Evening Digest: ರಾಜ್ಯದಲ್ಲಿ 5 ದಿನ ಮಳೆ: ರೈಲ್ವೆ ಉದ್ಯೋಗಿಗಳಿಗೆ ಭರ್ಜರಿ ಬೋನಸ್: ಇಂದಿನ ಪ್ರಮುಖ ಸುದ್ದಿಗಳು

Kannada news Today : ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ರಾಜ್ಯದಲ್ಲಿ 5 ದಿನ ಮಳೆ : ರಾಜ್ಯಾದ್ಯಂತ ಮುಂದಿನ 5 ದಿನಗಳಲ್ಲಿ ಭರ್ಜರಿ ಮಳೆಯಾಗಲಿದೆ. ಕರಾವಳಿ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೆಚ್ಚಿದ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ನಿನ್ನೆ 4 ಸೆಂ.ಮೀ. ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಅವರು ತಿಳಿಸಿದ್ದಾರೆ. ಉತ್ತರ ಒಳನಾಡು ಪ್ರದೇಶದಲ್ಲಿ ಮುಂದಿನ 3 ದಿನ ಮಳೆಯಾಗಲಿದ್ದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಘಾಟ್ ಸೆಕ್ಷನ್ ಏರಿಯಾಗಳಾದ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆ ಹಿನ್ನಲೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ರೈಲ್ವೆ ಉದ್ಯೋಗಿಗಳಿಗೆ ಗುಡ್​​​ನ್ಯೂಸ್

ದೀಪಾವಳಿಗೂ ಮೊದಲೇ ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕಳೆದ ವರ್ಷದಂತೆ ರೈಲ್ವೆ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ಜೇಬು ಸೇರಲಿದೆ. ಈ ವರ್ಷ ಉದ್ಯೋಗಿಗಳು ಪಡೆಯುವ 78 ದಿನದ ಸಂಬಳ ಬೋನಸ್ ರೂಪದಲ್ಲಿ ದೊರಕಲಿದೆ. ರೈಲ್ವೇ ಇಲಾಖೆಯ ಸುಮಾರು 11.56 ಲಕ್ಷ ನಾನ್ ಗೆಜೆಟೆಟ್ ಉದ್ಯೋಗಿಗಳು ಬೋನಸ್ ಲಾಭ ಪಡೆಯಲಿದ್ದಾರೆ. ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ (Union minister Anurag Thakur) ಇಂದು ಸಂಪುಟ ಸಭೆಯ (Union Cabinet) ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ಸವಿವರವಾಗಿ ತಿಳಿಸಿದರು.

ಲಖಿಂಪುರ್ಖೇರಿಗೆ ರಾಹುಲ್ಗಾಂಧಿ

ಅಧಿಕಾರಿಗಳು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ ನಂತರ ಉತ್ತರ ಪ್ರದೇಶ ಸರ್ಕಾರವು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಮೂವರಿಗೆ ಲಖಿಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಪ್ರಿಯಾಂಕಾ ಗಾಂಧಿ ಈಗಾಗಲೇ ಸೀತಾಪುರದಲ್ಲಿ ಬಂಧನದಲ್ಲಿದ್ದರೆ, ರಾಹುಲ್ ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಶೀಘ್ರದಲ್ಲೇ ಲಖಿಂಪುರ್ ಖೇರಿ ಜಿಲ್ಲೆಗೆ ಇತರೆ ಮೂವರು ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಹಾಗೂ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಭೇಟಿ ನೀಡಲಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು, ಐದಕ್ಕಿಂತ ಕಡಿಮೆ ಸದಸ್ಯರ ಗುಂಪು ಮಾತ್ರ ಲಖಿಂಪುರಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗಿದೆ.

ಸಿಲಿಂಡರ್​ ಬೆಲೆ ಹೆಚ್ಚಳಕ್ಕೆ ಎಚ್​ಡಿಕೆ ಆಕ್ರೋಶ

ನಿರಂತರವಾಗಿ ಅಡುಗೆ ಅನಿಲ ಬೆಲೆ ಏರಿಕೆ (Gas Cylinder Price Hike)  ಮಾಡುವ ಮೂಲಕ ಜನರ ಬದುಕಿಗೆ ಕೊಳ್ಳಿ ಇಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರು, ಕೇಂದ್ರ ಸರಕಾರದ (Central Government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಈ ಟ್ವೀಟ್ʼನಲ್ಲಿಯೂ ಆರೆಸ್ಸೆಸ್ (RSS) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇಂದಿನ ಬೆಳಗಿನ ಶಾಕ್! 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 15 ರೂ. ಹೆಚ್ಚಳ. ಈ ಸಿಲಿಂಡರ್ ಬೆಲೆ ಈಗ 900 ರೂ. ಗಡಿಯಲ್ಲಿದೆ. 7 ವರ್ಷಗಳ ಅಚ್ಛೇ ದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ 4 ದಿನಗಳ ಇಂಧನ ದಾಸ್ತಾನು ಮಾತ್ರ ಲಭ್ಯ

ಭಾರತದ ಕಲ್ಲಿದ್ದಲು (Coal) ಪೂರೈಕೆಯ ಮೇಲೆ ಹದಗೆಡುತ್ತಿರುವ ಒತ್ತಡದಿಂದ ವಿದ್ಯುತ್‌ ಬಿಕ್ಕಟ್ಟು (Electric Shortage) ಎದುರಾಗುವ ಆತಂಕಗಳು ಕಾಡುತ್ತಿದೆ. ಇದರಿಂದ ವಿಶ್ವದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಪ್ರಮುಖ ಆರ್ಥಿಕತೆಯನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನೂ ಉಂಟು ಮಾಡುತ್ತಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳು ಕಳೆದ ತಿಂಗಳ ಅಂತ್ಯದಲ್ಲಿ ಸರಾಸರಿ ನಾಲ್ಕು ದಿನಗಳ ಇಂಧನದ ದಾಸ್ತಾನು (Fuel Shortage)  ಹೊಂದಿದ್ದವು. ಇದು ವರ್ಷದಲ್ಲೇ ಕನಿಷ್ಠ ಮಟ್ಟವಾಗಿದ್ದು, ಮತ್ತು ಆಗಸ್ಟ್ ಆರಂಭದಲ್ಲಿದ್ದ 13 ದಿನಗಳಿಗಿಂತ ಕಡಿಮೆಯಾಗಿದೆ. ಅಲ್ಲದೆ, ಅರ್ಧಕ್ಕಿಂತ ಹೆಚ್ಚು ಭಾರತೀಯ ವಿದ್ಯುತ್ ಸ್ಥಾವರಗಳು ಸ್ಥಗಿತಗೊಳ್ಳುವ ಆತಂಕವೂ ಎದುರಾಗಿದೆ. ಸುಮಾರು 70% ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲನ್ನು ಬಳಸುವುದರಿಂದ, ಸ್ಪಾಟ್ ಪವರ್ ದರಗಳು ಏರಿಕೆಯಾಗಿದೆ. ಆದರೆ ಅಲ್ಯೂಮಿನಿಯಂ ಸ್ಮೆಲ್ಟರ್‌ಗಳು ಮತ್ತು ಸ್ಟೀಲ್ ಮಿಲ್‌ಗಳು ಸೇರಿದಂತೆ ಪ್ರಮುಖ ಗ್ರಾಹಕರಿಂದ ಇಂಧನದ ಸರಬರಾಜುಗಳನ್ನು ಬೇರೆಡೆಗೆ ವರ್ಗಾಯಿಸಲಾಗುತ್ತಿದೆ.
Published by:Kavya V
First published: