Top-5 News: ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್, ಮುಂಬೈನಲ್ಲಿ ರಶ್ಮಿಕಾ ಕ್ರೇಜ್! ಇಂದಿನ ಟಾಪ್-5 ಸುದ್ದಿಗಳು ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
8 ಗಂಟೆ ಟ್ರಾಫಿಕ್ ಜಾಮ್! ಇದಕ್ಕೆ ಕಾರಣ ಇಷ್ಟು ಚಿಕ್ಕ ವಿಷಯ

ಅಮೆರಿಕಾದ (America) ನೆವಾಡಾದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಸಂಗೀತ ಮತ್ತು ಸಂಸ್ಕೃತಿ ಉತ್ಸವ 'ಬರ್ನಿಂಗ್ ಮ್ಯಾನ್ ಶೋ' (Burning Man Show) ಮುಕ್ತಾಯಗೊಂಡಿದೆ. ಆದರೆ ಸಮಾರಂಭ ಮುಗಿಸಿಕೊಂಡು ಬ್ಲಾಕ್ ರಾಕ್ ಮರುಭೂಮಿಯಿಂದ (Black Rock Desert) ಹೊರಟವರು ಎಂಟು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ (Traffic Jam) ಸಿಲುಕಿಕೊಂಡರು ಎಂದು ಸುದ್ದಿವಾಹಿನಿಯ ಪೋಸ್ಟ್ ತಿಳಿಸಿದೆ. ಮೂರು ವರ್ಷಗಳ ಕೋವಿಡ್ ನಂತರ ಇದೇ ಮೊದಲ ಬಾರಿಗೆ ನಡೆದ ಉತ್ಸವವಾಗಿದ್ದು ಮೋಜು-ಮಸ್ತಿಯ ನಂತರ ಸಂಭವಿಸಿದ ಟ್ರಾಫಿಕ್ ಜಾಮ್‌ನ ಚಿತ್ರಗಳು ಇದೀಗ ಆನ್‌ಲೈನ್‌ನಲ್ಲಿ (Online) ವೈರಲ್ ಆಗುತ್ತಿವೆ. ಟ್ರಾಫಿಕ್ ಕುರಿತು ಸ್ವತಃ ಪೋಸ್ಟ್ ಮಾಡಿದ್ದ ಬರ್ನಿಂಗ್ ಮ್ಯಾನ್ ಅಧಿಕೃತ ಟ್ವಿಟ್ಟರ್ ಖಾತೆಯು ಸಾಮೂಹಿಕ ನಿರ್ಗಮನದ ಕಾಯುವಿಕೆಯು ಪ್ರಸ್ತುತ ಸುಮಾರು ಎಂಟುಗಂಟೆಗಳಾಗಿದೆ ಎಂದು ಟ್ವೀಟ್ ಮಾಡಿದೆ.

ಹನಿ'ಗಾಗಿ ಬಲೆಬೀಸಿ ತಾನೇ ಟ್ರ್ಯಾಪ್ ಆದನಾ ಚಿನ್ನದ ಉದ್ಯಮಿ? 

ಮಂಡ್ಯ: ದಕ್ಷಿಣ ಕನ್ನಡ (Dakshina Kannada) ಮೂಲದ ಚಿನ್ನದ ವ್ಯಾಪಾರಿಯೂ (Gold Trader) ಆಗಿರುವ ಬಿಜೆಪಿ ಮುಖಂಡರೊಬ್ಬರನ್ನು (BJP Leader) ಹನಿಟ್ರ್ಯಾಪ್ ಕೇಸ್‌ನಲ್ಲಿ (Honeytrap Case) ಸಿಲುಕಿಸಲಾಗಿತ್ತು ಅಂತ ಹೇಳಲಾಗಿತ್ತು. ಯುವತಿ (Girl) ಹಾಗೂ ಕೆಲವು ದುಷ್ಕರ್ಮಿಗಳು ಚಿನ್ನದ ಉದ್ಯಮಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ, ಬೆದರಿಸಿದ್ದಾರೆ. ಅವರಿಂದ 50 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಶೆಟ್ಟಿ ಎಂಬುವರು ಮಂಡ್ಯ ನಗರದಲ್ಲಿ (Mandya City) ಶ್ರೀನಿಧಿ ಗೋಲ್ಡ್​ (Srinidhi Gold) ಮಾಲೀಕರಾಗಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಇವರು ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಮೈಸೂರಿಗೆ (Mysuru) ಡ್ರಾಪ್​ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು. ನಂತರ ಚಿನ್ನದ ಪರೀಕ್ಷೆಗೆಂದು ಅಪಹರಿಸಿದ್ದಾರೆ (Kidnap). ಜಗನ್ನಾಥ ಶೆಟ್ಟಿ ಅವರನ್ನು ಅಪಹರಿಸಿ ಲಾಡ್ಜ್​ ರೂಮ್​ಗೆ ಕರೆದೊಯ್ಯುತ್ತಿದ್ದಾರೆ. ರೂಮ್​ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 50 ಲಕ್ಷ ಪಡೆದಿದ್ದಾರೆ ಅಂತ ಖುದ್ದು ಜಗನ್ನಾಥ್ ಶೆಟ್ಟಿಯವರೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಈ ಕೇಸ್‌ನ ತನಿಖೆ ಮುಂದುವರೆದಿದ್ದು, ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: Honeytrap: 'ಹನಿ'ಗಾಗಿ ಬಲೆಬೀಸಿ ತಾನೇ ಟ್ರ್ಯಾಪ್ ಆದನಾ ಚಿನ್ನದ ಉದ್ಯಮಿ? ಸ್ಫೋಟಕ ವಿಡಿಯೋದಿಂದ ಬಿಗ್ ಟ್ವಿಸ್ಟ್

ಯುವತಿಯ ಕಿವಿಯಲ್ಲಿ ಹೊಕ್ಕಿದ ಹಾವು! 

ಕೆಲವು ವಿಷಯಗಳನ್ನು ನಂಬಲೇ ಸಾಧ್ಯವಿಲ್ಲ, ಅಷ್ಟು ಅಚ್ಚರಿ, ಅಷ್ಟು ಶಾಕಿಂಗ್ (Shocking News) ಆಗಿರುತ್ತವೆ. ಆದರೆ ಅಂತಹ ಘಟನೆಗಳು ನಿಜಕ್ಕೂ ನಡೆದಿರುತ್ತವೆ. ಫೋಟೋ, ವಿಡಿಯೋ ಸಿಕ್ಕರೂ ಅದನ್ನು ನೋಡಿಯೂ ಅಬ್ಬಾ! ಜಗತ್ತಲ್ಲಿ ಹೀಗೆಲ್ಲ ನಡೆಯುತ್ತಾ ಅಂತ ಅನಿಸುತ್ತೆ. ಅಂತಹುದೇ ಒಂದು ವಿಡಿಯೋ (video Viral) ಇದೀಗ ಭಾರೀ ವೈರಲ್ (Viral Video) ಆಗುತ್ತಿದೆ. ಸದ್ಯ ಭಾರೀ ಸಂಖ್ಯೆಯಲ್ಲಿ ಶೇರ್ ಆಗುತ್ತಿರುವ ಇನ್ಸ್ಟಾಗ್ರಾಮ್ ಪೋಸ್ಟ್​ನಲ್ಲಿರುವ ವಿಡಿಯೋದಲ್ಲಿ ಯುವತಿಯೋರ್ವಳ ಕಿವಿಯಲ್ಲಿ ಹಾವು  (Snake in Ears Video Viral) ಹೊಕ್ಕಿಕೊಂಡಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಶ್ರೀವಲ್ಲಿ ಹೋದಲ್ಲೆಲ್ಲಾ ಜನವೋ ಜನ; ಇದು ರಶ್ಮಿಕಾ ಮಂದಣ್ಣ ಕ್ರೇಜ್​!

ನಟಿ ರಶ್ಮಿಕಾ ಮಂದಣ್ಣ(Rashmika Madanna)  ಅವರು ಅಮಿತಾಬ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರ ಜೊತೆ ನಟಿಸುತ್ತಿರೋ ರಶ್ಮಿಕಾ ಮಂದಣ್ಣ ಗುಡ್‌ಬೈ (GoodBye) ಚಿತ್ರದ ಪ್ರಚಾರಕ್ಕಿಳಿದಿದ್ದಾರೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟಿ ತನ್ನ ಹಿಂದಿನ ಪಾತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗುಡ್ ಬೈ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮಕ್ಕಾಗಿ 'ಶ್ರೀವಲ್ಲಿ' ರಶ್ಮಿಕಾ ಮಂದಣ್ಣ ಮುಂಬೈನಲ್ಲಿರೋ ಕಾಲೇಜಿಗೆ ಭೇಟಿ ನೀಡಿದ್ದರು. ಟ್ರೇಲರ್ ಬಿಡುಗಡೆಯ ನಂತರ, ವೇದಿಕೆ ಮೇಲೆ ರಶ್ಮಿಕಾ ಬರ್ತಿದ್ದಂತೆ ಅಭಿಮಾನಿಗಳು ರಶ್ಮಿಕಾ, ರಶ್ಮಿಕಾ ಎಂದು ಜೋರಾಗಿ ಕೂಗಿದ್ದಾರೆ.

ಇದನ್ನೂ ಓದಿ: Rashmika Mandanna: ಶ್ರೀವಲ್ಲಿ ಹೋದಲ್ಲೆಲ್ಲಾ ಜನವೋ ಜನ; ಇದು ರಶ್ಮಿಕಾ ಮಂದಣ್ಣ ಕ್ರೇಜ್​!

IND vs AFG Asia Cup 2022: ಭಾರತ-ಅಫ್ಘಾನಿಸ್ತಾನ ಪಂದ್ಯದಲ್ಲಿ ಇಂದು ಟೆನ್ಷನ್ ಹೆಚ್ಚಿಸಬಲ್ಲ ಆಟಗಾರರು

IND vs AFG Asia Cup: ಇಂದು ಏಷ್ಯಾ ಕಪ್ ಸೂಪರ್ 4 ಸುತ್ತಿನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಈಗಾಗಲೇ ಫೈನಲ್‌ ರೇಸ್‌ನಿಂದ ಹೊರಗುಳಿದಿವೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಷ್ಯಾಕಪ್ 2022 ರಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ರೋಹಿತ್ ಪ್ರಸಕ್ತ ಟೂರ್ನಿಯಲ್ಲಿ 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಅನುಭವಿ ಬಲಗೈ ಆರಂಭಿಕ ಆಟಗಾರ, ರೋಹಿತ್ ನಡೆಯುತ್ತಿರುವ ಏಷ್ಯಾ ಕಪ್‌ನ ನಾಲ್ಕು ಪಂದ್ಯಗಳಲ್ಲಿ 133 ರನ್ ಗಳಿಸಿದ್ದಾರೆ, ಇದರಲ್ಲಿ ಶ್ರೀಲಂಕಾ ವಿರುದ್ಧ ಅದ್ಭುತ 72 ರನ್ ಕೂಡ ಸೇರಿದೆ.
Published by:Annappa Achari
First published: