• Home
 • »
 • News
 • »
 • state
 • »
 • Evening Digest: ವಿದ್ಯುತ್​ ದರ ಏರಿಕೆಯಿಂದ ದರ್ಶನ್​ ಕರೆಗೆ ಜನರ ಸ್ಪಂದನೆವರೆಗೂ ಓದಲೇಬೇಕಾದ ಈ ದಿನದ ಸುದ್ದಿ

Evening Digest: ವಿದ್ಯುತ್​ ದರ ಏರಿಕೆಯಿಂದ ದರ್ಶನ್​ ಕರೆಗೆ ಜನರ ಸ್ಪಂದನೆವರೆಗೂ ಓದಲೇಬೇಕಾದ ಈ ದಿನದ ಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ವಿದ್ಯುತ್​ ದರ ಏರಿಕೆ
  ಕೊರೋನಾ ಲಾಕ್​ಡೌನ್​ನಿಂದಾಗಿ ಒಂದೆಡೆ ಜನ ಆದಾಯ ಇಲ್ಲದೆ ಬಸವಳಿದಿದ್ದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಏರಿಕೆ ದೆಸೆಯಿಂದ ದಿನೋಪಯೋಗಿ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದ್ದು, ಸಾರ್ವಜನಿಕರು ಪ್ರತಿನಿತ್ಯ ಬದುಕುವುದೇ ದುಸ್ಥರವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಇಂದು ವಿದ್ಯುತ್​ ಬೆಲೆಯನ್ನು ಮತ್ತೆ ಏರಿಸುವ ಮೂಲಕ ಜನರಿಗೆ ಶಾಕ್ ನೀಡಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ನಡುವೆಯೇ ವಿದ್ಯುತ್​ ಬೆಲೆಯೂ ಇಂದು ದಾಖಲೆ ಬರೆದಿದ್ದು, ರಾಜ್ಯ ಸರ್ಕಾರ ಯೂನಿಟ್ ಗೆ 30 ಪೈಸೆ ಹೆಚ್ಚಳ‌ ಮಾಡಿ ಆದೇಶಿಸಿದೆ. ಕೆಪಿಟಿಸಿಎಲ್- ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನೂತನ ದರ ಎಪ್ರಿಲ್.1 2021 ರಿಂದಲೇ ಜಾರಿಯಾಗಲಿದೆ ಎನ್ನಲಾಗುತ್ತಿದೆ.


  ಜೂನ್​​ 14ರ ಬಳಿಕ ಅನ್​ಲಾಕ್​
  ಕರ್ನಾಟಕದ ಅದರಲ್ಲೂ ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಮಾಣವು ಅಧಿಕವಾಗುತ್ತಿದ್ದ ಕಾರಣ ಸರ್ಕಾರ ಜೂನ್​. 14ರ ವರೆಗೆ ಲಾಕ್​ಡೌನ್​ ಹೇರಿತ್ತು. ಆದರೆ, ಇದೀಗ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಲೇ ಇದೆ. ಪಾಸಿಟೀವ್ ಪ್ರಕರಣಗಳ ಸಂಖ್ಯೆ ಸದ್ಯಕ್ಕೆ ಶೇ.7ಕ್ಕಿಂತ ಕಡಿಮೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಜೂನ್ 14ರ ನಂತರ ರಾಜ್ಯ ಸರ್ಕಾರ ಕರ್ನಾಟಕ ದಲ್ಲಿ ಅನ್​ಲಾಕ್​ ಪ್ರಕ್ರಿಯೆಗಳನ್ನು ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗು ತ್ತಿತ್ತು. ಈ ನಡುವೆ ಅನ್​ಲಾಕ್​ ಬಗ್ಗೆ ಇಂದು ಮಹತ್ವದ ಸುಳಿವು ನೀಡಿರುವ ಕಂದಾಯ ಸಚಿವ ಆರ್​. ಅಶೋಕ್, "COVID-19 ಪ್ರೇರಿತ ಲಾಕ್‌ಡೌನ್ ಅಂತ್ಯಗೊಳ್ಳುವು ದರಿಂದ ಜೂನ್ 14 ರ ನಂತರ ರಾಜ್ಯದಲ್ಲಿ ನಾಲ್ಕರಿಂದ ಐದು ಹಂತಗಳಲ್ಲಿ ಅನ್ಲಾಕ್ ಮಾಡುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.


  ಐಪಿಎಸ್​ ಅಧಿಕಾರಿಗಳ ವರ್ಗಾವಣೆ
  ಕೋವಿಡ್​ ನಿಯಂತ್ರಣದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ನಡೆಸಿದೆ. ರಾಜ್ಯದ 12 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಆದೇಶ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್​ಪಿ ರವಿ ಚೆನ್ನಣ್ಣನವರ್​ ಸೇರಿದಂತೆ ಅನೇಕ ಜಿಲ್ಲಾ ಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ. ಇದೇ ವೇಳೆ ಮೈಸೂರು ಜಿಲ್ಲಾ ನೂತನ ಎಸ್​ಪಿಯಾಗಿ ಆರ್​ ಚೇತನ್​ ಅವರನ್ನು ವರ್ಗಾಯಿಸಲಾಗಿದೆ.


  ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಜಿತಿನ್​ ಪ್ರಸಾದ್​​
  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೇನು ವರ್ಷ ಬಾಕಿ ಇರುವ ಮುನ್ನವೇ ಕಾಂಗ್ರೆಸ್​ಗೆ ಹಿನ್ನಡೆಯುಂಟಾಗಿದೆ. ರಾಹುಲ್​ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಜಿತಿನ್​ ಪ್ರಸಾದ್​ ಇಂದು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೂಲಕ ಕೈ ನಾಯಕರಿಗೆ ಶಾಕ್​ ನೀಡಿದ್ದಾರೆ. ಕಾಂಗ್ರೆಸ್​ ಪಕ್ಷದ ವರ್ತನೆಯಿಂದ ಈಗಾಗಲೇ ಬೇಸತ್ತಿದ್ದ ಜಿತಿನ್​ ಇಂದು ಅಧಿಕೃತವಾಗಿ ಕಮಲ ಪಾಳೆಯ ಸೇರಿದ್ದಾರೆ. ಕಾಂಗ್ರೆಸ್​ನ ಜಿ-23 ಭಿನ್ನಮತೀಯರ ಗುಂಪಿನಲ್ಲಿ ಜಿತಿನ್ ಪ್ರಸಾದ್​ ಕೂಡ​ ಗುರುತಿಸಿ ಕೊಂಡಿದ್ದರು, ಇಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಜಿತಿನ್​ ಬಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡನೆಗೊಂಡರು


  ವಿನೂತನ ಪ್ರತಿಭಟನೆಗೆ ಕಾಂಗ್ರೆಸ್​ ಸಜ್ಜು


  ಕೊರೋನಾ ಲಾಕ್​ಡೌನ್​ ನಡುವೆಯೂ ಪೆಟ್ರೋಲ್​ ಬೆಲೆ ಏರಿಕೆ ಕಾಣುತ್ತಲೇ ಇದೆ. ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್​ ಬೆಲೆ ಶತಕ ಬಾರಿಸಿದ್ದು, ಜನರನ್ನು ಕಂಗೆಡಿಸಿದೆ. ಇಂಧನದ ಬೆಲೆ ಈ ರೀತಿ ಏರಿಕೆ ಕಾಣುತ್ತಿರುವುದು ಮಧ್ಯಮ ವರ್ಗದ ಜನರನ್ನು ಇನ್ನಷ್ಟು ಕಂಗೆಡಿಸಿದೆ. ಇದೇ ಹಿನ್ನಲೆ ಪೆಟ್ರೋಲ್​ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ರಾಜ್ಯದ ಸುಮಾರು 5 ಸಾವಿರ ಪೆಟ್ರೋಲ್​ ಬಂಕ್​ನಲ್ಲಿ ಕಾಂಗ್ರೆಸ್​ ವಿನೂತನ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, 100 ನಾಟೌಟ್​ ಶೀರ್ಷಿಕೆಯಡಿ ಜೂ.11ರಿಂದ ಜೂ.15ರವರೆಗೆ ವಿನೂತನ ಪ್ರತಿಭಟನೆ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿಸಿದರು.


  ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ತಿರುಗೇಟು
  ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ರೋಹಿಣಿ ಸಿಂಧೂರಿಯನ್ನು ಸಮರ್ಥನೆ ಮಾಡಿಕೊಂಡಿದ್ದ ಸಂಸದ ಪ್ರತಾಪ್ ಸಿಂಹ ಈಗ ಶಿಲ್ಪಾ ನಾಗ್ ಪರವಾಗಿ ನಿಂತಿದ್ದಾರೆ. ಇಬ್ಬರೂ ಅಧಿಕಾರಿಗಳನ್ನು ಎತ್ತಿ ಕಟ್ಟಿ ಜಗಳ ತಂದಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಿಖಾ ವರ್ಗಾವಣೆ ವಿಚಾರವನ್ನು ಪ್ರಸ್ತಾಪಿಸಿ ತೆಲುಗು ಮಿಶ್ರಿತ ಕನ್ನಡದಲ್ಲಿ ತಿರುಗೇಟು ನೀಡಿದ್ದಾರೆ.


  ದರ್ಶನ್​ ಮನವಿಗೆ ಸ್ಪಂದನೆ
  ರಾಜ್ಯದ ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವಂತೆ ಹಾಗೂ ಆರ್ಥಿಕ ನೆರವು ನೀಡುವಂತೆ ಇತ್ತೀಚಿಗೆ ನಟ ದರ್ಶನ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕೇ ದಿನದಲ್ಲಿ 1.45 ಲಕ್ಷ ರೂಪಾಯಿ ನೆರವು ಹರಿದು ಬಂದಿದೆ. ಇದು ಸಂಗ್ರಹಾಲಯಕ್ಕೆ ಸಾಕಷ್ಟು ಅನಕೂಲವಾಗಿದೆ. ಇನ್ನೂ ಅನೇಕ ದಾನಿಗಳು ಆ್ಯಪ್ ಮೂಲಕ ನೇರವಾಗಿ ಹಣ ಹಾಕುತ್ತಿದ್ದಾರೆ. ಜತೆಗೆ ಎರಡು ಹುಲಿ ಹಾಗೂ ಒಂದು ಸಿಂಹವನ್ನು ದಾನಿಗಳು ಈಗಾಗಲೇ ದತ್ತು ಪಡೆದಿದ್ದು, ಒಂದು ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುತ್ತಿದ್ದಾರೆ. ಪ್ರಾಣಿಗಳು ಉಪಯೋಗ ಆಗುವ ಉತ್ತಮ ಸಂದೇಶ ರವಾನೆ ಮಾಡಿದ ನಟ ದರ್ಶನಗೆ ಸಂಗ್ರಹಾಲಯದ ಸಿಬ್ಬಂಧಿ ಧನ್ಯವಾದ ಹೇಳಿದ್ದಾರೆ

  Published by:Seema R
  First published: