Evening Digest: ರಾಜ್ಯದಲ್ಲಿ ಮತ್ತೆ ಶಾಲಾ-ಕಾಲೇಜು ಬಂದ್? ರಾಮುಲು ಕನಕಪುರ ಗೂಳಿ ಅಂತ ಅಂದಿದ್ಯಾರಿಗೆ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ರಾಜ್ಯದಲ್ಲಿ ಮತ್ತೆ ಶಾಲಾ-ಕಾಲೇಜು ಬಂದ್? : ಓಮೈಕ್ರಾನ್ ರೂಪಾಂತರಿ ವೈರಸ್ (Omicron Variant) ಆತಂಕದ ಹಿನ್ನೆಲೆ ರಾಜ್ಯದಲ್ಲಿ ಶಾಲಾ-ಕಾಲೇಜು (School And College) ಬಂದ್ ಆಗುತ್ತಾ ಅನ್ನೋ ಪ್ರಶ್ನೆಗೆ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ (Education Minister B C Nagesh) ಸಷ್ಟನೆ ನೀಡಿದ್ದಾರೆ, ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಸಚಿವರು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲಾ ಕಾಲೇಜು ಬಂದ್ ಇಲ್ಲ. ಎಂದಿನಂತೆ ಶಾಲಾ ಕಾಲೇಜು ತರಗತಿಗಳು ಮುಂದುವರಿಯುತ್ತವೆ. ವಿಧ್ಯಾರ್ಥಿಗಳಲ್ಲಿ (Students) ಹಾಗೂ ಪೋಷಕ(Parents)ರಲ್ಲಿ ಯಾವುದೇ ಗೊಂದಲ ಬೇಡ ಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಸ್ ಬಗ್ಗೆ ಮಾಹಿತಿ ಪಡೆಯಲಾಗಿದೆ. ಆರೋಗ್ಯ ತಜ್ಞರೊಂದಿಗೆ ಚರ್ಚೆ ಮಾಡಲಾಗಿದೆ ತಜ್ಞರೇ ಹೇಳುವಂತೆ ಫೆಬ್ರವರಿ ಅಂತ್ಯದಲ್ಲಿ ಮೂರನೇ ಅಲೆ ಎಂದಿದ್ದಾರೆ ಎಂದು ತಿಳಿಸಿದರು. ಶಾಲಾ ಕಾಲೇಜುಗಳಲ್ಲಿ ವಿಶೇಷವಾದ SOP ಜಾರಿ ಮಾಡಲಾಗಿದೆ. ಸ್ವಚ್ಚತೆ, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ. ಮಾಸ್ಕ್ ಇಲ್ಲದಿದ್ರೆ ತರಗತಿಗಳಿಗೆ ಬರಲು ಅವಕಾಶ ಇಲ್ಲ. ಎಲ್ಲ ಪೋಷಕರು ಸಹ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕೆಂದು ಸೂಚಿಸಲಾಗಿದೆ. ಹೀಗಾಗಿ ಪೋಷಕರಿಗೆ ಮನವಿ ಮಾಡಿ ಎರಡು ಡೋಸ್ ತೆಗೆದುಕೊಳ್ಳುವಂತೆ ತಿಳಿ ಹೇಳಲಾಗ್ತಿದೆ ಎಂದರು.

ರಾಮುಲು ಕನಕಪುರ ಗೂಳಿ ಅಂತ ಅಂದಿದ್ಯಾರಿಗೆ?

ವಿಧಾನ ಪರಿಷತ್​ ಚುನಾವಣೆಗೆ (MLC Election) ದಿನಗಣನೆ ಶುರುವಾಗಿದ್ದು, ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಎದುರಾಗಿ ನಾಯಕರ ವಿರುದ್ಧ ಭರ್ಜರಿ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ದುರ್ಗದ ಲೋಕದೊಳಲು ಗ್ರಾಮದಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಸಚಿವ ಶ್ರೀರಾಮುಲು (Minister Sriramulu) ಕಾಂಗ್ರೆಸ್​​ (Congress) ನಾಯಕರ ವಿರುದ್ಧ ಮಾತಿನ ಬಾಣ ಬಿಟ್ಟರು. ಕಾಂಗ್ರೆಸ್ ಪಕ್ಷದಲ್ಲಿ ಗೂಳಿ ಕಾಳಗ ನಡೆಯುತ್ತಿದೆ. ಕನಕಪುರ ಗೂಳಿ, ಮೈಸೂರು ಗೂಳಿ ನಡುವೆ ಕಾಳಗ ನಡೆಯುತ್ತಿದೆ ಎನ್ನುವ ಮೂಲಕ ಸಿದ್ದರಾಮಯ್ಯ-ಡಿಕೆಶಿ ಬಣ ರಾಜಕೀಯ ಇದೆ ಎಂದು ಆರೋಪಿಸಿದರು. ಗೂಳಿ ಕಾದಾಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಪಕ್ಷದಲ್ಲಿ ಉಳಿಬೇಕಾ ಬಿಡಬೇಕಾ ಅನ್ನುವಂತಾಗಿದೆ. ಗೂಳಿಗಳ ಜಗಳದಲ್ಲಿ ಜನರು ಸಾಯುತ್ತಿದ್ದಾರೆ.ಮೂರು ಬಿಟ್ಟವರು ಕಾಂಗ್ರೆಸ್ ನವರು ಎನ್ನುವಂತ ಪರಿಸ್ಥಿತಿಗೆ ಬಂದಿದೆ ಎಂದು ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದರು.

ಅಪಘಾತಕ್ಕೆ ಟೆಕ್ಕಿ ಬಲಿ

2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ, 1 ವರ್ಷದ ಮುದ್ದಾದ ಹೆಣ್ಣು ಮಗುವಿಗೆ. ತಂದೆ-ತಾಯಿ, ಹೆಂಡತಿ-ಮಗುವಿಗೆ ಆಧಾರದಂತಿದ್ದ ಮಗ ಬೆಳ್ಳಬೆಳಗ್ಗೆ ಕೆಲಕ್ಕೆ ಹೋದವನು ಕೆಲವೇ ಗಂಟೆಗಳಲ್ಲಿ ಹೆಣವಾಗಿದ್ದಾನೆ. ಮಗನನ್ನು ಕಳೆದುಕೊಂಡ ತಂದೆ-ತಾಯಿ, ಗಂಡನನ್ನು ಕಳೆದುಕೊಂಡ ಹೆಂಡತಿ, ಏನು ಅರಿಯದ ಪುಟ್ಟ ಕಂದಮ್ಮನನ್ನು ನೋಡಿದರೆ ಎಂಥವರ ಕರುಳು ಕಿತ್ತುಬರುವಂತಿತ್ತು.ಬೆಂಗಳೂರಿನ ಐಟಿ ಉದ್ಯೋಗಿ ರೋಹಿತ್​ ಎಂದಿನಂತೆ ಇಂದು ತನ್ನ ಬೈಕ್​ ನಲ್ಲಿ ಕೆಲಸಕ್ಕೆ ಹೊರಟ್ಟಿದ್ದರು. ಜವರಾಯ ರಸ್ತೆ ಬದಿಯಲ್ಲಿಯೇ ಕಾದು ಕುಳಿದಿದ್ದನು ಎನಿಸುತ್ತೆ. ವಾಟರ್​​ ಟ್ಯಾಂಕರ್​ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ರೋಹಿತ್​ ತಲೆ ಮೇಲೆ ವಾಹನ ಹರಿದುಬಿಟ್ಟಿದೆ. ಸ್ಥಳದಲ್ಲೇ ರೋಹಿತ್​ ಪ್ರಾಣ ಬಿಟ್ಟಿದ್ದಾರೆ. HSR ಲೇಔಟ್​​ ನ 27ನೇ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ವಾಟರ್ ಟ್ಯಾಂಕ್ ಪಕ್ಕದಲ್ಲೇ ರೋಹಿತ್​​ ಬೈಕ್​ ಚಲಾಯಿಸುತ್ತಿದ್ದರು. ಈ ವೇಳೆ ಟ್ಯಾಂಕರ್ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಬೈಕ್ ಗೆ ಟ್ಯಾಂಕರ್ ಟಚ್ ಆಗಿ ಫುಟ್ ಪಾತ್ ಗೆ ಬೈಕ್ ತಾಗಿದೆ. ಈ ವೇಳೆ ಬ್ಯಾಲೆನ್ಸ್ ತಪ್ಪಿ ಬಲಕ್ಕೆ ಬಿದ್ದ ಬೈಕ್ ಸವಾರ ರೋಹಿತ್​​ ತಲೆ ಮೇಲೆ ಟ್ಯಾಂಕರ್ ಚಕ್ರ ಹರಿದು ಸಾವು ಸಂಭವಿಸಿದೆ.

ಅಖಿಲೇಶ್​ ವಿರುದ್ಧ ಹರಿಹಾಯ್ದ ಮೋದಿ

ಗೋರಖ್​ಪುರದಲ್ಲಿ (Gorakhpur) ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಮಾಜವಾದಿ ಪಕ್ಷದ (Samajawadi Party) ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಭಯೋತ್ಪಾದಕರ ವಿರುದ್ಧ ದಯೆ ತೋರಿಸಲು ಮತ್ತು ಅವರನ್ನು ಜೈಲಿನಿಂದ ಹೊರತರಲು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲು 'ಕೆಂಪು ಟೋಪಿ'ಗಳು ಬಯಸುತ್ತಿದ್ದಾರೆ ಎಂದು ಕಿಡಿಕಾರಿದರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾದ ಗೋರಖ್‌ಪುರದಲ್ಲಿ ಏಮ್ಸ್ ಮತ್ತು ಪ್ರಮುಖ ರಸಗೊಬ್ಬರ ಘಟಕ ಸೇರಿದಂತೆ ಮೂರು ಬೃಹತ್ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಕೆಂಪು ಟೋಪಿಗಳನ್ನು ಧರಿಸಿರುವವರು ಕೇವಲ ಕೆಂಪು ದೀಪದ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ಉತ್ತರ ಪ್ರದೇಶಕ್ಕೆ ಅವರು ರೆಡ್ ಅಲರ್ಟ್ (ಅಪಾಯ) ಆಗಿರುತ್ತಾರೆ ಎಂದು ಟೀಕಿಸಿದರು.

ಯಶ್​ ಫ್ಯಾನ್ಸ್​ಗೆ ಗುಡ್​​​ನ್ಯೂಸ್​

ಏಪ್ರಿಲ್​ 14ಕ್ಕೆ ಕೆಜಿಎಫ್​ 2 ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೇಲೆ ಇಡಿ ವಿಶ್ವದ ಜನರ ಕಣ್ಣಿದೆ. ಯಾವಾಗ ಏಪ್ರಿಲ್​ 14 ಆಗುತ್ತೋ ಅಂತ ಯಶ್​ ಫ್ಯಾನ್ಸ್​ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್(Prasanth Neel)​ ಅಪಡೇಟ್​ ಒಂದನ್ನು ನೀಡಿದ್ದಾರೆ. ಕೆಜಿಎಫ್​ 2 ಸಿನಿಮಾದಲ್ಲಿ ಸಂಜಯ್​ ದತ್​ ಅಧೀರನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಕೆಜಿಎಫ್​ 2 ಸಿನಿಮಾದ ಶೂಟಿಂಗ್​ ಬಹುತೇಕ ಮುಗಿದಿದೆ. ಪೋಸ್ಟ್​ ಪ್ರೋಡೋಕ್ಷನ್​ ಕೆಲಸಗಳು ಉಳಿದಿತ್ತು. ಸಂಜಯ್​ ದತ್​ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಕೆಜಿಎಫ್​ 2 ಡಬ್ಬಿಂಗ್​ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಪ್ರಶಾಂತ್​​ ನೀಲ್​​ ಟ್ವೀಟರ್​ನಲ್ಲಿ ಸಂಜಯ್​ ದತ್​​ ಜೊತೆಗಿನ ಫೋಟೋವೊಂದನ್ನು ಅಪ್​​ಲೋಡ್​ ಮಾಡಿದ್ದಾರೆ. ಅಧೀರ ಈಸ್​ ಬ್ಯಾಕ್​, ವೆಲ್​ಕಮ್​ಬ್ಯಾಕ್​ ಸರ್​. ಏಪ್ರಿಲ್​ 14ರಂದು ಎಲ್ಲರೂ ಸಿಗೋಣ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ನಟ ಸಂಜಯ್​ ದತ್​ ಕೆಜಿಎಫ್​ 2 ಸಿನಿಮಾದ ಡಬ್ಬಿಂಗ್​ ಮುಗಿಸಿದ್ದಾರೆ
Published by:Kavya V
First published: