Evening Digest: ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆಯ ಕೂಗು, ಅರಸೀಕೆರೆ ಕ್ಷೇತ್ರಕ್ಕಾಗಿ ಯಡಿಯೂರಪ್ಪ ಶಿಷ್ಯಂದಿರ ಕಿತ್ತಾಟ : ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿಗಳ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ದಾವೂದ್​ ಇಬ್ರಾಹಿಂ ನಮ್ಮಲ್ಲಿಯೇ ಇರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ . ವಿಶ್ವಸಂಸ್ಥೆಯ ಅನುಮೋದನೆ ನಿರ್ಣಯದಡಿಯಲ್ಲಿ 88 ಭಯೋತ್ಪಾದಕರನ್ನು ನಿಷೇಧಿಸುವ ಆದೇಶವನ್ನು ಪಾಕಿಸ್ತಾನ ಸರ್ಕಾರ ಹೊರಡಿಸಿದೆ. ಈ ಆದೇಶದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಕೂಡ ಇದೆ.

  ಭೂಗತ ಪಾತಕಿ ದಾವೂದ್​ ಇಬ್ರಾಹಿಂ ನಿವಾಸದ ವಿಳಾಸ ಬಹಿರಂಗ ಮಾಡಿದ ಪಾಕಿಸ್ತಾನ!

  2.ಕಾಂಗ್ರೆಸ್ ಬಲ​ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದು ಬಿಜೆಪಿಗೆ ಲಾಭವಾಗುತ್ತಿದೆ ಎನ್ನುವುದಕ್ಕಿಂತ ಕಾಂಗ್ರೆಸ್​​ಗೆ ಅಳಿವು ಉಳಿವಿನ ವಿಚಾರ. ಐದು ಮಾಜಿ ಸಿಎಂಗಳು, ಕಾಂಗ್ರೆಸ್​ ಕಾರ್ಯ ಸಮಿತಿಯ ಸದಸ್ಯರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿ 23 ಕಾಂಗ್ರೆಸ್​ ನಾಯಕರು ಈ ಬಗ್ಗೆ ಒಟ್ಟಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.

  ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆಯ ಕೂಗು; 23 ಹಿರಿಯ ನಾಯಕರಿಂದ ಸೋನಿಯಾ ಗಾಂಧಿಗೆ ಪತ್ರ

  3.ದೇಶದಲ್ಲಿ ಕೊರೋನಾ ಕಾಣಿಸಿಕೊಂಡು ಸುಮಾರು ಏಳು ತಿಂಗಳಾಗುತ್ತಿದೆ. ಈ ನಡುವೆ ಕೊರೋನಾ ಸೋಂಕು ಕಡಿಮೆ ಇದ್ದಾಗ ಲಾಕ್​ಡೌನ್​ ಮಾಡಿ ಹೆಚ್ಚಾದಾಗ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೋರೊನಾ ಸೋಂಕು ಪೀಡಿತರ ಸಂಖ್ಯೆ 30 ಲಕ್ಷ‌ದ ಗಡಿ ದಾಟಿದೆ.

  Coronavirus India Updates: 30 ಲಕ್ಷ ದಾಟಿದ ದೇಶದ ಕೊರೋನಾ ಸೋಂಕಿತರ ಸಂಖ್ಯೆ

  4.ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿಯಲ್ಲಿ ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು ಎಂಬ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕೊಟೆಚಾ  ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಹಿಂದಿ ಬಾರದವರು ಸಭೆಯಿಂದ ಹೊರಹೋಗಿ ಎಂಬ ಆಯುಷ್ ಇಲಾಖೆ ಕಾರ್ಯದರ್ಶಿ ನಡೆಗೆ ಎಚ್.ಡಿ.ಕುಮಾರಸ್ವಾಮಿ ಟೀಕೆ

  5.ಪಕ್ಷ ಸಂಘಟನೆ ಗೆ ಒತ್ತು ಕೊಡಿ. ಚುನಾವಣೆ ಬಹಳ ದೂರವಿದೆ ಎಂಬ ತಾತ್ಸಾರ ಬೇಡ.  ಇಂದಿನಿಂದಲೇ ಸಂಘಟನೆ ಚುರುಕುಗೊಳಿಸಿ. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಮುಟ್ಟಿಸುವುದರ ಜತೆಗೆ‌ ಪಕ್ಷ ಸಂಘಟನೆ ಮಾಡಿ. ರಾಜ್ಯಾದ್ಯಂತ ಬರೀ ಅಧ್ಯಕ್ಷರಷ್ಟೇ ಪ್ರವಾಸ ಮಾಡಿದರೆ ಆಗಲ್ಲ. ಉಪಾಧ್ಯಕ್ಷರು ಮತ್ತು ಎಲ್ಲ ಮೋರ್ಚಾ ಅಧ್ಯಕ್ಷರು ಸಕ್ರಿಯರಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸಂತೋಷ್ ಅವರು ತಾಕೀತು ಮಾಡಿದರು.

  ಚುನಾವಣೆ ದೂರವಿದೆ ಎಂಬ ತಾತ್ಸಾರ ಬೇಡ, ಪಕ್ಷ ಸಂಘಟನೆಗೆ ಒತ್ತು ನೀಡಿ; ವಿವಿಧ ಮೋರ್ಚಾ ಅಧ್ಯಕ್ಷರಿಗೆ ಬಿ.ಎಲ್.ಸಂತೋಷ್ ಸೂಚನೆ

  6.ಜೈಲಿನಲ್ಲಿದ್ದು ಬಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತಾಡುವ ಅಧಿಕಾರವಿಲ್ಲ. ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್​ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅವರ ಮೇಲಿನ ಯಾವುದೇ ಕೇಸ್‌ಗಳು ಮುಗಿದಿಲ್ಲ‌. ಅವರದ್ದೇ ಶಾಸಕರ ಮನೆ ಮೇಲೆ ದಾಳಿ ಆಗಿದೆ. ಕಾಂಗ್ರೆಸ್‌ನ ಯಾವುದೇ ನಾಯಕರು ಘಟನೆಯನ್ನು ಖಂಡಿಸಿಲ್ಲ. ತುಷ್ಟೀಕರಣ ರಾಜಕೀಯದಿಂದ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದರು.

  ಜೈಲಿನಲ್ಲಿದ್ದು ಬಂದ ಡಿಕೆಶಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ; ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ

  7.ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಹಿನ್ನೆಲೆ, ಮುಷ್ಕರಕ್ಕೆ ಕರೆ ನೀಡಿದ್ದ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಇಂದು ಪ್ರತಿಭಟನೆಯನ್ನು ಹಿಂಪಡೆದಿದೆ. ಆದರೆ, ವರ್ಗಾವಣೆಗೊಂಡಿರುವ ಜಿ.ಪಂ. ಸಿಇಒ ಅಮಾನತು ಆಗುವವರೆಗೂ ವೈದ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸನ್ ತಿಳಿಸಿದ್ದಾರೆ.

  ಮೈಸೂರು ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ; ಸಭೆ ಬಳಿಕ ಮುಷ್ಕರ ಹಿಂಪಡೆದ ವೈದ್ಯರು

  8.ಹಾಸನದಲ್ಲಿ ಅತಿಹೆಚ್ಚು ಲಿಂಗಾಯತರು ಇರುವ ಕ್ಷೇತ್ರ ಅರಸೀಕೆರೆ. ಬಿಜೆಪಿಗೆ ಹೆಚ್ಚು ಬಲ ಇರುವ ಕ್ಷೇತ್ರವೂ ಇದೇ. ಈಗ ಅರಸೀಕೆರೆ ಕ್ಷೇತ್ರಕ್ಕಾಗಿ ಬಿಜೆಪಿಯೊಳಗೆ ಬಿಗ್ ಫೈಟ್ ನಡೆಯುತ್ತಿರುವಂತಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತರಾದ ಎನ್.ಆರ್. ಸಂತೋಷ್ ಮತ್ತು ಮರಿಸ್ವಾಮಿ ಅವರ ಬೆಂಬಲಿಗರ ನಡುವೆ ಕೆಲ ದಿನಗಳಿಂದ ಜಟಾಪಟಿ ನಡೆಯುತ್ತಿದೆ.

  ಹಾಸನದ ಅರಸೀಕೆರೆ ಕ್ಷೇತ್ರಕ್ಕಾಗಿ ಯಡಿಯೂರಪ್ಪ ಶಿಷ್ಯಂದಿರ ಕಿತ್ತಾಟ

  9. ನಟ ಶಿವರಾಜ್​​​ಕುಮಾರ್​ ಅವರು ಸದ್ಯ ಭಜರಂಗಿ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅದರ ನಡುವೆಯೇ ಒಂದು ಮಾದರಿ ಕೆಲಸ ಮಾಡಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮರಿ ಆನೆಯೊಂದನ್ನು ಒಂದು ವರ್ಷಕ್ಕಾಗಿ ದತ್ತು ಪಡೆದಿದ್ದಾರೆ.

  ಗಣೇಶ ಚತುರ್ಥಿಯಂದು ವಿಶೇಷ ಕೆಲಸ ಮಾಡಿದ ಶಿವರಾಜ್​ಕುಮಾರ್​!; ಏನದು? ಇಲ್ಲಿದೆ ಮಾಹಿತಿ

  10.ಕಳೆದ ವರ್ಷ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್​ನ ಸೆಮಿ ಫೈನಲ್ ಪಂದ್ಯದಲ್ಲಿ ಕೊಹ್ಲಿ ಪಡೆ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ಟೂರ್ನಿ ಹೊರಬಿತ್ತು. ಒಂದು ವೇಳೆ ತಂಡದಲ್ಲಿ ಅಂಬಟಿ ರಾಯುಡು ಇದ್ದಿದ್ದರೆ ಭಾರತ ತಂಡ ಖಂಡಿತಾ ವಿಶ್ವಕಪ್ ಗೆಲ್ಲುತ್ತಿತ್ತು ಎಂದು ರೈನಾ ಹೇಳಿದ್ದಾರೆ.

  ಈ ಆಟಗಾರ ತಂಡದಲ್ಲಿದ್ದಿದ್ದರೆ ಭಾರತ 2019 ವಿಶ್ವಕಪ್ ಖಂಡಿತ ಗೆಲ್ಲುತ್ತಿತ್ತು ಎಂದ ಸುರೇಶ್ ರೈನಾ
  Published by:G Hareeshkumar
  First published: