ಪೂಜೆ ವೇಳೆ ಆಯ ತಪ್ಪಿದ ಡಿಕೆಶಿ: ಇಂದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದು, ಇದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗ್ಗೆ ನಡುಗುವ ಚಳಿಯಲ್ಲಿ ಕಾವೇರಿ ನದಿಗೆ ಇಳಿದು ಸ್ನಾನ ಮಾಡಿದ್ದರು. ಕನಕಪುರ ತಾಲೂಕಿನ ಸಂಗಮದ ದಡದಿಂದ ತೆಪ್ಪದಲ್ಲಿ ಡಿ.ಕೆ.ಶಿವಕುಮಾರ್ ನದಿಯ ಮಧ್ಯ ಭಾಗಕ್ಕೆ ಅರ್ಚಕರ ಜೊತೆ ತೆರಳಿದ್ದರು. ನದಿಯ ಮಧ್ಯ ಭಾಗದಲ್ಲಿರುವ ಕಲ್ಲು ಬಂಡೆಯ ಮೇಲೆ ಇಳಿದ ಡಿ.ಕೆ.ಶಿವಕುಮಾರ್ ಪುಣ್ಯ ಸ್ನಾನ ಮಾಡಿದರು. ನಂತರ ಕಲ್ಲು ಬಂಡೆಯ ಮೇಲೆ ಕುಳಿತು ಕಾವೇರಿ ತಾಯಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಕಲ್ಲು ಬಂಡೆ ಮೇಲೆ ಕುಳಿತು ಕೊಳ್ಳುವಾಗ ಆಯ ತಪ್ಪಿದರು. ಕೂಡಲೇ ಸುಧಾರಿಸಿಕೊಂಡ ಡಿ.ಕೆ,ಶಿವಕುಮಾರ್, ಕಾವೇರಿ ತಾಯಿಗೆ ಪುಷ್ಪಾರ್ಚನೆ ಮಾಡಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೂರ್ತಿ ಓದಿಗಾಗಿ:ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar
ಪಾದಯಾತ್ರೆ ಅರ್ಧದಲ್ಲೇ ಸುಸ್ತಾದ ಸಿದ್ದರಾಮಯ್ಯ..
ಕೊರೊನಾ ವೈರಸ್ (Corona Virus), ವೀಕೆಂಡ್ ಕರ್ಫ್ಯೂ (Weekend Curfew) ನಡುವೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ (Congress Mekedatu padayatra) ಚಾಲನೆ ನೀಡಿದೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಡೋಲು ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಮೇಕೆದಾಟು (Mekedatu) ಯೋಜನೆ ಜಾರಿಗಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದಾರೆ. ಚಿತ್ರರಂಗದ ಹಲವರು ಕೂಡ ಭಾಗಿಯಾಗಿದ್ದರು. ನಾಲ್ಕು ಕಿ.ಮೀ ಈ ಪಾದಯಾತ್ರೆ ಸಾಗಿತ್ತು. ಮೇಕೆದಾಟು ಪಾದಯಾತ್ರೆಯ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ಕಿ.ಮೀ. ನಡೆದು ಸುಸ್ತಾ(Siddaramaiah gets Tired )ಗಿದ್ದಾರೆ.ಜೊತೆಗೆ ಅವರಿಗೆ ಮಂಡಿ ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. 73 ವರ್ಷ ವಯಸ್ಸಿನ ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನೇತೃತ್ವ ವಹಿಸಿದ್ದರು. ಜವರಿ 18ರವರೆಗೆ ಈ ಪಾದಯಾತ್ರೆ ನಡೆಯಲಿದೆ.
ಪತ್ನಿಯರನ್ನು ಹಂಚಿಕೊಳ್ಳುತ್ತಿದ್ದ ಜಾಲ ಬಯಲು
ವೈಫ್ ಸ್ವ್ಯಾಪಿಂಗ್ ಅಥವಾ ಸೆಕ್ಸ್ ಗಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ದೊಡ್ಡ ಜಾಲವೊಂದು ಬಯಲಾಗಿದೆ. ಈ ಸಂಬಂಧ ಕೇರಳದ ಕೊಟ್ಟಾಯಂನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಕೊಟ್ಟಾಯಂ ಜಿಲ್ಲೆಯ ವೈಫ್ ಸ್ವ್ಯಾಪಿಂಗ್ ಗ್ಯಾಂಗ್ ನ 6 ಸದಸ್ಯರನ್ನು ಕರುಕಾಚಲ ಪೊಲೀಸರು ಬಂಧಿಸಿದ್ದಾರೆ. ಚಂಗನಾಶ್ಶೇರಿ ಮೂಲದ ಮಹಿಳೆಯೊಬ್ಬರ ದೂರಿನ ಮೇರೆಗೆ ತನಿಖೆ ನಡೆಸಿದಾಗ ಅನಾಚಾರ ಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಕರುಕಾಚಲ ಪೊಲೀಸರು ತಿಳಿಸಿದ್ದಾರೆ. ಶಂಕಿತರು ಅಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳವರು ಎಂದು ತಿಳಿದು ಬಂದಿದೆ.
ಪೂರ್ತಿ ಓದಿಗಾಗಿ:ಸೋಷಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ Wife Swapping: ಪತ್ನಿಯರನ್ನು ಹಂಚಿಕೊಳ್ಳುತ್ತಿದ್ದ ದೊಡ್ಡ ಜಾಲ ಪತ್ತೆ
ಸಚಿವ ST Somashekhar ಮಗನಿಗೆ ನಕಲಿ ವಿಡಿಯೋ ತೋರಿಸಿ Blackmail
ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ಅವರ ಪುತ್ರ ನಿಶಾಂತ್ ಗೆ ನಕಲಿ ವಿಡಿಯೋ ತೋರಿಸಿ ಬ್ಲಾಕ್ ಮೇಲ್ (Video Blackmail) ಮಾಡಿರುವ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಸಚಿವರ ಪುತ್ರ ನಿಶಾಂತ್ ಆಡುಗೋಡಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ (Cyber Crime Police Station) ಠಾಣೆಗೆ ತೆರಳಿ ಅಪರಿಚತರ ವಿರುದ್ಧ ದೂರು ದಾಖಲಿಸಿದ್ದಾರೆ. ನಾನು ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಕೆಲಸವನ್ನು ಮಾಡುತ್ತಾ ಬಂದಿರುತ್ತೇನೆ. ನನ್ನ & ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದೆ ಕೃತ್ಯ ಮಾಡಲಾಗಿದೆ ಎಂದು ನಿಶಾಂತ್ ಆರೋಪಿಸಿದ್ದಾರೆ.
ಪೂರ್ತಿ ಓದಿಗಾಗಿ:ಸಚಿವ ST Somashekhar ಮಗನಿಗೆ ನಕಲಿ ವಿಡಿಯೋ ತೋರಿಸಿ Blackmail: ಖ್ಯಾತ ಜ್ಯೋತಿಷಿ ಪುತ್ರನ ಬಂಧನ
ಮಾಂತ್ರಿಕರ ಮಾತು ಕೇಳಿ ನಿಧಿಗಾಗಿ ಮನೆಯನ್ನೆಲ್ಲಾ ಅಗೆದ ಯುವಕ
ಕಟ್ಟಡ ಕಾರ್ಮಿಕನಾಗಿದ್ದ (Labor) ಆತ ಹೇಗೋ ದುಡಿದು ತಿನ್ನುತ್ತಾ ಬದುಕು (Life) ದೂಡುವುದರ ಜೊತೆಗೆ ಮನೆ ನಿಭಾಯಿಸುತ್ತಿದ್ದ. ಆದರೆ ಆದ್ಯಾರು ಸಂಪತ್ತಿನ ಆಸೆಯನ್ನು (Treasure Hunt) ಅವನ ತಲೆಗೆ ತುಂಬಿದರೋ ಗೊತ್ತಿಲ್ಲ. ತನ್ನ ಮನೆಯನ್ನೇ ಅಗೆಸಲು ಆರಂಭಿಸಿ ಇದೀಗ ಪೊಲೀಸರ (POLICE) ಅತಿಥಿಯಾಗಿದ್ದಾನೆ. ಇಂತಹ ವಿಚಿತ್ರ ಘಟನೆ ನಡೆದಿರೋದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳಮಾಳ ಕೋಟೆ ಪೈಸಾರಿಯಲ್ಲಿ. ಹೊಳಮಾಳ ಕೋಟೆ ಪೈಸಾರಿಯ 23 ವರ್ಷದ ಯುವಕ ಗಣೇಶ್ ಎಂಬಾತ ನಿಧಿ ಆಸೆಗಾಗಿ ತನ್ನ ಮನೆಯನ್ನು ನಿಗೂಢವಾಗಿ ಅಗೆಸಲು ಆರಂಭಿಸಿದ್ದ. ಮನೆಯಲ್ಲಿ ನಿಧಿ ಇದೆ ಎಂದು ಹೇಳಿದ್ದ ಕೇರಳದ ಮಾಂತ್ರಿಕರ ಮಾತು ಕೇಳಿದ್ದ ಗಣೇಶ್ ನಿಧಿ ಆಸೆಗಾಗಿ ತನ್ನ ಮನೆಯನ್ನೇ ಅಗೆಸಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ