Evening Digest sep 7: ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ, ರಾಜ್ಯದಲ್ಲೂ ನಿಫಾ ಭೀತಿ: ಇಂದಿನ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

 • Share this:
Dasara holidays for schools in karnataka 2021: ರಾಜ್ಯ ಶಿಕ್ಷಣ ಇಲಾಖೆ 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದ ದಸರಾ ರಜೆ(Dussehra holiday) ಹಾಗೂ ಬೇಸಿಗೆ ರಜೆ(summer holiday)ಯನ್ನು ಘೋಷಿಸಿ ಆದೇಶ ಹೊರಡಿಸಿದೆ. ಆಕ್ಟೋಬರ್ 10 ರಿಂದ 20 ರವರೆಗೆ ಒಟ್ಟು 10 ದಿನಗಳ ಕಾಲ ರಾಜ್ಯದ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ. 10 ದಿನಗಳ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ. ಇನ್ನು ಇದೇ ಸಮಯದಲ್ಲಿ 2021-2022 ಶೈಕ್ಷಣಿಕ ವರ್ಷದ ಬೇಸಗಿಗೆ ರಜೆಯ ಬಗ್ಗೆಯೂ ಮಾಹಿತಿ ನೀಡಿದೆ. ಶಾಲಾ ಮಕ್ಕಳಿಗೆ 2022ರ ಮೇ 1 ರಿಂದ ಮೇ 28 ರವರೆಗೆ ಬೇಸಿಗೆ ರಜೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಅನ್ವಯಿಸಲಿದೆ.

ರಾಜ್ಯದಲ್ಲಿ ನಿಫಾ ಭೀತಿ..!

ಪಕ್ಕದ ಕೇರಳದಲ್ಲಿ ನಿಫಾ ಸೋಂಕು ದೃಢ ಹಿನ್ನೆಲೆಯಲ್ಲಿ ರಾಜ್ಯದಲ್ಲಿ‌ ನಿಫಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ನಿಫಾ ವೈರಸ್ ಸೋಂಕಿನ ಗುಣ ಲಕ್ಷಣಗಳನ್ನು ಪಟ್ಟಿ ನೀಡಲಾಗಿದೆ

 • ಜ್ವರ

 • ಮೈಕೈ ನೋವು

 • ನಡುಕ

 • ತೊದಲುವಿಕೆ

 • ತಲೆನೋವು

 • ವಾಂತಿ

 • ನಿದ್ರಾಲಸ್ಯ

 • ಪ್ರಜ್ಞಾಹೀನತೆ


ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಏನು ಮಾಡಬಾರದು..?

 • ಪ್ರಾಣಿಗಳು & ಪಕ್ಷಿಗಳು ಕಚ್ಚಿದ ಹಣ್ಣು ತಿನ್ನಬಾರದು

 • ಬಾವಲಿಗಳು ಅತಿ ಹೆಚ್ಚು ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ‌ನಿರಾ ಕುಡಿಯಬಾರದ

 • ರೋಗಿಯ ಶರೀರ ದ್ರಾವದಿಂದ (ಜೊಲ್ಲು, ಬೆವರು, ಮೂತ್ರ ಇತ್ಯಾದಿ) ಸಂಪರ್ಕ ತಪ್ಪಿಸಿ
ಕಲಬುರಗಿಯಲ್ಲಿ ಜೆಡಿಎಸ್​ ಜೊತೆ ಮೈತ್ರಿಗೆ ಖರ್ಗೆ ಕರೆ

ಪಾಲಿಕೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ, ಕಲಬುರಗಿ ಪಾಲಿಕೆಯಲ್ಲಿ ನಮ್ಮ ಜೊತೆ ಮೈತ್ರಿ ನಡೆಸಲು ಇವತ್ತು ಕಾಂಗ್ರೆಸ್ ಅವರು ಸಮಾಲೋಚನೆ ಮಾಡುತ್ತಿದ್ದಾರಂತೆ. ಖರ್ಗೆಯವರು ಮಾತನಾಡಿದ್ದಾರೆ ಪಕ್ಷದ ಪರವಾಗಿಯೇ ಮಾತನಾಡಿದ್ದಾರೆಇನ್ನು ಬಿಜೆಪಿ ನಮ್ಮಗೆ ಯಾವುದೇ ಸಂಪರ್ಕ ನಡೆಸಿಲ್ಲ. ಈ ಹಿನ್ನಲೆ ಅಲ್ಲಿ ಯಾರು ಗೆದ್ದಿದ್ದಾರೋ ಆ ಮುಖಂಡರು ಬಳಿ ಚರ್ಚೆ ಮಾಡಿ ಈ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ. ಅಧ್ಯಕ್ಷರು ಹಾಗೂ ಅವರ ಮುಖಂಡರ ಅಭಿಪ್ರಾಯ ಏನಿದೆ ಗೊತ್ತಿಲ್ಲ ಎಂದರು.

ಗಣೇಶ ಹಬ್ಬಕ್ಕೆ ಷರತ್ತು ಬದ್ಧ ಅನುಮತಿ

ಸೋಂಕಿನ ಕಾರಣದಿಂದ ಗಣೇಶ ಹಬ್ಬ ಆಚರಿಸಲು ಷರತ್ತು ಬದ್ಧ ಅನುಮತಿಯನ್ನು ಸರ್ಕಾರ ನೀಡಿದೆ. ಬೆಂಗಳೂರಿನ 198 ವಾರ್ಡ್​ಗಳಲ್ಲಿ ಒಂದೊಂದು ವಾರ್ಡ್​ನಲ್ಲಿ ಕೇವಲ ಒಂದು ಗಣಪತಿಯನ್ನು ಮಾತ್ರ ಸ್ಥಾಪಿಸಲು ಅವಕಾಶ ನೀಡಲಾಗಿದ್ದು, ಈ ಸಂಬಂಧ ವಾರ್ಡ್​ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ ಹಾಗೂ  ಸ್ಥಳವನ್ನು ಪಾಲಿಕೆ ನಿಗದಿ ಮಾಡುತ್ತದೆ. ಸಾರ್ವಜನಿಕರ ವಾಹನಗಳಿಗೆ ಯಾವುದೇ ಅಡ್ಡಿಯಾಗದಂತೆ ಗಣೇಶ ಮೂರ್ತಿಯನ್ನು ಸ್ಥಾಪಿಸಬೇಕು. ಆಯಾ ವಿಭಾಗದ ಸಂಚಾರಿ ಪೊಲೀಸರು ಈ ಬಗ್ಗೆ ಕ್ರಮ ತೆಗದುಕೊಳ್ಳಬೇಕು. ನಾಲ್ಕು ಅಡಿ ಎತ್ತರ ಮೀರಿ ಗಣೇಶ ಮೂರ್ತಿ ಕೂರಿಸುವಂತಿಲ್ಲ. ಕೆರೆಗಳಲ್ಲಿ ವಿಸರ್ಜನೆಗೆ ಅವಕಾಶ ಇಲ್ಲ. ಯಾವುದೇ ಸಾರ್ವಜನಿಕ   ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ. ಕೇವಲ ಪೂಜೆ ಮಾಡಲು ಅವಕಾಶ ನೀಡಲಾಗಿದೆ‌. ಸಾರ್ವಜನಿಕವಾಗಿ ಸ್ಥಾಪಿರುವ ಗಣಪತಿಯ ದರ್ಶನಕ್ಕೆ ಬರುವ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಅಪಘಾತಕ್ಕೆ ವರ ಬಲಿ 

ಮೈಸೂರಿನ ಗಾಂಧಿನಗರದ ಜಯಲಕ್ಷ್ಮಿ ಮತ್ತು ಸುಬ್ರಹ್ಮಣ್ಯ ಅವರ ಹಿರಿಯ ಮಗ ವಿಶ್ವನಾಥ್ ನ ಮದುವೆ ಬೆಂಗಳೂರಿನ ಹುಡುಗಿಯೊಂದಿಗೆ ಫಿಕ್ಸ್ ಆಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಸಪ್ಟೆಂಬರ್ 19 ರಂದು ಮದುವೆಯೂ ಆಗುತ್ತಿತ್ತು. ಆದರೆ  ಮಡಿಕೇರಿಯ ಸಂಪಿಗೆ ಕಟ್ಟೆ ಬಳಿ ನಡೆದ ಬೈಕ್ ಅಪಘಾತದಲ್ಲಿ ಮದುಮಗ ವಿಶ್ವನಾಥ್ ಮತ್ತು ಆತನ ದೊಡ್ಡಮ್ಮನ ಮಗ ದಿನೇಶ್ ದಾರುಣವಾಗಿ ಮೃತಪಟ್ಟಿದ್ದಾರೆ.
Published by:Kavya V
First published: