Evening Digest: ಕಾಪ್ಟರ್ ದುರಂತದಲ್ಲಿ ಬದುಕುಳಿದ ಪೈಲೆಟ್ ಬೆಂಗಳೂರಿಗೆ; ಸಂತಸದಲ್ಲಿ ಯಶ್-ರಾಧಿಕಾ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಕಾಪ್ಟರ್​​ ದುರಂತದಲ್ಲಿ ಬದುಕುಳಿದ ಪೈಲೆಟ್​ ಬೆಂಗಳೂರಿಗೆ : ನಿನ್ನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕನೂರಿನಲ್ಲಿ ಭಾರತೀಯ ವಾಯುಪಡೆಯ ಎಂಐ-17ವಿ5 (IAF Mi-17V5) ಹೆಲಿಕಾಪ್ಟರ್​ ಪತನಗೊಂಡು, ಸೇನಾ ಪಡೆಗಳ ಮುಖ್ಯಸ್ಥ (CDS) ಬಿಪಿನ್​ ರಾವತ್​ (Defence Staff General Bipin Rawat) ಸೇರಿದಂತೆ 13 ಮಂದಿ ಅಸುನೀಗಿದ್ದರು. ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ 14 ಮಂದಿಯಲ್ಲಿ ಗ್ರೂಪ್​ ಕ್ಯಾಪ್ಟನ್​​ ವರುಣ್​ ಸಿಂಗ್​ (Group Captain Varun Singh) ಒಬ್ಬರೇ ಬದುಕುಳಿದಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವರುಣ್​ ಸಿಂಗ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್​ ಮಾಡಲಾಗಿದೆ. ಸೂಲೂರು ಏರ್‌ಬೇಸ್‌‌‌‌ನಿಂದ ವಿಶೇಷ ಏರ್‌ ಆಂಬುಲೆನ್ಸ್ ಮೂಲಕ HAL ವಿಮಾನ ನಿಲ್ದಾಣಕ್ಕೆ ತರಲಾಯಿತು. HAL ವಿಮಾನ ನಿಲ್ದಾದಿಂದ ಕಮ್ಯಾಂಡೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದೇಹದ ಬಹುತೇಕ ಭಾಗ ಸುಟ್ಟು ಹೋಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ವರುಣ್​ ಸಿಂಗ್​ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಮೊಟ್ಟೆ ವಿತರಣೆ ಬಗ್ಗೆ ಪೇಜಾವರ ಶ್ರೀ ಸಲಹೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ (Egg) ನೀಡಲು ಮುಂದಾಗಿರುವ ಬಿಜೆಪಿ ಸರ್ಕಾರ (BJP Govt ) ರಾಜ್ಯದ ಮಠಾಧೀಶರುಗಳ ಕೋಪಕ್ಕೆ ತುತ್ತಾಗಿದೆ. ಶಾಲೆಯಲ್ಲಿ ಮೊಟ್ಟೆ ನೀಡುವುದಕ್ಕೆ ಇಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು (sri vishwaprasanna tirtha swamiji) ವಿರೋಧ ವ್ಯಕ್ತಪಡಿಸಿದರು. ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಶಾಲೆ ಮಕ್ಕಳಿಗೆ ತಿಳುವಳಿಕೆ ಇರುವುದಿಲ್ಲ. ತಮ್ಮ ಪರಂಪರೆಯಿಂದ ಬಂದ ಆಹಾರ ಕ್ರಮವನ್ನು ಬದಲಿಸಬಾರದು. ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ. ಸರ್ಕಾರ ಮಕ್ಕಳ ಮಧ್ಯೆ ಮತಬೇಧ ಉಂಟು ಮಾಡಬಾರದು. ಯಾರು ಏನು ಸೇವಿಸುತ್ತಾರೋ ಅದರ ಖರ್ಚುನ್ನು ಸರ್ಕಾರ ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕೋಸರ, ಹೀಗಾಗಿ ಅಲ್ಲಿ ಜೀವನಶೈಲಿಯನ್ನು ಬದಲಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಟೀಕಿಸಿದ ಮೂಲಕ ಸಲಹೆಯನ್ನೂ ಪೇಜಾವರ ಶ್ರೀಗಳು ನೀಡಿದರು.

ಬೆಂಗಳೂರಿನ ಅಪಾರ್ಟ್​​ಮೆಂಟ್​ ನಿವಾಸಿಗಳೇ ಹುಷಾರ್​..

ಅಪಾರ್ಟ್​​ ಮೆಂಟ್​​ ನ ಸೆಕ್ಯೂರಿಟಿ ಗಾರ್ಡೇ ಪ್ಲಾಟ್​​ ಗಳಿಗೆ ಕನ್ನ ಹಾಕಿರುವ ಅಘಾತಕಾರಿ ಘಟನೆ ಬಯಲಾಗಿದೆ. ಸೆಕ್ಯೂರಿಟಿ ಗಾರ್ಡ್​​ ಜೊತೆಗೆ ಬಾಂಬೆ ಗ್ಯಾಂಗ್​ ನ ಅಪರಾಧ ಪ್ರಕರಣಗಳು ಬಯಲಾಗಿದೆ. ಯಾರು ಇಲ್ಲದ ಫ್ಲಾಟ್ ಗಳನ್ನೇ ಗುರುತು ಮಾಡಿಕೊಂಡು ಸೆಕ್ಯೂರಿಟಿ ಗಾರ್ಡ್​ ಹಾಗೂ ಆತನ ಬಾಂಬೆ ಗ್ಯಾಂಗ್​ ಕಳ್ಳತನ ಮಾಡುತ್ತಿದ್ದರು. ಬೆಂಗಳೂರಿನ ಹೆಣ್ಣೂರು ಸುತ್ತಮುತ್ತ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಈಗ ಸಿಕ್ಕಿಬಿದ್ದಿದೆ. ಅಪಾರ್ಟ್​​ ಮೆಂಟ್​ ನ ಸೆಕ್ಯೂರಿಟಿ ಗಾರ್ಡ್​ ಆಗಿದ್ದ ಕರಣ್ ಬಿಸ್ವಾ, ಯಾವ ಪ್ಲಾಟ್​ ನ ನಿವಾಸಿಗಳು ಯಾವ ಸಮಯದಲ್ಲಿ ಮನೆಯಲ್ಲಿರೋದಿಲ್ಲ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದ. ಈ ಬಗ್ಗೆ ಬಾಂಬೆ ಗ್ಯಾಂಗ್​ ಗೆ ಮಾಹಿತಿ ಕೊಡುತ್ತಿದ್ದ.  ಕರಣ್ ಬಿಸ್ವಾ ಮಾಹಿತಿ ಮೇರೆಗೆ ಮುಂಬೈನಿಂದ ಹಿಕಮತ್ ಶಾಹಿ , ರಾಜು ಬಿ ಕೆ ಅಲಿಯಾಸ್​​ ಚಾಮ್ಡಿ, ಜೀವನ್ ಹಾಗೂ ಗೋರಕ್ ಕಾಲು ಎಂಬ ಖದೀಮರು ಫೀಲ್ಡಿಗಿಳಿದು ಪ್ಲಾಟ್ ಗಳನ್ನು ದೋಚುತ್ತಿದ್ದರು. ಬಾಂಬೆಯಿಂದ ಬಂದು ಕಳ್ಳತನ ಮಾಡಿ ಎಸ್ಕೇಪ್​ ಆಗುತ್ತಿದ್ದರು. ಪ್ರಮುಖ ಆರೋಪಿ ಕರಣ್ ಬಿಸ್ವಾ ಎಂದಿನಂತೆ ಯಾರಿಗೂ ಅನುಮಾನ ಬರದಂತೆ ಕೆಲಸ ಮಾಡಿಕೊಂಡು ಇರುತ್ತಿದ್ದ.

57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ

ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ (Boris Johnson) ತಂದೆಯಾದ ಖುಷಿಯಲ್ಲಿದ್ದಾರೆ. ಅವರ ಹೆಂಡತಿ ಕ್ಯಾರಿ ಜಾನ್ಸನ್​ (Carrie Johnson) ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು, ತಾಯಿ ಆರೋಗ್ಯವಾಗಿದ್ದಾರೆ ಎಂದು ಲಂಡನ್​ ಮೂಲದ ಪತ್ರಿಕೆ ವರದಿ ಮಾಡಿದೆ. ಬೋರಿಸ್​ ಜಾನ್ಸನ್​ಗೆ ಮತ್ತು ಕ್ಯಾರಿ ಜಾನ್ಸನ್​ ಅವರ ಎರಡನೇ ಮಗು ಇದಾಗಿದೆ. ಇನ್ನು ಬೋರಿಸ್​ ಜಾನ್ಸನ್​ ಅವರ ಏಳನೇ ಮಗು ಇದಾಗಿದೆ. ಕ್ಯಾರಿ ಮತ್ತು ಬೋರಿಸ್ ದಂಪತಿ 2020ರ ಏಪ್ರಿಲ್​ನಲ್ಲಿ​ ವಿಲ್ಫ್ರೆಡ್​ ಜಾನ್ಸನ್ ಎಂಬ ಗಂಡು ಮಗುವಿನ ಆಗಮನ ಮಾಡಿದ್ದರು. ಕ್ಯಾರಿ ಜಾನ್ಸನ್ ಅವರು 2021ರ ಆರಂಭದಲ್ಲಿ ಗರ್ಭಪಾತವಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದರು. ಇದಾದ ಬಳಿಕ ಅವರು ಇಂದು ಆರೋಗ್ಯಯುತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ರಾಕಿಂಗ್​ ದಂಪತಿಗೆ 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮ

ಸ್ಯಾಂಡಲ್​ವುಡ್​(Sandalwood)ನ ಲವ್ಲಿ ಕಪಲ್(Lovely Couple)​ ಅಂದರೆ ಅದರು ನಮ್ಮ ರಾಕಿಂಗ್​ ಸ್ಟಾರ್​ ಯಶ್(Rocking Star Yash)​ ಹಾಗೂ ರಾಧಿಕಾ ಪಂಡಿತ್(Radhika Pandith)​. ಇಂದು ಚಂದನವನದ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ 5ನೇ ವರ್ಷದ ಮದುವೆ ವಾರ್ಷಿಕೋತ್ಸವ(Marriage Anniversary) ಸಂಭ್ರಮದಲ್ಲಿದ್ದಾರೆ.  ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ರಾಧಿಕಾ ಅವರು ಇನ್‍ಸ್ಟಾಗ್ರಾಮ್ ನಲ್ಲಿ ಬ್ಯೂ ಟ್ಯಾಪ್ಲಿನ್(ಬ್ಯೂ ಟ್ಯಾಪ್ಲಿನ್) ಬರೆದ ಸಾಲುಗಳನ್ನು ಬರೆದು , ಯಶ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸಾಲಿನಲ್ಲಿ, ‘ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಮತ್ತೆ ತಳ್ಳುವವರು, ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿ ಇದ್ದರೆ, ನೀವು ಧೈರ್ಯಶಾಲಿ, ಸುಸಜ್ಜಿತ ಸಂತೋಷದ ವ್ಯಕ್ತಿಯಾಗಲು ಸಹಾಯ ಮಾಡುತ್ತೆ. ಅಂತಹ ಸಂಬಂಧ ಪವಿತ್ರವಾದದ್ದು, ಅಂತಹ ಪ್ರೀತಿಯನ್ನು ನೀವು ಹಿಡಿದುಕೊಳ್ಳಿ’ ಎಂದು ಬರೆದು ಯಶ್‍ಗೆ ಮದುವೆ ವಾರ್ಷಿಕೋತ್ಸವದ ವಿಶ್(Wish) ಮಾಡಿದ್ದಾರೆ. ರಾಕಿಂಗ್ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಶ್​ ಮಾಡುತ್ತಿದ್ದಾರೆ.
Published by:Kavya V
First published: