Evening Digest: ಠಾಣೆ ಮೆಟ್ಟಿಲೇರಿದ ರಮ್ಯಾ, ರಂಗೇರಿದ ರಾಜ್ಯಸಭೆ ಎಲೆಕ್ಷನ್ ಅಖಾಡ! ಇಲ್ಲಿವೆ ಇಂದಿನ ಟಾಪ್‌ ನ್ಯೂಸ್‌

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಸುದ್ದಿಗಳ ಗುಚ್ಛ ಇಲ್ಲಿದೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿದ್ದರಾಮಯ್ಯ ಪತ್ರಕ್ಕೆ ಎಚ್‌ಡಿಕೆ ಕಿಡಿಕಿಡಿ, ನಿಮಗೆ ನಾಚಿಕೆ ಆಗ್ಬೇಕು ಅಂತ ವಾಗ್ದಾಳಿ!

ಬೆಂಗಳೂರು: ರಾಜ್ಯ ಸಭಾ ಚುನಾವಣೆ (Rajyasabha Election) ಕಣ ರಂಗೇರಿದೆ. ಕರ್ನಾಟಕದಿಂದ (Karnataka) ನಾಲ್ಕನೇ ಅಭ್ಯರ್ಥಿ ಆಯ್ಕೆ (4th Candidate) ಮಾಡಲು ಪಕ್ಷಗಳು ಸರ್ಕಸ್ ಮಾಡುತ್ತಿವೆ. ಶತಾಯಗತಾಯ ಹೇಗಾದರೂ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇ ಬೇಕು ಅಂತ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಶಪಥಮಾಡಿದೆ. ಮತ್ತೊಂದೆಡೆ ಜೆಡಿಎಸ್‌ಗೆ (JDS) ತನ್ನ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದಷ್ಟು ಮತಗಳು (Vote) ಇಲ್ಲ. ಹೀಗಾಗಿ ಜೆಡಿಎಸ್ ಬೆಂಬಲಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಸರ್ಕಸ್ ಮಾಡುತ್ತಿವೆ.

ಈ ನಡುವೆ ಜೆಡಿಎಸ್‌ ಶಾಸಕರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪತ್ರ (Letter) ಬರೆದಿದ್ದಾರೆ. ಇದೀಗ ಈ ಪತ್ರಕ್ಕೆ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ, ಬಿಜೆಪಿ ಬಿ ಟೀಂ ಎಂದು ಜೆಡಿಎಸ್ ಬಗ್ಗೆ ಟೀಕೆ ಮಾಡುತ್ತಿದ್ದ ಸಿದ್ಧರಾಮಯ್ಯನವರಿಗೆ ನಾಚಿಕೆ ಆಗಬೇಕು. ಆತ್ಮಸಾಕ್ಷಿ ಎಂದರೆ ಏನು ಅಂತ ಅವರಿಗೆ ಗೊತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮುಹೂರ್ತ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ (Term) ಜುಲೈ 24ರಂದು ಮುಕ್ತಾಯವಾಗಲಿದೆ. ಇದೀಗ ಮುಂದಿನ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಅದರಂತೆ ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ  ನಡೆಯಲಿದೆ. ಜುಲೈ 21ಕ್ಕೆ ಮತ ಎಣಿಕೆ ಕಾರ್ಯ (Counting) ನಡೆಯಲಿದೆ.

ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮುಹೂರ್ತ, ಯಾರಾಗ್ತಾರೆ ಭಾರತದ ಮುಂದಿನ ಪ್ರಥಮ ಪ್ರಜೆ?

ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ; ದೂರು ದಾಖಲಿಸಿದ ಪದ್ಮಾವತಿ

ಸ್ಯಾಂಡಲ್​ವುಡ್​ನ (Sandalwood) ಮೋಹಕ ತಾರೆ ರಮ್ಯಾ (Ramya) ಅವರು ಸದ್ಯ ಚಿತ್ರಂಗದಿಂದ ದೂರವಿದ್ದಾರೆ. ಆದರೂ ಕೆಲ ದಿನಗಳಿಂದ ರಮ್ಯಾ ಅವರು ಕನ್ನಡದ ಚಿತ್ರಗಳ ಕುರಿತು ಟ್ವೀಟ್ ಮಾಡುವುದು, ಮಾತನಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸೂಚನೆ ನೀಡುತ್ತಿದ್ದಾರೆ.

ಇದರ ನಡುವೆ ಅವರು ರಾಜಕೀಯದಿಂದ (Politics) ಸದ್ಯ ದೂರವಿದ್ದು, ಯಾವುದೇ ರೀತಿಯ ರಾಜಕೀಯ ಕಾರ್ಯಕ್ರಮಗಳಲ್ಲಿ ಅಥವಾ ರಾಜಕೀಯದ ಕುರಿತಾದ ಹೇಳಿಕೆಗಳಿಂದ ದೂರವಿದ್ದಾರೆ. ಈ ಮೂಲಕ ರಮ್ಯಾ ಅವರು ರಾಜಕೀಯದಿಂದ ದೂರಸರಿದರು ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ (Social media) ಓರ್ವ ವ್ಯಕ್ತಿ ನಿಂದನೆ ಮಾಡಿದ್ದು, ಈ ಸಂಬಂಧ ಮೋಹಕ ತಾರೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸೂಪರ್‌ ಸ್ಟಾರ್ ಮತ್ತು ಸೆಂಚುರಿ ಸ್ಟಾರ್‌ ಕಾಂಬೋ ಸಿನಿಮಾ ಯಾವಾಗ ಗೊತ್ತಾ? 

ಸೂಪರ್‌ ಸ್ಟಾರ್ (Super Star) ರಜಿನಿಕಾಂತ್ (Rajinikanth) ಹಾಗೂ ಸೆಂಚುರಿ ಸ್ಟಾರ್ (Century Star) ಶಿವರಾಜ್‌ಕುಮಾರ್ (Shivarajkumar) ಮುಂದಿನ ಸಿನಿಮಾದಲ್ಲಿ (Cinema) ಒಟ್ಟಿಗೆ ನಟಿಸುತ್ತಿರುವ ಸುದ್ದಿ (News) ಎಲ್ಲರಿಗೂ ಗೊತ್ತೇ ಇದೆ. ರಜಿನಿಕಾಂತ್ ಹೊಸ ಸಿನಿಮಾ ಬರ್ತಿದೆ ಅಂತ ‘ತಲೈವಾ’ (Thalaiva) ಅಭಿಮಾನಿಗಳು (Fans) ಕುಣಿದು ಕುಪ್ಪಳಿಸುತ್ತಿದ್ದಾರೆ. ಇತ್ತ ಶಿವಣ್ಣನ (Shivanna) ಅಭಿಮಾನಿಗಳೂ ಕೂಡ ಈ ಸುದ್ದಿ ತಿಳಿದು ಸಂತಸಗೊಂಡಿದ್ದಾರೆ. ಸೂಪರ್‌ ಸ್ಟಾರ್ ಹಾಗೂ ಸೆಂಚುರಿ ಸ್ಟಾರ್ ಅಭಿಮಾನಿಗಳು ಈ ಸಿನಿಮಾ ಯಾವಾಗ ಬರುತ್ತೆ? ಶೂಟಿಂಗ್ (Shooting) ಯಾವಾಗ ಸ್ಟಾರ್ಟ್ ಆಗುತ್ತೆ ಅಂತ ಕಾಯ್ತಿದ್ದಾರೆ. ಈ ಸಿನಿಮಾದ ಅಪ್‌ಡೇಟ್ಸ್ (Updates) ಏನಿದೆ ಅಂತ ಹುಡುಕುತ್ತಿದ್ದಾರೆ. ಈ ಎಲ್ಲಾ ಕಾತರಕ್ಕೆ, ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ಇದನ್ನೂ ಓದಿ: Rajinikanth with Shivarajkumar: ಸೂಪರ್‌ ಸ್ಟಾರ್ ಮತ್ತು ಸೆಂಚುರಿ ಸ್ಟಾರ್‌ ಕಾಂಬೋ ಸಿನಿಮಾ ಯಾವಾಗ ಗೊತ್ತಾ? ಇಲ್ಲಿದೆ ಪಕ್ಕಾ ಅಪ್‌ಡೇಟ್ಸ್

ವಿಘ್ನೇಶ್​ ಬಾಳಲ್ಲಿ ತಾರೆಯಾದ ನಯನ

ಬಹುಭಾಷಾ ನಟಿ ನಯನತಾರಾ (Nayanthara) ಗೆಳೆಯ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan)  ಜೊತೆ ಸಪ್ತಪದಿ ತುಳಿದಿದ್ದು, ಮದುವೆಯಲ್ಲಿ ವಿವಿಧ ಭಾಷೆಯ ಸ್ಟಾರ್​ಗಳು ಭಾಗವಹಿಸಿದ್ದು, ಇದೀಗ ಮದುವೆಯ ಫೋಟೋ ವೈರಲ್ ಆಗುತ್ತಿದೆ. ಈ ತಾರಾ ಮದುವೆಗೆ ಬಾಲಿವುಡ್​ ಬಾದ್​ ಶಾ ಶಾರುಖ್ ಖಾನ್​, ಸೂಪರ್ ಸ್ಟಾರ್ ರಜನಿಕಾಂತ್, ನಟರಾದ ದಳಪತಿ ವಿಜಯ್, ಸೂರ್ಯ, ಕಾರ್ತಿ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದಾರೆ.
Published by:Annappa Achari
First published: