• Home
 • »
 • News
 • »
 • state
 • »
 • Evening Digest : ಪ್ರಶಾಂತ್ ಭೂಷಣ್​ಗೆ 1 ರೂ ದಂಡ ವಿಧಿಸಿದ ಸುಪ್ರೀಂ ಕೋರ್ಟ್, ಡ್ರಗ್ಸ್ ಜಾಲದ ಬಗ್ಗೆ‌ ಆತಂಕಕಾರಿ ವಿಚಾರಗಳನ್ನು ಬಿಚ್ಚಿಟ್ಟ ಇಂದ್ರಜಿತ್‌ ಲಂಕೇಶ್ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : ಪ್ರಶಾಂತ್ ಭೂಷಣ್​ಗೆ 1 ರೂ ದಂಡ ವಿಧಿಸಿದ ಸುಪ್ರೀಂ ಕೋರ್ಟ್, ಡ್ರಗ್ಸ್ ಜಾಲದ ಬಗ್ಗೆ‌ ಆತಂಕಕಾರಿ ವಿಚಾರಗಳನ್ನು ಬಿಚ್ಚಿಟ್ಟ ಇಂದ್ರಜಿತ್‌ ಲಂಕೇಶ್ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ಭಾರತೀಯ ಮುಖ್ಯ ನ್ಯಾಯಮೂರ್ತಿ ಅವರನ್ನು ಟೀಕಿಸಿ ನ್ಯಾಯಾಂಗ ನಿಂದನೆ ಆರೋಪ ಎದುರಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಒಂದು ರೂಪಾಯಿ ದಂಡ ವಿಧಿಸಿ ಬಿಟ್ಟುಕಳುಹಿಸಿದೆ. ನ್ಯಾ| ಅರುಣ್ ಮಿಶ್ರ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ತೀರ್ಪು ನೀಡಿದೆ.


  ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷಣ್​ಗೆ 1 ರೂ ದಂಡ ವಿಧಿಸಿದ ಸುಪ್ರೀಂ ಕೋರ್ಟ್


  2. ಲಡಾಖ್​ನ ಗಡಿಭಾಗದಲ್ಲಿ ಮತ್ತೆ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸಿದ ಘಟನೆ ನಡೆಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಸದ ಉಪರಾಜ್ಯಪಾಲ ಆರ್.ಕೆ. ಮಾಥುರ್ ಅವರು ದೆಹಲಿ ಹೋಗಿ ಪರಿಸ್ಥಿತಿಯ ವರದಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ನಿರಂತರ ಸಭೆಗಳನ್ನ ನಡೆಸಿ ಲಡಾಖ್ ಸ್ಥಿತಿಯ ಮೇಲೆ ಒಂದು ಕಣ್ಣಿಟ್ಟಿದ್ದಾರೆ.


  ಲಡಾಖ್​ನಲ್ಲಿ ಚೀನಾ ಮತ್ತೆ ಕಿತಾಪತಿ; ಪ್ರಧಾನಿ ಮೋದಿಯಿಂದ ನಿರಂತರ ಸಭೆ; ದಿಲ್ಲಿಗೆ ದೌಡಾಯಿಸಿದ ಲಡಾಖ್ ಉಪರಾಜ್ಯಪಾಲ


  3.ನ್ಯಾಯಾಂಗ ಆದೇಶ ಉಲ್ಲಂಘಿಸಿ ತಮ್ಮ ಮಕ್ಕಳಿಗೆ ಹಣ ಕಳುಹಿಸಿದ ಕಾರಣಕ್ಕೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದ ವಿಜಯ್ ಮಲ್ಯ ಇದೀಗ ಆ ಪ್ರಕರಣದಿಂದ ಹೊರಬರಲು ವಿಫಲ ಯತ್ನ ನಡೆಸಿದ್ದಾರೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಜಯ್ ಮಲ್ಯ ದೋಷಿ ಎಂದು 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸಲು ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ನ್ಯಾ| ಯು.ಯು. ಲಲಿತ್ ಮತ್ತು ನ್ಯಾ| ಅಶೋಕ್ ಭೂಷಣ್ ಅವರಿದ್ದ ಸುಪ್ರೀಂ ನ್ಯಾಯಪೀಠ, “ಈ ಮನವಿಯಲ್ಲಿ ಯಾವುದೇ ಹುರುಳಿಲ್ಲ. ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ತೀರ್ಪು ನೀಡಿತು.


  2017ರ ಸುಪ್ರೀಂ ತೀರ್ಪು ಮರುಪರಿಶೀಲನೆ ಕೋರಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ವಜಾ


  4. ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅವರ ಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.


  ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಆರೋಗ್ಯದಲ್ಲಿ ಸುಧಾರಣೆ ಇಲ್ಲ ಎಂದ ವೈದ್ಯರು


  5.ಪಾಕಿಸ್ತಾನದ ಗೂಢಾಚಾರ ಸಂಸ್ಥೆ (ಐಎಸ್ಐ)ಗೆ ಭಾರತದಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಗುಜರಾತ್‌ನ ಮುಂದ್ರಾ ಡಾರ್ಕ್‌‌ಯಾರ್ಡ್‌‌ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ನ್ಯೂಸ್18ಗೆ ಮಾಹಿತಿ ನೀಡಿದ್ದಾರೆ. ಇದಲ್ಲದೆ ಭಾನುವಾರವೂ ಸಹ ಇಲ್ಲಿನ ವೆಸ್ಟ್‌ಕಚ್‌ ನಿವಾಸಿಯಾದ ರಜಾಕ್ ಭಾಯ್ ಕುಂದರ್ ಎಂಬ ಮತ್ತೋರ್ವ ವ್ಯಕ್ತಿಯನ್ನು ಐಎಸ್ಐ ಏಜೆಂಟ್ ಎಂದು ಬಂಧಿಸಲಾಗಿದ್ದು, ಉತ್ತರಪ್ರದೇಶದಲ್ಲಿ ವರದಿಯಾದ ರಕ್ಷಣಾ/ಐಎಸ್ಐ ಪ್ರಕರಣಕ್ಕೂ ಈತನಿಗೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.


  ಗುಜರಾತ್‌ನಲ್ಲಿ ಪಾಕಿಸ್ತಾನದ ISI ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ


  6. ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಜಾಲದ ನಂಟಿನ ಕುರಿತು ಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಇಂದು ಪೊಲೀಸರ ಎದುರು ಬಿಚ್ಚಿಟ್ಟಿರುವ ಆತಂಕಕಾರಿ ಮಾಹಿತಿಗಳಿಗೆ ಸ್ವತಃ ಪೊಲೀಸ್‌ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.


  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಸೇವನೆಗೂ ಕೋಡ್‌ವರ್ಡ್‌; ಆತಂಕಕಾರಿ ವಿಚಾರಗಳನ್ನು ಬಿಚ್ಚಿಟ್ಟ ಇಂದ್ರಜಿತ್‌ ಲಂಕೇಶ್


  7. ಆನ್​ಲೈನ್ ಕ್ಲಾಸ್​ನಲ್ಲಿ ಪಾಠ ಕೇಳುತ್ತಿದ್ದ ಬಾಲಕನೊಬ್ಬ ನಿಗೂಢ ರೀತಿಯಲ್ಲಿ ಜೋಗುಳದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ  ಹೂರವಲಯ ದರ್ಗಾಜೋಗಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಎಂಬುವರ ಮಗ ವಿಶ್ವಾಸ್ (10) ಸಂಶಯಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಈತ ಜ್ಞಾನಗಂಗಾ ವಿದ್ಯಾಸಂಸ್ಥೆಯ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದ.


  ಆನ್​ಲೈನ್ ಕ್ಲಾಸ್ ಕೇಳುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ನಿಗೂಢ ಸಾವು


  8.ಶಾಲೆಗಳ ಮುಂದೇಯೆ ಡ್ರಗ್ಸ್ ಮಾರಾಟ ಆಗುತ್ತಿದೆ ಎಂಬ ಆರೋಪ ಮಾಡಿದ್ದಾರೆ. 10-12 ವರ್ಷದ ಮಕ್ಕಳಿಗೆ ಡ್ರಗ್ಸ್ ಅಮಲು ಹತ್ತಿಸುವ ಪ್ರಯತ್ನ ಆಗುತ್ತಿದ್ದು, ಬೆಂಗಳೂರಿನಲ್ಲೆ ಡ್ರಗ್ಸ್ ದಂದೆ ನಿರಂತರವಾಗಿ ನಡೆಯುತ್ತಿದ್ದು, ಇದು ಪೊಲೀಸರ ಗಮನಕ್ಕು ಇದೆ ಎಂದು ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.


  ಶಾಲೆಗಳ ಮುಂದೆಯೇ ಡ್ರಗ್ಸ್ ಮಾರಾಟ - ಪೊಲೀಸರು ಶಪಥ ಮಾಡಿದರಷ್ಟೇ ಡ್ರಗ್ಸ್ ಮಾಫಿಯಾ ನಿಯಂತ್ರಣ : ಶಾಸಕ ರಿಜ್ವಾನ್ ಅರ್ಷದ್‌


  9.ರಾಬರ್ಟ್‌ ಸ್ಯಾಂಡಲ್​ವುಡ್​​​​ನ ಮೋಸ್ಟ್ ಎಕ್ಸ್​​​ಪೆಕ್ಟೆಡ್ ಸಿನಿಮಾ. ಕೊರೋನಾ ಕಾಲದಲ್ಲೂ ಸಹ ದಿನಂಪ್ರತಿ ಈ ಸಿನಿಮಾ ಸದ್ದು ಸುದ್ದಿ ಮಾಡ್ತಾನೇ ಇದೆ. ಇದೀಗ ರಾಬರ್ಟ್ ಸಿನಿಮಾದ ಬಗ್ಗೆ ಲೇಟೆಸ್ಟ್ ವಿಚಾರ ಏನಪ್ಪ ಅಂದ್ರೆ? ಈ ಸಿನಿಮಾದ ಒಂದು ಹಾಡು ಒಂದು ಕೋಟಿ ವೀಕ್ಷಣೆಯನ್ನ ಪಡೆದು ಮುನ್ನುಗ್ಗುತ್ತಿದೆ.


  Roberrt: ಹೊಸ ದಾಖಲೆ ಬರೆದ ದರ್ಶನ್​ ರಾಬರ್ಟ್​ ಹಾಡು!


  10ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವ ಖ್ಯಾತಿ ಹೊಂದಿರುವ ಸೌರವ್ ಗಂಗೂಲಿ ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದಲೂ ಅಭಿಮಾನಿಗಳನ್ನು ರಂಜಿಸಿದ್ದರು. ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ವಿವಾದದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ನಾಯಕತ್ವ ವಹಿಸಿಕೊಂಡ ದಾದಾ, ತಮ್ಮ ಆಕ್ರಮಣಕಾರಿ ನಿಲುವಿನಿಂದಲೇ ಭಾರತಕ್ಕೆ ಹೊಸ ಮೆರುಗು ತಂದಿತ್ತಿದ್ದರು.


  Sourav Ganguly: ಟಿ-20 ಕ್ರಿಕೆಟ್​ಗೆ ಸೌರವ್ ಗಂಗೂಲಿ ಯೋಗ್ಯನೇ ಅಲ್ಲ: ಹೀಗೆ ಹೇಳಿದ್ಯಾರು ಗೊತ್ತೇ..?

  Published by:G Hareeshkumar
  First published: