Top-5 News: ಮಳೆಯಲ್ಲಿ ಮುಳುಗಿದ ಬೆಂಗಳೂರು, ದೆಹಲಿಯಲ್ಲಿ ಐಟಿ ರೇಡ್! ಈ ಸಂಜೆಯ ಟಾಪ್-5 ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ, ಟಾಪ್ 5 ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಎಂಎಲ್‌ಎ, ಎಂಪಿಗಳ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಿಂದ ಬೆಂಗಳೂರು ಮುಳುಗುತ್ತಿದೆ! ಜನಪ್ರತಿನಿಧಿಗಳ ವಿರುದ್ಧ ರಮ್ಯಾ ಕಿಡಿ

ಬೆಂಗಳೂರಿನಲ್ಲಿ (Bengaluru) ಮಳೆ ಸೃಷ್ಟಿಸಿರೋ ಅವಾಂತರ ಹಾಗೂ ಅವ್ಯವಸ್ಥೆ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ನಿನ್ನೆ (ಆಗಸ್ಟ್​​ 06)ರಂದು ಕಿಡಿಕಾರಿದ್ರು. ಇದೀಗ MLA, MPಗಳ ಬಗ್ಗೆ ರಮ್ಯಾ ಟ್ವೀಟ್​ (Ramya) ಮಾಡಿದ್ದು ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರು ದಿನೇ ದಿನೇ ಮುಳುಗಲು ಏನು ಕಾರಣ ಎನ್ನುವುದನ್ನು ತಿಳಿಸೋ ಪ್ರಯತ್ನ ಮಾಡಿದ್ದಾರೆ. ಮಳೆಯಿಂದ ಸೃಷ್ಟಿ ಆಗಿರೋ ಅವಾಂತರಕ್ಕೆ ಶಾಸಕರು ಹಾಗೂ ಜನಪ್ರತಿನಿಧಿಗಳೇ ಕಾರಣ ಎಂದು ರಮ್ಯಾ ಸರಣಿ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

Bengaluru Rain: ಕಾರೂ ಬೇಡ ಬಸ್ಸೂ ಬೇಡ; ಟ್ರ್ಯಾಕ್ಟರ್‌ ಹತ್ತಿ ಆಫೀಸ್‌ಗೆ ಹೋದ ಟೆಕ್ಕಿ, ಉದ್ಯಮಿಗಳು!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಭಾರೀ ಮಳೆಗೆ (Heavy Rain) ಕಂಗೆಟ್ಟಿದೆ. ನಗರದ (City) ಅರ್ಧಕ್ಕರ್ಧ ಭಾಗ ಮುಳುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಾಜಕಾಲುವೆ, ಕೆರೆಗಳೆಲ್ಲ (Lake) ತುಂಬಿ, ರಸ್ತೆಗಳ (Road) ಮೇಲೆಲ್ಲ ನೀರು (Water) ಹರಿಯುತ್ತಿದೆ. ಪರಿಣಾಮ ಹೆದ್ದಾರಿಗಳೇ (Highway) ನದಿಗಳಂತೆ ಗೋಚರಿಸುತ್ತಿವೆ. ಬೆಂಗಳೂರಿನ ಪರಿಸ್ಥಿತಿ ಕೆಟ್ಟದಾಗಿದ್ದು, ಜನರು ಭಯದಲ್ಲೇ ಬದುಕುವಂತಾಗಿದೆ. ಇನ್ನು ಕಳೆದ ವಾರದಲ್ಲಿ ಭಾರೀ ಮಳೆ ಬಂದಾಗ ಟೆಕ್ಕಿಗಳೆಲ್ಲ (Techie) ಆಫೀಸ್‌ಗೆ (Office) ತಲುಪಲಾಗದೇ ರೋಡ್‌ನಲ್ಲೇ ಪರದಾಡಿದ್ದರು. ಆಗ ಐಟಿ ಕಂಪನಿಗಳಿಗೆ (IT Company) ಬರೋಬ್ಬರಿ 250 ಕೋಟಿ ರೂಪಾಯಿ ನಷ್ಟವಾಗಿತ್ತಂತೆ. ಇದೀಗ ಮತ್ತೊಮ್ಮೆ ಬೆಂಗಳೂರು ಮಳೆಯಲ್ಲಿ ಮುಳುಗಿದ್ದು, ಆಫೀಸ್‌ಗೆ ತೆರಳಲಾಗದೇ ಟೆಕ್ಕಿಗಳು ಸಂಕಷ್ಟಪಟ್ಟಿದ್ದಾರಂತೆ.

ಇದನ್ನೂ ಓದಿ: Bengaluru Rain: ಕಾರೂ ಬೇಡ ಬಸ್ಸೂ ಬೇಡ; ಟ್ರ್ಯಾಕ್ಟರ್‌ ಹತ್ತಿ ಆಫೀಸ್‌ಗೆ ಹೋದ ಟೆಕ್ಕಿ, ಉದ್ಯಮಿಗಳು!

ದೆಹಲಿ ಸರ್ಕಾರದ ಅಬಕಾರಿ ನೀತಿ; ದೇಶದ 35 ಸ್ಥಳಗಳ ಮೇಲೆ ಇಡಿ ದಾಳಿ

ದೆಹಲಿ: ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಸರ್ಕಾರದ ಭಾರೀ ವಿವಾದದ ನಂತರ ರದ್ದುಪಡಿಸಿದ ಮದ್ಯ ನೀತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದೇಶಾದ್ಯಂತ 35 ಸ್ಥಳಗಳಲ್ಲಿ ಮನಿ ಲಾಂಡರಿಂಗ್​ಗೆ ಸಂಬಂಧಿಸಿದಂತೆ ಶೋಧ ನಡೆಸುತ್ತಿದೆ. ದೆಹಲಿ, ನೋಯ್ಡಾ, ಗುರ್ಗಾಂವ್, ಮುಂಬೈ, ಚೆನ್ನೈ, ಚಂಡೀಗಢ ಮತ್ತು ಜಲಂಧರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಸರ್ಕಾರವು ಈಗ ರದ್ದುಗೊಳಿಸಿರುವ ಅಬಕಾರಿ ನೀತಿಯಡಿಯಲ್ಲಿ (Delhi Excise Policy Case) ತೊಡಗಿರುವ ವಿವಿಧ ಮಾರಾಟಗಾರರು, ವಿತರಕರು ಮತ್ತು ಮಧ್ಯವರ್ತಿಗಳ ಮೇಲೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.

ಪ್ರವೀಣ್ ನೆಟ್ಟಾರು ಹತ್ಯೆ‌ ಪ್ರಕರಣ; PFI ಮುಖಂಡರ ಮನೆ ಮೇಲೆ NIA ದಾಳಿ

ಬಿಜೆಪಿ ಯುವ ಮುಖಂಡ (BJP Leaders) ಪ್ರವೀಣ್ ನೆಟ್ಟಾರು ಹತ್ಯೆ (Praveen Nettar Case) ಪ್ರಕರಣಕ್ಕೆ‌ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ತನಿಖಾದಳ  (NIA) ತನ್ನ ತನಿಖೆಯನ್ನು  ತೀವ್ರಗೊಳಿಸಿದ್ದು, ಇಂದು ಬೆಳ್ಳಂಬೆಳಗ್ಗೆ ಸುಮಾರು 30 ಕ್ಕೂ ಮಿಕ್ಕಿದ ಕಡೆಗಳಿಗೆ ಏಕಾಏಕಿ ದಾಳಿ ನಡೆಸಿದೆ. ಮುಖ್ಯವಾಗಿ ಪಿಎಫ್ಐ (PFI) ಮತ್ತು ಎಸ್‌ಡಿಪಿಐ (SDPI) ಮುಖಂಡರನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಪಿಎಫ್ಐ ಮತ್ತು ಎಸ್​​ಡಿಪಿಐ ನ ರಾಜ್ಯದ ಪ್ರಮುಖ ಸ್ಥಾನದಲ್ಲಿರುವ ನಾಯಕರ ಮನೆ ಹಾಗೂ ಅವರು ಕಾರ್ಯಾಚರಣೆ ನಡೆಸುವ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ತನ್ನ ಕೋಳಿ ಅಂಗಡಿಯಲ್ಲಿ ವ್ಯವಹಾರ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಮೇಲೆ ಮೂವರು ಹಂತಕರು ತಲವಾರು ದಾಳಿ ನಡೆಸಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ: Praveen Nettaru: ಪ್ರವೀಣ್ ನೆಟ್ಟಾರು ಹತ್ಯೆ‌ ಪ್ರಕರಣ; PFI ಮುಖಂಡರ ಮನೆ ಮೇಲೆ NIA ದಾಳಿ

ಅಮಿತಾಬ್, ರಶ್ಮಿಕಾ ನಡುವೆ ಫ್ಯಾಮಿಲಿ ಫೈಟ್​! 

ಅಮಿತಾಬ್ ಬಚ್ಚನ್ (Amitabh Bachchan), ನೀನಾ ಗುಪ್ತಾ ಹಾಗೂ ರಶ್ಮಿಕಾ ಮಂದಣ್ಣ (Rashmika) ಅಭಿನಯದ ಗುಡ್ ಬೈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾ ಟ್ರೇಲರ್‌ಗೆ (Movie Trailer) ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೌತ್​ ನಟಿ ರಶ್ಮಿಕಾ ಮಂದಣ್ಣ ಗುಡ್​ ಬೈ (Good Bye) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸೌತ್ ನಂತರ ಇದೀಗ ಹಿಂದಿ ಚಿತ್ರಗಳಲ್ಲೂ ರಶ್ಮಿಕಾ  ತಮ್ಮ ಚಾಪು ಮೂಡಿಸಲಿದ್ದಾರೆ. ಬಾಲಿವುಡ್​ನಲ್ಲಿ ರಶ್ಮಿಕಾ ಮಿಷನ್ ಮಜ್ನು ಮತ್ತು ಗುಡ್ ಬೈ  ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಅಮಿತಾಬ್ ಬಚ್ಚನ್ ಮತ್ತು ನಟಿ ನೀನಾ ಗುಪ್ತಾ (Neena Gupta) ಅವರೊಂದಿಗೆ ಪರದೆ ಹಂಚಿಕೊಳ್ಳು ಮೂಲಕ ರಶ್ಮಿಕಾ ತಮ್ಮ ಫ್ರೇಮ್​ನನ್ನು ಮತ್ತಷ್ಟು ಹೆಚ್ಚಿಸಿಕೊಳ್ಳತ್ತಿದ್ದಾರೆ.
Published by:Annappa Achari
First published: