• Home
 • »
 • News
 • »
 • state
 • »
 • Evening Digest : ಎಐಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಬಿಸಿಬಿಸಿ ಚರ್ಚೆ, ಡಿಜೆ ಹಳ್ಳಿ ಗಲಭೆಕೋರರ ಮೇಲೆ UAPA ಅಡಿ ಪ್ರಕರಣ ದಾಖಲು : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

Evening Digest : ಎಐಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಬಿಸಿಬಿಸಿ ಚರ್ಚೆ, ಡಿಜೆ ಹಳ್ಳಿ ಗಲಭೆಕೋರರ ಮೇಲೆ UAPA ಅಡಿ ಪ್ರಕರಣ ದಾಖಲು : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

 • Share this:

  ಭಾರತದ ಆರ್ಥಿಕ ಬೆಳವಣಿಗೆಗೆ ಜಾಗತಿಕ ಮಟ್ಟದ ಬ್ಯಾಂಕ್​ಗಳು ಅಗತ್ಯ ಇವೆ. ಈಗ ಜಾಗತಿಕ ಟಾಪ್-100 ಬ್ಯಾಂಕ್​ಗಳಲ್ಲಿ ಎಸ್​ಬಿಐ ಮಾತ್ರ ಇದೆ. ಇನ್ನಷ್ಟು ಭಾರತೀಯ ಬ್ಯಾಂಕ್​ಗಳು ಈ ಮಟ್ಟಕ್ಕೆ ಬಂದಲ್ಲಿ ಭಾರತ 2024-25ರಲ್ಲಿ 5 ಟ್ರಿಲಿಯನ್ ಡಾಲರ್ (ಸುಮಾರು 370 ಲಕ್ಷ ಕೋಟಿ ರೂಪಾಯಿ) ಮೊತ್ತದ ಆರ್ಥಿಕತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.


  ಐದು ಟ್ರಿಲಿಯನ್ ಆರ್ಥಿಕತೆ ಸಾಧ್ಯವಾಗಲು ಭಾರತಕ್ಕೆ ಜಾಗತಿಕ ಮಟ್ಟದ ಬ್ಯಾಂಕ್​ಗಳು ಅಗತ್ಯ: ಸಿಇಎ


  ಒಂದು ಬಣದ ನಾಯಕರು ಗಾಂಧಿಯೇತರ ಕುಟುಂಬದವರು ಅಧ್ಯಕ್ಷರಾಗಬೇಕು ಎಂದು ಹಠ ಹಿಡಿದಿದ್ದರೆ ಮತ್ತೊಂದು ಬಣದ ನಾಯಕರು ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರಲ್ಲಿ ಅಹ್ಮದ್ ಪಟೇಲ್ ಅವರು ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ.


  ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರೇ ಸೂಕ್ತ; ಗಾಂಧಿ ಕುಟುಂಬದ ಪರ ಅಹ್ಮದ್ ಪಟೇಲ್ ವಕಾಲತು


  ಕೇಂದ್ರ ಸರ್ಕಾರ ಕಳೆದ ತಿಂಗಳು ವಲಸೆ ಕಾರ್ಮಿಕರಿಗಾಗಿ ಬಿಡುಗಡೆ ಮಾಡಿದ ಅಸೀಮ್ (ASEEM) ಉದ್ಯೋಗ ತಾಣಕ್ಕೆ ನೊಂದಣಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಶೇ. 2ರಷ್ಟು ಜನರಿಗೆ ಮಾತ್ರ ಕೆಲಸ ಸಿಕ್ಕಿದೆ. ಪೋರ್ಟಲ್ ಪ್ರಾರಂಭಗೊಂಡ ದಿನದಿಂದ 40 ದಿನದಲ್ಲಿ ಬರೋಬ್ಬರಿ 69 ಲಕ್ಷ ಜನರು ಈ ಪೋರ್ಟಲ್​ನಲ್ಲಿ ಹೆಸರು ನೊಂದಾಯಿಸಿದ್ದಾರೆ.


  ಸರ್ಕಾರದ ನೂತನ ಉದ್ಯೋಗ ತಾಣದಲ್ಲಿ 40 ದಿನದಲ್ಲಿ 69 ಲಕ್ಷ ನೊಂದಣಿ; ಕೆಲಸ ಸಿಕ್ಕಿದ್ದು ಎಷ್ಟು?


  ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆ ಬಗ್ಗೆ ಹಿರಿಯ ಕಾಂಗ್ರೆಸ್​ ನಾಯಕರೇ ಖುದ್ದು ಟ್ವೀಟ್​​ ಮಾಡುವ ಮೂಲಕ ಪರಸ್ಪರ ಕೆಸರೆರಚಾಟಕ್ಕೆ ಕಾರಣರಾಗಿದ್ದಾರೆ. ಈಗಷ್ಟೇ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ವಿರುದ್ಧ ಸಿಡಿಮಿಡಿಗೊಂಡು ಮಾಡಿದ್ದ ಟ್ವೀಟ್​​ ಅನ್ನು ಹಿರಿಯ ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​​ ಹಿಂಪಡೆದಿದ್ದಾರೆ. ಜತೆಗೆ ತಪ್ಪು ಮಾಹಿತಿ ನಂಬಿ ಟ್ವೀಟ್​ ಮಾಡಿದ್ದಕ್ಕೆ ಬಹಿರಂಗ ಕ್ಷಮೆಯಾಚಿಸಿದ್ಧಾರೆ.


  CWC Meeting: ತಪ್ಪು ಮಾಹಿತಿಯಿಂದ ರಾಹುಲ್​ ವಿರುದ್ಧ ಸಿಬಲ್​ ಸಿಡಿಮಿಡಿ: ಬಹಿರಂಗ ಕ್ಷಮೆಯಾಚನೆ


  ನಾಯಕತ್ವ ಬದಲಾವಣೆಯ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಮಧ್ಯಂತರ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರು ಇಂದುಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿಯಲ್ಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಬೆನ್ನಲ್ಲೇ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕವಾಗಲಿ ಎಂದು ಕೋರಿದ್ದಾರೆ.


  ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕವಾಗಲಿ; ಸೋನಿಯಾಗೆ ಸಿದ್ದರಾಮಯ್ಯ ಪತ್ರ


  ಕಾಂಗ್ರೆಸ್​ನ ಕೆಲವು ನಾಯಕರು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಕೆಲವು ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆಯೂ ಹಲವರು ಪ್ರಸ್ತಾಪವಿಟ್ಟಿದ್ದಾರೆ. ಆದರೆ, ಕಾಂಗ್ರೆಸ್ ನಾಯಕತ್ವ ಬದಲಾವಣೆ ಬಗ್ಗೆ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಪರವಾದ ನಿಲುವು ಪ್ರಕಟಿಸಿದ್ದಾರೆ.


  ನೂರಾರು ವರ್ಷ ಗಾಂಧಿ-ನೆಹರು ಕುಟುಂಬ ಮಾಡಿದ ತ್ಯಾಗವನ್ನು ಕಾಂಗ್ರೆಸ್ ಮರೆಯಬಾರದು; ಮಲ್ಲಿಕಾರ್ಜುನ ಖರ್ಗೆ


  ಅವರೇ ಕಳ್ಳ, ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಏನಿದೆ. ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕು. ಅವರೇ ಟ್ಯಾಪಿಂಗ್ ಮಾಡಿಸಿ ನನ್ನ ಮೇಲೆಯೇ ಈ ಹಿಂದೆ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ವಿಧಾನ ಪರಿಷತ್​ ಸದಸ್ಯ ಸಿ ಪಿ ಯೋಗೇಶ್ವರ್​ ತಿರುಗೇಟು ನೀಡಿದ್ದಾರೆ.


  ಡಿ ಕೆ ಶಿವಕುಮಾರ್ ಒಬ್ಬ ಕಳ್ಳ, ಅವರ ಫೋನ್ ನಾವ್ಯಾಕೆ ಟ್ಯಾಪ್ ಮಾಡೋಣ ; ಸಿ.ಪಿ.ಯೋಗೇಶ್ವರ್


  ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಬೇಕಿರುವ ಎಲ್ಲ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ ರಾಜ್ಯ ಸರಕಾರ ತಯಾರಿ ಮಾಡಿಕೊಳ್ಳುತ್ತಿದೆ. ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟ ಕಾರ್ಯಸೂಚಿಯ ಮೂಲಕ ಸರಕಾರ ಎಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇಡೀ ದೇಶದಲ್ಲೇ ಈ ನೀತಿಯನ್ನು ಮೊತ್ತ ಮೊದಲಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ  ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಉಪ ಮುಖ್ಯಮಂತ್ರಿಯಾದ ಡಾ. ಸಿ.ಎನ್. ಅಶ್ವಥ್​​ ನಾರಾಯಣ್​​​ ಹೇಳಿದರು.


  NEP 2020: ಶಿಕ್ಷಣ ನೀತಿ ಜಾರಿಗೆ ಆಡಳಿತ ಮತ್ತು ಕಾನೂನಾತ್ಮಕ ಕ್ರಮಗಳಿಗೆ ಸರ್ಕಾರ ಸಿದ್ಧತೆ - ಡಿಸಿಎಂ ಅಶ್ವಥ್​ ನಾರಾಯಣ್


  ಕಿಚ್ಚ ಸುದೀಪ್​ ಲಾಕ್​ಡೌನ್​ ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಈ ಹಿಂದೆ ಅವರ ಸಿನಿಮಾ ಹೆಬ್ಬುಲಿ ಚಿತ್ರೀಕರಣದ ವೇಳೆ ಮಾಡಿದ್ದ ವಿಡಿಯೋವನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್​ಗಳಿಗೆ ಸರ್ಪ್ರೈಸ್​ ಕೊಟ್ಟಿದ್ದರು. ನಂತರ ತಮ್ಮ ಸಿನಿಮಾಗಳ ಅಪ್ಡೇಟ್​ ನೀಡುತ್ತಿದ್ದರು.  ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್​ ಹಾಗೂ ಕೋಟಿಗೊಬ್ಬ 3. ಅಭಿಮಾನಿಗಳಿಗಾಗಿ ಸುದೀಪ್​ ಈ ಎರಡೂ ಚಿತ್ರಗಳ ಕುರಿತಾಗಿ ಸಾಕಷ್ಟು ಅಪ್ಡೇಟ್​ ನೀಡಿದ್ದಾರೆ. ಈಗಲೂ ಸಹ ಫ್ಯಾಂಟಮ್​ ಸಿನಿಮಾ ಕುರಿತಾಗಿ ಸರ್ಪ್ರೈಸ್​ ಕೊಡುವುದಾಗಿ ಸುಳಿವು ನೀಡಿದ್ದಾರೆ.


  Phantom: ಫ್ಯಾಂಟಮ್​ ಚಿತ್ರತಂಡದ ಕಡೆಯಿಂದ ಸಿಗಲಿದೆ ಸಿಹಿ ಸುದ್ದಿ: ಸುಳಿವು ಕೊಟ್ಟ ಕಿಚ್ಚ ಸುದೀಪ್​..!

  Published by:G Hareeshkumar
  First published: