ಪಂಚ ರಾಜ್ಯ ಚುನಾವಣೆಗೆ ಮುಹೂರ್ತ ಫಿಕ್ಸ್ : ಮುಂದಿನ ತಿಂಗಳು ದೇಶಕ್ಕೆ ಕೊರೋನಾ ಮೂರನೇ ಅಲೆ (Corona Third Wave) ಸುನಾಮಿ ರೀತಿಯಲ್ಲಿ ಅಪ್ಪಳಿಸಬಹುದು ಎಂಬ ಆತಂಕ ಇದೆ. ಜೊತೆಗೆ ಓಮಿಕ್ರಾನ್ ವೈರಸ್ (Omicron Virus) ಕೂಡ ದಾಳಿ ಇಡುತ್ತಿದೆ. ಇದೇ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡುವಂತೆ, ಚುನಾವಣಾ ಸಭೆ, ಸಮಾರಂಭ, ಸಮಾವೇಶ, ರೋಡ್ ಶೋಗಳನ್ನು ನಿರ್ಬಂಧಿಸುವಂತೆ ಮನವಿ ಮಾಡಲಾಗಿತ್ತು. ಇದೆಲ್ಲದರ ನಡುವೆ ಈಗ ಉತ್ತರ ಪ್ರದೇಶ (Uttar Pradesh), ಉತ್ತರಖಂಡಾ (Uttarkhand), ಪಂಜಾಬ್ (Punjab), ಗೋವಾ (Goa) ಮತ್ತು ಮಣಿಪುರ (Manipura) ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ (Assembly Elections) 'ಕೋವಿಡ್ ನಿಯಮಾವಳಿಗಳ ಪ್ರಕಾರ' ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ (Central Election Commission) ದಿನಾಂಕ ಪ್ರಕಟಿಸಿದೆ.
ಪೂರ್ತಿ ಓದಿಗಾಗಿ: 5 State Elections: ಕೊರೋನಾ ಕರಿನೆರಳ ನಡುವೆ ನಡೆಯುವ ಚುನಾವಣೆಯ 20 ಪ್ರಮುಖ ವಿಷಯಗಳು
ವೀಕೆಂಡ್ ಕರ್ಫ್ಯೂ : ಬಸ್ ಸಂಚಾರ ವಿರಳ, ರಸ್ತೆಗಳು ಖಾಲಿ ಖಾಲಿ
ಕೊರೊನಾ ವೈರಸ್ (Corona Virus) ಮತ್ತು ಓಮೈಕ್ರಾನ್ (Omicron) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ (Weekend Curfew) ಹೇರಿದೆ. ಕೆಲ ವಿನಾಯ್ತಿಗಳ ಜೊತೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಬೆಂಗಳೂರು ಪೊಲೀಸರು (Bengaluru Police) ರಸ್ತೆಗೆ ಇಳಿದಿದ್ದು, ಅನಾವಶ್ಯಕವಾಗಿ ತಿರುಗಾಡುತ್ತಿರುವವರಿಗೆ ತಿಳಿ ಹೇಳಿ ಕಳುಹಿಸುತ್ತಿದ್ದಾರೆ. ಜೊತೆಗೆ ಕಾರಣವಿಲ್ಲದೇ ಸಂಚರಿಸುತ್ತಿರುವ ಜನರನ್ನು ಕೊರೊನಾ ಪರೀಕ್ಷೆಗೆ (COVID Test) ಒಳಪಡಿಸಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಶೇ.10ರಷ್ಟು ಬಿಎಂಟಿಸಿ ಬಸ್ (BMTC Bus) ಗಳು ರಸ್ತೆಗೆ ಇಳಿದಿದ್ದು, ಜನರು ತೊಂದರೆ ಅನುಭವಿಸುವಂತಾಯ್ತು. ವೀಕೆಂಡ್ ಕರ್ಫ್ಯೂ ನಡುವೆ ಕೈಗಾರಿಕೆಗಳಿಗೆ ನಿರ್ವಹಣೆ ನಡೆಸಲು ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಆದ್ರೆ ಕಾರ್ಮಿಕರಿಗೆ ತೆರಳಲು ಬಸ್ ಗಳಿಲ್ಲದ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.
ರಸ್ತೆ ಕಾಣದಷ್ಟು ದಟ್ಟ ಹೊಗೆ
ಕೋಣನಕುಂಟೆ ಕ್ರಾಸ್ ಬಳಿ ನಿರ್ಮಾಣ ಹಂತದ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಣನಕುಂಟೆ ಕ್ರಾಸ್ ಮೆಟ್ರೋ ಸ್ಟೇಷನ್ ಬಳಿ ಘಟನೆ ನಡೆದಿದೆ. ಬಹು ಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು, ದಟ್ಟವಾದ ಹೊಗೆಯಿಂದ ರಸ್ತೆಯೂ ಕಾಣದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಕೋಣನಕುಂಟೆ ಪೊಲೀಸ್ರು ಹಾಗೂ ಎರಡು ಅಗ್ನಿಶಾಮಕ ವಾಹನ ದೌಡಾಯಿಸಿದೆ. ಖಾಸಗಿ ಕಂಪನಿ ಗ್ರೂಪ್ ಗೆ ಸೇರಿದ ನಿರ್ಮಾಣ ಹಂತದ ಕಟ್ಟಡ ಘಟನೆ ನಡೆದಿದೆ. ಥರ್ಮೋಕೋಲ್ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ಇದೆ. ಇದ್ರಿಂದಾಗಿಯೇ ದಟ್ಟ ಹೊಗೆ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆ ನಟಿಯ ಮುತ್ತಿನ ಸರಣಿ ನಿಲ್ಲುತ್ತಲೇ ಇಲ್ಲ
ರಾಜಕಾರಣಿಯ(Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ(Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು(Bengaluru) ಮೂಲದ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekar) ಜತೆ ಶ್ರೀಲಂಕಾ(Sri Lanka) ಮೂಲದ ಬಾಲಿವುಡ್(Bollywood) ನಟಿ ಜಾಕಲಿನ್ ಫರ್ನಾಂಡಿಸ್ ಹೆಸರು ತಳುಕು ಹಾಕಿಕೊಂಡು ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬುದನ್ನು ಜಗತ್ತಿನ ಮುಂದೆ ಬಯಲು ಮಾಡಿತ್ತು.. ಆ ಫೋಟೋದಲ್ಲಿ ಜಾಕಲಿನ್ ಫರ್ನಾಂಡೀಸ್(Jacqueline Fernandez) ಕನ್ನಡಿ ಮುಂದೆ ವಂಚಕ ಸುಕೇಶ್ ಚಂದ್ರಶೇಖರ್ ಕೆನ್ನೆಗೆ ಕಿಸ್(Kiss) ಮಾಡಿದ್ದಾಳೆ. ಅಲ್ಲದೆ ಆ ಫೋಟೋವನ್ನ ಕಳ್ಳ ಸುಕೇಶ್ ಮಿರರ್ ಮುಂದೆ ತನ್ನದೇ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿದಿದ್ದ. ಜಾಕಲಿನ್ ಹಾಗೂ ಸುಕೇಶ್ ಇಬ್ಬರ ಈ ಫೋಟೊ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಮತ್ತೆ ಚರ್ಚೆಯ ವಿಷಯವಾಗಿದ್ದು ಈಗ ಹಳೆ ವಿಚಾರ. ಹೊಸ ವಿಚಾರ ಅಂದರೆ, ಇವರಿಬ್ಬರ ರಾಸಲೀಲೆಯ ಮತ್ತೊಂದು ಫೋಟೋ ವೈರಲ್ ಆಗಿದೆ.
ಪೂರ್ತಿ ಓದಿಗಾಗಿ:Jacqueline Fernandez: ಯಪ್ಪೋ.. ಜಾಕಲಿನ್ ಮತ್ತೊಂದು ಕಿಸ್ಸಿಂಗ್ ಫೋಟೋ ವೈರಲ್: ಏನವ್ವಾ ಇದು.. ಈ ಪಾಟಿ ರೋಮ್ಯಾನ್ಸ್!
Sabarimala ಪಾದಯಾತ್ರೆಯಲ್ಲಿ ಜೊತೆಯಾದ ಶ್ವಾನ
ಋಣಾನುಬಂಧ ಎಲ್ಲಿ ಹೇಗೆ ಇರುತ್ತದೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಆಕಸ್ಮಿಕವಾಗಿ ಸಿಕ್ಕ ವಸ್ತು ಜೀವನವನ್ನು ಬದಲಿಸಬಲ್ಲದು. ಆಕಸ್ಮಿಕವಾಗಿ ಸಿಕ್ಕ ಗೆಳೆಯ ಜೀವನದ ಭಾಗವಾಗಬಹುದು. ಆಕಸ್ಮಿಕವಾಗಿ ಸಿಕ್ಕ ಪ್ರಾಣಿ (Animal) ಪ್ರೀತಿ (Love)ಯನ್ನು ಧಾರಾಳವಾಗಿ ನೀಡುವ ಜೀವವಾಗಬಹುದು. ಹೀಗೆ ಕೇರಳ(Kerala)ದಲ್ಲಿ ಸಿಕ್ಕ ಶ್ವಾನ ಈಗ ವ್ಯಕ್ತಿಯೊಬ್ಬರ ಜೀವನದ ಪ್ರೀತಿಯ ಭಾಗವಾಗಿದೆ. ಶಬರಿಮಲೆ ಪಾದಾಯತ್ರೆಯಲ್ಲಿ ಜೊತೆಯಾದ ಕೇರಳದ ಶ್ವಾನ ಬಂಟ್ವಾಳದ (Bantwala) ವ್ಯಕ್ತಿಯೋರ್ವರ ಜೀವನದ ಭಾಗವೇ ಆಗಿದೆ. ದಕ್ಷಿಣ ಭಾರತದ (South India) ಪುಣ್ಯ ಕ್ಷೇತ್ರ ಶಬರಿಮಲೆ ಯಲ್ಲಿ ಮಕರಜ್ಯೋತಿ ಉತ್ಸವ ಆರಂಭವಾಗಿದೆ. ಪ್ರತಿ ನಿತ್ಯ ದೇಶದ ನಾನಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು (Devotees) ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.. ಕೊರೊನಾ ಆತಂಕ ನಿಯಮದ ನಡುವೆಯೂ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುವ ಸಲುವಾಗಿ 41ದಿನಗಳಕಾಲ ಕಠಿಣ ವೃತವನ್ನು ಮಾಡಿ ಶಬರಿಮಲೆಯತ್ತ ಸಾಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ