Evening Digest: ದೆಹಲಿ ಗಡಿಯಲ್ಲಿ15 ದಿನಗಳಿಂದ ರೈತರ ಪ್ರತಿಭಟನೆ, ಕಾಂಗ್ರೆಸ್ ಶಾಸಕರಿಂದ ಸದನ ಬಹಿಷ್ಕಾರ

ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ದೆಹಲಿಯಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಟ್ಟಡಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿ, ಶಿಲಾನ್ಯಾಸ ನೆರವೇರಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳ ರಾಯಭಾರಿಗಳು, ರತನ್ ಟಾಟಾ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

  New Parliament Building: ನೂತನ ಸಂಸತ್ ಭವನದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

  2. ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಈವರೆಗೆ ನಡೆದ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ.

  ದೆಹಲಿ ಗಡಿಯಲ್ಲಿ15 ದಿನಗಳಿಂದ ರೈತರ ಪ್ರತಿಭಟನೆ; ಹೆದ್ದಾರಿ ಬಂದ್, ಟೋಲ್​ನಲ್ಲಿ ಮುಷ್ಕರದ ಎಚ್ಚರಿಕೆ

  3. ಮಾರುಕಟ್ಟೆಯಿಂದ ಗಂಡನ ಜೊತೆ ಮನೆಗೆ ವಾಪಸ್ ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ 17 ಮಂದಿ ಗ್ಯಾಂಗ್ ರೇಪ್ ಮಾಡಿರುವ ಪೈಶಾಚಿಕ ಘಟನೆ ಜಾರ್ಖಂಡ್​ನ ದುಮ್ಕ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ದುರುಳರು ಮಹಿಳೆಯ ಗಂಡನನ್ನು ಬಂಧನದಲ್ಲಿಟ್ಟು ಅಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

  ಜಾರ್ಖಂಡ್​ನಲ್ಲಿ ಮಹಿಳೆ ಮೇಲೆ 17 ಮಂದಿಯಿಂದ ಸಾಮೂಹಿಕ ಅತ್ಯಾಚಾರ

  4. ದೆಹಲಿಯ ರಾಜಪಥದಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಟ್ಟಡಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಮಾರಂಭದಲ್ಲಿ ಅನೇಕ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳು ರಾಯಭಾರಿಗಳು ಭಾಗವಹಿಸಲಿದ್ದಾರೆ. ಇಂದು ಮಧ್ಯಾಹ್ನ 12.55ಕ್ಕೆ ಭೂಮಿ ಪೂಜೆ, ಬಳಿಕ ಸಂಸತ್ ಭವನದ ಶಿಲಾನ್ಯಾಸ ನೆರವೇರಲಿದೆ.

  New Parliament Building: 971 ಕೋಟಿ ರೂ. ವೆಚ್ಚದ ನೂತನ ಸಂಸತ್ ಭವನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ

  5. ಕೇಂದ್ರ ಸರ್ಕಾರ ಜಾರಿ ತಂದಿರುವ ನೂತನ ಮೂರು ಕೃಷಿ ಕಾಯ್ದೆಯ ವಿರುದ್ಧ ಇಡೀ ದೇಶದ ರೈತ ಸಮುದಾಯ ಕಳೆದ 15 ದಿನಗಳಿಂದ ಸತತ ಹೋರಾಟ ನಡೆಸುತ್ತಿದೆ. ರೈತರ ದೆಹಲಿ ಚಲೋ ಚಳುವಳಿ ಇಡೀ ವಿಶ್ವದ ಗಮನ ಸೆಳೆದಿದೆ. ಇದರ ಬೆನ್ನಿಗೆ ಎಲ್ಲಾ ರಾಜ್ಯದಲ್ಲೂ ರೈತ ಹೋರಾಟ ಕಾವು ಪಡೆಯುತ್ತಿದೆ.

  Farmers Protest: ರೈತ ಹೋರಾಟದ ಹಿಂದೆ ಪಾಕ್-ಚೀನಾ ಕೈವಾಡವಿದೆ; ಕೇಂದ್ರ ಸಚಿವ ರಾವ್​​​ಸಾಹೇಬ್ ಧನ್ವೆ ವಿವಾದಾತ್ಮಕ ಹೇಳಿಕೆ

  6. ಕರ್ನಾಟಕ ವಿಧಾನಸಭಾ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಸದನವನ್ನು ಬಹಿಷ್ಕರಿಸಿ, ಕಾಂಗ್ರೆಸ್ ಶಾಸಕರು ಹೊರ ನಡೆದಿದ್ದಾರೆ. ಬುಧವಾರ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆತುರಾತುರವಾಗಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಲಾಗಿದೆ.

  Karnataka Assembly Session: ಗೋಹತ್ಯೆ ನಿಷೇಧ ಮಸೂದೆಗೆ ವಿರೋಧ; ಕಾಂಗ್ರೆಸ್ ಶಾಸಕರಿಂದ ಸದನ ಬಹಿಷ್ಕಾರ

  7. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ ವಾರ್ಡ್​ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸುವ ಬಿಬಿಎಂಪಿ ವಿಧೇಯಕ 2020ಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ. ಗೋಹತ್ಯೆ ನಿಷೇಧ ವಿಧೇಯಕವನ್ನು ಆಕ್ಷೇಪಿಸಿ ಇಂದಿನ ಕಲಾಪ ಬಹಿಷ್ಕರಿಸಿದ್ದ ಕಾಂಗ್ರೆಸ್ ಸದಸ್ಯರ ಗೈರಿನಲ್ಲಿ ಸರ್ಕಾರ ಬಿಬಿಎಂಪಿ ವಿಧೇಯಕ ಮಂಡನೆ ಮಾಡಿ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು.

  ವಾರ್ಡ್ ಸಂಖ್ಯೆ 243ಕ್ಕೆ ಹೆಚ್ಚಿಸುವ ಬಿಬಿಎಂಪಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

  8. ರೈತರ ಭೂಮಿ ರೈತರ ಬಳಿ ಇರಬೇಕು ಅದನ್ನು ಹಣವಂತರಿಗೆ ಮಾರಲು ಹೊರಟಿದ್ದಾರೆ. ಕುಮಾರಸ್ವಾಮಿ ಅವರ ಬಳಿ ಬೇನಾಮಿ ಜಮೀನಿದೆ. ಅದನ್ನು ಉಳಿಸಿಕೊಳ್ಳಲು ಭೂ ಸುಧಾರಣೆ ಕಾಯ್ದೆ ಪರ ಇದ್ದಾರೆ. ಅವರ ಭೂಮಿ ಮೇಲಿರುವ ಎಲ್ಲಾ ಕೇಸ್ ಸರ್ಕಾರ ವಜಾ ಮಾಡಿದೆ. ಹೀಗಾಗಿ ಸರ್ಕಾರದ ಪರ ಕುಮಾರಸ್ವಾಮಿ ಇದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

  ಸರ್ಕಾರದ ಪರ ಮತ ಹಾಕೋಕೆ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು: ಸಿದ್ಧರಾಮಯ್ಯ ಕಿಡಿ

  9.ಬಾಲಿವುಡ್ ಬ್ಯಾಡ್​ ಬಾಯ್ ಸಲ್ಮಾನ್​ ಖಾನ್​ ಇತ್ತೀಚೆಗೆ ರಿಯಾಲಿಟಿ ಶೋ ಬಿಗ್​ಬಾಸ್​ನಿಂದಾಗಿ ಸುದ್ದಿಯಲ್ಲಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಲ್ಮಾನ್​ ಖಾನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ಒಂದು ಫೋಟೋದಿಂದಾಗಿ ಸದ್ಯ ಸದ್ದು ಮಾಡುತ್ತಿದ್ದಾರೆ.

  Salman Khan: ಮತ್ತೆ ಕೃಷಿ ಮಾಡುತ್ತಾ ಕಾಣಿಸಿಕೊಂಡ ಸಲ್ಮಾನ್​ ಖಾನ್​..!

  10. 1982ರಲ್ಲಿ ವಿಶ್ವಕಪ್ ಫುಟ್​ಬಾಲ್ ಚಾಂಪಿಯನ್ ತಂಡ ಇಟಲಿಯ ಸ್ಟಾರ್ ಆಟಗಾರ ಪಾವೊಲೊ ರೊಸ್ಸಿ ನಿಧನರಾಗಿದ್ದಾರೆ. 64 ವರ್ಷದ ರೊಸ್ಸಿ ಇಹಲೋಕ ತ್ಯಜಿಸಿರುವ ಸುದ್ದಿಯನ್ನು ಪತ್ನಿ ಫೆಡಿರಿಕಾ ಇನ್​ಸ್ಟಾಗ್ರಾಮ್​ ಮೂಲಕ ತಿಳಿಸಿದ್ದಾರೆ. ಕಳೆದ ಕಲೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೊಸ್ಸಿ ಅವರ ಆರೋಗ್ಯ ಕಳೆದ ಕೆಲ ದಿನಗಳಿಂದ ಬಿಗಡಾಯಿಸಿತ್ತು ಎಂದು ಇಟಲಿ ಮಾಧ್ಯಮಗಳು ವರದಿ ಮಾಡಿವೆ.

  Paolo Rossi: 1982ರ ಫುಟ್​ಬಾಲ್ ವಿಶ್ವಕಪ್ ಹೀರೋ ಪಾವೊಲೊ ರೊಸ್ಸಿ ನಿಧನ
  Published by:G Hareeshkumar
  First published: