Top-5 News: ತುಮಕೂರು ಪಾಲಿಕೆಯಲ್ಲಿ ಮೈತ್ರಿ, ಕೋಡಿಮಠ ಶ್ರೀ ಭಯಾನಕ ಭವಿಷ್ಯ! ಚಳಿ ಚಳಿ ಸಂಜೆಗೆ ಬಿಸಿ ಬಿಸಿ ನ್ಯೂಸ್

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಕಾಂಗ್ರೆಸ್​ಗೆ ವರವಾದ ಮೀಸಲಾತಿ, ಚುನಾವಣೆಯಲ್ಲಿ ಮಹಾನಗರ ಪಾಲಿಕೆ ಕೈ ತೆಕ್ಕೆಗೆ!

ಇಂದು ತುಮಕೂರು ಮಹಾನಗರ ಪಾಲಿಕೆ ಚುನಾವಣೆ ನಡೆದಿದೆ. ಮಹಾನಗರ ಪಾಲಿಕೆಯಲ್ಲಿ ನಡೆದ ಚುನಾವಣೆಯಲ್ಲಿ ಮೇಯರಾಗಿ ಕಾಂಗ್ರೆಸ್‌ನ ಎಂ.ಪ್ರಭಾವತಿ ಸುಧೀಶ್ವರ್ ಹಾಗೂ ಉಪಮೇಯರಾಗಿ ಜೆಡಿಎಸ್‌ನ ಟಿ.ಕೆ.ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ–ಎ ಗೆ ಮೀಸಲಾಗಿತ್ತು.

ಮತ್ತೆ ಸುನಾಮಿ ಬಂದೀತು ಹುಷಾರ್! ಭಯಾನಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಮಂಡ್ಯ: ರಾಜ್ಯ, ದೇಶ, ವಿದೇಶದ ಆರ್ಥಿಕ, ರಾಜಕೀಯ, ಆರೋಗ್ಯ ಕ್ಷೇತ್ರ, ರೋಗ ರುಜಿನ, ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಭವಿಷ್ಯ (Predictions) ನುಡಿಯುವ ಕೋಡಿಮಠದ (Kodimath) ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು (Shivannda Shivayogi Rajendra Swamiji) ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಮಂಡ್ಯದ (Mandya) ಬೂಕನಕೆರೆಗೆ ಆಗಮಿಸಿದ್ದ ಸ್ವಾಮೀಜಿ, ದೇಶದ ಹವಾಮಾನ (Weather) ಹಾಗೂ ರಾಜ್ಯ ರಾಜಕೀಯದ (State Politics) ಕುರಿತಂತೆ ಮಾತನಾಡಿದ್ದಾರೆ. ಮತ್ತೊಂದೆಡೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿ, ತನಿಖೆ ಎದುರಿಸುತ್ತಿರುವ ಮುರುಘಾ ಮಠದ (Murugha Math) ಶಿವಮೂರ್ತಿ ಸ್ವಾಮಿ (Shivamurthy Swami) ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Kodimath Swamiji: ಮತ್ತೆ ಸುನಾಮಿ ಬಂದೀತು ಹುಷಾರ್! ಭಯಾನಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಬ್ರಿಟನ್ ರಾಣಿ ನಿಧನಕ್ಕೆ ಭಾರತದಲ್ಲೂ ಶೋಕಾಚರಣೆ

ಬ್ರಿಟನ್ ರಾಣಿ ಎಲಿಜಬೆತ್ II ನಿಧನಕ್ಕೆ (Queen Elizabeth  II Died)  ಬ್ರಿಟನ್​ನಲ್ಲೇನೋ 10 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಇದೀಗ ಭಾರತದಲ್ಲೂ 1 ದಿನಗಳ ಶೋಕಾಚರಣೆ (Queen Elizabeth  II  Mourning In India) ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.  ಬ್ರಿಟನ್ ರಾಣಿ ಎಲಿಜಬೆತ್ II ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ಭಾರತ ಸರ್ಕಾರ (Indian Government) ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಹ್ಯಾಪಿ ಬರ್ತ್‌ ಡೇ ಗಣಪ, ಪೊಲೀಸ್ ಕೆಲಸ ಕೊಡಿಸಪ್ಪ!

ಭಟ್ಕಳ, ಉತ್ತರ ಕನ್ನಡ: ಗೌರಿ ಗಣೇಶ ಹಬ್ಬದ (Gowri Ganesh Festival) ಸಂಭ್ರಮ ಇನ್ನೂ ಮುಂದುವರೆದಿದೆ. ಕಳೆದ ಆಗಸ್ಟ್ 30ರಂದು ಗೌರಿ ಆಗಮನವಾಗಿದ್ದರೆ, ಆಗಸ್ಟ್ 31ರಂದು ಗಣೇಶ ಮನೆ ಮನೆಗೆ ಬಂದಿದ್ದ. ರಾಜ್ಯ ಸೇರಿದಂತೆ ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು (Ganesh Chaturthi Festival) ಸಂಭ್ರಮ ಸಡಗರದಿಂದ ಆಚರಿಸಲಾಗಿತ್ತು. ಬಹುತೇಕ ಕಡೆಗಳಲ್ಲಿ ಗಣಪನನ್ನು (Ganapa) ಮರಳಿ ಕಳಿಸಿಕೊಟ್ಟಿದ್ದರೆ, ಇನ್ನೂ ಅನೇಕ ಕಡೆ ಗಣೇಶನ ಪೂಜೆ (Pooje) ಮುಂದುವರೆದಿದೆ. ಈ ನಡುವೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ (Bhatkal) ಯುವಕನೊಬ್ಬ ಗಣಪತಿಗೆ ಪತ್ರ (Letter) ಬರೆದಿದ್ದು, ಆ ಪತ್ರವೀಗ ವೈರಲ್ (Viral) ಆಗುತ್ತಿದೆ.

 ಇದನ್ನೂ ಓದಿ: Viral Letter: ಹ್ಯಾಪಿ ಬರ್ತ್‌ ಡೇ ಗಣಪ, ಪೊಲೀಸ್ ಕೆಲಸ ಕೊಡಿಸಪ್ಪ! ಹಬ್ಬದಂದು ಗಣೇಶನಿಗೆ ಪತ್ರ ಬರೆದ ಯುವಕ

ಸಖತ್ ಟ್ರೆಂಡ್​​ ಆಗಿದೆ ಯಶ್ ಹೇರ್​​ಸ್ಟೈಲ್​; ರಾಕಿ ಭಾಯ್ ಲುಕ್ ನಮಗೂ ಬೇಕು ಅಂತಿದ್ದಾರೆ ಫ್ಯಾನ್ಸ್​!

ಕೆಜಿಎಫ್ ಬಳಿಕ ಅವರ ಉದ್ದನೆಯ ಕೂದಲು ಹಾಗೂ ಗಡ್ಡ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. ಅಷ್ಟೆ ಅಲ್ಲದೇ ಕೆಜಿಎಫ್ ಚಿತ್ರದಲ್ಲಿ ಯಶ್ ಸ್ಟೈಲ್ ನನ್ನೇ ಅನೇಕರು ಫಾಲೋ ಮಾಡ್ತಿದ್ದಾರೆ. ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಯಶ್ ಅವರಂತೆ ಹೇರ್ ಸ್ಟೈಲ್ ಮಾಡಿಕೊಳ್ಳುವ ಟ್ರೆಂಡ್ ನನ್ನು ಹಲವರು ಫಾಲೋ ಮಾಡುತ್ತಿದ್ದಾರೆ.
Published by:Annappa Achari
First published: