ಸಚಿವ-ಸಂಸದರ ಗುಸು ಗುಸು ವಿಡಿಯೋ ವೈರಲ್: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸು ಗುಸು ಸಂಚಲ ಮೂಡಿಸಿದೆ. ತುಮಕೂರು ಜಿಲ್ಲೆಯಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್(Minister Byrathi Basavaraj) ಬಳಿ ಸಂಸದ ಜಿ.ಎಸ್.ಬಸವರಾಜು(MP GS Basavaraj) ಅವರು ಸಚಿವ ಮಾಧುಸ್ವಾಮಿ(Minister MadhuSwamy) ಬಗ್ಗೆ ಚಾಡಿ ಹೇಳುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ನಮ್ಮ ಮಂತ್ರಿ ಹೆಂಗೆ ಅಂದ್ರೆ, ಕೊರಿಯಾ ಕಿಂಗ್ ಇದ್ದಾನಲ್ಲ ಆ ತರ. ಕೆಟ್ಟ ನನ್ಮಗ, ಇವನಿಂದ ನಮ್ಮ ಜಿಲ್ಲೆಯಲ್ಲಿ ಒಂದು ಸೀಟೂ ಬರಲ್ಲ. ಮಾತು ಎತಿದರೆ ಹೊಡಿ ಬಡಿ ಅಂತಾನೆ. ನಮ್ಮ ಜಿಲ್ಲೆನ ಹಾಳು ಮಾಡಿ ಬಿಟ್ಟಿದ್ದಾನೆ ಎಂದು ಸಚಿವರ ಕಿವಿಯಲ್ಲಿ ಸಂಸದರು ಪಿಸುಗುಟ್ಟಿದ್ದಾರೆ. ಸಚಿವ ಭೈರತಿ, ಆಮೇಲೆ ಮಾತಾಡೋಣ ಸುಮ್ಮನಿರು ಅಂದರೂ ನಿಲ್ಲಿಸದ ಸಂಸದರು ಚಾಡಿ ಹೇಳುವುದನ್ನು ಮುಂದುವರೆಸಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವೀಕೆಂಡ್ನಲ್ಲಿ ‘ಎಣ್ಣೆ’ ಸಿಗುತ್ತಾ?
ವೀಕೆಂಡ್ ಕರ್ಫ್ಯೂ (Weekend Curfew) ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಸುತ್ತೋಲೆ ಕಳುಹಿಸಿ ಖಡಕ್ ಆದೇಶ ನೀಡಿದ್ದಾರೆ. ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಮಾರಾಟ ವಿಚಾರವನ್ನು ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ರಾಜ್ಯ ಸರ್ಕಾರ ಬಿಟ್ಟಿದೆ. ಪ್ರಾದೇಶಿಕ ಅವಶ್ಯಕತೆಗಳಿಗೆ ಆನುಗುಣವಾಗಿ ಆಯಾ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಬಹುದು. ಈ ಮೊದಲು ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪ್ರಿಯರಿಗೆ ಎಣ್ಣೆ ಸಿಗಲ್ಲ ಎಂದು ಸರ್ಕಾರ ಹೇಳಿತ್ತು. ಎಣ್ಣೆ ಅಂಗಡಿ ಬಂದ್ ಮಾಡುವಂತೆ ಅಬಕಾರಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೆ ಈಗ Weekend Curfew ವೇಳೆ ಶನಿವಾರ ಭಾನುವಾರ ಮದ್ಯ ಮಾರಾಟ ಜಿಲ್ಲಾಧಿಕಾರಿ ವಿವೇಚನೆಗೆ ಬಿಟ್ಟಿದ್ದು ಎಂದು ಸರ್ಕಾರ ಹೇಳಿದೆ. ಒಂದು ಕಡೆ ವಾರಾಂತ್ಯ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೆ, ಮತ್ತೊಂದು ಕಡೆ ಖಜಾನೆ ತುಂಬಿಸಲು ಬಾರ್ಗಳಿಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದೆ.
ಆಸ್ಪತ್ರೆಯಲ್ಲಿದ್ದಾಗ ಮುಸ್ಲಿಮರ, ದಲಿತರ ರಕ್ತ ಹಾಕಬೇಡಿ ಎನ್ನುತ್ತೇವಾ
ಮಡಿವಾಳ ಗುರುಪೀಠದ ಜನನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಮಾಚೀದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಭಾಷಣ ಮಾಡಿದ ಸಿದ್ದರಾಮಯ್ಯ, ಹಿಂದುತ್ವದ (Hindutva) ಹೆಸರಿನಲ್ಲಿ ಜಾತಿವಾದ ನಡೆಯುತ್ತಿದೆ. ನಾನು ಹಿಂದೂ ಅಲ್ಲವೋ, ನೀವು ಹಿಂದೂಗಳು ಅಲ್ವಾ. ನಾವೆಲ್ಲರೂ ಹಿಂದೂಗಳು, ನಮ್ಮ ತಂದೆ ಇಲ್ಲವಾದರೆ ಸಿದ್ದರಾಮಯ್ಯ ಅಂತ ಯಾಕೆ ಹೆಸರು ಇಡುತ್ತಿದ್ದ. ಕಾಯಿಲೆ ಬಂದಾಗ ಆಸ್ಪತ್ರೆಯಲ್ಲಿ ರಕ್ತ(Blood) ಹಾಕುತ್ತಾರೆ. ಆಗ ನಾವು ಮುಸ್ಲಿಂ ರಕ್ತ, ದಲಿತರ ರಕ್ತ ಬೇಡ ಎನ್ನುತ್ತೇವಾ. ಯಾವುದಾದರೂ ರಕ್ತ ಕೊಡಿ ಜೀವ ಉಳಿದರೆ ಸಾಕು ಎಂದು ವೈದ್ಯರಿಗೆ ಹೇಳಲ್ವಾ? ಕಾಯಿಲೆ ವಾಸಿ ಆದ ಬಳಿಕ ನೀನು ಮುಸ್ಲಿಂ, ಕ್ರೈಸ್ತ ದೂರ ಇರು ಎನ್ನುವುದು ಅಮಾನವೀಯತೆ. ಇದನ್ನು ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಲಸಿಕೆ ಪಡೆದುಕೊಂಡವರಿಗೆ ಮಾತ್ರ ಮೈಸೂರು ಅರಮನೆಗೆ ಪ್ರವೇಶ
ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಹೀಗೆ ಬಂದ ಪ್ರವಾಸಿಗರು ವಿಶ್ವವಿಖ್ಯಾತ ಮೈಸೂರು ಅರಮನೆಯನ್ನು ನೋಡದೆ ಹೋಗುವುದಿಲ್ಲ.. ಹೀಗಾಗಿ ಮೈಸೂರಿನಲ್ಲಿ ಇನ್ನ ಪ್ರವಾಸಿತಾಣಗಳಲ್ಲಿ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಳ್ಳುವುದರ ಜೊತೆಗೆ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿಯೂ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.. ಯಾರು ಕಡ್ಡಾಯವಾಗಿ ಕೊರೊನಾ ಲಸಿಕೆಯನ್ನು ಪಡೆದುಕೊಂಡಿರುತ್ತಾರೋ ಅಂಥವರಿಗೆ ಮಾತ್ರ ಮೈಸೂರು ಅರಮನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಅರಮನೆ ಆಡಳಿತ ಮಂಡಳಿ ಆದೇಶ ಮಾಡಿದೆ.
ಆತ್ಮಹತ್ಯಾ ಬಾಂಬರ್ ಗಳ ನೇಮಕ
ಅಫ್ಘಾನಿಸ್ತಾನವನ್ನು (Afghanistan) ವಶಕ್ಕೆ ಪಡೆದ ತಾಲಿಬಾನ್ ಸರ್ಕಾರ ರಚನೆ ಮಾಡಿ ನಾಲ್ಕು ತಿಂಗಳು ಕಳೆದಿದೆ. ಈ ನಡುವೆ ಸೇನೆಯನ್ನು ಕಟ್ಟಲು ಮುಂದಾಗಿರುವ ತಾಲಿಬಾನ್ ತಮ್ಮ ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್‌ನಿಂದ ಅತಿದೊಡ್ಡ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದೆ. ಇದೇ ಹಿನ್ನಲೆ ತನ್ನ ಶಕ್ತಿ ಬಲಗೊಳಿಸಲು ಮುಂದಾಗಿರುವ ತಾಲಿಬಾನ್ ಸರ್ಕಾರ ಇದೀಗ ಸೇನೆಯಲ್ಲಿ ಅಧಿಕೃತವಾಗಿ ಆತ್ಮಹತ್ಯಾ ಬಾಂಬರ್‌ಗಳನ್ನು (Suicide Bombers) ನೇಮಿಸಿಕೊಳ್ಳಲು ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ