Evening Digest: ಗುರೂಜಿ ಹಂತಕರು ಬಾಯ್ಬಿಟ್ರು ಸತ್ಯ, ಇನ್ನೂ 5 ದಿನ ರಾಜ್ಯದಲ್ಲಿ ಭಾರೀ ಮಳೆ; ಈ ಸಂಜೆಯ ಪ್ರಮುಖ ಸುದ್ದಿಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕೊಲೆ ಹಿಂದಿನ ಸತ್ಯ ಬಿಚ್ಚಿಟ್ಟ ಆರೋಪಿಗಳು

ಹುಬ್ಬಳ್ಳಿ (ಜು. O7) : ಹುಬ್ಬಳ್ಳಿಯಲ್ಲಿ ನಡೆದ ವಾಸ್ತು ತಜ್ಞ ಚಂದ್ರಶೇಖರ್​ ಗುರೂಜಿ (Chandrashekhar Guruji) ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ. ಈಗಾಗಲೇ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿರೋ ಇಬ್ಬರೂ ಆರೋಪಿಗಳು (Accused) ಪೊಲೀಸರ ಎದುರು ತಪ್ಪೊಪಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಂದ ಇಬ್ಬರು ಹಂತಕರಿಗೆ ಫುಲ್ ಡ್ರೀಲ್ ನಡೆದಿದೆ. ವಿಚಾರಣೆ ವೇಳೆ ಮಹಾಂತೇಶ ಶಿರೂರ, ಮಂಜುನಾಥ ಮರೆವಾಡ ಸತ್ಯ ಬಿಚ್ಚಿಟ್ಟಿದ್ದಾರೆ. ಬೇನಾಮಿ ಆಸ್ತಿ ಜೊತೆಗೆ, ಗುರೂಜಿ ತಮಗೆ ನಿರಂತವಾಗಿ ನೀಡ್ತಿದ್ದ ಕಿರುಕುಳದಿಂದ ಬೇಸತ್ತು ಈ ಕೃತ್ಯ ನಡೆಸಿರೋದಾಗಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರೀ ಮಳೆ

ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಭಾಗದಲ್ಲಿ ಇನ್ನೂ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಕರಾವಳಿ ಭಾಗಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಇನ್ನೂ 5 ದಿನಗಳ ಕಾಲ ಭಾರೀ ಮಳೆಯಾಗಲಿದೆ .ಕಳೆದ ಎರಡು ಮೂರು ದಿನದಿಂದ ರಾಜ್ಯದ ಬಹುತೇಕ ಭಾಗದಲ್ಲಿ ಭಾರೀ ಮಳೆ ಆಗ್ತಿದೆ. ನಿನ್ನೆ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ 21 cm ಮಳೆಯಾಗಿದೆ. ರಾಜ್ಯದ 22 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ


ರಾಜೀನಾಮೆ ನೀಡಲು ಒಪ್ಪಿದ ಬೋರಿಸ್ ಜಾನ್ಸನ್

ಬ್ರಿಟನ್(ಜು.07): ಬ್ರಿಟನ್​ನಲ್ಲಿ ತ್ವರಿತ ರಾಜಕೀಯ ಬೆಳವಣಿಗಳು ಕಂಡುಬರುತ್ತಿದ್ದು ಒತ್ತಡಕ್ಕೆ ಮಣಿದು ಕೊನೆಗೂ ಪ್ರಧಾನಿ (Prime Minister) ಬೋರಿಸ್ ಜಾನ್ಸನ್ (Boris Johnson) ರಾಜೀನಾಮೆ (Resign) ನೀಡಲು ಒಪ್ಪಿಕೊಂಡಿದ್ದಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್  (Rishi Sunak) ಅವರು ಬ್ರಿಟನ್ (Britain) ಹಣಕಾಸು ಸಚಿವರಾಗಿ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಈ ಘಟನೆ ನಡೆದಿದ್ದು ಅಲ್ಲಿನ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಬೆಳವಣಿಗೆ ನಿರೀಕ್ಷಿಸಬಹುದಾಗಿದೆ. ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಅವರ ಕಚೇರಿ ಗುರುವಾರ ತಿಳಿಸಿದೆ. ಬ್ರಿಟನ್ ಸರ್ಕಾರವನ್ನು ಅತಂತ್ರ ಸ್ಥಿತಿಗೆ ತಲುಪಿದ ನಂತರ ಪ್ರಧಾನಿ ಅವರ ನಿರ್ಧಾರದಿಂದ  ರಾಜಕೀಯ ಬಿಕ್ಕಟ್ಟು ಕೊನೆಗೊಂಡಿದೆ. ಆದರೆ ಮತ್ತಷ್ಟು ಬೆಳವಣಿಗೆ ನಡೆಯುವ ಸಾಧ್ಯತೆಗೆ ಇದು ನಾಂದಿಯಾಗಿದೆ.

ಲಾಲು ಪ್ರಸಾದ್​ ಯಾದವ್ ಆರೋಗ್ಯ ಗಂಭೀರ

ದೆಹಲಿ(ಜು.07): ವರ್ಣರಂಜಿತ ರಾಜಕಾರಣಿ ಹಾಗೂ ರಾಷ್ಟ್ರೀಯ ಜನತಾದಳ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Rastriya Janata Dal President Lalu Prasad Yadav) ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೆಚ್ಚಿನ‌ ಚಿಕಿತ್ಸೆಗಾಗಿ ಲಾಲು ಪ್ರಸಾದ್ ಯಾದವ್‌ ಅವರನ್ನು ಬುಧವಾರ ರಾತ್ರಿ ಪಾಟ್ನಾ (Patna) ಆಸ್ಪತ್ರೆಯಿಂದ ವಿಮಾನದ ಮೂಲಕ ದೆಹಲಿಯ ಏಮ್ಸ್‌ ಆಸ್ಪತ್ರೆಗೆ (AIMS Hospital) ಸ್ಥಳಾಂತರ ಮಾಡಲಾಗಿದೆ. ಲಾಲು ಪ್ರಸಾದ್ ಯಾದವ್ ಅವರು ಇತ್ತೀಚೆಗೆ ಬಚ್ಚಲ ಮನೆಯಲ್ಲಿ ಬಿದ್ದಿದ್ದರು. ಅದರಿಂದ ಅವರ ಮೂಳೆ ಮುರಿದಿತ್ತು. ಇದಲ್ಲದೆ ಇನ್ನೂ ಹಲವು ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:Lalu Prasad Yadav: ಲಾಲು ಯಾದವ್ ಆರೋಗ್ಯ ಗಂಭೀರ, ಪಾಟ್ನಾದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್

ತಿರುಪತಿ ದೇಗುಲಕ್ಕೆ ಧರ್ಮರಥ ನೀಡಿದ ಸುಧಾಮೂರ್ತಿ

ಇನ್ಫೋಸಿಸ್ ಫೌಂಡೇಶನ್ ಮೂಲಕ ಸಾಕಷ್ಟು ಸತ್ಕಾರ್ಯಗಳನ್ನು ಮಾಡಿರುವ ಶ್ರೀಮತಿ ಸುಧಾಮೂರ್ತಿ ಅವರು ತಿರುಪತಿ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ 42 ಲಕ್ಷ ರೂಪಾಯಿ ಮೌಲ್ಯದ ಧರ್ಮರಥವನ್ನು ಕಾಣಿಕೆಯಾಗಿ ನೀಡಿದ್ದಾರೆ. ಶ್ರೀವೆಂಕಟೇಶ್ವರಸ್ವಾಮಿಯ ಸುಂದರ ವಿಗ್ರಹವಿರುವ ಈ ರಥ ತಿರುಪತಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಚರಿಸುತ್ತದೆ. ಈ ಧರ್ಮರಥವು ತಿರುಪತಿಯ ಸುತ್ತಮುತ್ತ ಹಳ್ಳಿ ಪ್ರದೇಶಗಳಿಗೆ ಪ್ರವೇಶ ಮಾಡುವ ಮೂಲಕ ಭಕ್ತರಿಗೆ ಶ್ರೀನಿವಾಸನ ದರ್ಶನ ನೀಡಲಿದೆ.
Published by:Pavana HS
First published: