Evening Digest: ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ: ಸಿಗರೇಟ್ ಸೇದುತ್ತೇನೆ ತಪ್ಪೇನು ಎಂದ ಸೋನು ಗೌಡ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ: ರಾಜ್ಯದಲ್ಲಿ ಮಳೆಯ (Rainfall) ಅಬ್ಬರ ನಿಲ್ಲೋ ಲಕ್ಷಣಗಳೇ ಕಾಣುತ್ತಿಲ್ಲ. ಎಲ್ಲಿ ನೋಡಿದ್ರು ಮಳೆ, ನೀರು ಕಂಡು ಜನರೇ ಬೇಸತ್ತು ಹೋಗಿದ್ದಾರೆ. ಈ ಬಾರಿ ಮಳೆ ಸೃಷ್ಟಿ ಮಾಡಿರೋ ಅವಾಂತರ ಅಷ್ಟಿಷ್ಟಲ್ಲ. ಅನೇಕರು ಪ್ರಾಣ ಕಳೆದುಕೊಂಡಿದ್ರೆ ನೂರಾರು ಜನ ಮನೆ –ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೆರಡು ದಿನಗಳ ಕಾಲ ಭಾರೀ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ. 10 ಜಿಲ್ಲೆಗಳಿಗೆ ಮಳೆಯ ಅಲರ್ಟ್ (Alart)​ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಕೊಡಗು, ಬೀದರ್, ಕಲಬುರ್ಗಿ, ವಿಜಯಪುರ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ಶಿವಮೊಗ್ಗ ಹಾಗೂ ಹಾಸನದಲ್ಲಿ (Hassan) ಭಾರೀ ಮಳೆಯಾಗೋ ಮುನ್ಸೂಚನೆ ನೀಡಲಾಗಿದೆ.     

ಇದನ್ನೂ ಓದಿ: Heavy Rain: ರಾಜ್ಯದಲ್ಲಿ ಇನ್ನೂ 2 ದಿನ ಭಾರೀ ಮಳೆ; ಸಾಕಪ್ಪ ಸಾಕು ನಿಲ್ಲೋ ಮಳೆರಾಯ 

ಹುಬ್ಬಳ್ಳಿಯಲ್ಲಿ ಬಸವರಾಜ ಹೊರಟ್ಟಿ ಕಾರು ಅಪಘಾತ

ಮಾಜಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ (Basavaraj Horatti) ಕಾರು ಅಪಘಾತವಾಗಿದೆ (Car Accident). ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಬಿ.ವಿ.ಬಿ ಕಾಲೇಜು (Collage) ಆವರಣದಲ್ಲಿ ಘಟನೆ ಸಂಭವಿಸಿದೆ. ಬಿ.ವಿ.ಬಿ ಕಾಲೇಜಿನಲ್ಲಿ ಪತ್ರಕರ್ತರ (Journalist) ವಾರ್ಷಿಕ ಪ್ರಶಸ್ತಿ ಪ್ರದಾನ (Award) ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದಾಗ ಬಸವರಾಜ ಹೊರಟ್ಟಿಯವರ ಕಾರಿಗೆ ಬೈಕ್ ಸವಾರ ಢಿಕ್ಕಿ (Bike Accident) ಹೊಡೆದಿದ್ದಾನೆ. ಅದೃಷ್ಟವಶಾತ್ ​ಹೊರಟ್ಟಿಯವರಿಗೆ ಏನೂ ಪ್ರಾಣಾಪಾಯವಾಗಿಲ್ಲ. ಬೈಕ್ ಸವಾರನನ್ನು ಬೆಳಗಾವಿಯ ಸವದತ್ತಿ ‌ಮೂಲದ ಕೆಂಚಪ್ಪ ಎಂದು ಗುರುತಿಸಲಾಗಿದ್ದು, ಆತನಿಗೆ ಗಂಭೀರ ಗಾಯವಾಗಿದೆ. ಘಟನೆ ಬಳಿಕ ಬಸವರಾಜ ಹೊರಟ್ಟಿ ಬೇರೆ ಕಾರನ್ನೇರಿ ತೆರಳಿದರು.

ಮಗಳಿಗೆ ಆಸ್ಪತ್ರೆಯಲ್ಲೇ ವಿಷದ ಇಂಜೆಕ್ಷನ್ ಕೊಡಲು ತಂದೆಯಿಂದಲೇ ಸುಪಾರಿ

ಮಕ್ಕಳ ಅಂತರ್ಜಾತಿ (Inter Caste Marriage) , ಅಂತರ್​ ಮತೀಯ ಮದುವೆಗಳನ್ನು (Inter Religion Marriage) ವಿರೋಧಿಸುವ ಪೋಷಕರು ಹೆತ್ತ ಮಕ್ಕಳನ್ನೇ ಅದಕ್ಕಾಗಿ ಕೊಲ್ಲುವ ಮರ್ಯಾದಾ ಹತ್ಯೆ (Maryada Hatya) ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇವೆ. ಇದೇ ರೀತಿಯ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.  17 ವರ್ಷ ಮಗಳು ಪ್ರೀತಿಸಿದವನನ್ನು ಬಿಡುತ್ತಿಲ್ಲ, ತನ್ನ ಮಾತು ಕೇಳುತ್ತಿಲ್ಲ ಎಂದು ತಂದೆಯೇ ಮಗಳನ್ನು ಕೊಲ್ಲಲು ಮುಂದಾಗಿದ್ದಾನೆ.  ಮಗಳು ತನ್ನ ಪ್ರಿಯಕರನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ ಎಂಬ ದ್ವೇಷದಿಂದ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯಲ್ಲಿ ತಂದೆಯೇ ಮಗಳನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಆಸ್ಪತ್ರೆಯ ವಾರ್ಡ್ ಬಾಯ್‌ಗೆ ಮಗಳನ್ನು ಕೊಲ್ಲುವ ಸುಪಾರಿ ನೀಡಿದ್ದಾನೆ. ಆತ 17 ವರ್ಷದ ಮಗಳಿಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಚುಚ್ಚು ಮದ್ದಿನ ಮೂಲಕ ನೀಡಿದ್ದಾನೆ ಎಂದು  ಪೊಲೀಸರು ತಿಳಿಸಿದ್ದಾರೆ.

ಟ್ಯಾಟೂ ಹಾಕಿಸಿಕೊಂಡ ಇಬ್ಬರಿಗೆ ಎಚ್​ಐವಿ ಸೋಂಕು!

ನೀವು ಹಚ್ಚೆ (Tattoo) ಹಾಕಿಸಿಕೊಳ್ಳಲು ಇಷ್ಟಪಡುತ್ತಿದ್ದರೆ ಜಾಗರೂಕರಾಗಿರಿ. ಬನಾರಸ್‌ನಲ್ಲಿ (Banaras) ಹಚ್ಚೆ ಹಾಕಿಸಿಕೊಂಡ 12 ಮಂದಿಗೆ ಎಚ್‌ಐವಿ ಸೋಂಕು ತಗುಲಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ತಿಂಗಳೊಳಗೆ ನಡೆಸಿದ ತನಿಖೆಯಲ್ಲಿ 10 ಯುವಕರು ಮತ್ತು 2 ಯುವತಿಯರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ಒಬ್ಬಳು ಎಂಬಿಬಿಎಸ್ ವಿದ್ಯಾರ್ಥಿನಿ (MBBS Student). ಆಸ್ಪತ್ರೆಯ ಆ್ಯಂಟಿ ರೆಟ್ರೋ ವೈರಲ್ ಟ್ರೀಟ್ ಮೆಂಟ್ ಸೆಂಟರ್ ನ ಡಾ.ಪ್ರೀತಿ ಅಗರ್ ವಾಲ್ ಪ್ರಕಾರ, ಸೋಂಕಿತರಿಗೆ ಚುಚ್ಚಿದ ಸೂಜಿಯಿಂದ ಹಚ್ಚೆ ಹಾಕಿಸಿಕೊಂಡಿರುವುದೇ ಯೌವನದಲ್ಲಿ ಸೋಂಕು ತಗುಲಲು ಕಾರಣವಾಗಿದೆ.

ಸಿಗರೇಟ್ ಸೇದುತ್ತೇನೆ, ತಪ್ಪೇನು? ಬಿಗ್​ಬಾಸ್​ ಮನೆಯಲ್ಲಿ ಸೋನು ಗೌಡ ಪ್ರಶ್ನೆ

ಸೋನು ಗೌಡ ಬಿಗ್​ಬಾಸ್​ ಮನೆಗೆ ಎಂಟ್ರಿ  ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ಕೆಲವರು ಇದನ್ನು ಟೀಕಿಸಿದ್ದಾರೆ. ಅವರನ್ನು ಆಯ್ಕೆ ಮಾಡಬಾರದಿತ್ತು ಎಂದು ಅಪಸ್ವರ ಎತ್ತಿದ್ದಾರೆ. ಅಲ್ಲದೇ,ಮೊದಲ ವಾರವೆ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂದೆಲ್ಲಾ ಕಾಮೆಂಟ್​ ಮಾಡುತ್ತಿದ್ದಾರೆ. ಈ ಎಲ್ಲಾ ಚರ್ಚೆ ನಡೆಯುತ್ತಿರುವಾಗ ಇತ್ತ ಸೋನು ಗೌಡ ಮನೆಯ ಒಳಗೆ ತಮ್ಮ ದರ್ಬಾರ್​ ಆರಂಭಿಸಿದ್ದಾರೆ. ನಮ್ಮ ನೇರ ನುಡಿಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ವೇದಿಕೆ ಮೇಲೆ ಎಂಟ್ರಿಕೊಟ್ಟಾಗಲೇ ನಾಯಿಯ ಹೆಸರಿನ ಬಗ್ಗೆ ಕಿಚ್ಚ ಸುದೀಪ್ ಕೇಳಿದಾಗ, ನಾನು ಬ್ರಿಝರ್​ ಕುಡಿಯುತ್ತಿದ್ದೆ, ಹಾಗಾಗಿ ನನ್ನ ನಾಯಿಗೆ ವಿಭಿನ್ನ ಹೆಸರನ್ನು ಇಡಬೇಕು ಎನ್ನುವ ಕಾರಣ ಈ ಹೆಸರನ್ನು ಇಟ್ಟಿದ್ದೇನೆ ಎಂದಿದ್ದಾರೆ. ಇನ್ನು ಮನೆಯ ಒಳಗೆ ಹೋದ ನಂತರ, ರೂಪೇಶ್​ ಶೆಟ್ಟಿ ಅವರ ಜೊತೆಗೆ ಮಾತನಾಡುವಾಗ ಸಿಗರೇಟ್​ ಸೇದುತ್ತೇನೆ ಎಂದಿದ್ದಾರೆ.
Published by:Kavya V
First published: