Evening Digest: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಮಾಡುವಂತಿಲ್ಲ, ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು; ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಕಾಮನ್​ವೆಲ್ತ್ ಗೇಮ್ಸ್​ನಲ್ಲಿ (Commonwealth Games 2022 Day 11) ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 2014ರಲ್ಲಿ ಕಂಚು, 2018ರಲ್ಲಿ ಬೆಳ್ಳಿ ಗೆದ್ದಿದ್ದ ಪಿವಿ ಸಿಂಧು ಇದೀಗ ಚಿನ್ನ ಗೆದ್ದಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ಸೆಟ್‌ಗಳಿಂದ ಸೋಲಿಸಿದ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. ಇದು ಕಾಮನ್​ವೆಲ್ತ್ ಗೇಮ್ಸ್​ನ 2022 ರ ಅಂತಿಮ ದಿನವಾಗಿದ್ದು ಭಾರತವು ಇನ್ನೂ ಐದು ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ.

ಗುಜರಾತ್ ಮತದಾರರಿಗೆ ಉಚಿತ ಕೊಡುಗೆ? ಯಾರಿಗೆ ನಷ್ಟ

ಗುಜರಾತ್ ವಿಧಾನಸಭಾ ಚುನಾವಣೆಗೆ (Gujarat Assembly Election) ಆಮ್‌ ಆದ್ಮಿ (Aam Admi) ಸಜ್ಜಾಗುತ್ತಿದೆ. ದೆಹಲಿಯ (Delhi) ಬಳಿಕ ಪಂಜಾಬ್‌ನಲ್ಲೂ (Punjab) ಅಧಿಕಾರದ ಗದ್ದುಗೆ ಹಿಡಿದಿರುವ ಆಪ್ ಪಕ್ಷ (AAP Party), ಈಗ ಗುಜರಾತ್‌ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಶತಾಯ ಗತಾಯ ಗುಜರಾತ್ ಗದ್ದುಗೆ ಏರಲೇಬೇಕು ಆತ ಪ್ರಯತ್ನಿಸುತ್ತಿರುವ ಆಮ್ ಆದ್ಮಿ, ಇದೀಗ ಮತದಾರರಿಗೆ (Voters) ಉಚಿತ ಕೊಡುಗೆಯ (Free Scheme) ಆಮಿಷ ಒಡ್ಡಿದೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ (Free Power) ನೀಡುವುದಾಗಿ ಘೋಷಿಸಿದೆ. ಆಮ್ ಆದ್ಮಿಯ ಈ ಉಚಿತ ಘೋಷಣೆ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ. ಪ್ರತಿ ಸಲ ಸರ್ಕಾರ ಬರುವಾಗ ಉಚಿತವಾಗಿ ಮತದಾರರಿಗೆ ಕೊಡುಗೆಗಳನ್ನು ನೀಡುವ ಭರವಸೆ ನೀಡುತ್ತದೆ. ಇದೀಗ ಸರ್ಕಾರಗಳು ನೀಡುವ ಉಚಿತ ಯೋಜನೆಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಉಚಿತ ಯೋಜನೆಗಳನ್ನು ಕೊಡುವುದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗುತ್ತದೆ ಅಂತ ತಜ್ಞರು (Experts) ಹೇಳುತಿದ್ದಾರೆ.

ಇದನ್ನೂ ಓದಿ: Free Scheme: ಆಮ್‌ ಆದ್ಮಿಯಿಂದ ಗುಜರಾತ್ ಮತದಾರರಿಗೆ ಉಚಿತ ಕೊಡುಗೆ! ಫ್ರೀ ಸ್ಕೀಮ್‌ನಿಂದ ನಷ್ಟ ಯಾರಿಗೆ?

ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಮಾಡುವಂತಿಲ್ಲ

ಈದ್ಗಾ ಮೈದಾನ (Idgah Ground) ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ನಿನ್ನೆಯಷ್ಟೇ ಈದ್ಗಾ ಮೈದಾನ ಸರ್ಕಾರದ ಆಸ್ತಿ ಅಂತಾ ಬಿಬಿಎಂಪಿ (BBMP) ಘೋಷಿಸಿತ್ತು. ಇದರ ನಡುವೆ ಈಗ ಸ್ವಾತಂತ್ರ್ಯೋತ್ಸವ (Independence Day) ಹತ್ತಿರ ಬರುತ್ತಿದ್ದಂತೆ ಮತ್ತೆ ವಿವಾದ ಜೋರಾಗ್ತಿದೆ. ಈ ಮೈದಾನದಲ್ಲಿ ಧ್ವಜಾರೋಹಣ (Flag Hoisting) ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇದರ ನಡುವೆ ಇಂದು ಚಾಮರಾಜಪೇಟೆ ಶಾಸಕ ಜಮೀರ್ ಮತ್ತೆ ವಿವಾದದ (Controversy) ಕಿಡಿ ಹೊತ್ತಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಗಣೇಶನ ಹಬ್ಬ (Festival) ಆಚರಣೆಗೆ ಅವಕಾಶ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಹಾಗಾಗಿ ಮೈದಾನ ಕದನಕ್ಕೆ ಮತ್ತೆ ಜೀವ ಬಂದಿದ್ದು ಇದು ನಾಗರಿಕ ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳಾ ಡಾಕ್ಟರ್​ ಹಾಗೂ ಮಗಳ ನಿಗೂಢ ಸಾವು

ಬೆಂಗಳೂರಲ್ಲಿ ಮಹಿಳಾ ಡಾಕ್ಟರ್​ ಮತ್ತು ಮಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಡಗು ಮೂಲದ ತಾಯಿ-ಮಗಳು (Mother Daughter) ಬೆಂಗಳೂರಿನಲ್ಲಿ (Bengaluru) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಡಾಕ್ಟರ್ (Doctor) ಶೈಮಾ (39) ಮತ್ತು ಆರಾಧನಾ (10) ಅಂತಾ ಗುರುತಿಸಲಾಗಿದೆ. ಶೈಮಾ ವೃತ್ತಿಯಲ್ಲಿ ಡೆಂಟಲ್ ಡಾಕ್ಟರ್​(Dentist) ಆಗಿದ್ದರು. ಮಗಳು ಆರಾಧನಗೆ ಕೇವಲ 10 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡು ದಿನದ ಹಿಂದೆ ನಡೆದ ಘಟನೆ ತಡವಾಗಿ ಇಂದು ಬೆಳಕಿಗೆ ಬಂದಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲ ಎನ್ನಲಾಗಿದೆ. ಹಾಗಾಗಿ ಆತ್ಮಹತ್ಯೆಯೋ (Suicide), ಕೊಲೆಯೋ (Murder) ಅನ್ನೋ ಅನುಮಾನ ಮೂಡಿದೆ.

ಇದನ್ನೂ ಓದಿ: Suicide: ಬೆಂಗಳೂರಿನಲ್ಲಿ ಮಹಿಳಾ ಡಾಕ್ಟರ್, ಮಗಳು ನಿಗೂಢ ಸಾವು

ಸುಪಾರಿ ಕೊಟ್ಟು ಕೊಲ್ಲಿಸಿದ ಅಕ್ಕಂದಿರು!

ಕಲಬುರಗಿಯಲ್ಲಿ (Kalaburagi) ಪವಿತ್ರವಾದ ಅಕ್ಕ, ತಮ್ಮನ ಸಂಬಂಧಕ್ಕೆ ಮಹಿಳೆಯರಿಬ್ಬರು ಮಸಿ ಎರಚಿದ್ದಾರೆ. ತನ್ನ ತಮ್ಮನನ್ನೇ ಸುಪಾರಿ (Supari) ಕೊಟ್ಟು ಕೊಲ್ಲಿಸಿದ್ದಾರೆ. ವಿಚಾರ ತಿಳಿದು ಇಡೀ ಕಲಬುರಗಿಗೆ ಕಲಬುರಗಿಯೇ ಬೆಚ್ಚಿ ಬಿದ್ದಿದೆ. ಕಳೆದ ತಿಂಗಳು ಜುಲೈ 29ರಂದು ಕಲಬುರಗಿ ನಗರದ ಹೊರವಲಯದ ಅಳಂದ ರಸ್ತೆಯ ಕೆರೆಭೋಸ್​ಗಾ ಕ್ರಾಸ್ ಬಳಿಯ ಜಮೀನೊಂದರ ಬಳಿ ಯುವಕನೋರ್ವ ಶವ ಬಿದ್ದಿತ್ತು. ಆತನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು,  ನಂತರ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಆತನನ್ನು ಬರ್ಬರವಾಗಿ ಕೊಂದಿದ್ದ ಹಂತಕರು, ಆತ ಪ್ರಾಣ ಬಿಡುತ್ತಲೇ ಅಲ್ಲಿಂದ ಎಸ್ಕೇಪ್ ಆಗಿದ್ದರು. ಇದೀಗ 6 ಮಂದಿ ಹಂತಕರನ್ನು ಬಂಧಿಸಲಾಗಿದೆ.
Published by:Pavana HS
First published: