Evening Digest: ಕನ್ನಡ ಇಲಾಖೆ ವೆಬ್​​ಸೈಟೇ ಹಿಂದಿಮಯ: ಈ ಬಾರಿ ಯಾರ್ಯಾರು ಬಿಗ್ ಮನೆಗೆ ಕಾಲಿಟ್ಟಿದ್ದಾರೆ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕನ್ನಡ ಇಲಾಖೆ ವೆಬ್​ಸೈಟೇ​​ ಹಿಂದಿಮಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ (Department of Kannada and Culture) ವೆಬ್‌ಸೈಟ್‌ನಲ್ಲಿ (Website) ಹರ್‌ ಘರ್‌ ತಿರಂಗ ಅಭಿಯಾನವನ್ನು ಹಿಂದಿಯಲ್ಲಿ ಉಲ್ಲೇಖಿಸಿದ್ದರ ವಿರುದ್ಧ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ (Tweet) ಮಾಡಿ ಟೀಕಿಸಿದ್ದರು.  ಬಲವಂತವಾಗಿ ಹಿಂದಿ ಹೇರುವ ಮೂಲಕ ಕನ್ನಡಕ್ಕೆ ಅಪಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರೇ (BJP Leaders), ನಾನೊಬ್ಬ ಕನ್ನಡಿಗ ಎಂಬ ಸ್ವಾಭಿಮಾನವನ್ನು ನೀವೇ ಬೆಳೆಸಿಕೊಳ್ಳಬೇಕು, ಇದು ನಾವು ಹೇಳಿ ಬರುವಂಥದ್ದಲ್ಲ. ಹಿಂದಿ (Hindi) ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ (BJP Leaders) ಸಲಹೆ ನೀಡಿದ್ದಾರೆ.

ಮಗಳಿಗೆ ಸುಷ್ಮಾ ಸ್ವರಾಜ್ ಹೆಸರಿಡಲು ಮುಂದಾದ ಅಭಿಮಾನಿ

ಕೊಪ್ಪಳ (ಆ.06): ಬಿಜೆಪಿ ಕಾರ್ಯಕರ್ತ  (BJP Activist) ದೇವರಾಜ್ ಎಂಬುವರು ತನ್ನ ಮಗಳಿಗೆ ದಿವಂಗತೆ ಸುಷ್ಮಾ ಸ್ವರಾಜ್ (Sushma Swaraj) ಹೆಸರಿಡಲು ಮುಂದಾಗಿದ್ದಾರೆ. ಕೊಪ್ಪಳ (Koppala) ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪೂರ ನಿವಾಸಿ  ದೇವರಾಜ್ ದಂಪತಿಗೆ ಕಳೆದ ಕೆಲ ದಿನಗಳ ಹಿಂದಷ್ಟೆ ಹೆಣ್ಣು ಮಗು ಜನಸಿದೆ. ದೇವರಾಜ್ (Devaraj)​ ಸುಷ್ಮಾ ಸ್ವರಾಜ್​ ಅವ್ರ ಅಪ್ಪಟ ಅಭಿಮಾನಿ ಹೀಗಾಗಿ ಅವರ ಹೆಸರನ್ನೇ ತನ್ನ ಮಗಳಿಗಿಡಲು ನಿರ್ಧಾರ ಮಾಡಿದ್ದಾರೆ. ಆದ್ರೆ ಮಗಳಿಗೆ ನಾಮಕರಣ ಮಾಡಲು ಜನಾರ್ದನ ರೆಡ್ಡಿ (Janardhana Reddy) ಹಾಗೂ ಸಚಿವ ಶ್ರೀರಾಮುಲು (Sriramulu) ಅವರೇ ಬರಬೇಕೆಂದು ಬಿಜೆಪಿ ಕಾರ್ಯಕರ್ತ ದೇವರಾಜ್​ ಪಟ್ಟು ಹಿಡಿದಿದ್ದಾರೆ.

ಉಪ ರಾಷ್ಟ್ರಪತಿ ತಿಂಗಳ ವೇತನ ಎಷ್ಟು?

ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸಿನ ಮಿತಿ 35 ವರ್ಷಗಳು. ಅಭ್ಯರ್ಥಿಯು ಭಾರತೀಯ ನಾಗರಿಕರಾಗಿರಬೇಕು ಮತ್ತು ರಾಜ್ಯಸಭೆಯಲ್ಲಿ ಸದಸ್ಯತ್ವಕ್ಕಾಗಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬೇಕು. ಒಬ್ಬ ವ್ಯಕ್ತಿಯು ಕೇಂದ್ರ ಸರ್ಕಾರ ಅಥವಾ ರಾಜ್ಯಗಳ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಅವನು / ಅವಳು ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ. ದೇಶದ ಉಪರಾಷ್ಟ್ರಪತಿಯ ವೇತನವನ್ನು ಸಂಸದ ಅಧಿಕಾರಿಗಳ ಸಂಬಳ ಮತ್ತು ಭತ್ಯೆಗಳ ಕಾಯಿದೆ ನಿಯಂತ್ರಿಸುತ್ತದೆ. ಇದರ ಪ್ರಕಾರ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯು ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಕಾರಣ ಸ್ಪೀಕರ್ ಸಂಬಳ ಮತ್ತು ಪ್ರಯೋಜನಗಳನ್ನು ಪಡೆಯುತ್ತಾರೆ. ವರದಿಗಳ ಪ್ರಕಾರ, ಉಪಾಧ್ಯಕ್ಷರಿಗೆ ವಿವಿಧ ಭತ್ಯೆಗಳ ಜೊತೆಗೆ ತಿಂಗಳಿಗೆ 4 ಲಕ್ಷ ರೂ. ವೇತನ ಸಿಗಲಿದೆ.

ಮಾಜಿ ಸಚಿವರ ಆಪ್ತೆಗೆ ಜೈಲಿನಲ್ಲಿ ಅಪಾಯ

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ (SSC scam) ಪಾರ್ಥ ಚಟರ್ಜಿ (Partha Chatterjee) ಬಂಧನಕ್ಕೊಳಗಾಗಿರುವುದು, ಸಚಿವ ಸ್ಥಾನದಿಂದ ವಜಾಗೊಂಡಿರುವುದು ಗೊತ್ತೇ ಇದೆ. ಮಾಜಿ ಸಚಿವರೊಂದಿಗೆ ದೊಡ್ಡದಾಗಿ ಕೇಳಿ ಬಂದ ಹೆಸರು ಅವರ ಆಪ್ತೆ, ಬಂಗಾಳಿ ನಟಿ ಅರ್ಪಿತಾ ಮುಖರ್ಜಿಯದ್ದು (Arpita Mukherjee). ಆಕೆ ಮನೆಯಲ್ಲಿ ಇಡಿ ದಾಳಿ ವೇಳೆ ಕೋಟ್ಯಂತರ ರೂಪಾಯಿ, ಆಸ್ತಿ ಪತ್ರಗಳು, ಐಷಾರಾಮಿ ಕಾರು ಹಾಗೂ ಸೆಕ್ಸ್​ ಆಟಿಕೆಗಳು ದೊರೆದಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಜೈಲಿನಲ್ಲಿರುವ ನಟಿ ಅರ್ಪಿತಾಗೆ ಜೀವ ಬೆದರಿಕೆ ಇದೆಯಂತೆ. ಆಕೆ ಜೈಲಿನಲ್ಲಿ ನೀಡುತ್ತಿರುವ ಆಹಾರ, ನೀರಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅರ್ಪಿತಾ ಮುಖರ್ಜಿ ಅವರು ಜೀವ ಬೆದರಿಕೆಯನ್ನು ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರಿಗೆ ವಿಭಾಗ 1 ಕೈದಿಗಳ ವರ್ಗವನ್ನು ಪಡೆಯಲು ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಇಡಿ ವಕೀಲರಾದ ಫಿರೋಜ್ ಎಡುಲ್ಜಿ ಅವರು ಅರ್ಪಿತಾ ಅವರ ಜೀವ ಬೆದರಿಕೆಯ ವಾದವನ್ನು ಒಪ್ಪಿಕೊಂಡರು. ಅವರನ್ನು ಸಾಮಾನ್ಯವಾಗಿ ನಾಲ್ಕಕ್ಕಿಂತ ಹೆಚ್ಚು ಕೈದಿಗಳೊಂದಿಗೆ ಇರಿಸಬಾರದು ಎಂದು ಹೇಳಿದರು.

ಈ ಬಾರಿ ಯಾರ್ಯಾರು ಬಿಗ್​ ಮನೆಗೆ ಕಾಲಿಟ್ಟಿದ್ದಾರೆ?

ಕನ್ನಡ (Kannada)  ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಪ್ರಾರಂಭವಾಗಲಿದೆ. ವೂಟ್‌ ಆ್ಯಪ್‌ನಲ್ಲಿ (Voot App)  ಇಂದಿನಿಂದ  ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರೇ ಇದನ್ನು ನಡೆಸಿಕೊಡುತ್ತಿದ್ದಾರೆ. ಇಂದು ಸಂಜೆ 7 ಗಂಟೆಯಿಂದ ಅಧಿಕೃತವಾಗಿ ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ ಆರಂಭವಾಗಲಿದೆ. ಆದರೆ ಇದೀಗ ಹಳೆಯ ಬಿಗ್​ ಬಾಸ್​ ವಿಜೇತರನ್ನು ಸಂದರ್ಶನ ಮಾಡಲಾಗುತ್ತಿದ್ದು, ಇದರ ನಡುವೆ ಈಗ ಮೊದಲ ಸ್ಪರ್ಧಿಯ ಹೆಸರು ರಿವೀಲ್​ ಆಗಿದ್ದು, ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ (Aryavardhan Guruji) ಅವರು ಮೊದಲಿಗೆ ದೊಡ್ಮನೆ ಒಳಗೆ ಕಾಲಿಟ್ಟಿದ್ದಾರೆ.
Published by:Kavya V
First published: