Evening Digest: ಕೇಂದ್ರ ಸಚಿವ ರಾಜೀನಾಮೆ, ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ; ಈ ಸಂಜೆಯ ಪ್ರಮುಖ ಸುದ್ದಿಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
Mukhtar Abbas Naqvi Resigns: ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ರಾಜೀನಾಮೆ (Union Minister Mukhtar Abbas Naqvi Resigns) ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.  ಅಲ್ಲದೇ ಇನ್ನೋರ್ವ ಸಚಿವ ಕೇಂದ್ರ ಸಚಿವರಾದ ಆರ್‌ಸಿಪಿ ಸಿಂಗ್ ಅವರು (RCP Singh Resigns) ಸಹ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ಸಚಿವರು ಬುಧವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ನಖ್ವಿ ಮತ್ತು ಸಿಂಗ್ ಇಬ್ಬರ ರಾಜ್ಯಸಭಾ ಅಧಿಕಾರಾವಧಿ ಗುರುವಾರ ಕೊನೆಗೊಳ್ಳಲಿದೆ. ನಖ್ವಿ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯ ಹೊಣೆ ಹೊತ್ತಿದ್ದರೆ, ಸಿಂಗ್ ಸಂಪುಟದಲ್ಲಿ ಉಕ್ಕು ಸಚಿವರಾಗಿದ್ದರು. ಮೂಲಗಳ ಪ್ರಕಾರ, ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ಮೋದಿ ಬುಧವಾರ ನಖ್ವಿ ಮತ್ತು ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ

ನಿನ್ನೆ ತಮ್ಮ ಆಪ್ತರಿಂದಲೇ ಖಾಸಗಿ ಹೋಟೆಲ್‌ (Hotel) ಒಂದರಲ್ಲಿ ಹತ್ಯೆಯಾಗಿದ್ದ (Murder) ಖ್ಯಾತ ವಾಸ್ತು ತಜ್ಞ (Famous Vastu Expert) ಚಂದ್ರಶೇಖರ ಗುರೂಜಿ (Chandrashekhar Guruji) ಅಂತ್ಯಕ್ರಿಯೆ (Funeral) ಇಂದು ನಡೆಯಿತು. ಹುಬ್ಬಳ್ಳಿಯ (Hubballi) ಸುಳ್ಳ ಗ್ರಾಮದ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿತು. ವೀರಶೈವ ಲಿಂಗಾಯತ (Veerashaiva Lingayat) ವಿಧಿವಿಧಾನದಂತೆ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಇದನ್ನೂ ಓದಿ: Chandrashekhar Guruji: ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ, ಒಡೆಯನ ಸಮಾಧಿ ಬಳಿ ಕುಳಿತ ನಾಯಿ!

ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ

ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಟೀಂ ಇಂಡಿಯಾ (Team India) ನಾಯಕತ್ವ ಮ್ಯೂಸಿಕಲ್ ಚೇರ್ ಆಟದಂತಾಗಿದೆ. ವರ್ಷದಲ್ಲಿ 8 ಮಂದಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ಅವರಲ್ಲಿ ಐವರು ಹೊಸ ನಾಯಕರಾಗಿದ್ದಾರೆ. ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಿದ ಹಾರ್ದಿಕ್ ಪಾಂಡ್ಯ ನಾಯಕರಾದರೆ, ನಿನ್ನೆಯಷ್ಟೇ ಮುಗಿದ ಇಂಗ್ಲೆಂಡ್​ ಟೆಸ್ಟ್ ಬೂಮ್ರಾ ನಾಯಕರಾಗಿದ್ದರು. ಇದೀಗ ಬಿಸಿಸಿಐ (BCCI) ಮತ್ತೆ ಟೀಂ ಇಂಡಿಯಾದ ನಾಯಕತ್ವವನ್ನು ಬದಲಾವಣೆ ಮಾಡಿದೆ.

ಜುಲೈ 22 ರಿಂದ ವೆಸ್ಟ್ ಇಂಡೀಸ್ (West Indies )ನೆಲದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಇಲ್ಲಿ ಮತ್ತೆ ಟೀಂ ಇಂಡಿಯಾವನ್ನು ಮುನ್ನಡೆಸುವಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೇ ಅನೇಖ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ತಂಡದ ನಾಯಕರಾಗಿ ಶಿಖರ್ ಧವನ್ (Shikhar Dhawan) ಅವರನ್ನು ನೇಮಿಸಲಾಗಿದೆ. ರವೀಂದ್ರ ಜಡೇಜಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

ಚಾಮುಂಡಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣವಿಲ್ಲ

ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ, ತಾಯಿ ಚಾಮುಂಡೇಶ್ವರಿಯ (Goddess Chamundeshwari) ನೆಲೆಬೀಡು ಮೈಸೂರಿನ (Mysuru) ಚಾಮುಂಡಿ ಬೆಟ್ಟಕ್ಕೆ (Chamundi Hills) ರೋಪ್‌ ವೇ (Rope Way) ನಿರ್ಮಾಣಕ್ಕೆ ಮೈಸೂರು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಇದಕ್ಕೆ ಸ್ಥಳೀಯರಿಂದ, ಪರಿಸರ ಪ್ರೇಮಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಜಿಲ್ಲಾಡಳಿತದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ (Minister ST Somashekhar) ಸಭೆ (Meeting) ನಡೆಸಿದರು. ಈ ಸಭೆಯಲ್ಲಿ ರೋಪ್‌ ವೇ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: Chamundi Hill: ಚಾಮುಂಡಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣವಿಲ್ಲ, ಜನರನ್ನು ಒಕ್ಕಲೆಬ್ಬಿಸೋದಿಲ್ಲ ಎಂದ ಸರ್ಕಾರ

ಸಿದ್ದು ವಿರುದ್ಧ ಈಶ್ವರಪ್ಪ ಕಿಡಿಕಿಡಿ

ಕಲಬುರಗಿ: ಎಐಸಿಸಿ ನಾಯಕರು (AICC Leader) ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ (State Congress Leader) ವಿರುದ್ಧ ಸಚಿವ (Minister) ಕೆಎಸ್ ಈಶ್ವರಪ್ಪ (KS Eshwarappa) ಕಿಡಿ ಕಾರಿದ್ದಾರೆ. ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, 75 ವರ್ಷಗಳಿಂದ ಹಿಂದೂ (Hindu) ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೆವು. ನೂಪುರ್ ಶರ್ಮಾ ಹೇಳಿಕೆ (Nupur Sharma Statement) ವಿರುದ್ಧ ಭಾರಿ ಪ್ರತಿಭಟನೆ (Protest) ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕರೂ ಕೂಡ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಕಾಳಿದೇವಿ (Goddess Kaali) ಬಾಯಲ್ಲಿ ಸಿಗರೇಟು (cigarette) ಇಟ್ಟಿದ್ದರ ಚಿತ್ರದ ಪೋಸ್ಟರ್ (Poster) ಬಗ್ಗೆ ಯಾಕೆ ಖಂಡನೆ ವ್ಯಕ್ತವಾಗಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು.
Published by:Annappa Achari
First published: