Evening Digest: ಚಡ್ಡಿ ತೆಗೆದುಕೊಂಡು ಹೋದವ್ರು ಅಂದರ್, ಎಎಪಿ ಸೇರಿದ ಚಂದ್ರು! ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ ಓದಿ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಸುದ್ದಿಗಳ ಗುಚ್ಛ ಇಲ್ಲಿದೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ; ‘ಮೂರು ಪಕ್ಷಗಳಲ್ಲಿ ಪ್ರಾಮಾಣಿಕರೇ ಅಸ್ಪೃಶ್ಯರು’

ಬೆಂಗಳೂರು (ಜೂ 7): ರಾಜ್ಯಸಭೆ (Rajya Sabha) ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ (Congress) ಪಕ್ಷಕ್ಕೆ ರಾಜೀನಾಮೆ (Resignation) ನೀಡಿದ ಹಿರಿಯ ಚಿತ್ರನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಇಂದು 'ಆಮ್ ಆದ್ಮಿ' ಪಕ್ಷ  (Aam Aadmi Party) ಸೇರ್ಪಡೆಯಾಗಿದ್ದಾರೆ. ಖಾಸಗಿ ಹೋಟೆಲ್​​​ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಪ್​​ನ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ (AAP President Prithvi Reddy) ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಿದ್ದಾರೆ.

Activist Arrest: ಸಿದ್ದು ಮನೆಗೆ ಚಡ್ಡಿ ತಗೊಂಡು ಹೋದವರು ಅರ್ಧ ದಾರಿಯಲ್ಲೇ ಅಂದರ್​​

ಬೆಂಗಳೂರು (ಜೂ.7): ಸಿದ್ದರಾಮಯ್ಯ (Siddaramaiah) ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಕೈಗೊಳ್ಳುವುದಾಗಿ ಹೇಳ್ತಿದ್ದಂತೆ ಬಿಜೆಪಿ ಹಾಗೂ RSS ನಾಯಕರು ಸಿಡಿದೆದ್ದಿದ್ದಾರೆ. ಚಡ್ಡಿಗಳನ್ನು ಸಂಗ್ರಹಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನೆಯ ಬಳಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು (BJP Activist) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕುಮಾರ ಪಾರ್ಕ್ ನಲ್ಲಿರುವ (Kumara park) ಸಿದ್ದರಾಮಯ್ಯ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭದಲ್ಲಿ ಚಡ್ಡಿಯನ್ನು ಸಾಂಕೇತಿಕವಾಗಿ ಪ್ರದರ್ಶನ ಮಾಡಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಇದನ್ನೂ ಓದಿ:  Activist Arrest: ಸಿದ್ದು ಮನೆಗೆ ಚಡ್ಡಿ ತಗೊಂಡು ಹೋದವರು ಅರ್ಧ ದಾರಿಯಲ್ಲೇ ಅಂದರ್​​

ತಾಯಿಯ ಲವರ್​ನಿಂದ ಮಗಳ ಮೇಲೆ ರೇಪ್! ಮಗಳ ಅಂಡಾಣು ಮಾರಿ ಹಣ ಮಾಡ್ತಿದ್ದ ತಾಯಿ

ಈರೋಡ್‌ನ ಖಾಸಗಿ ಫರ್ಟಿಲಿಟಿ ಕ್ಲಿನಿಕ್‌ನಲ್ಲಿ (Fertility Clinic) ಎಂಟು ಬಾರಿ ಅಪ್ರಾಪ್ತ ಬಾಲಕಿಯ (Minor Girl) ಮೊಟ್ಟೆಯನ್ನು ದಾನ ಮಾಡುವಂತೆ ಒತ್ತಾಯಿಸಿದ ಇಬ್ಬರು ಮಹಿಳೆಯರು ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಕ್ಕಳ ಲೈಂಗಿಕ ರಕ್ಷಣೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ, ಜೂನ್ 3 ರಂದು ಅಪರಾಧಗಳ (POCSO) ಕಾಯಿದೆ ಅಡಿಯಲ್ಲಿ ದೂರು ದಾಖಲಾಗಿದೆ. ಪೊಲೀಸರು, ಹುಡುಗಿಯ ಕೆಲವು ನಿಕಟ ಸಂಬಂಧಿಗಳ ದೂರಿನ ಆಧಾರದ ಮೇಲೆ, ಆಕೆಯ ತಾಯಿ, ಮಹಿಳೆಯ ಸಂಗಾತಿ ಮತ್ತು ಇನ್ನೊಬ್ಬ ಮಹಿಳೆಯನ್ನು ಗುರುವಾರ ಬಂಧಿಸಲಾಗಿದೆ.

Nupur Sharma: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೇಸ್‌ನಲ್ಲಿ ನೂಪುರ್‌ಗೆ ಸಮನ್ಸ್ , ಅತ್ತ ಬಿಜೆಪಿ ಮಾಜಿ ವಕ್ತಾರೆಯಿಂದಲೂ ದೂರು

ಮಹಾರಾಷ್ಟ್ರ: ಪ್ರವಾದಿ ಮಹಮ್ಮದ್ ಪೈಗಂಬರ್ (Prophet Muhammad Paigambar) ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ (offensive statement) ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ (Former BJP Spokesperson) ನೂಪುರ್ ಶರ್ಮಾಗೆ (Nupur Sharma) ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಪ್ರವಾದಿ ವಿರುದ್ಧ ಹೇಳಿಕೆ ನೀಡುತ್ತಿದ್ದಂತೆ ಅವರನ್ನು ಪಕ್ಷದಿಂದ ವಜಾ (dismissed) ಮಾಡಿದ ಬಿಜೆಪಿ (BJP), ಅವರಿಂದ ಅಂತರ ಕಾಯ್ದಕೊಂಡಿತ್ತು. ಮತ್ತೊಂದೆಡೆ ಮುಸ್ಲಿಂ ರಾಷ್ಟ್ರಗಳೂ (Muslim Countries) ಸಹ ನೂಪುರ್ ಹೇಳಿಕೆ ವಿರೋಧಿಸಿ, ಭಾರತೀಯ ವಸ್ತುಗಳನ್ನು ಬಹಿಷ್ಕರಿಸೋದಾಗಿ ಎಚ್ಚರಿಸಿತ್ತು. ಇದೀಗ ನೂಪುರ್ ಶರ್ಮಾ ವಿರುದ್ದ ಮಹಾರಾಷ್ಟ್ರದ ಮುಂಬ್ರ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಮತ್ತೊಂದೆಡೆ ತಮಗೆ ಜೀವ ಬೆದರಿಕೆ ಬರುತ್ತಿದೆ ಅಂತ ನೂಪುರ್ ಶರ್ಮಾ ಕೂಡ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: Nupur Sharma: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೇಸ್‌ನಲ್ಲಿ ನೂಪುರ್‌ಗೆ ಸಮನ್ಸ್ , ಅತ್ತ ಬಿಜೆಪಿ ಮಾಜಿ ವಕ್ತಾರೆಯಿಂದಲೂ ದೂರು

4 ವರ್ಷದ ಹಿಂದಿನ ಪುನೀತ್ ಟ್ವೀಟ್​ ವೈರಲ್, ಇದು ನಿಜವಾಗಬಾರದಿತ್ತೇ ಎಂದು ಅಭಿಮಾನಿಗಳ ಕಣ್ಣೀರು

ಪುನೀತ್ ರಾಜ್​ಕುಮಾರ್, (Puneeth Rajkumar)  ಕರುನಾಡ ಆರಾಧ್ಯ ದೈವ. ಅವರಿಲ್ಲದೇ ಸುಮಾರು 7 ತಿಂಗಳು ಕಳೆದಿದೆ ಎಂಬುದನ್ನ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಲ್ಲ ಎಂದು ತಿಳಿದ ಕ್ಷಣದಿಂದ ಅಭಿಮಾನಿಗಳ (Fans)  ನೋವು ಹೇಳತೀರದು. ಅಂದಿನಿಂದ ಇಂದಿನವರೆಗೆ ಅವರನ್ನು ಆರಾಧಿಸದ ದಿನವಿಲ್ಲ. ಕರ್ನಾಟಕದ ಪ್ರತಿ ಮೂಲೆಯಲ್ಲಿ ಅವರನ್ನು ಪ್ರತಿದಿನ ನೆನೆಯಲಾಗುತ್ತದೆ. ಅವರೊಬ್ಬ ಅಮರ ಚೇತನ ಎನ್ನಬಹುದು. ದಿನಕ್ಕೆ ಒಮ್ಮೆಯಾದರೂ ಅಭಿಮಾನಿಗಳು ಯಾವುದಾದರೂ ಕಾರಣಕ್ಕೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ ಅವರು ನಾಲ್ಕು ವರ್ಷದ ಹಿಂದೆ ಇದೇ ದಿನ ಅಂದರೆ ಜೂನ್ 7ರಂದು ಅಪ್ಪು ಮಾಡಿದ್ದ ಟ್ವೀಟ್​ (Tweet) ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ಇದು ನಿಜವಾಗಬಾರದೇ ಎಂದು ಕಣ್ಣೀರು ಹಾಕುತ್ತಿದ್ದಾರೆ.
Published by:Annappa Achari
First published: