Evening Digest: ನವೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ, ಬಂಧನ ಭೀತಿಯಲ್ಲಿ ನಟಿ ತ್ರಿಶಾ; ಈ ದಿನದ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ನವೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ: ನವೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲ ವಯಸ್ಕರಿಗೂ ಎರಡೂ ಡೋಸ್ ಕೋವಿಡ್ ಲಸಿಕೆ (COVID Vaccine) ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Health Minister K Sudhakar) ತಿಳಿಸಿದರು. ಕೋವಿಡ್ ಲಸಿಕಾ ಅಭಿಯಾನದಲ್ಲಿ ಕಡಿಮೆ ಸಾಧನೆ ಮಾಡಿದ 23 ಜಿಲ್ಲೆಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಲಸಿಕೆ ಅಭಿಯಾನಕ್ಕೆ ವೇಗ ನೀಡುವ ಬಗ್ಗೆ ಹಾಗೂ ಈ ತಿಂಗಳೊಳಗೆ ಎಲ್ಲರಿಗೂ ಮೊದಲ ಡೋಸ್ ಪೂರ್ಣಗೊಳಿಸಲು ಸೂಚಿಸಲಾಗಿದೆ. ನವೆಂಬರ್ ಅಂತ್ಯದೊಳಗೆ ಎಲ್ಲ ವಯಸ್ಕರಿಗೆ ಲಸಿಕೆ ನೀಡುವ ಗುರಿ ತಲುಪಬೇಕೆಂದು ಸೂಚನೆ ನೀಡಲಾಗಿದೆ

ಪಾಲಿಕೆ ಚುನಾವಣೆ ಫಲಿತಾಂಶ ತೃಪ್ತಿದಾಯಕವಾಗಿದೆ: ಬಿಎಸ್​​ವೈ

ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಫಲಿತಾಂಶವು (Municipal Corporation Election Result) ತೃಪ್ತಿದಾಯಕವಾಗಿದ್ದು, ಮೊದಲ ಬಾರಿಗೆ ಬೆಳಗಾವಿಯಲ್ಲಿ (Belagavi) ಸ್ಪಷ್ಟ ಬಹುಮತದಿಂದ ಬಿ.ಜೆ.ಪಿ. ಅಧಿಕಾರಕ್ಕೆ ಬಂದಿದ್ದು, ಇದೊಂದು ಐತಿಹಾಸಿಕ ಗೆಲುವಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರಗಿ ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ

ರೌಡಿಪಟ್ಟಿಗೆ ಸೇರಿದವರ ಹೆಸರು ಕೈಬಿಡಲು ತೀರ್ಮಾನ

ಸಣ್ಣಪುಟ್ಟ ಘಟನೆಯಲ್ಲಿ ಭಾಗಿಯಾದವರನ್ನೂ ರೌಡಿಪಟ್ಟಿಗೆ (Rowdy Sheet) ಸೇರಿಸಲಾಗಿದೆ. ಅವರೇನು ಸಮಾಜಘಾತುಕ ಕೆಲಸ ಮಾಡಿಲ್ಲ. ಕಾನೂನುಭಂಗ ಉಂಟು ಮಾಡಿಲ್ಲ. ಅಂತಹವರ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ. ಈ ರೀತಿಯಲ್ಲಿ ಸಾವಿರಾರು ರೌಡಿಗಳಿದ್ದಾರೆ. ಇಂತಹವರನ್ನ ರೌಡಿ ಪಟ್ಟಿಯಿಂದ ಕೈ ಬಿಡಲು ಪೊಲೀಸ್ ಸಮಾವೇಶದಲ್ಲಿ ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ (Home Minister Araga Jnanendra) ಹೇಳಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಜಾನುವಾರು ಕಡಿಯುವ ಉದ್ದೇಶಕ್ಕೆ ಸಾಗಾಣೆ ಮಾಡುವುದಕ್ಕೆ ಇನ್ನು ಮುಂದೆ ಕಡಿವಾಣ ಹಾಕಲಾಗುವುದು. ಸಾಗಾಣೆ ಮಾಡದಂತೆ ತಡೆಗಟ್ಟಲಾಗುವುದು ಎಂದರು.

ಪಂಜಶೀರ್ ಕೂಡ ತಾಲಿಬಾನ್ ವಶಕ್ಕೆ

ಅಫ್ಘಾನಿಸ್ತಾನದಲ್ಲಿ ಇದೂವರೆಗೆ ಯಾರಿಗೂ ತಲೆಬಾಗದೇ ಸ್ವತಂತ್ರವಾಗಿದ್ದ ಅಫ್ಘಾನಿಸ್ತಾನದ ಪಂಜಶಿರ್ ಪ್ರಾಂತ್ಯವನ್ನು (Panjshir Province) ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ ಎನ್ನಲಾಗಿದೆ. ಪಂಜಶಿರ್​ನ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್ (NRF – National Resistance Force) ತಾವು ಸೋತಿಲ್ಲ, ಇನ್ನೂ ಪ್ರಮುಖ ಆಯಕಟ್ಟು ಜಾಗಗಳು ನಮ್ಮ ನಿಯಂತ್ರಣದಲ್ಲೇ ಇವೆ ಎಂದು ಹೇಳಿದೆಯಾದರೂ ಪಂಜಶಿರ್​ನ ಬಹುತೇಕ ಪ್ರದೇಶಗಳು ತಾಲಿಬಾನ್ (Taliban) ಸುಪರ್ದಿಯಲ್ಲಿವೆ ಎಂದು ವಿವಿಧ ಮಾಧ್ಯಮಗಳ ವರದಿಗಳು ಖಚಿಪಡಿಸಿವೆ. ಪಂಜಶಿರ್ ಸಂಪೂರ್ಣವಾಗಿ ತನ್ನ ವಶಕ್ಕೆ ಬಂದಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಇದರೊಂದಿಗೆ ಯುದ್ಧದ ರಗಳೆ ಅಂತ್ಯಗೊಂಡಿದೆ ಎಂದು ತಾಲಿಬಾನ್ ಘೋಷಿಸಿದೆ.

ಬಂಧನ ಭೀತಿಯಲ್ಲಿ ನಟಿ ತ್ರಿಶಾ..!

ನಟಿ ತ್ರಿಶಾ ಕೃಷ್ಣನ್ (Trisha Krishnan)​  ‘ಪೊನ್ನಿಯಾನ್​ ಸೆಲ್ವನ್‘ ಸಿನಿಮಾದಲ್ಲಿ ನಟಿಸುತ್ತಿದ್ದು, ಸದ್ಯ ಶೂಟಿಂಗ್​ನಲ್ಲಿ ತೊಡಗಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಮಣಿರತ್ನಂ (Mani Ratnam) ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಚಿತ್ರೀಕರಣದ ಸಮಯದಲ್ಲಿ ತ್ರಿಶಾ ಕೃಷ್ಣನ್​ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಬಂಧನದ ಭೀತಿ ಎದುರಾಗಿದೆ. ಶಾ ಕೃಷ್ಣನ್​ ದಾರ್ಮಿಕ ಸ್ಥಳದಲ್ಲಿ ಎಡವಟ್ಟೊಂದನ್ನು ಮಾಡಿದ್ದಾರೆ. ಚಿತ್ರೀಕರಣ ವೇಳೆ ಚಪ್ಪಳಿ ಹಾಕಿಕೊಂಡು ತ್ರಿಶಾ ದೇವಸ್ಥಾನದ ಒಳಗೆ ಓಡಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಶಿವಲಿಂಗ ಮತ್ತು ನಂದಿ ದೇವರಿರುವ ಈ ಧಾರ್ಮಿಕ  ಸ್ಥಳದಲ್ಲಿ ತ್ರಿಶಾ ಚಪ್ಪಳಿ (Slipper) ಹಾಕಿರುವ ದೃಶ್ಯ ವೈರಲ್​ ಆಗಿದೆ. ಅನೇಕರು ಇದನ್ನು ಕಂಡು ಕೆಂಡಾಮಂಡಲರಾಗಿದ್ದಾರೆ.
Published by:Kavya V
First published: