• Home
 • »
 • News
 • »
 • state
 • »
 • Evening Digest: ಅನ್​ಲಾಕ್​ ಚರ್ಚೆಯಿಂದ ಜೈಲು ಪಾಲಾದ ಮಹಾತ್ಮಗಾಂಧಿ ಮರಿಮೊಮ್ಮಗಳವರೆಗೆ ಓದಲೇಬೇಕಾದ ಸುದ್ದಿ

Evening Digest: ಅನ್​ಲಾಕ್​ ಚರ್ಚೆಯಿಂದ ಜೈಲು ಪಾಲಾದ ಮಹಾತ್ಮಗಾಂಧಿ ಮರಿಮೊಮ್ಮಗಳವರೆಗೆ ಓದಲೇಬೇಕಾದ ಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಸಿಎಂ ಉದಾಸಿ ಇನ್ನಿಲ್ಲ
  ಅನಾರೋಗ್ಯಕ್ಕೆ ಒಳಗಾಗಿದ್ದ ಹಾನಗಲ್ ಶಾಸಕ ಸಿಎಂ ಉದಾಸಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ನಾರಾಯಣ ಹೆಲ್ತ್​ ಸಿಟಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಬಾರದ ಕುರಿತು ಕಳೆದ ಕೆಲವು ದಿನಗಳ ಹಿಂದೆ ಅವರ ಮಗ ಶಿವಕುಮಾರ್ ಉದಾಸಿ ಕೂಡ ತಿಳಿಸಿದ್ದರು. ಅಲ್ಲದೇ, ಸಿಎಂ ಬಿಎಸ್​ ಯಡಿಯೂರಪ್ಪ ಅವರು ಕೂಡ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಅವರ ಸಾವಿಗೆ ಸಿಎಂ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಆರು ಬಾರಿ ಹಾನಗಾಲ್​ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಬಿಜೆಪಿ-ಜೆಡಿಎಸ್​ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಹಲವು ರೈತ ಹೋರಾಟಗಳಲ್ಲಿ ಭಾಗಿಯಾಗಿದ್ದ ಸಜ್ಜನ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದರು.


  ಅನ್​ಲಾಕ್​ ಕುರಿತು ಇನ್ನೆರಡು ದಿನದಲ್ಲಿ ಚರ್ಚೆ
  ಕೊರೋನಾ ನಿಯಂತ್ರಣಕ್ಕೆ ಜೂ 14ರವರೆಗೆ ಲಾಕ್​ಡೌನ್​ ವಿಸ್ತರಿಸಿ ಈಗಾಗಲೇ ಸಿಎಂ ಆದೇಶ ನೀಡಿದ್ದರು. ಜೂ. 14 ಬಳಿಕ ರಾಜ್ಯದಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿ, ಹಂತ ಹಂತವಾಗಿ ಅನ್​ಲಾಕ್​ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ. ಈಗಾಗಲೇ ಮೂರು ಬಾರಿ ಲಾಕ್​ಡೌನ್​ ವಿಸ್ತರಿಸಿರುವ ಮುಖ್ಯಮಂತ್ರಿಗಳು ಜೂ 14 ರಬಳಿಕ ಮತ್ತೊಮ್ಮೆ ಲಾಕ್​ಡೌನ್​ ಹೇರುವ ಸಂಭಾವ್ಯ ಕಡಿಮೆ ಇದೆ. ಇದೇ ಹಿನ್ನಲೆ ಯಾವ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಬೇಕು ಎಂಬ ಕುರಿತು ಇನ್ನೆರಡು ದಿನದೊಳಗೆ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಿರ್ಬಂಧಗಳ ತೆರವು ಕುರಿತು ಹಾಗೂ ಕೊರೋನಾ ಸೋಂಕು ಇಳಿಕೆಯ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.


  ಸಿನಿಮಾ-ಕಿರುತೆರೆ ಕ್ಷೇತ್ರಕ್ಕೆ 6.60 ಕೋಟಿ ಪ್ಯಾಕೇಜ್
  ಕೊರೊನಾ ಸಂಕಷ್ಟ, ಲಾಕ್​ಡೌನ್​ನಿಂದಾಗಿ ಸಿನಿಮಾ, ಕಿರುತೆರೆ ಕ್ಷೇತ್ರವೂ ನಷ್ಟಕ್ಕೆ ತುತ್ತಾಗಿದೆ. ಸಿನಿಮಾ ಕ್ಷೇತ್ರವನ್ನೇ ನಂಬಿಕೊಂಡಿರುವ ಸಾವಿರಾರು ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತರೆ ಕ್ಷೇತ್ರಗಳಿಗೆ ಘೋಷಿಸಿದಂತೆ ಸಿನಿಮಾ ಕ್ಷೇತ್ರಕ್ಕೂ ವಿಶೇಷ ಪ್ಯಾಕೇಜ್​ ಘೋಷಿಸಬೇಕು ಎಂಬ ಒತ್ತಾಯ ಕಲಾವಿದರಿಂದ ಕೇಳಿ ಬಂದಿತ್ತು. ಇದಕ್ಕೆ ಮನ್ನಣೆ ನೀಡಿರುವ ಸಿಎಂ ಬಿ.ಎಸ್​.ಯಡಿಯೂರಪ್ಪ ಇಂದು ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್​ ಘೋಷಿಸಿದ್ದಾರೆ.


  ಇನ್ಫೋಸಿಸ್​ಗೆ ಟ್ವೀಟ್​ ಮಾಡಿದ ವಿತ್ತ ಸಚಿವೆ
  ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್​ ವೆಬ್​ಸೈಟ್​ನಲ್ಲಿ ದೋಷ ಕಂಡು ಬಂದಿದೆ. ಇದರಿಂದ ತೆರಿಗೆದಾರರು ಸಮಸ್ಯೆ ಅನುಭವಿಸುವಂತೆ ಆಗಿದ್ದು, ಇದನ್ನು ಸರಿಪಡಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇನ್ಫೋಸಿಸ್​ ಮತ್ತು ನಂದನ್​ ನಿಲೇಕಣಿ ಅವರಿಗೆ ಟ್ಯಾಗ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಸಮಸ್ಯೆ ಶೀಘ್ರದಲ್ಲಿಯೇ ಬಗೆಹರಿಯಲಿದ್ದು, ತೇರಿಗೆದಾರರನ್ನು ನಮ್ಮ ಸೇವೆ ಗುಣಮಟ್ಟದಲ್ಲಿ ನಿರಾಸೆಗೊಳಿಸುವುದಿಲ್ಲ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ. ಹೊಸದಾಗಿ ಆರಂಭಗೊಂಡಿರುವ ಈ ಪೋರ್ಟ್​ಲ್​ನಲ್ಲಿ ಸಮಸ್ಯೆ ಕಂಡು ಬಂದ ತಕ್ಷಣ ಸೇವಾದಾರರು ಈ ಕುರಿತು ನಿರ್ಮಲಾ ಸೀತಾರಾಮನ್​ ಅವರ ಗಮನ ಸೆಳೆದಿದ್ದಾರೆ.


  ಮಹಾತ್ಮಗಾಂಧಿ ಮರಿ ಮೊಮ್ಮಗಳಿಗೆ ಜೈಲು
  ಜಗತ್ತಿಗೆ ಸತ್ಯ, ಅಹಿಂಸೆಯ ಬೋಧನೆ ಮಾಡಿ, ತಮ್ಮ ಜೀವನವನ್ನೇ ಒಂದು ಸಂದೇಶವಾಗಿಸಿದ ಗಾಂಧೀಜಿ ಅವರ ಮರಿ ಮೊಮ್ಮಗಳು ಈಗ ಜೈಲು ಪಾಲಾಗಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗಳ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು, ದಕ್ಷಿಣ ಆಫ್ರಿಕಾದಲ್ಲಿ ಆಕೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗಳು 56 ವರ್ಷದ ಆಶಿಶ್ ಲತಾ ರಾಮ್​ಗೋಬಿನ್ ಮೇಲೆ 6 ಮಿಲಿಯನ್ ರಾಂಡ್​ ಮೌಲ್ಯದ (3 ಕೋಟಿ ರೂ.ಗೂ ಹೆಚ್ಚು) ವಂಚನೆ ಮತ್ತು ನಕಲಿ ಸಹಿಯ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ದಕ್ಷಿಣ ಆಫ್ರಿಕಾದ ಡರ್ಬನ್ ಕೋರ್ಟ್​ ಆಕೆಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.


  ಭಾಸ್ಕರ್​ ಶೆಟ್ಟಿ ಪ್ರಕರಣ ಮೂವರಿಗೆ ಜೀವಾವಧಿ ಶಿಕ್ಷೆ
  ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳು ದೋಷಿಗಳೆಂದು ಉಡುಪಿ ಜಿಲ್ಲಾ ನ್ಯಾಯಾಲಯ ಇಂದು ತೀರ್ಪು ಪ್ರಕಟ ಮಾಡಿದೆ. ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್ ಇಂದು ತೀರ್ಪು ನೀಡಿದ್ದು, ಭಾಸ್ಕರ್ ಶೆಟ್ಟಿಯವರನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟಿರುವ ಆರೋಪ ಸಾಬೀತಾಗಿರುವುದರಿಂದ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ರಾಜೇಶ್ವರಿಯ ಗೆಳೆಯ ನಿರಂಜನ ಭಟ್ ಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ. ಐದನೇ ಆರೋಪಿ ಚಾಲಕ ರಾಘವೇಂದ್ರನನ್ನು ಖುಲಾಸೆಗೊಳಿಸಲಾಗಿದೆ. ನಾಲ್ಕನೇ ಆರೋಪಿ ಶ್ರೀನಿವಾಸ್ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದರು.


  ಹೈ ಕೋರ್ಟ್​ ಮೊರೆಹೋದ ರೀಪಿಟರ್ಸ್​​
  ಕೋವಿಡ್​ ಹಿನ್ನೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ರಾಜ್ಯ ಶಿಕ್ಷಣ ಇಲಾಖೆ ರದ್ದು ಮಾಡಿದೆ. ಎಸ್​ಎಸ್​ಎಲ್​ಸಿ ಅಂಕಗಳ ಆಧಾರದ ಮೇಲೆ ಎಲ್ಲಾ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗ್ರೇಡ್​ ನೀಡಿ ಕಡ್ಡಾಯ ಪಾಸ್​​​ಗೆ ಆದೇಶಿಸಿದೆ. ಮೊದಲ ಬಾರಿಗೆ ದ್ವಿತೀಯ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ವರ್ಷ ಉತ್ತೀರ್ಣರಾಗಲಿದ್ದಾರೆ. ಆದರೆ ಹಿಂದಿನ ವರ್ಷಗಳಲ್ಲಿ ಅನುತೀರ್ಣರಾಗಿ ಈ ವರ್ಷ ಮರುಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲೇಬೇಕು. ಮರು ಪರೀಕ್ಷೆ ಬರೆಯುವವರನ್ನೂ ಈ ವರ್ಷ ಪಾಸ್​ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ಸಂಬಂಧ ಹೈ ಕೋರ್ಟ್​ಗೆ ಪಿಐಎಲ್​ ಅರ್ಜಿ ಕೂಡ ಸಲ್ಲಿಕೆಯಾಗಿದೆ.

  Published by:Seema R
  First published: