Evening Digest: ಅಪ್ಪನೇ 'ಕಿಂಗ್​ಮೇಕರ್' ಎಂದ ಲಾಲೂ ಪುತ್ರಿ, ಸಿದ್ದು ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ; ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಬಿಹಾರದಲ್ಲಿ ರಾಜಕೀಯದಲ್ಲಿ ಕೋಲಾಹಲ

ಪಾಟ್ನಾ(ಆ.09):  ಬಿಹಾರದಲ್ಲಿ ಎನ್‌ಡಿಎ (NDA) ಮೈತ್ರಿಕೂಟದ ವಿಘಟನೆ ಮತ್ತು ಹೊಸ ಬೆಳವಣಿಗೆಗಳ ನಡುವೆ ಮಹಾಮೈತ್ರಿಕೂಟ ಸರ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದೇ ವೇಳೆ ಲಾಲು ಯಾದವ್  (Lalu Prasad yadav) ಪುತ್ರಿ ರೋಹಿಣಿ ಆಚಾರ್ಯ (Rohini Acharya) ಟ್ವೀಟ್ ಮಾಡಿ ತನ್ನ ತಂದೆಯನ್ನು ಕಿಂಗ್ ಮೇಕರ್ ಎಂದು ಬಣ್ಣಿಸಿದ್ದಾರೆ. ರೋಹಿಣಿ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ, 'ಆಕಾಶಕ್ಕಿಂತಲೂ ಹೆತ್ತರ ಅವರ ನಂಬಿಕೆ, ಜನಸಾಮಾನ್ಯರೇ ದೇವರೆಂಬ ನಂಬಿಕೆ ಅವರದ್ದು' ಎಂದು ಬರೆದಿದ್ದಾರೆ. ಇದರೊಂದಿಗೆ ಲಾಲು ಪ್ರಸಾದ್ ಯಾದವ್ ಅವರ ಫೋಟೋ ಹಾಕಿದ್ದು, ಅದರ ಮೇಲೆ ಕಿಂಗ್ ಮೇಕರ್ ಎಂದು ಬರೆದಿದ್ದಾರೆ. ಮಧ್ಯಾಹ್ನ 2:41 ಕ್ಕೆ ಮಾಡಿದ ಈ ಟ್ವೀಟ್ ಸುದ್ದಿ ಭಾರೀ ಲೈಕ್ಸ್​ ಪಡೆದಿದೆ, ಅದನ್ನು 160 ಜನರು ರಿಟ್ವೀಟ್ ಮಾಡಿದ್ದಾರೆ.

ಬಿಹಾರದಲ್ಲಿ ರಾಜಕೀಯದಲ್ಲಿ ಕೋಲಾಹಲ

ಪಾಟ್ನಾ: ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮಂಗಳವಾರ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 160 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ನಿತೀಶ್ ಕುಮಾರ್ (Nitish Kumar) ಸಲ್ಲಿಸಿದ್ದಾರೆ. ಎಂಟು ವರ್ಷಗಳಲ್ಲಿ ಮಿತ್ರ ಪಕ್ಷವಾದ ಬಿಜೆಪಿಯೊಂದಿಗೆ (BJP) ಕುಮಾರ್ ಅವರು ಎರಡನೇ ಬಾರಿಗೆ ಬೇರ್ಪಟ್ಟಿದ್ದಾರೆ. ಜೆಡಿಯು ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ಎನ್​ಡಿಎ ಮೈತ್ರಿಕೂಟ ತೊರೆಯಲು ಒಮ್ಮತದ ನಿರ್ಧಾರ ಕೈಗೊಂಡಿದೆ. ಜೆಡಿಯು ಶಾಸಕರ ಜೊತೆ ಸಭೆ ನಡೆಸಿಯೇ ಅವರು ಈ ನಿರ್ಧಾರ ಕೈಗೊಂಡಿದ್ದು, ಪಕ್ಷದ ಎಲ್ಲ ಶಾಸಕರು, ಪದಾಧಿಕಾರಿಗಳು ನಿತೀಶ್ ಕುಮಾರ್ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ: Bihar Politics: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ; ಬಿಹಾರದ ಮುಂದಿನ ಸಿಎಂ ಯಾರು?

ಮೊಹರಂ ಮಹತ್ವ ಸಾರಿದ ಪ್ರಧಾನಿ ಮೋದಿ

ದೆಹಲಿ: ಪ್ರಪಂಚದಾದ್ಯಂತದ ಮುಸ್ಲಿಂ ಸಮುದಾಯ ಇಂದು ಆಚರಿಸುತ್ತಿರುವ ಮೊಹರಂ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶುಭ ಕೋರಿದ್ದಾರೆ.  ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಜರತ್ ಇಮಾಮ್ ಹುಸೇನ್ ಅವರು (Hazrat Imam Hussain ) ಸಮಾನತೆ ಮತ್ತು ಸಹೋದರತ್ವಕ್ಕೆ (Brotherhood) ನೀಡಿದ ಮಹಾನ್ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. 7 ನೇ ಶತಮಾನದ ಕ್ರಾಂತಿಕಾರಿ ನಾಯಕ ಮತ್ತು ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಸತ್ಯಕ್ಕಾಗಿ ಅವರ ಅಚಲ ಬದ್ಧತೆ ಮತ್ತು ಅನ್ಯಾಯದ ವಿರುದ್ಧದ ಹೋರಾಟವನ್ನು ನೆನಪಿಸಿಕೊಳ್ಳುವ ದಿನ ಮೊಹರಂ (Muharram) ಎಂದು ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಮೂಲ ಕಾಂಗ್ರೆಸ್ ನಾಯಕರನ್ನ ನುಂಗುತ್ತಿರೋ ಸಿದ್ದರಾಮಯ್ಯ

ರಾಜ್ಯ ರಾಜಕಾರಣದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ (Former CM Siddaramaiah)  ಮತ್ತು ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಬದ್ಧ ವೈರಿಗಳು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಇಬ್ಬರ ನಡುವೆ ಮತ್ತೆ ವಾಕ್ಸಮರ ಏರ್ಪಟ್ಟಿದೆ. ಸಿದ್ದರಾಮಯ್ಯ ಅವರಿಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ Janata Dal Secular ಬಗ್ಗೆ ವಿಷ ಕಾರಿಕೊಂಡಿದ್ದಾರೆ. ಜೆಡಿಎಸ್ ಪಕ್ಷ (JDS) ಸ್ವಾತಂತ್ರ್ಯ ಹೋರಾಟಕ್ಕೆ (Freedom Fight) ನೀಡಿದ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದ್ದು ಇರಲಿ, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು? ವಿಕಿಪೀಡಿಯಾ (Wikipedia) ಪ್ರಕಾರ ನಿಮ್ಮ ಜನ್ಮವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Siddaramaiah: ಮೂಲ ಕಾಂಗ್ರೆಸ್ ನಾಯಕರನ್ನ ನುಂಗುತ್ತಿರೋ ಸಿದ್ದರಾಮಯ್ಯನವರೇ ಲೆಕ್ಕ ಹೇಳಬೇಕಾ? HDK ಪ್ರಶ್ನೆ

OTTಯಲ್ಲಿ ಬರ್ತಿದೆ ನಯನತಾರಾ ಮದುವೆ

ವಿಘ್ನೇಶ್ ಮತ್ತು ನಯನತಾರಾ ಅವರ ಸಾಕ್ಷ್ಯಚಿತ್ರದ ಪ್ರೀಮಿಯರ್ ದಿನಾಂಕವನ್ನು ನೆಟ್​ಫಿಕ್ಸ್​ ಇನ್ನೂ ಘೋಷಣೆ ಮಾಡಿಲ್ಲ, ಅದ್ರೆ ನೆಟ್‌ಫ್ಲಿಕ್ಸ್  ಮದುವೆ ಡಾಕ್ಯುಮೆಂಟರಿ ಕುರಿತು ಪ್ರೋಮೋ ಒಂದನ್ನು ರಿಲೀಸ್​ ಮಾಡಿದೆ. ನಯನತಾರಾ ಬಗ್ಗೆ ಪ್ರೀತಿ ಮಾತಾಡಿದ ಪತಿ ವಿಘ್ನೇಶ್, ನಯನತಾರಾ ಅವರನ್ನು 'ಸ್ಫೂರ್ತಿದಾಯಕ' ಮತ್ತು 'ಹಾರ್ಟ್ಲಿ ಬ್ಯುಟಿಫುಲ್​'​ ಎಂದು ಕರೆದಿದ್ದಾರೆ. ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್ ಚೆನ್ನೈ ಬಳಿ ವಿವಾಹವಾದರು. ಮಹಾಬಲಿಪುರಂನ ಶೆರಾಟನ್ ಗ್ರ್ಯಾಂಡ್‌ನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಯನತಾರಾ ಹಸೆ ಮಣೆ ಏರಿದ್ರು.
Published by:Pavana HS
First published: