಾಗಿದ್ದ ಕಪಿಲ್ ಸಿಬಲ್ (Kapil Sibal) ಪಕ್ಷ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ (Independent Candidate) ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದಿಂದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ (Rajya Sabha) ನಾಮಪತ್ರ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಕಪಿಲ್ ಸಿಬಲ್ ಕಾಂಗ್ರೆಸ್ಗೆ (Congress) ರಾಜೀನಾಮೆ (Resignation) ನೀಡಿರುವುದಾಗಿ ಘೋಷಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಇಂದು ಶಾಕಿಂಗ್ ಬೆಳವಣಿಗೆಯಲ್ಲಿ ಈ ವಿಚಾರ ರಿವೀಲ್ ಮಾಡಿದ್ದಾರೆ. ನಾನು ಮೇ 16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಕಪಿಲ್ ಸಿಬಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸತತ ಸೋಲುಗಳ ನಂತರ ಒಂದು ವಾರದ ಹಿಂದೆ ಕಾಂಗ್ರೆಸ್ ಚಿಂತನಾ ಶಿಬಿರ ಅಥವಾ ಕಾರ್ಯತಂತ್ರದ ಸಭೆ ನಡೆದಿತ್ತು. ಪತ್ರಕರ್ತರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿದ ಅವರು ನಾನಿನ್ನು ಗಂಭೀರ ಕಾಂಗ್ರೆಸ್ ನಾಯಕನಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಈ ಸುದ್ದಿ ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್, ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ
India Curbs Sugar Export: ಸಕ್ಕರೆ ರಫ್ತಿಗೆ ಕಡಿವಾಣ ಹಾಕಿದ ಭಾರತ! ಈ ನಿರ್ಧಾರದ ಹಿಂದಿರುವ ಕಾರಣವೇನು?
ದೆಹಲಿ: ಭಾರತವು ಸಕ್ಕರೆ ಉತ್ಪಾದನೆಯನ್ನು 10 ಮಿಲಿಯನ್ ಟನ್ಗಳಿಗೆ ಮಿತಿಗೊಳಿಸಲು (India Sugar Export Curb) ನಿರ್ಧರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ (Sugar Price) ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇತ್ತೀಚಿಗಷ್ಟೇ ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿದ್ದ ಕೇಂದ್ರ ಸರ್ಕಾರ ಇದೀಗ ಸಕ್ಕರೆ ರಫ್ತಿಗೆ ಮಿತಿ ವಿಧಿಸಿದೆ. ಆಲ್ ಇಂಡಿಯಾ ಶುಗರ್ ಟ್ರೇಡ್ ಅಸೋಸಿಯೇಷನ್ನ ಪ್ರಕಾರ, ಬ್ರೆಜಿಲ್ (Brazil Sugar) ನಂತರ ಭಾರತವು ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಅಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶಗಳಲ್ಲಿ ಭಾರತವೇ ಅಗ್ರ ಸ್ಥಾನದಲ್ಲಿದೆ. ಜೊತೆಗೆ ಸಕ್ಕರೆಯ ಎರಡನೇ ಅತಿ ದೊಡ್ಡ ರಫ್ತುದಾರ ದೇಶವೂ ಆಗಿದೆ ಭಾರತ.
KGF 2 ಶೂಟಿಂಗ್ ಆಗಿದ್ದ ಭಾರತ್ ಗೋಲ್ಡ್ ಮೈನ್ಸ್ ಬಂದ್ ಮಾಡಲು ನಿರ್ಧಾರ, ಚಿನ್ನದ ಗಣಿ ಈ ಸ್ಥಿತಿಗೆ ಬಂದಿದ್ದು ಹೇಗೆ?
ಕೇಂದ್ರ ಸಚಿವ ಸಂಪುಟವು (Union Cabinet) ಭಾರತ್ ಗೋಲ್ಡ್ ಮೈನಿಂಗ್ ಲಿಮಿಟೆಡ್ (Bharat Gold Mining Limited) ಅನ್ನು ಮುಚ್ಚಲು ನಿರ್ಧರಿಸಿದೆ ಎಂದು ಸಿಎನ್ಬಿಸಿ ಟಿವಿ-18ಗೆ ಮೂಲಗಳಿಂದ ತಿಳಿದು ಬಂದಿದೆ. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (BGML), ಹಿಂದಿನ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಗಣಿ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿ ಏಪ್ರಿಲ್, 1972 ರಲ್ಲಿ ಕೋಲಾರ ಗೋಲ್ಡ್ ಫೀಲ್ಡ್ಸ್ (KGF) ನಲ್ಲಿ ತನ್ನ ಕಛೇರಿಯನ್ನು ಹೊಂದಿದೆ. ಕನ್ನಡ ಕೆಜಿಎಫ್ 2 ಚಿತ್ರದ ಹಿಟ್ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಪ್ರಸಿದ್ಧವಾಗಿದೆ.
PUBG Death: ಪಬ್ಜಿ ಪ್ರತಾಪ! ಮಗನನ್ನು ಉಳಿಸಲು ಜೀವ ಬಲಿಕೊಟ್ಟ ತಾಯಿ, ಚಿಕ್ಕಮಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ
ಚಿಕ್ಕಮಗಳೂರು: ಮಗನ ಪಬ್ ಜೀ ಹುಚ್ಚಿಗೆ ಸ್ವತಃ ಅಮ್ಮನೇ ಬಲಿಯಾಧ ದಾರುಣ ದುರ್ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಹಾಗಲಖಾನ್ ಎಸ್ಟೇಟ್ನಲ್ಲಿ ನಡೆದಿದೆ. ಪಬ್ ಜಿ ಆಡುತ್ತಿದ್ದ (Pubg Game) ಮಗನ ಜೊತೆ ಅಪ್ಪ ಜಗಳವಾಡುತ್ತಿದ್ದ. ಪಬ್ ಜಿ ಆಡುವುದಕ್ಕಾಗಿ ಅಪ್ಪನ ಜೊತೆ ಜಗಳಕ್ಕಿಳಿದಿದ್ದ ಮಗನನ್ನು ಸಾಯಿಸುತ್ತೇನೆಂದು ಮಗನಿಗೆ ತೋಟದ ಕೋವಿ ಹಿಡಿದು ಅಪ್ಪ ಹೆದರಿಸುತ್ತಿದ್ದ. ಅಲ್ಲದೇ ಕುಡಿದ ಮತ್ತಿನಲ್ಲಿದ್ದ ಅಪ್ಪ ಗುಂಡು ಹಾರಿಸಿದ್ದಾನೆ. ಈ ವೇಳೆ ಮಗನಿಗೆ ಗುಂಡು (Father Fires Son) ಹೊಡೆಯುತ್ತಾರೆಂದು ತಾಯಿ ಎದುರು ಬಂದಿದ್ದಾಳೆ. ಅಪ್ಪ ಮಗನಿಗೆ ಹಾರಿಸಿದ ಗುಂಡು ತಾಯಿಗೆ ತಾಗಿದೆ.
Bengaluru Crime News: ಕಣ್ಣಿಗೆ ಖಾರದಪುಡಿ ಹಾಕಿ ಉಸಿರುಗಟ್ಟಿಸಿ ವೃದ್ಧರ ಕೊಲೆ, ಕೆಜಿಗಟ್ಟಲೆ ಚಿನ್ನ ಬೆಳ್ಳಿ ದರೋಡೆ!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರೇ ಬೆಚ್ಚಿ ಬೀಳುವಂತಹ ಅಪರಾಧ ಪ್ರಕರಣವೊಂದು (Bengaluru Crime News) ಬೆಳಕಿಗೆ ಬಂದಿದೆ. ವೃದ್ಧರೊಬ್ಬರ ಕೈಕಾಲು ಕಟ್ಟಿಹಾಕಿ ಕುತ್ತಿಗೆ ಹಿಸುಕಿ ಸ್ವತಃ ವೃದ್ಧರೋರ್ವರನ್ನು ಸಾಯಿಸಿದ್ದಲ್ಲದೇ, (Old Man Murder Case) ಇಡೀ ಮನೆಯನ್ನು ದೋಚಿದ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು (Bengaluru Police) ತೀವ್ರ ಗತಿಯಲ್ಲಿ ನಡೆಸುತ್ತಿದ್ದಾರೆ. ಚಾಮರಾಜಪೇಟೆಯ 4ನೇ ಕ್ರಾಸ್ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಜುಗುರಾಜ್ ಜೈನ್ ಎಂಬ 77 ವರ್ಷದ ವೃದ್ಧರ ಬರ್ಭರ ಕೊಲೆ ನಿನ್ನೆ ರಾತ್ರಿ (ಮೇ 24) ನಡೆದಿತ್ತು. ಈ ಪ್ರಕರಣ ಇಡೀ ಬೆಂಗಳೂರಲ್ಲೇ ತಲ್ಲಣಗೊಳಿಸಿತ್ತು. ಇದೀಗ ವೃದ್ಧರ ಭೀಕರ ಕೊಲೆ, ದರೋಡೆಯ ಆಳ ಅಗಲದ ಹುಡುಕಾಟ ನಡೆಸಿದ ಬೆಂಗಳೂರು ಪೊಲೀಸರು ಪ್ರಕರಣದ ಮಾಹಿತಿ ತೆರೆದಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ