Evening Digest : ಭಾರತ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಜಯ; ದೋಣಿ ದುರಂತಕ್ಕೆ 50 ಮಂದಿ ಬಲಿ: ಇಂದಿನ ಪ್ರಮುಖ ಸುದ್ದಿಗಳು

Kannada news Today : ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಭಾರತ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಜಯ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ದುರದೃಷ್ಟ ಕಾಡಿದಂತಿದೆ. ಮೊದಲ ಏಕದಿನ ಕ್ರಿಕೆಟ್ ಪಂದ್ಯ ಹೊರತುಪಡಿಸಿ ಪ್ರವಾಸದ ಉಳಿದ ಪಂದ್ಯಗಳಲ್ಲಿ ಭಾರತವೇ ಪಾರಮ್ಯ ಸಾಧಿಸಿದರೂ ಸರಣಿ ಅಂತಿಮವಾಗಿ ಆತಿಥೇಯ ಆಸ್ಟ್ರೇಲಿಯನ್ನರ ಪಾಲಾಗಿದೆ. ಇಂದು ನಡೆದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರು 4 ವಿಕೆಟ್​ಗಳಿಂದ ಭಾರತೀಯರನ್ನ ಸೋಲಿಸಿದರು. ಭಾರತದ 118 ರನ್​ಗಳ ಸ್ಕೋರಿಗೆ ಪ್ರತಿಯಾಗಿ ಆಸ್ಟ್ರೇಲಿಯಾ 5 ಎಸೆತ ಬಾಕಿ ಇರುವಂತೆ ಗೆಲುವಿನ ಗಡಿ ಮುಟ್ಟಿತು. ಟಾಹ್ಲಿಯಾ ಮೆಗ್​ಗ್ರಾತ್ ಅಜೇಯ 42 ರನ್ ಗಳಿಸಿ ಭಾರತದ ಸೋಲಿಗೆ ಪ್ರಮುಖ ಕಾರಣರಾದರು. ರಾಜೇಶ್ವರಿ ಗಾಯಕ್ವಾಡ್ ಅವರು 3 ವಿಕೆಟ್ ಸಾಧನೆ ಭಾರತಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ನದಿಯಲ್ಲಿ ದೋಣಿ ಮುಗುಚಿ 50 ಸಾವು

ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (Democratic Republic of the Congo -DRC)ದಲ್ಲಿ ದೋಣಿ ಮುಗುಚಿ 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 60 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ ಕಾಂಗೋ ನದಿಯಲ್ಲಿ ನಡೆದಿದ್ದು, ಇದುವರೆಗೂ 51 ಶವಗಳನ್ನು ಹೊರಗೆ ತೆಗೆಯಲಾಗಿದೆ. ಸ್ಥಳೀಯರು ಮತ್ತು ಪ್ರಯಾಣಿಕರ ಮಾಹಿತಿ ಮೇರೆಗೆ ಇನ್ನೂ 60 ಜನ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. 39 ಜನರು ಸುರಕ್ಷಿತವಾಗಿದ್ದು, ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಪ್ರಯಾಣಿಕರನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉತ್ತರ ಪಶ್ಚಿಮ ಪ್ರಾಂತ್ಯದ ಮಂಗೋಲಾ ಗವರ್ನರ್ ವಕ್ತಾರ ನೆಸ್ಟರ್ ಮೈಗ್ಬಾಡೋ ಹೇಳಿದ್ದಾರೆ.

ವಿಚಾರಣೆಗೆ ಕೊನೆಗೂ ಹಾಜರಾದ ಆಶಿಶ್ ಮಿಶ್ರಾ

ಕಳೆದ ಭಾನುವಾರ ಲಖೀಂಪುರ್​ ಖೇರಿಯಲ್ಲಿ (Lakhimpur Kheri Violence) ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಮಗ ಆಶೀಶ್ ಮಿಶ್ರಾ (Ashish Mishra) ರೈತ ಹೋರಾಟಗಾರರ ಮೇಲೆ ಕಾರು ಹರಿಸಿದ್ದರು. ಇದರಲ್ಲಿ 4 ಜನ ರೈತರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಂತರ ನಡೆದ ಹಿಂಸಾಚಾರದಲ್ಲಿ 5 ಜನ ಮೃತಪಟ್ಟಿದ್ದಾರೆ. ಘಟನೆ ನಡೆದ ನಂತರ ಸಚಿವರ ಪುತ್ರ ಆಶೀಶ್​ ಮಿಶ್ರಾ ನಾಪತ್ತೆಯಾಗಿದ್ದರು. ಅವರು ನೇಪಾಳ ದೇಶಕ್ಕೆ ಪಲಾಯನ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಈ ಘಟನೆಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ (Supreme Court) ಸೇರಿದಂತೆ ವಿವಿಧ ಕಡೆಗಳಿಂದ ಒತ್ತಡ ಹೆಚ್ಚಾದ ಕಾರಣ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ವಾರೆಂಟ್ ಸಹ ನೀಡಲಾಗಿತ್ತು. ಹೀಗಾಗಿ ಆಶೀಶ್ ಮಿಶ್ರಾ ಇಂದು ಉತ್ತರ ಪ್ರದೇಶ ಪೊಲೀಸರ ಅಪರಾಧ ವಿಭಾಗದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಯಡಿಯೂರಪ್ಪನ ಕಂಟ್ರೋಲ್​​ಗೆ ತೆಗೆದುಕೊಳ್ಳಲು ಯತ್ನ

ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಆಪ್ತ ಉಮೇಶ್​ ಅವರ ಮನೆ ಮೇಲೆ ಐಟಿ ದಾಳಿ(IT raid on bs yediyurappa’s pa umesh) ಸಂಬಂಧ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ (DK Shivakumar) ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಸದಾಶಿವನಗರದ ತಮ್ಮ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಮೃದುದೋರಣೆ ತೋರಿದಂತೆ ಕಾಣುತ್ತಿತ್ತು. ಆ ಮೂಲಕ ಬಿಜೆಪಿಗರಿಗೆ ಒಳಗುದ್ದು ನೀಡಿದರು. ಬಿಎಸ್ ವೈ ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಸಂಬಂಧ ಪಟ್ಟವರು ಹೇಳುವವರೆಗೆ ನಾನು‌ ಮಾತನಾಡಲ್ಲ. ಉಮೇಶ್, ಮಾಜಿ ಸಿಎಂ ಬಿಎಸ್ ವೈ ಆಪ್ತ ಸಹಾಯಕನಲ್ವಾ, ಅದನ್ನ ಅಲ್ಲಗಳೆಯಲು ಅಗೋದಿಲ್ವಲ್ಲ. ಇದರ ಹಿಂದೆ ಒಳರಾಜಕೀಯ ಇದ್ದೇ ಇದೆ. ಬಿಎಸ್​ವೈನ ಕಂಟ್ರೋಲ್​ಗೆ ತೆಗೆದುಕೊಳ್ಳಲು ಆಪ್ತನ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಬಿಜೆಪಿಯಿಂದಲೇ ಆಗಿದೆ ಎಂದು ಆರೋಪಿಸಿದರು.

ಸುದೀಪ್​ ಬಗ್ಗೆ ರಮ್ಯಾ ಮೆಚ್ಚುಗೆ

ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ (Sandalwood Actress Ramya) ಸದ್ಯದ ಸಿನಿಮಾರಂಗದಿಂದ ದೂರ ಉಳಿಸಿದ್ದಾರೆ. ರಾಜಕೀಯದಿಂದಲೂ ದೂರವಾಗಿರುವ ರಮ್ಯಾ ಸೋಷಿಯಲ್​ ಮೀಡಿಯಾದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮತ್ತು ಸಿನಿಮಾಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಭಿನಯ ಚಕ್ರವರ್ತಿ ಸುದೀಪ್ (Sudeep) ಅಭಿನಯದ ಕೋಟಿಗೊಬ್ಬ-3 (Kotigobba 3) ಬಗ್ಗೆ ರಮ್ಯಾ ತಮ್ಮ ಅಭಿಪ್ರಾಯವನ್ನು ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸುದೀಪ್ ಅವರನ್ನ ವಿಶೇಷ ಪಾತ್ರಕ್ಕೆ ಹೋಲಿಸಿ ರನ್ನನ ಗುಣಗಾನ ಮಾಡಿದ್ದಾರೆ.
Published by:Kavya V
First published: