• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Evening Digest: ವಿಕ್ರಂಗೆ ಹೃದಯಾಘಾತ, ಸಾಯಿ ಪಲ್ಲವಿಗೆ ಹಿನ್ನೆಡೆ, ಜಪಾನ್ ಮಾಜಿ ಪ್ರಧಾನಿ ನಿಧನ! ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

Evening Digest: ವಿಕ್ರಂಗೆ ಹೃದಯಾಘಾತ, ಸಾಯಿ ಪಲ್ಲವಿಗೆ ಹಿನ್ನೆಡೆ, ಜಪಾನ್ ಮಾಜಿ ಪ್ರಧಾನಿ ನಿಧನ! ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

  • Share this:

ತಮಿಳಿನ ಖ್ಯಾತ ನಟ ವಿಕ್ರಮ್​ಗೆ ಹೃದಯಾಘಾತ! 


ತಮಿಳಿನ ಟಾಪ್ ಹೀರೋ (Tamil Top Hero) ವಿಕ್ರಮ್ ಹೃದಯಾಘಾತ (Vikram Heart attack) ದಿಂದ ಚೆನ್ನೈ (Chennai) ನ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸದ್ಯದ ಸ್ಥಿತಿ ಇನ್ನಷ್ಟೇ ತಿಳಿಯಬೇಕಿದೆ. ತಮ್ಮ ನೆಚ್ಚಿನ ನಟ ಹೃದಯಾಘಾತ (Heart Attack) ದಿಂದ ಆಸ್ಪತ್ರೆ ಸೇರಿರುವುದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು ಒಬ್ಬೊಬ್ಬರಾಗಿ ಆಸ್ಪತ್ರೆ ತಲುಪುತ್ತಿದ್ದಾರೆ. ಕಾಲಿವುಡ್​ನಲ್ಲಿ ಮೊದಲಿನಿಂದಲೂ ಸಖತ್​ ಫಿಟ್​ ಅಂಡ್ ಫೈನ್​ ಆಗಿದ್ದವರು ಚಿಯಾನ್​ ವಿಕ್ರಮ್​. ಇಂದು ಬೆಳಗ್ಗೆ ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಇದ್ದಕಿದ್ದ ಹಾಗೇ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚೈನ್ನೈನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಕೂಡ ನೀಡಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸದ್ಯಕ್ಕೆ ವಿಕ್ರಮ್​ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ನುರಿತ ವೈದ್ಯರು ವಿಕ್ರಮ್​ಗೆ ಚಿಕಿತ್ಸೆ ನೀಡುತ್ತಿದ್ದಾರೆ.


ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ


ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಅವರಿಗೆ ಗುಂಡು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಜಪಾನ್​ನಲ್ಲಿ (Japan) ಚುನಾವಣಾ ಪ್ರಚಾರದಲ್ಲಿ (Election Camaign) ಭಾಗಿಯಾಗಿದ್ದ ಶಿಂಜೋ ಅವರು ಭಾಷಣ (Speech) ಮಾಡುತ್ತಿರುವಾಗಲೇ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಮಾಜಿ ಪ್ರಧಾನಿ ಗುಂಡು ತಗುಲಿ ನೆಲಕ್ಕೆ ಕುಸಿಯುತ್ತಿರುವ ವಿಡಿಯೋ (Video) ಹಾಗೂ ಫೋಟೋಗಳು ವೈರಲ್ (Viral) ಆಗಿದ್ದವು. ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಶಿಂಜೋ ಅವರು ಭಾರತದ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು.


ಇದನ್ನೂ ಓದಿ: Shinzo Abe: ಯಾರು ಗೊತ್ತಾ ಶಿಂಜೋ ಅಬೆ? ಭಾರತದ 'ಡಿಯರ್ ಫ್ರೆಂಡ್‌' ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ


ಅಡುಗೆ ಎಣ್ಣೆ ಬೆಲೆ ಇಳಿಸುವಂತೆ ಕಂಪನಿಗಳಿಗೆ ಸರ್ಕಾರದ ತಾಕೀತು


ಇಂಧನ ಬೆಲೆ (Fuel Prices) , ಅಡುಗೆ ಎಣ್ಣೆ ಬೆಲೆ (Cooking Oil Prices) , ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಾ ಗಗನಕ್ಕೇರಿ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿತ್ತು. ಇದಕ್ಕೆ ಪರಿಹಾರ ಎನ್ನುವಂತೆ ಕೇಂದ್ರ ಸರ್ಕಾರ (Central Government) ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೆಲ ತಿಂಗಳ ಹಿಂದೆ ಕಡಿಮೆ ಮಾಡಿತ್ತು. ಇದು ಕೊಂಚ ಮಟ್ಟಿಗೆ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಈಗ ಮತ್ತೊಂದು ಪರಿಹಾರವಾಗಿ ಕೇಂದ್ರ ಸರ್ಕಾರ ಖಾದ್ಯ ತೈಲ ತಯಾರಿಕ ಕಂಪನಿಗಳಿಗೆ ಎಣ್ಣೆ ಬೆಲೆಯನ್ನು ಕಡಿಮೆ ಮಾಡುವಂತೆ ಸೂಚಿಸಿದೆ.


ಸಾಯಿಪಲ್ಲವಿಗೆ ಹೈಕೋರ್ಟ್‍ನಲ್ಲಿ ಹಿನ್ನೆಡೆ


ಹೆಸರಾಂತ ನಟಿ (Actress) ಸಾಯಿ ಪಲ್ಲವಿ. ತಮ್ಮ ಅಮೋಘ ನಟನೆಯ ಮೂಲಕ ಹಲವು ವೀಕ್ಷಕರ ಮನ ಗೆದ್ದಿದ್ದಾರೆ. ಆದ್ರೆ ಇತ್ತೀಚೆಗೆ ಅವರು ಸುದ್ದಿಯಲ್ಲಿದ್ದಾರೆ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈಗ ನಟಿ ಸಾಯಿಪಲ್ಲವಿಗೆ ತೆಲಂಗಾಣ ಹೈಕೋರ್ಟ್‍ನಲ್ಲಿ (High Court) ಹಿನ್ನೆಡೆಯಾಗಿದೆ. ಕಾನೂನು ಬಾಹಿರ (Illegal), ಅನ್ಯಾಯ (injustice) ಮತ್ತು ಅನ್ವಯವಾಗುವ ಕಾನೂನಗಳ ಉಲ್ಲಂಘನೆಯಡಿ ಠಾಣೆಗೆ ಹಾಜರಾಗುವಂತೆ ಸಾಯಿಪಲ್ಲವಿಗೆ ಹೈದ್ರಾಬಾದ್ ಸುಲ್ತಾನ್ ಬಜಾರ್ (Sultan Bazaar) ಸರ್ಕಲ್ ಇನ್ಸ್‍ಪೆಕ್ಟರ್ ನೋಟಿಸ್ (Notice) ನೀಡಿದ್ರು. ಆ ನೋಟಿಸ್ ರದ್ದು ಕೋರುವಂತೆ ಸಾಯಿಪಲ್ಲವಿ ತೆಲಂಗಾಣ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ರು. ಆ ಅರ್ಜಿಯನ್ನು ತೆಲಂಗಾಣ ಕೋರ್ಟ್ ತಿರಸ್ಕರಿಸಿದೆ.


ಇದನ್ನೂ ಓದಿ: Sai Pallavi: ಸಾಯಿಪಲ್ಲವಿಗೆ ತೆಲಂಗಾಣ ಹೈಕೋರ್ಟ್‍ನಲ್ಲಿ ಹಿನ್ನೆಡೆ! ಏಕೆ? ಏನಾಯ್ತು?


ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಲು ₹132 ಕೋಟಿ ಕೊಟ್ಟೇ ಬಿಟ್ರು ಸಿಎಂ


ಬೆಂಗಳೂರು (ಜು. 8): ಶಾಲಾ ಮಕ್ಕಳಿಗೆ (School Students) ಶೂ ಮತ್ತು ಸಾಕ್ಸ್ ವಿತರಿಸಲು ₹ 132 ಕೋಟಿ ಮೊತ್ತದ ಪ್ರಸ್ತಾವನೆಗೆ (Proposal) ಅನುಮೋದನೆ (Approval) ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಸರ್ಕಾರ ಈಗಾಗಲೇ ಸಮವಸ್ತ್ರ ವಿತರಿಸಲು ಅನುಮೋದನೆ ನೀಡಿದೆ. ಸಮವಸ್ತ್ರ (Uniform) ತಯಾರಾಗಲು ಸ್ವಲ್ಪ ಸಮಯ (Time) ಬೇಕಾಗುತ್ತದೆ. ನಂತರ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ.

Published by:Annappa Achari
First published: