Evening Digest: ಶುರುವಾಯ್ತು ರೆಸಾರ್ಟ್ ಪಾಲಿಟಿಕ್ಸ್; ಇರಾನ್​ನಲ್ಲಿ ಭೀಕರ ರೈಲು ಅಪಘಾತ; 17 ಜನರ ಸಾವು, ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ ಓದಿ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಸುದ್ದಿಗಳ ಗುಚ್ಛ ಇಲ್ಲಿದೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಜೆಡಿಎಸ್ ನ ಎಲ್ಲಾ ಶಾಸಕರು ರೆಸಾರ್ಟ್​ಗೆ ಶಿಫ್ಟ್!

ಬೆಂಗಳೂರು (ಜೂ 8): ಜೂನ್​ 10 ರಂದು ರಾಜ್ಯಸಭಾ ಚುನಾವಣೆ (Rajya Sabha Election) ನಡೆಯಲಿದೆ. ಎಲ್ಲಾ ಪಕ್ಷಗಳಲ್ಲೂ (Party) ತಳಮಳ ಶುರುವಾಗಿದೆ. ಅಡ್ಡ ಮತದಾನದ ಭೀತಿ ಹೆಚ್ಚಾಗಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳು ರಾಜ್ಯಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜ್ಯಸಭಾ ಅಖಾಡದಲ್ಲಿ 6 ಅಭ್ಯರ್ಥಿಗಳಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ಪಕ್ಷದ ನಾಯಕರು (Leaders) ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಯಾರು, ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಅನ್ನೋದು ನಾಯಕರಿಗೆ ದೊಡ್ಡತಲೆನೋವಾಗಿದೆ. ನಮ್ಮ ಶಾಸಕರು ಅಡ್ಡಮತದಾನ ಮಾಡಲ್ಲ ಎಂದು ಹೇಳ್ತಿದ್ದ ಜೆಡಿಎಸ್​ ವರಿಷ್ಠರೇ, ತಮ್ಮ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್​ (Resort Shift) ಮಾಡಲು ರೆಡಿಯಾಗಿದ್ದಾರೆ.

ಇರಾನ್​ನಲ್ಲಿ ಭೀಕರ ರೈಲು ಅಪಘಾತ; ಕನಿಷ್ಠ 17 ಜನರ ಸಾವು

ಟೆಹ್ರಾನ್: ಪೂರ್ವ ಇರಾನ್‌ನಲ್ಲಿ ಬುಧವಾರ ಮುಂಜಾನೆ ಪ್ರಯಾಣಿಕರ ರೈಲು ಭಾಗಶಃ ಹಳಿತಪ್ಪಿ ಅಪಘಾತ ಸಂಭವಿಸಿದ್ದು, ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನ್​ನ (Iran) ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 350 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲಿನಲ್ಲಿ ಸಂಭವಿಸಿದ ದುರಂತದ ಬಗ್ಗೆ (Iran Train Accident) ಎಲ್ಲ ವಿವರಗಳು ಸ್ಪಷ್ಟವಾಗಿಲ್ಲ. ಆದರೆ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಟೆಹ್ರಾನ್‌ನ ಆಗ್ನೇಯಕ್ಕೆ ಸುಮಾರು 340 ಮೈಲು ಅಥವಾ 550 ಕಿಲೋಮೀಟರ್ ದೂರದಲ್ಲಿರುವ ಮರುಭೂಮಿ ನಗರವಾದ ತಬಾಸ್ ಬಳಿ ಮುಂಜಾನೆ ಕತ್ತಲೆಯಲ್ಲಿ ಈ ಭೀಕರ ದುರ್ಘಟನೆ ನಡೆದಿದೆ ಎಂದು ಇರಾನ್ ರಾಜ್ಯ ದೂರದರ್ಶನ ವರದಿ ಮಾಡಿದೆ.

ಬೆಂಗಳೂರಿನ ಹದಗೆಟ್ಟ ರಸ್ತೆ ಬಗ್ಗೆ ಕಿರಣ್ ಮಂಜುಂದಾರ್ ಟ್ವೀಟ್

ಬೆಂಗಳೂರು (ಜೂ 8): ರಾಜಧಾನಿ ಬೆಂಗಳೂರಲ್ಲಿ (Bengaluru) ಅನೇಕ ರಸ್ತೆಗಳು (Road) ಗುಂಡಿಬಿದಿದ್ದು, ಹದಗೆಟ್ಟಿದ್ದು, ವಾಹನಗಳು ರಸ್ತೆಗಳಿದ್ರೆ ಮನೆ ತಲುಪೋ ವೇಳೆಗೆ ಸವಾರರು ಬೇಸತ್ತು ಹೋಗಿರುತ್ತಾರೆ ಹದಗೆಟ್ಟ ರಸ್ತೆಗಳ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ (Tweet) ಮೂಲಕ ಬೇಸರ ಹೊರಹಾಕಿದ್ದ ಬಯೋಕಾನ್​​ ಮುಖ್ಯಸ್ಥೆ ಕಿರಣ್​​ ಮಜುಂದಾರ್​ ಷಾ (Kiran Mazumdar Shaw), ಇದೀಗ ಮತ್ತೊಮ್ಮೆ ಅದೇ ವಿಚಾರವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ. ಬೆಂಗಳೂರು-ಮೈಸೂರು ನಡುವಿನ ರಸ್ತೆಯ ನೈಸ್​​ ರಸ್ತೆ ಜಂಕ್ಷನ್​ ಸಮೀಪದಲ್ಲಿ ಹತ್ತಾರು ಗುಂಡಿಗಳು ಕಾಣಿಸಿ ಕೊಂಡಿರುವ ವಿಡಿಯೋ ತುಣುಕನ್ನು ಶ್ರೀರಾಮ್‌ ಬಿಎನ್‌ ಎನ್ನುವವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಷಾ, 'ಇದು ಆಘಾತಕಾರಿ ಮತ್ತು ನಾಚಿಕೆಗೇಡು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

BY Vijayendraಗೆ ಒಳ್ಳೆಯ ಭವಿಷ್ಯ ಇದೆ, ಎಲ್ಲೇ ನಿಂತರೂ ಗೆಲ್ತಾರೆ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರು ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರ ಹಿನ್ನೆಲೆ ವಿಜಯಪುರಕ್ಕೆ (Vijayapura) ಭೇಟಿ ನೀಡಿರುವ ಯಡಿಯೂರಪ್ಪನವರು ಮಾಧ್ಯಮಗಳ ಜೊತೆ ಮಾತನಾಡಿದರು. ಪರಿಷತ್ ಚುನಾವಣಾ ಪ್ರಚಾರಕ್ಕೆ (MLC Election Campaign) ಆಗಮಿಸಿದ್ದೇನೆ. ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ರಾಜ್ಯಸಭಾ ಚುನಾವಣೆಯಲ್ಲಿ (Rajysabha Elections) ಮೂರು ಕಡೆ ಸ್ಪರ್ದೆ ಮಾಡಿದ್ದೇವೆ. ಮೂರೂ‌ ಸ್ಥಾನಗಳಲ್ಲಿ ‌ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಲೆಹರ್ ಸಿಂಗ್ (Lehar Singh) ಅವರೂ ದೊಡ್ಡ ಅಂತರದಿಂದ ಗೆಲ್ಲುತ್ತಾರೆ ಎಂದು ನುಡಿದರು.

ಕುವೆಂಪು ಅವರಿಗೆ ಅವಮಾನವಾದ್ರೆ ಅದು ಬರಗೂರು ರಾಮಚಂದ್ರಪ್ಪರಿಗೆ ಸೇರುತ್ತೆ

ಇಂದು ಧಾರವಾಡದಲ್ಲಿ (Dharwad) ಶಿಕ್ಷಣ ಸಚಿವ ಬಿ ಸಿ ನಾಗೇಶ್ (Education Minister BC Nagesh) ಸುದ್ದಿಗೋಷ್ಠಿ ನಡೆಸಿ ಪಠ್ಯಪುಸ್ತಕ ವಿವಾದ ಕುರಿತು ಮಾತನಾಡಿದರು. ಪರಿಷ್ಕರಣೆ (review) ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆ ಇರಬೇಕು. ಆದ್ರೆ ತಪ್ಪು ಆಗಿದ್ದನ್ನ ನಾವು ಗಮನಿಸಿ ಅದನ್ನ ಮರು ಪರಿಷ್ಕರಣೆಗೆ (Textbook review) ಮುಂದಾಗಿದ್ದೇವೆ ಎಂದು ಹೇಳಿದರು. ಲೋಪದೋಷಗಳನ್ನ ಯಾರೇ ಕಂಡು ಹಿಡಿದರು ಅದನ್ನ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನ ಮುಚ್ಚಿಡುವುದು ನಾವು ಮಾಡುತ್ತಿಲ್ಲ. ವಾದ ವಿವಾದ ಮಕ್ಕಳ (Children) ಮೇಲೆ ಪರಿಣಾಮ ಬಿರಬಾರದು. ಹೀಗಾಗಿ ಅದನ್ನ ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
Published by:Pavana HS
First published: