• Home
  • »
  • News
  • »
  • state
  • »
  • Evening Digest: ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್? ಹಾವನ್ನೇ ಗಂಡ ಎಂದ ಅಜ್ಜಿ, ಇವು ಇಂದಿನ ಟಾಪ್‌ ನ್ಯೂಸ್‌ಗಳು

Evening Digest: ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್? ಹಾವನ್ನೇ ಗಂಡ ಎಂದ ಅಜ್ಜಿ, ಇವು ಇಂದಿನ ಟಾಪ್‌ ನ್ಯೂಸ್‌ಗಳು

ಸಂಜೆ ಸುದ್ದಿ

ಸಂಜೆ ಸುದ್ದಿ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಸುದ್ದಿಗಳ ಗುಚ್ಛ ಇಲ್ಲಿದೆ...

  • Share this:

ಮತ್ತೊಮ್ಮೆ ಜಾರಿಯಾಗುತ್ತಾ ಟಫ್ ರೂಲ್ಸ್? ತಜ್ಞರೊಂದಿಗೆ ಮಹತ್ವದ ಸಭೆ


ಬೆಂಗಳೂರು: ಕೊರೋನ ವೈರಸ್ (Corona Virus) ಅಬ್ಬರ ಮತ್ತೆ ಜಾಸ್ತಿಯಾಗುತ್ತಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಕೋವಿಡ್ (Covid) ಮಹಾಮಾರಿ ಅಬ್ಬರಿಸುತ್ತಿದೆ. ಇತ್ತ ಭಾರತದಲ್ಲೂ (India) ಕೋವಿಡ್ ಅಬ್ಬರ ಜೋರಾಗಿದೆ. ದೆಹಲಿ (Delhi), ಪಂಜಾಬ್ (Punjab), ಕೇರಳ (Kerala), ತಮಿಳುನಾಡು (Tamil Nadu) ಸೇರಿದಂತೆ ಹಲವೆಡೆ ಸೋಂಕು (Infection) ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅತ್ತ ಕೇಂದ್ರ ಸರ್ಕಾರ (Central Government) ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ರಾಜ್ಯಗಳಲ್ಲಿ ಕೋವಿಡ್  ಸೋಂಕು ಹೆಚ್ಚುವ ಸಾಧ್ಯತೆ ಇದ್ದು, ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ಇನ್ನು ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಇದೀಗ ಕೋವಿಡ್ ಟಾಸ್ಕ್ ಪೋರ್ಸ್ನ (Covid Task Force) ಜೊತೆ ಮಹತ್ವದ ಸಭೆ (Meeting) ನಡೆಯಲಿದೆ.


ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದ ಗಂಡ; 4 ದಿನ ನಾಗರ ಹಾವಿನ ಜೊತೆ ಅಜ್ಜಿ ವಾಸ


ಬಾಗಲಕೋಟೆ (ಜೂ 6): ಮೃತ ಗಂಡ ಹಾವಿನ (Snake) ರೂಪದಲ್ಲಿ ಬಂದಿದ್ದಾನೆಂದು ಮನೆಯಲ್ಲಿ 4 ದಿನಗಳಿಂದ ಹಾವಿನ ಜೊತೆ ಅಜ್ಜಿ ಇದ್ದಾರೆ. ಬಾಗಲಕೋಟೆ (Bagalakote) ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸಾರವ್ವ ಮೌನೇಶ್ ಕಂಬಾರ ಎನ್ನುವ ಮಹಿಳೆಯ ವಿಚಿತ್ರ (Strange) ನಂಬಿಕೆಗೆ ಊರ ಜನರೇ ಬೆಚ್ಚಿಬಿದ್ದಿದೆ. 4 ದಿನಗಳ ಹಿಂದೆ ಮನೆಗೆ ನಾಗರಹಾವು (Cobra) ಬಂದಿದ್ದು, ಹಾವು ಹೊರಗೆ ಹಾಕಲು ಪ್ರಯತ್ನ ಮಾಡಿದ್ರೂ ಅದು ಹೋಗಲಿಲ್ಲವಂತೆ. ಇದರಿಂದ ಅಜ್ಜಿಯೇನು ಆತಂಕಗೊಂಡಿಲ್ಲ. ತನ್ನ ಪತಿಯೇ ಹಾವಿನ ರೂಪದಲ್ಲಿ ಬಂದಿರಬಹುದೆಂಬ ನಂಬಿಕೆಯಲ್ಲಿ ಸಾರವ್ವ ಇದ್ದಾರೆ. ಅಜ್ಜಿಯ ಪತಿ ಮೋನೇಶ್ ಎನ್ನುವವರು ಹಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ರು. ಅವರೇ ಇದೀಗ ಹಾವಿನ ರೂಪದಲ್ಲಿ ತನ್ನ ಹತ್ತಿರ ಬಂದಿದ್ದಾರೆ. ಅದಕ್ಕೆ ಯಾರೂ ದಕ್ಕೆ ಮಾಡಬಾರದು, ಹಿಡಿಯಬಾರದು ಎಂದು ಅಜ್ಜಿಯ ಕೇಳಿ ಕೊಂಡಿದ್ದಾರೆ.


ಇದನ್ನೂ ಓದಿ: Bagalakote: ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದ ಗಂಡ; 4 ದಿನ ನಾಗರ ಹಾವಿನ ಜೊತೆ ಅಜ್ಜಿ ವಾಸ


ಪಂಜಾಬ್​ನ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಪರ ಘೋಷಣೆ


ಆಪರೇಶನ್ ಬ್ಲೂಸ್ಟಾರ್ 83ನೇ ವಾರ್ಷಿಕೋತ್ಸವದಂದು (Operation Blue Star) ಪಂಜಾಬ್​ನ ಅಮೃತಸರದ ಗೋಲ್ಡನ್ ಟೆಂಪಲ್‌ನ (Golden Temple) ಪ್ರವೇಶದ್ವಾರದಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು (Pro Khalistan Slogans) ಕೂಗಲಾಗಿದೆ. ತೀವ್ರಗಾಮಿ ಸಿಖ್ ಸಂಘಟನೆಗಳು ಮತ್ತು ಶಿರೋಮಣಿ ಅಕಾಲಿದಳ (ಅಮೃತಸರ)ಬೆಂಬಲಿಗರು ಈ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾಗಿದ್ದು ಖಲಿಸ್ತಾನ್ ಪ್ರತ್ಯೇಕತಾವಾದಿ ಜರ್ನೈಲ್ ಭಿಂದ್ರನ್‌ವಾಲೆ ಅವರ ಪರ ಘೋಷಣೆಗಳು ಮತ್ತು ಪೋಸ್ಟರ್‌ಗಳನ್ನು ಸಹ ಬಿತ್ತರಿಸಲಾಗಿದೆ ಎಂದು ವರದಿಯಾಗಿದೆ. ಅನೇಕ ಯುವಕರು 'ಖಲಿಸ್ತಾನ್ ಜಿಂದಾಬಾದ್' ಎಂದು ಬರೆದಿರುವ ಬ್ಯಾನರ್ ಮತ್ತು ಫಲಕಗಳನ್ನು ಹಿಡಿದಿದ್ದರು. ಹತ್ಯೆಯಾದ ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಚಿತ್ರವಿರುವ ಟೀ ಶರ್ಟ್‌ಗಳನ್ನು ಅವರು ಧರಿಸಿದ್ದರು ಎಂದು ಎಎನ್​ಐ ವರದಿ ಮಾಡಿದೆ.


ರಮ್ಯಾ ಅಭಿಮಾನಿಗಳಿಗೊಂದು Breaking News!


ರಾಜಕೀಯದಲ್ಲಿ ರಮ್ಯಾ ವಿರೋಧಿಸುವವರು ಸಾಕಷ್ಟು ಮಂದಿಯಿದ್ದಾರೆ. ಆದರೆ ಸಿನಿಮಾದಲ್ಲಿ ಎಲ್ಲರೂ ರಮ್ಯಾ ಅಭಿಮಾನಿಗಳೇ (Fans). ರಮ್ಯಾ ಎಲ್ಲೇ ಪ್ರತ್ಯಕ್ಷವಾಗಲಿ, ಸೋಶಿಯಲ್ ಮೀಡಿಯಾಗಳಲ್ಲಿ ಲೈವ್ (Live) ಬರಲಿ ಅಭಿಮಾನಿಗಳು ಕೇಳೋದು ಯಾವಾಗ ಸಿನಿಮಾಕ್ಕೆ ವಾಪಸ್ ಆಗ್ತೀರಾ? ಯಾವಾಗ ನಿಮ್ಮ ಹೊಸ ಸಿನಿಮಾ ಬರುತ್ತೆ? ಸಿನಿಮಾದಲ್ಲಿ ನಿಮ್ಮ ಅಭಿನಯ ನೋಡಿ ಕಣ್ತು ತುಂಬಿಕೊಳ್ಳೋದು ಯಾವಾಗ? ಅಂತ ಹತ್ತು ಹಲವು ಪ್ರಶ್ನೆ. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ಯಾಂಡಲ್‌ವುಡ್ ಕ್ವೀನ್ (Sandalwood Queen) ರಮ್ಯಾ ಅವರೇ ಖುದ್ದಾಗಿ ಉತ್ತರ ನೀಡಿದ್ದಾರೆ. ಚಿತ್ತಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಮ್ಯಾ ಈ ಬಗ್ಗೆ ಖುದ್ದಾಗಿ ತಾವೇ ಮಾತನಾಡಿದ್ದಾರೆ. ನನ್ನ ಅಭಿಮಾನಿಗಳು ಎಲ್ಲರೂ ನೀವು ಸಿನಿಮಾಕ್ಕೆ ಮತ್ತೆ ಯಾವಾಗ ಬರ್ತೀರಿ ಅಂತ ಕೇಳುತ್ತಿದ್ದಾರೆ. ನಾನು ಶೀಘ್ರವೇ ಸಿನಿಮಾಕ್ಕೆ ಬರ್ತೀನಿ ಎಂಬ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳಂತೂ ಸಂತಸಗೊಂಡಿದ್ದಾರೆ.


ಇದನ್ನೂ ಓದಿ: Ramya Exclusive: ರಮ್ಯಾ ಅಭಿಮಾನಿಗಳಿಗೊಂದು Breaking News! ಇದು ಎಲ್ಲೂ ಇಲ್ಲದ Exclusive ಸುದ್ದಿ


ಚಡ್ಡಿ ಸುಡ್ತೀರಾ ತಗೋಳ್ಳಿ, ಮಾಜಿ ಸಿಎಂ ಸಿದ್ದರಾಮಯ್ಯಗೆ RSS​​ನಿಂದ ಪಾರ್ಸೆಲ್!


ಮಂಡ್ಯ (ಜೂ.6): ರಾಜ್ಯ ರಾಜಕೀಯದಲ್ಲಿ RSS ಚಡ್ಡಿ ವಿಷಯ  ಜೋರಾಗಿ ಸದ್ದು ಮಾಡ್ತಿದೆ.  ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) RSS ಚಡ್ಡಿ ಬಗ್ಗೆ ಮಾತಾಡಿದ್ದಕ್ಕೆ ಬಿಜೆಪಿ ನಾಯಕರು (BJP Leaders) ರೊಚ್ಚಿಗೆದ್ದಿದ್ದಾರೆ. ದಿನಾ ಒಬ್ಬೊಬ್ಬ ನಾಯಕರೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ RSS ಕಾರ್ಯಕರ್ತರು ಸಹ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೆ ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವರಿಗೆ ಮಂಡ್ಯದ ಆರ್​ಎಸ್​ಎಸ್​ ಕಾರ್ಯಕರ್ತರು (RSS Activist) ಚಡ್ಡಿ ಪಾರ್ಸಲ್ (Parcel) ಕಳುಹಿಸಿದ್ದಾರೆ.

Published by:Annappa Achari
First published: