Evening Digest: ‘ನಾನು ನಾನೇ, ಸಿದ್ದರಾಮಯ್ಯ ಅಷ್ಟೇ’: ಮೇಕೆದಾಟು ಯೋಜನೆ ಬಗ್ಗೆ ಸಿಎಂ ಮಹತ್ವದ ಹೇಳಿಕೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ನಾನು ನಾನೇ, ಸಿದ್ದರಾಮಯ್ಯ ಅಷ್ಟೇ: ಬಜೆಟ್​ ಮೇಲಿನ ಕಲಾಪದ ವೇಳೆ ಇಂದು ಸಿದ್ದರಾಮಯ್ಯ  (Siddaramaiah) ವಸತಿ ಸಚಿವ ವಿ ಸೋಮಣ್ಣ (V Somanna) ಅವರ ಮೇಲೆ ಗರಂ ಆದ ಘಟನೆ ನಡೆಯಿತು. ಸಿದ್ದರಾಮಯ್ಯ ಅವರು ದೇವರಾಜ ಅರಸು, ಬಂಗಾರಪ್ಪ, ಗೋಪಾಲಗೌಡರು, ಸಾಹುಕಾರ್ ಚೆನ್ನಯ್ಯ ಮಾರ್ಗದಲ್ಲಿ ಸಾಗಲಿ ಎಂದು ವಿ ಸೋಮಣ್ಣ ತಿಳಿಸಿದರು. ಈ ಮಾತಿಗೆ ಸಿಟ್ಟಾದ ವಿಪಕ್ಷ ನಾಯಕ ಸಿದ್ದರಾಮಯ್ಯ, "ನಾನು ಸಿದ್ದರಾಮಯ್ಯ, ನಾನು ನಾನೇ, ನಾನು ಸಿದ್ದರಾಮಯ್ಯ ಮಾತ್ರ" ಎಂದು ತೀಕ್ಷ್ಣವಾಗಿ ಉತ್ತರಿಸಿದರು. "ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಲ್ಲ. ನಾನು ಗಾಂಧೀನಾ, ಅಂಬೇಡ್ಕರ್ ರನ್ನ ಹೋಲಿಕೆ ಮಾಡಿಕೊಳ್ಳಲಾಗುತ್ತದೆಯೇ? ನಾನು ನಾನೇ, ನನ್ನ ವ್ಯಕ್ತಿತ್ವ ಬೇರೆ, ಬೇರೆಯವರ ವ್ಯಕ್ತಿತ್ವ ಬೇರೆ" ಎಂದು ಗರಂ ಆದರು.

  ಮೇಕೆದಾಟು ಯೋಜನೆ ಬಗ್ಗೆ ಸಿಎಂ ಮಹತ್ವದ ಹೇಳಿಕೆ

  ರಾಜ್ಯ ರಾಜಕಾರಣದಲ್ಲಿ ಮೇಕೆದಾಟು (Mekedatu Project) ಘಾಟು ಕಮ್ಮಿ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಆಡಳಿತಾರೂಢ ಬಿಜೆಪಿ ಸರ್ಕಾರವನ್ನು (BJP Govt) ಮೇಕೆದಾಟು ಯೋಜನೆ ಜಾರಿ ವಿಷಯದಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್​ (Congress) ತುದಿಗಾಲಲ್ಲಿ ನಿಂತಿದೆ. ಮೇಕೆದಾಟು ಪಾದಯಾತ್ರೆ ಮೂಲಕ ಒತ್ತಡವೇರುವ, ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್​ ಪ್ರಯತ್ನಿಸಿದೆ. ಈ ಎಲ್ಲಾ ಹಿನ್ನೆಲೆಗಳಲ್ಲಿ ನ್ಯೂಸ್​​ 18 ನಡೆಸಿದ ವಿಶೇಷ ಸಂದರ್ಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮೇಕೆದಾಟು ಯೋಜನೆಯನ್ನು ಈ ವರ್ಷದ ಅಂತ್ಯದಲ್ಲಿ ಆರಂಭಿಸುವುದಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಖ್ಯಮಂತ್ರಿ ಗಡುವು ನೀಡಿದ್ದಾರೆ. ಜೊತೆಗೆ ಮಾರ್ಚ್ 5 ರಂದು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಮಂಡಿಸಿದ ಹೊಸ ಯೋಜನೆಗಳ ಬಗ್ಗೆಯೂ ಸಿಎಂ ಮಾತನಾಡಿದರು.

  India China ಶತ್ರುಗಳಾಗೋ ಬದಲು ಗೆಳೆಯರಾಗಲಿ

  ಭಾರತ ಮತ್ತು ಚೀನಾ ಪರಸ್ಪರ ಘರ್ಷಣೆ-ಕದನಗಳನ್ನು ಮಾಡುವುದಕ್ಕಿಂತ ಪರಸ್ಪರ ಯಶಸ್ಸಿಗೆ ಪಾಲುದಾರರಾಗಬೇಕು. ಇದರಿಂದ ಎರಡೂ ದೇಶಗಳಿಗೆ ಲಾಭವಿದೆ ಎಂದು ಚೀನಾದ ವಿದೇಶಾಂಗ ವಾಂಗ್ ಯಿ (Wang Yi) ತಿಳಿಸಿದ್ದಾರೆ. ಎರಡೂ ದೇಶಗಳ (India China Relationship) ಸಂಬಂಧಗಳು ಸರಿಯಾದ ಹಾದಿಯಲ್ಲಿ ಮುಂದುವರಿಯಬೇಕು ಎಂದು ಅವರು ಕರೆ ನೀಡಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲೇ (Russia vs Ukraine War) ಚೀನಾದ ವಿದೇಶಾಂಗ ವಾಂಗ್ ಯಿ ಹೀಗೆ ಹೇಳಿರುವುದು ಭಾರತವು ಎಚ್ಚರಿಕೆಯಿಂದ ರಾಜತಾಂತ್ರಿಕ ಹೆಜ್ಜೆ ಹಾಕಬೇಕು ಎಂದು ಸೂಚಿಸುತ್ತದೆ. ಭಾರತ ಪ್ರಭಾವ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಕಾರಣ ಚೀನಾ ಈ ರೀತಿ ಹೇಳಿದೆ ಎನ್ನಲಾಗಿದೆ. ಚೀನಾದ ಶಾಸಕಾಂಗದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್​ನಲ್ಲಿ (NPC) ನಡೆಯುತ್ತಿರುವ ಅಧಿವೇಶನದದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚೀನಾದ ವಿದೇಶಾಂಗ ವಾಂಗ್ ಯಿ ಭಾರತ-ಚೀನಾ ಬಾಂಧವ್ಯದಲ್ಲಿ ಇತ್ತೀಚಿನ ಉಂಟಾದ ಕೆಲವು ಹಿನ್ನಡೆಗಳು ಎರಡೂ ದೇಶಗಳ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದಿದ್ದಾರೆ.

  ತಮಿಳುನಾಡು ಯುವಕ ಈಗ ಉಕ್ರೇನ್ ಯೋಧ

  ಯಾವುದೇ ಸಂಘ-ಸಂಸ್ಥೆಗಳಲ್ಲಿ ಯಾರೇ ಆಗಲಿ ಕೆಲಸ ಅಥವಾ ಕಾರ್ಯಕ್ಕೆ ನೇಮಕಗೊಳ್ಳುವಾಗ ಆ ಸಂಸ್ಥೆಗಳು ನಿಗದಿಪಡಿಸಿದ ಅರ್ಹತೆಗಳಿಗೆ ತಕ್ಕಂತೆ ಅರ್ಹರಾಗಿರಬೇಕಾಗಿರುವುದು ಸಾಮಾನ್ಯ. ಅಂತೆಯೇ ಭಾರತೀಯ ಸೈನ್ಯದಲ್ಲಿ ಸೈನಿಕನಾಗಲೂ ಕೆಲವು ಅರ್ಹತೆಗಳಿರಬೇಕಾಗಿರುವುದು ಅವಶ್ಯಕ. ಶೈಕ್ಷಣಿಕ ಅರ್ಹತೆ (Education qualification) ಒಂದೆಡೆಯಾದರೆ ದೈಹಿಕ ಅರ್ಹತೆಯು ಭಾರತೀಯ ಸೈನ್ಯ ಸೇರಲು ಮುಖ್ಯವಾದ ಮಾನದಂಡವೂ ಆಗಿದೆ ಎಂಬುದನ್ನು ಗಮನಿಸಬೇಕು. ದೈಹಿಕ ಅರ್ಹತೆಗಳಲ್ಲಿ ಕೊಂಚ ವ್ಯತ್ಯಾಸ ಅಥವಾ ಕೊರತೆಯಿದ್ದರೂ ಸಹ ಭಾರತೀಯ ಸೈನ್ಯದಲ್ಲಿ ನೇಮಕ ಮಾಡಿಕೊಳ್ಳಲಾಗುವುದಿಲ್ಲ. ಅಷ್ಟೊಂದು ಕಠಿಣವಾಗಿವೆ ಈ ಅರ್ಹತೆಗಳು. ಇಂತಹುದ್ದೇ ಒಂದು ದೈಹಿಕ ಅರ್ನಹತೆ (Physically Disqualified) ಅನುಭವಿಸಿ ಸೈನ್ಯಕ್ಕೆ ಸೇರಲಾಗದ ಸ್ಥಿತಿಯನ್ನು ಕೆಲ ಸಮಯದ ಹಿಂದೆ ತಮಿಳುನಾಡು ಮೂಲದ 21 ರ ಪ್ರಾಯದ ಸೈನಿಕೇಶ್ ರವಿಚಂದ್ರನ್ ಎದುರಿಸಬೇಕಾಗಿ ಬಂತು. ಭಾರತೀಯ ಸೈನ್ಯದಲ್ಲಿ ನಿಗದಿಪಡಿಸಲಾಗಿದ್ದ ಎತ್ತರದ ಅರ್ಹತೆಯಲ್ಲಿ ಸೈನಿಕೇಶ್ ಉತ್ತೀರ್ಣನಾಗಿರಲಿಲ್ಲ. ಈ ಕಾರಣದಿಂದ ಅವನ ನೇಮಕಾತಿಯನ್ನು ಮಾಡಲಾಗಲಿಲ್ಲ. ಆದರೆ, ಆ ಯುವಕನಿಗೆ ಸೈನಿಕನಾಗಲೇಬೇಕೆಂಬ ಉತ್ಕಟ ಆಸೆ. ತನ್ನ ಈ ಆಸೆಯನ್ನು ಆತ ಈಗ ಉಕ್ರೇನ್ ದೇಶಕ್ಕೆ ಬೆಂಬಲ ವ್ಯಕ್ತಪಡಿಸುತ್ತ ಸೃಷ್ಟಿಯಾಗಿರುವ ಜಾರ್ಜಿಯನ್ ನ್ಯಾಶನಲ್ ಲೀಜನ್ ಪ್ಯಾರಾಮಿಲಿಟರಿ ಘಟಕಕ್ಕೆ ಸೇರುವ ಮೂಲಕ ತೀರಿಸಿಕೊಂಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

  ಮಹಿಳಾ ದಿನಾಚರಣೆಗೆ​ ಕೆಜಿಎಫ್​ 2 ಸಿನಿಮಾ ತಂಡದಿಂದ ಬಿಗ್ ಗಿಫ್ಟ್​​!

  ಮಾರ್ಚ್​ 27ರಂದು ಟ್ರೇಲರ್ ರಿಲೀಸ್ ಮಾಡುವ ಬಗ್ಗೆ ಈಗಾಗಲೇ ಘೋಷಣೆ ಆಗಿದೆ. ಈಗ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ‘ವಿಶ್ವ ಮಹಿಳಾ ದಿನಾಚರಣೆ’ (International Women’s Day) ಹಿನ್ನೆಲೆಯಲ್ಲಿ ಈ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್​​ನಲ್ಲಿ ‘ಕೆಜಿಎಫ್​ 2’ನಲ್ಲಿ ಬರುವ ಎಲ್ಲಾ ಪ್ರಮುಖ ಮಹಿಳಾ ಪಾತ್ರಗಳನ್ನು ಪೋಸ್ಟರ್​ನಲ್ಲಿ ತೋರಿಸಲಾಗಿದೆ.ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್​, ರವೀನಾ ಟಂಡನ್​ ಮೊದಲಾದ ಮಹಿಳಾ ಕಲಾವಿದರು ಇರುವ ಫೋಟೋವನ್ನು ರಿಲೀಸ್​ ಮಾಡಲಾಗಿದೆ. ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದೆ.
  Published by:Kavya V
  First published: