• Home
 • »
 • News
 • »
 • state
 • »
 • Evening Digest : 15 ದಿನಗಳಲ್ಲಿ 12 ಬಾರಿ ಪೆಟ್ರೋಲ್ ದರ ಏರಿಸಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : 15 ದಿನಗಳಲ್ಲಿ 12 ಬಾರಿ ಪೆಟ್ರೋಲ್ ದರ ಏರಿಸಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1.ಕಳೆದ ಬಾರಿಯ ಮನ್ ಕೀ ಬಾತ್​ನಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಭಾರತದಲ್ಲಿ ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೆಲ ಉದ್ಯಮಗಳನ್ನ ಪ್ರಸ್ತಾಪಿಸಿದ್ದಾರೆ. ಭಾರತದ ಬೊಂಬೆಗಳ ಉದ್ಯಮ ಹಾಗೂ ಭಾರತೀಯ ಕಂಪ್ಯೂಟರ್ ಗೇಮ್​ಗಳ ಉದ್ಯಮಕ್ಕೆ ಪುಷ್ಟಿ ನೀಡಿ. ಬೊಂಬೆಗಳ ನಿರ್ಮಾಣಕ್ಕೆ ಒಂದಾಗಿ(Team Up for Toys). ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ನೆರವಾಗಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.


  Mann Ki Baat - ಭಾರತೀಯ ಬೊಂಬೆ ಮತ್ತು ಕಂಪ್ಯೂಟರ್ ಗೇಮ್​ಗಳ ಉದ್ಯಮ ಬೆಳೆಸಿ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ಕರೆ


  2. ಕಾಶ್ಮೀರದಲ್ಲಿ ವಿಭಜಕ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುವ ಚೀನಾ ದೇಶ ತನ್ನ ದೇಶದೊಳಗಿನ ವಿಭಜಕ ಶಕ್ತಿ ನಿಗ್ರಹಿಸಲು ಸಕಲ ತಂತ್ರ-ಶಕ್ತಿ ಪ್ರಯೋಗಿಸುವುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರು ಹಾಗೂ ಸರ್ಕಾರ ನಿಯಂತ್ರಿತ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಟಿಬೆಟ್​ನಲ್ಲಿ ವಿಭಜಕ ಶಕ್ತಿಯ ವಿರುದ್ಧ ಹೋರಾಡಲು ಅಭೇದ್ಯ ಕೋಟೆ ನಿರ್ಮಿಸುವ ಬಗ್ಗೆ ಹಾಗೂ ಧಾರ್ಮಿಕತೆ ಸುಧಾರಣೆ ಆಗುವ ಬಗ್ಗೆ ಮಾಡಿದ್ದಾರೆ.


  ಬೌದ್ಧ ಧರ್ಮ ಸಮಾಜವಾದಕ್ಕೆ ತೆರೆದುಕೊಳ್ಳಬೇಕು; ಟಿಬೆಟ್​ನಲ್ಲಿ ವಿಭಜಕ ಶಕ್ತಿ ತಡೆಯಲು ಅಭೇದ್ಯ ಕೋಟೆ ನಿರ್ಮಿಸಬೇಕು: ಚೀನಾ


  3.ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಾಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್​ನ ಹಲವು ವ್ಯವಹಾರಗಳನ್ನ ಖರೀದಿ ಮಾಡುತ್ತಿದೆ. ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್​ನ ರೀಟೇಲ್, ವೋಲ್​ಸೇಲ್, ಲಾಜಿಸ್ಟಿಕ್ಸ್, ವೇರ್​ಹೌಸಿಂಗ್ ವ್ಯವಹಾರಗಳನ್ನ ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಇಂದು ಘೋಷಿಸಿದೆ.


  Reliance Retail-Future Group Deal - ಫ್ಯೂಚರ್ ಗ್ರೂಪ್​ನ ವ್ಯವಹಾರಗಳನ್ನ 24,713 ಕೋಟಿಗೆ ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್


  4.ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರಂತರವಾಗಿ ಇಂಧನ ಬೆಲೆ ಏರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಚಾಳಿ ಮುಂದುವರೆಸಿದೆ. ಇದರ ಪರಿಣಾಮ ಕಳೆದ 15 ದಿನಗಳಲ್ಲಿ 12 ಬಾರಿ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದೆ.


  Petrol Rate Today: 15 ದಿನಗಳಲ್ಲಿ 12 ಬಾರಿ ಪೆಟ್ರೋಲ್ ದರ ಏರಿಸಿದ ಕೇಂದ್ರ ಸರ್ಕಾರ


  5. ಮಾದಿಗ ಸಮುದಾಯ ಸೇರಿದಂತೆ ಪರಿಶಿಷ್ಟ ಜಾರಿಗಳ ಒಳ ಮೀಸಲಾತಿ ಮರು ಪರಿಶೀಲನೆಗೆ ಸುಪ್ರಿಂ ಕೋರ್ಟ್ ನೀಡಿದ ತೀರ್ಪನ್ನು ಚಿತ್ರದುರ್ಗ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸ್ವಾಗತಿಸಿ ಅಭಿನಂದನೆ ತಿಳಿಸಿದ್ದಾರೆ. ಚಿತ್ರದುರ್ಗ ಮಾದಾರ ಗುರು ಪೀಠದಲ್ಲಿ ಸುದ್ದಿಗೋಷ್ಠಿ ನಡಸಿದ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.ದಲಿತ ಪರಿಶಿಷ್ಠ ಜಾತಿಯಲ್ಲಿನ ಸಮುದಾಯಗಳು ಸಂವಿಧಾನಿಕವಾಗಿ ಹಕ್ಕು ಬಾಧ್ಯತೆಯಿಂದ ವಂಚಿತ ಆಗಬಾರದೆಂದು ಪರಾಮರ್ಶಿಸಿರುವ  ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.


  ಒಳಮೀಸಲಾತಿ ವರದಿ ಜಾರಿಗೆ ರಾಜ್ಯ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು: ಮಾದಾರ ಚನ್ನಯ್ಯ ಸ್ವಾಮೀಜಿ


  6.ಒಳಮೀಸಲಾತಿ "ಸರ್ವರಿಗೂ ಸಮಪಾಲು ಸಮಬಾಳು" ಎಂಬ ಸಂವಿಧಾನಿಕ ಮೂಲ ಧಾತುವೇ ಆಗಿದ್ದು, ಅದನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಆಗ್ರಹಿಸಿದರು.


  ‘ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಜಾರಿಗೊಳಿಸಿ‘ - ಸರ್ಕಾರಕ್ಕೆ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಆಗ್ರಹ


  7. ಅನ್ ಲಾಕ್ 4.0 ಜಾರಿಯಾದ ಬೆನ್ನಲ್ಲೇ  ಕಳೆದ 5 ತಿಂಗಳಿಂದ ಮುಚ್ಚಲಾಗಿದ್ದಬಾರ್​, ಪಬ್​​​, ಕ್ಲಬ್​ಗಳನ್ನು ತೆರೆಯುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ​​ ಪಬ್, ಬಾರ್, ರೆಸ್ಟೋರೆಂಟ್​​​ಗಳಲ್ಲಿ ಮದ್ಯ ಪೂರೈಸುವ ಅಬಕಾರಿ ಇಲಾಖೆ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿ ನೀಡಿದ್ದು, ನಾಳೆ ಸರ್ಕಾರಿ ಆದೇಶ ಹೊರಬೀಳಲಿದೆ.


  Unlock 4.0: ರಾಜ್ಯ ಸರ್ಕಾರದಿಂದ ಮದ್ಯಪ್ರಿಯರಿಗೆ ಗುಡ್ ನ್ಯೂಸ್?; ನಾಳೆ ಅಧಿಕೃತ ಆದೇಶ


  8.ಪೀರನವಾಡಿ ಗ್ರಾಮ ವೃತ್ತದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ನಿರ್ಮಾಣ ಸಂಬಂಧ ದೊಡ್ಡ ವಿವಾದ ಸೃಷ್ಠಿಯಾಗಿತ್ತು. ಸದ್ಯ ಅದೇ ಸ್ಥಳದಲ್ಲಿಯೇ ರಾಯಣ್ಣನ ಪ್ರತಿಮೆ ಸ್ಥಾಪನೆಯಾಗಿದೆ. ಜತೆಗೆ ಸ್ಥಳೀಯವಾಗಿ ಪರ ವಿರೋಧ ಮಾಡಿದ್ದ ಎರಡು ಗುಂಪುಗಳ ನಡುವೆ ಸಂಧಾನ ಸಭೆಯನ್ನು ಸಹ ನಡೆಸಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇನ್ನೂ ಅನಗತ್ಯ ಚರ್ಚೆಗಳನ್ನು ಮಾಡುವ ಮೂಲಕ ಗೊಂದಲಗಳನ್ನು ಸೃಷ್ಟಿಸುವ ಯತ್ನ ನಡೆಯುತ್ತಿದೆ.


  ಸಂಗೊಳ್ಳಿರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥ; ಕಿಡಿಗೇಡಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಸೃಷ್ಠಿಸುವ ಯತ್ನ


  9. ಸ್ಯಾಂಡಲ್​ವುಡ್​ನಲ್ಲಿ ಮಾದಕ ದ್ರವ್ಯ ಜಾಲದಲ್ಲಿ ನಟ-ನಟಿಯರು, ಸಂಗೀತ ನಿರ್ದೇಶಕರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನವರಸ ನಾಯಕ ಜಗ್ಗೇಶ್​  ಟ್ವೀಟ್​ ಮಾಡಿದ್ದಾರೆ. ​ ‘ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ. ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲ ಬದುಕಿ ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ. ಏಕ್ ಮಾರ್ ದೋ ತಕುಡ ತಪ್ಪುಮಾಡಿದವರ ಬೆತ್ತಲೆ ಮಾಡಿ. ಆಗಲಾದರು ಜನಕ್ಕೆ ಅರಿವಾಗಲಿ’ ಎಂದು ಬರೆದುಕೊಂಡಿದ್ದಾರೆ.


  ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ, ಆಗಲಾದರು ಜನರಿಗೆ ಅರಿವಾಗಲಿ; ನವರಸ ನಾಯಕ ಜಗ್ಗೇಶ್ ಟ್ವೀಟ್


  10.ಚೆನ್ನೈ ಸೂಪರ್ ಕಿಂಗ್ಸ್​​​ ತಂಡದ ಆಟಗಾರ ಸುರೇಶ್​​ ರೈನಾ  ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಡೆದಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಶಾಕ್ ನೀಡಿದಂತಾಗಿದೆ. ಆದರೀಗ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ. ವೈಯ್ಯಕ್ತಿಕ ಕಾರಣಕ್ಕಾಗಿ ರೈನಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದೆ.


  IPL 2020: ಸಾವಿನ ಸೂತಕದಿಂದಾಗಿ ಈ ಬಾರಿಯ ಐಪಿಎಲ್​ನಿಂದ ಹೊರಬಂದ ಸುರೇಶ್ ರೈನಾ!

  Published by:G Hareeshkumar
  First published: