• Home
 • »
 • News
 • »
 • state
 • »
 • Evening Digest : ಮೊಹರಂ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಸುಪ್ರೀಂಕೋರ್ಟ್, ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : ಮೊಹರಂ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಸುಪ್ರೀಂಕೋರ್ಟ್, ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  1. ಲಡಾಖ್ ಗಡಿಭಾಗದಲ್ಲಿ ಭೀಕರ ಸಂಘರ್ಷ ನಡೆಸಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ಜಂಟಿಯಾಗಿ ವಾರ್​​ಗೇಮ್​ನಲ್ಲಿ ಪಾಲ್ಗೊಳ್ಳಲಿವೆ. ಮುಂದಿನ ತಿಂಗಳು ರಷ್ಯಾದಲ್ಲಿ ನಡೆಯಲಿರುವ “Kavkaz 2020” ಸಮರ ಕ್ರೀಡೆಯಲ್ಲಿ ಭಾರತ, ಚೀನಾ ಸೇರಿದಂತೆ ಅನೇಕ ದೇಶಗಳು ಪಾಲ್ಗೊಳ್ಳಲಿವೆ. ಶಾಂಘೈ ಸಹಕಾರ ಸಂಘಟನೆಯ (ಎಸ್​ಸಿಒ) ಸದಸ್ಯರಾದ ಪಾಕಿಸ್ತಾನ ಮತ್ತಿತರ ಹಲವು ದೇಶಗಳೂ ಕೂಡ ಈ ಮಲ್ಟಿಲ್ಯಾಟರಲ್ ವಾರ್​ಗೇಮ್​ನಲ್ಲಿ ಭಾಗವಹಿಸಲಿವೆ. ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ತುಕಡಿಗಳನ್ನ ಇದಕ್ಕಾಗಿ ರಷ್ಯಾಗೆ ಕಳುಹಿಸಿಕೊಡಲಾಗಲಿದೆ.


  ರಷ್ಯಾದಲ್ಲಿ ಮುಂದಿನ ತಿಂಗಳು ಭಾರತ, ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಸಮರಾಭ್ಯಾಸ


  2. ಪರಿಶಿಷ್ಟ ಜಾತಿಗಳ ಉಪಜಾತಿಗಳಿಗೂ ಪ್ರತ್ಯೇಕ ಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪರಿಶಿಷ್ಟ ಜಾತಿಗಳ ಕೆಲ ಉಪಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ 2004ರಲ್ಲಿ ನೀಡಿದ ತೀರ್ಪನ್ನ ಪರಿಷ್ಕರಿಸಲು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿದೆ. ಈ ವಿಷಯದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಲು ಕೋರ್ಟ್ ಆಲೋಚಿಸಿದೆ.


  ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ತನ್ನ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ನಿರ್ಧಾರ


  3. ದೇಶಾದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನ್ಕೆಕ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೂ ಈವರೆಗೂ ಅವಕಾಶ ನೀಡಲಾಗಿಲ್ಲ. ಅದರಂತೆ ಮುಸ್ಲಿಂ ಸಮುದಾಯದ ಮೊಹರಂ ಹಬ್ಬದ ದಿನದಂದು ಮೆರವಣಿಗೆಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್​ನಲ್ಲಿ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.


  ಕೊರೋನಾ ಕಾರಣದಿಂದ ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಸುಪ್ರೀಂಕೋರ್ಟ್


  4.ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯಾಗಬೇಕೆಂದು ಪತ್ರ ಬರೆದಿದ್ದ 23 ಮಂದಿಗೆ ಪಕ್ಷದಲ್ಲಿ ಭವಿಷ್ಯ ಮಸುಕಾಯಿತು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರನ್ನ ಉಚ್ಛಾಟಿಸುವ ಪ್ರಯತ್ನಗಳು ನಡೆದಿರುವುದು ಬೆಳಕಿಗೆ ಬಂದಿದೆ. ಜಿತಿನ್ ಪ್ರಸಾದ ಅವರ ಉಚ್ಛಾಟನೆಯಾಗಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶದ ಲಖೀಮ್​ಪುರ್ ಖೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ನಿರ್ಣಯ ಹೊರಡಿಸಿದೆ.


  ಕಾಂಗ್ರೆಸ್​ನಿಂದ ಜಿತಿನ್ ಉಚ್ಛಾಟನೆಗೆ ಯತ್ನ; ಭಿನ್ನಮತೀಯರ ಟಾರ್ಗೆಟ್​ಗೆ ಸಿಬಲ್ ಅಸಮಾಧಾನ


  5.ಬೆಂಗಳೂರಿನಲ್ಲಿ ಎನ್​ಸಿಬಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಚಾರಣ ವೇಳೆ ಅನೇಕ ಅಚ್ಚರಿಯ ಮಾಹಿತಿಗಳು ಹೊರಬೀಳುತ್ತಿವೆ. ಇವರು ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರಿಗೂ ಡ್ರಗ್ ಪೂರೈಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಮರದ, ರಟ್ಟಿನ ಬಾಕ್ಸ್​ಗಳಲ್ಲಿ ಮಕ್ಕಳ ಆಟಿಕೆ ವಸ್ತುಗಳಲ್ಲಿ ಡ್ರಗ್ಸ್ ಪಾರ್ಸೆಲ್ ಮಾಡುತ್ತಿದ್ದರು ಎಂಬ ಸಂಗತಿ ವಿಚಾರಣೆಯಲ್ಲಿ ತಿಳಿದುಬಂದಿದೆ.


  Bengaluru Crime: ಬೆಂಗಳೂರಿನಲ್ಲಿ ಮಕ್ಕಳ ಆಟಿಕೆಗಳ ಮೂಲಕ ಡ್ರಗ್ಸ್​ ಪೂರೈಕೆ!; ಎನ್​ಸಿಬಿ ವಿಚಾರಣೆಯಲ್ಲಿ ಬಯಲು


  6. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ಸೇರಿದಂತೆ ಇತರೆ ಪ್ರಕರಣಗಳಿಂದ ತಮ್ಮನ್ನು ಕೈಬಿಡುವಂತೆ ಕೋರಿ ಡಿಕೆಶಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಾಲ್ಕು ವಾರಗಳ ಕಾಲ ಮುಂದೂಡಿ ಆದೇಶಿಸಿದೆ.


  ಐಟಿ ದಾಳಿ ಸೇರಿ ಇತರೆ ಪ್ರಕರಣಗಳಿಂದ ತಮ್ಮನ್ನು ಕೈಬಿಡುವಂತೆ ಕೋರಿದ್ದ ಡಿಕೆಶಿ ಅರ್ಜಿ; ವಿಚಾರಣೆ ಮುಂದೂಡಿದ ಸುಪ್ರೀಂ


  7. ರಾಜ್ಯದಲ್ಲಿ ಕಾಂಗ್ರೆಸ್ ನೀಚ ರಾಜಕಾರಣ ಮಾಡುತ್ತಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದಾಗ ರಾಜ್ಯದಲ್ಲಿ ಬೆಂಕಿ ಹಚ್ಚೋ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್​​ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರವಾಸ ಕೈಗೊಂಡಿರುವ ನಳಿನ್ ಕಟೀಲ್ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಗೊಂದಲ ಸೃಷ್ಟಿಸುತ್ತದೆ ಎಂದು ಕಿಡಿಕಾರಿದರು.


  ಕಾಂಗ್ರೆಸ್​​ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ; ನಳಿನ್​ಕುಮಾರ್ ಕಟೀಲ್


  8.ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ- ಕಾಸರಗೋಡು ನಡುವಿನ 14ಕ್ಕೂ ಅಧಿಕ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಉಭಯ ಜಿಲ್ಲೆಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು. ಈ ನಡುವೆ ಕೇಂದ್ರ ಸರಕಾರ ಅನ್ ಲಾಕ್ ಮಾರ್ಗಸೂಚಿ 3.0 ಪ್ರಕಾರ ಜನಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು ಎಂದು  ಹೈಕೋರ್ಟ್ ಆದೇಶಿಸಿದೆ.


  ಕಾಸರಗೋಡು- ಕರ್ನಾಟಕ ಗಡಿ ರಸ್ತೆ ತೆರವುಗೊಳಿಸಲು ಕೇರಳ ಹೈಕೋರ್ಟ್ ಆದೇಶ


  9.ಶಿವರಾಜ್​ಕುಮಾರ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ವರ್ಷ ಅವರ ನಟನೆಯ  ಕನಿಷ್ಟ ಮೂರು ಚಿತ್ರಗಳು ತೆರೆಗೆ ಬರುತ್ತವೆ. ಚಿತ್ರದಿಂದ ಚಿತ್ರಕ್ಕೆ ಅವರ ಪಾತ್ರ ಕೂಡ ಭಿನ್ನವಾಗಿರುತ್ತದೆ. ಆರ್​​ಜಿವಿ ನಿರ್ದೇಶನದ ಕಿಲ್ಲಿಂಗ್​ ವೀರಪ್ಪನ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಬಣ್ಣ ಹಚ್ಚಿದ್ದರು. ಈ ಸಿನಿಮಾ ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿ ತೆರೆಗೆ ಬಂದಿತ್ತು. ನಂತರ ಬಾಲಕೃಷ್ಣ ನಟನೆಯ ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈಗ ಮತ್ತೆ ಟಾಲಿವುಡ್​​ನತ್ತ ಮುಖ ಮಾಡಲು ಶಿವರಾಜ್​ಕುಮಾರ್ ರೆಡಿ ಆಗಿದ್ದಾರೆ.


  ತೆಲುಗು​ ಆ್ಯಕ್ಷನ್​ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಶಿವರಾಜ್​ಕುಮಾರ್


  10.ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ 2017ರಲ್ಲಿ ವಿವಾಹವಾಗಿದ್ದರು. ದೂರದ ಇಟಲಿಗೆ ತೆರಳಿ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರದಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ಅರ್ಥಾತ್​ ವಿರಾಟ್​ ಹಾಗೂ ಅನುಷ್ಕಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


  Anushka Sharma: ವಿರಾಟ್​-ಅನುಷ್ಕಾ ಈಗ ಇಬ್ಬರಲ್ಲ ಮೂವರು; ತಾಯಿ ಆಗ್ತಿರೋ ಬಗ್ಗೆ ಖಚಿತಪಡಿಸಿದ ಸ್ಟಾರ್​ ನಟಿ

  Published by:G Hareeshkumar
  First published: